BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  •  ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವ ರೇಬಿಸ್ ದಿನಾಚರಣೆಯ ಗುರಿ
  • ಮಹಿಳೆಯರಿಗಾಗಿ ವಿಶೇಷ ಸೀರತ್ ಪ್ರವಚನ ಕಾರ್ಯಕ್ರಮ
  • ಕನಿಷ್ಠ ಕೂಲಿ, ಗುತ್ತಿಗೆ ಕಾರ್ಮಿಕರ ಖಾಯಂಮಾತಿ ಶಾಸನಕ್ಕೆ ಒತ್ತಾಯಿಸಿ ಶಾಸಕರಿಗೆ ಮನವಿ
  • ತಂದೆ ಕಳೆದುಕೊಂಡ ೧೪ರ ಬಾಲಕನ ಹೆಗಲ ಮೇಲೆ ಕುಟುಂಬದ ಹೊರೆ
  • ಎಸ್‌ಐಆರ್ ಪ್ರಕ್ರಿಯೆಗಳನ್ನು ರದ್ದು ಮಾಡಬೇಕೆಂದು ಪ್ರತಿಭಟನೆ
  • ನಗು ಮನಸ್ಸಿಗೆ ನೆಮ್ಮದಿ ನೀಡುವ ಔಷಧಿ
  • ನಗರದ ಹಲವು ವಾರ್ಡ್ಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ: ಪರಿಹಾರಕ್ಕೆ ಒತ್ತಾಯ
  • ಎಸ್.ಐ.ಆರ್ ಹೆಸರಿನಲ್ಲಿ ಮತದಾನದ ಹಕ್ಕನ್ನು ಕಸಿಯುವ ಕೆಲಸ: ಆರೋಪ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮೊದಲಿದ್ದ ಸ್ಥಳದಲ್ಲೇ ಕನಕ ವೃತ್ತ ನಾಮಫಲಕ ಪುನರ್ ಪ್ರತಿಷ್ಠಾಪನೆ!
ಇತರೆ ಸುದ್ಧಿಗಳು

ಮೊದಲಿದ್ದ ಸ್ಥಳದಲ್ಲೇ ಕನಕ ವೃತ್ತ ನಾಮಫಲಕ ಪುನರ್ ಪ್ರತಿಷ್ಠಾಪನೆ!

By News Desk BenkiyabaleUpdated:November 21, 2019 7:25 pm

ಹುಳಿಯಾರು:

      ರಾಜ್ಯ ಕುರುಬರ ಒಗ್ಗಟ್ಟಿನ ಹೋರಾಟದ ಫಲವಾಗಿ ಕಳೆದ ಒಂದು ವಾರದಿಂದ ಹುಳಿಯಾರಿನಲ್ಲಿ ಸೃಷ್ಠಿಯಾಗಿದ್ದ ನಾಮಫಲಕ ವಿವಾದ ಕೊನೆಗೂ ಅಂತ್ಯವಾಗಿದ್ದು ಮೊದಲಿದ್ದ ಸ್ಥಳದಲ್ಲೇ ಕನಕ ವೃತ್ತ ನಾಮಫಲಕವನ್ನು ಪುನರ್ ಪ್ರತಿಷ್ಠಾಪಿಸುವ ಮೂಲಕ ಗುರುವಾರ ಸುಖಾಂತ್ಯ ಕಂಡಿದೆ.

      ಹುಳಿಯಾರಿನ ಪೆಟ್ರೋಲ್ ಬಂಕ್ ಬಳಿಯ ಸರ್ಕಲ್‍ನಲ್ಲಿ ಕನಕದಾಸ ಸರ್ಕಲ್ ಎಂಬ ನಾಮಫಲಕ ಹಾಕಿ ಕಳೆದ 15 ವರ್ಷಗಳಿಂದ ಕನಕಜಯಂತಿ ಮಾಡಲಾಗುತ್ತಿತ್ತು. ಹೈವೆ ರಸ್ತೆಯ ಕಾಮಗಾರಿಯ ಸಲುವಾಗಿ ನಾಮಫಲಕ ತೆರವುಗೊಳಿಸಲಾಗಿತ್ತು. ಕಾಮಗಾರಿ ಪೂರ್ಣವಾದ ಸಲುವಾಗಿ ಈ ಹಿಂದೆ ತೆರವುಗೊಳಿಸಿದ್ದ ನಾಮಫಲಕವನ್ನು ಪುನಃ ಪ್ರತಿಷ್ಟಾಪಿಸಲಾಯಿತು.

