ತುರುವೇಕೆರೆ :
ತಾಲೂಕಿನ ಮಾಯಸಂದ್ರ ಹೋಬಳಿಯ ದೊಡ್ಡಶೆಟ್ಟೀಕೆರೆಯ ರೈತ ಶಿವಕುಮಾರ್ ಎಂಬುವವರ ದೇಶೀ ತಳಿ ಹಸುವನ್ನು ಚಿರತೆ ತಿಂದು ಹಾಕಿದೆ.
ನಿನ್ನೆ ಸಾಯಂಕಾಲ ಮೇವು ತಿನ್ನುತ್ತಿದ್ದ ಹಸು ಮನೆಗೆ ಬಂದಿರಲಿಲ್ಲ. ಮೇವಿಗಾಗಿ ಬೇರೆಡೆ ಹೋಗಿರಬಹುದು ಎಂದು ಶಿವಕುಮಾರ್ ಭಾವಿಸಿದ್ದರು. ಆದರೆ ಬೆಳಗ್ಗೆ ತೋಟದ ಬಳಿಗೆ ಬಂದು ನೋಡಲಾಗಿ ತಮ್ಮ ದೇಶಿ ಹಸುವನ್ನು ಚಿರತೆ ತಿಂದು ಹಾಕಿದ್ದ ದೃಶ್ಯ ಕಂಡುಬಂತು.
ಈ ಪ್ರದೇಶದಲ್ಲಿ ಬೆಟ್ಟ ಗುಡ್ಡಗಳು ಇದ್ದು ಚಿರತೆಯ ಹಾವಳಿ ಇದೆ. ಹಲವಾರು ಬಾರಿ ಅರಣ್ಯ ಇಲಾಖೆಗೆ ಈ ಕುರಿತು ಒತ್ತಾಯ ಮಾಡಿದ್ದರೂ ಸಹ ಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಎನ್.ಆರ್.ಜಯರಾಮ್ ಆರೋಪಿಸಿದ್ದಾರೆ.
ದೇಶೀ ತಳಿ ನಾಟಿ ಹಸುಗಳನ್ನು ಸಾಕುವುದು ದುರ್ಲಬವಾಗಿರುವ ಈ ಸಂಧರ್ಭದಲ್ಲಿ ಚಿರತೆಗಳು ಹಸುಗಳನ್ನು ಭೇಟೆಯಾಡುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಶಿವಕುಮಾರ್ ರವರ ಈ ದೇಶೀ ತಳಿಯಾಗಿದ್ದು ಸುಮಾರು ಏಳೆಂಟು ತಿಂಗಳ ಗರ್ಭ ಧರಿಸಿತ್ತು. ಸುಮಾರು ಒಂದು ಲಕ್ಷ ರೂಗಳ ನಷ್ಠ ಸಂಭವಿಸಿದ್ದು ಕೂಡಲೇ ಅರಣ್ಯ ಇಲಾಖಾ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯೆ ಜಯಲಕ್ಷ್ಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಶುಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕ ಡಾ.ನಾಗರಾಜ್ ಮತ್ತು ಅರಣ್ಯ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.