      ಈ ನಾಮಫಲಕವನ್ನು ಪಪಂ ಮುಖ್ಯಾಧಿಕಾರಿ ಏಕಾಏಕಿ ತೆರವಿಗೆ ಮುಂದಾದಾಗ ಪ್ರಕರಣ ವಿವಾದಕ್ಕೆ ತಿರುಗಿತು. ಈ ಸಂದರ್ಭದಲ್ಲಿ ಕನಕ ಯುವ ಸೇನೆಯ ಹುಡುಗರಿಗೂ, ಪಪಂ ಮುಖ್ಯಾಧಿಕಾರಿಗೂ ವಾಕ್ಸಮರ ನಡೆದು ತಹಸೀಲ್ದಾರ್ ಮತ್ತು ಪೆÇಲೀಸರು ಮಧ್ಯ ಪ್ರವೇಶಿಸುವಂತ್ತಾಯಿತು. ರಾತ್ರಿ ಇನ್ನೊಂದು ಗುಂಪು ಇದೇ ಸರ್ಕಲ್‍ಗೆ ಡಾ.ಶಿವಕುಮಾರಸ್ವಾಮೀಜಿ ಸರ್ಕಲ್ ಎಂಬ ನಾಮಫಲಕ ಹಾಕುವುದರ ಮೂಲಕ ಜಾತಿ ಸಂಘರ್ಷಕ್ಕೆ ಕಾರಣವಾಯಿತು.

        ಹುಳಿಯಾರು ಇತಿಹಾಸದಲ್ಲಿ ಹಿಂದೆಂದೂ ಕಂಡುಕೇಳರಿಯದ 3 ದಿನಗಳ ನಿಷೇಧಾಜ್ಞೆ ಜಾರಿಗೊಳಿಸಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಯಿತು. ಸೋಷಿಯಲ್ ಮೀಡಿಯದಲ್ಲಿ ಜಾತಿ ಸಂಘರ್ಷಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಯಿತು. ಜಿಲ್ಲೆಯಾಧ್ಯಂತ ಕುರುಬ ಸಂಘಟನೆಗಳು ಬೀದಿಗಿಳಿದವು. ಕೊನೆಗೆ ಸಚಿವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಸಲಾಯಿತಾದರೂ ಗೊಂದಲದ ಗೂಡಾಗಿ ರಾಜ್ಯಾಧ್ಯಂತ ಅಶಾಂತಿಗೆ ಕಾರಣವಾಯಿತು.

      ಕುರುಬ ಸಮುದಾಯದ ಸ್ವಾಮೀಜಿಗಳಿಗೆ ಸಚಿವರು ಅಗೌರವವಾಗಿ ಖಂಡರಲ್ಲದೆ ಕನಕ ವೃತ್ತವೇ ಇರಲಿಲ್ಲ ಎನ್ನುವ ಮೊಂಡು ವಾದ ಮಂಡಿಸಿದ್ದು ರಾಜ್ಯಾಧ್ಯಂತ ಕುರುಬರಲ್ಲಿ ಹೋರಾಟದ ಕಿಚ್ಚು ಹಚ್ಚಿಸಿತು. ಅಲ್ಲದೆ ರಾಜ್ಯ ಕುರುಬರ ಸಂಘದ ಅಧ್ಯಕ್ಷರೊಮದಿಗೆ ದೂರವಾಣಿ ಮೂಲಕ ಸಚಿವಾರು ಮಾತನಾಡುವಾಗ ನಾನು ಜಾತಿ ನಾಯಕ ಎಂದು ಹೇಳಿಕೊಂಡಿದ್ದು ವ್ಯಾಪಕ ಟೀಕೆಗೆ ಗುರಿಯಾಯಿತು. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸಚಿವರ ಹೇಳಿಕೆಯನ್ನು ಖಂಡಿಸಿದರು.

       ಪರಿಣಾಮ ಹುಳಿಯಾರು ಕನಕ ವೃತ್ತ ಪ್ರಕರಣ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿದ್ದೆ ಗೆಡಿಸಿತು. ಮಾಧುಸ್ವಾಮಿ ಅವರಿಗೆ ಕ್ಷಮೆ ಕೇಳುವಂತೆ ಸೂಚಿಸಿದರೂ ಸಹ ಸಚಿವರು ಕ್ಷಮೆ ಕೇಳದಿದಕ್ಕೆ ಮುಖ್ಯಮಂತ್ರಿಗಳೇ ಸಚಿವರ ಪರವಾಗಿ ಕ್ಷಮೆ ಕೇಳಿದರು. ಅಲ್ಲದೆ ಮಾಧುಸ್ವಾಮಿ ಅವರ ಕೆ.ಆರ್.ಪೇಟೆ ಚುನಾವಣಾ ಉಸ್ತುವಾರಿಯಿಂದ ಕೈ ಬಿಟ್ಟರು. ಚುನಾವಣೆ ಬಳಿಕ ಸರ್ಕಾರವೇ ಕನಕ ವೃತ್ತ ಮಾಡಿ ನಾಮಫಲಕ ಅನಾವರಣ ಮಾಡುವುದಾಗಿ ಘೋಷಿಸಿತು.

      ಆದರೂ ಸರ್ಕಲ್‍ಗೆ ಕನಕದಾಸ ವೃತ್ತ ಎಂದೇ ಮರು ನಾಮಕರಣ ಮಾಡುವಂತೆಯೂ ಹಾಗೂ ಸಚಿವ ಜೆ.ಸಿ.ಮಾಧುಸ್ವಾಮಿ ಯವರ ನಡವಳಿಕೆ ಮತ್ತು ಧೋರಣೆ ಖಂಡಿಸಿ ಕುರುಬರು ಹುಳಿಯಾರ್ ಬಂದ್ ಗೆ ಕರೆ ನೀಡಿದ್ದರು. ಹುಳಿಯಾರು ಬಂದ್ ಬಹುತೇಕ ಶಾಂತಿಯುತವಾಗಿ ನಡೆಯುವ ಜೊತೆಗೆ ಹಳ್ಳಿಹಳ್ಳಿಗಳಿಂದ ಜಾತಿ, ಪಕ್ಷದ ತಾರತಮ್ಯ ಇಲ್ಲದೆ ಜನಸಾಗರವೇ ಪ್ರತಿಭಟನೆಗೆ ಹರಿದು ಬಂದಿತ್ತು.

      ಇಂದೇ ನಾಮಫಲಕ ಪ್ರತಿಷ್ಟಾಪಿಸದ ವಿನಃ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಬಿಗಿ ಪಟ್ಟು ಹಿಡಿಯಿತು. ಕುರುಬರ ಈ ಹೋರಾಟಕ್ಕೆ ಸರ್ಕಾರ ಮಣಿದು ಈ ಹಿಂದೆಯಿದ್ದ ಸರ್ಕಲ್‍ನಲ್ಲೇ ಕನಕದಾಸ ಸರ್ಕಲ್ ಎಂಬ ನಾಮಫಲಕ ಪ್ರತಿಷ್ಟಾಪಿಸಲು ಅನುಮತಿ ಕೊಟ್ಟಿತು. ಕರುಬರೂ ಸಹ ಸಂಭ್ರಮ ಮತ್ತು ಸಡಗರದಿಂದ ಜೈ ಕನಕ ಜೈಜೈ ಕನಕ ಎಂದು ನಾಮಫಲಕ ಪ್ರತಿಷ್ಟಾಪಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿತು.

(Visited 56 times, 1 visits today)
Previous Articleಪಾವಗಡ : ಸ್ವಾಮಿನಾಥನ್ ವರದಿ ಜಾರಿಗೆ ತರುವಂತೆ ರೈತ ಹೋರಾಟ!
Next Article ಮೂರು ಗ್ರಾ.ಪಂ.ಗೆ ಒಬ್ಬರೇ ಪಿ.ಡಿ.ಒ!!
News Desk Benkiyabale

Related Posts

 ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವ ರೇಬಿಸ್ ದಿನಾಚರಣೆಯ ಗುರಿ

September 28, 2026 5:12 pm news

ಮಹಿಳೆಯರಿಗಾಗಿ ವಿಶೇಷ ಸೀರತ್ ಪ್ರವಚನ ಕಾರ್ಯಕ್ರಮ

September 28, 2026 5:10 pm ಇತರೆ ಸುದ್ಧಿಗಳು

ಕನಿಷ್ಠ ಕೂಲಿ, ಗುತ್ತಿಗೆ ಕಾರ್ಮಿಕರ ಖಾಯಂಮಾತಿ ಶಾಸನಕ್ಕೆ ಒತ್ತಾಯಿಸಿ ಶಾಸಕರಿಗೆ ಮನವಿ

September 28, 2026 5:09 pm news
ತಾಜಾ ಸುದ್ಧಿಗಳು
news

 ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವ ರೇಬಿಸ್ ದಿನಾಚರಣೆಯ ಗುರಿ

September 28, 2026 5:12 pm
ಇತರೆ ಸುದ್ಧಿಗಳು

ಮಹಿಳೆಯರಿಗಾಗಿ ವಿಶೇಷ ಸೀರತ್ ಪ್ರವಚನ ಕಾರ್ಯಕ್ರಮ

September 28, 2026 5:10 pm
news

ಕನಿಷ್ಠ ಕೂಲಿ, ಗುತ್ತಿಗೆ ಕಾರ್ಮಿಕರ ಖಾಯಂಮಾತಿ ಶಾಸನಕ್ಕೆ ಒತ್ತಾಯಿಸಿ ಶಾಸಕರಿಗೆ ಮನವಿ

September 28, 2026 5:09 pm
news

ತಂದೆ ಕಳೆದುಕೊಂಡ ೧೪ರ ಬಾಲಕನ ಹೆಗಲ ಮೇಲೆ ಕುಟುಂಬದ ಹೊರೆ

September 28, 2026 5:08 pm
news

ಎಸ್‌ಐಆರ್ ಪ್ರಕ್ರಿಯೆಗಳನ್ನು ರದ್ದು ಮಾಡಬೇಕೆಂದು ಪ್ರತಿಭಟನೆ

September 28, 2026 5:06 pm
news

ನಗು ಮನಸ್ಸಿಗೆ ನೆಮ್ಮದಿ ನೀಡುವ ಔಷಧಿ

September 26, 2026 5:58 pm
Our Youtube Channel
Our Picks

 ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವ ರೇಬಿಸ್ ದಿನಾಚರಣೆಯ ಗುರಿ

September 28, 2026 5:12 pm

ಮಹಿಳೆಯರಿಗಾಗಿ ವಿಶೇಷ ಸೀರತ್ ಪ್ರವಚನ ಕಾರ್ಯಕ್ರಮ

September 28, 2026 5:10 pm

ಕನಿಷ್ಠ ಕೂಲಿ, ಗುತ್ತಿಗೆ ಕಾರ್ಮಿಕರ ಖಾಯಂಮಾತಿ ಶಾಸನಕ್ಕೆ ಒತ್ತಾಯಿಸಿ ಶಾಸಕರಿಗೆ ಮನವಿ

September 28, 2026 5:09 pm

ತಂದೆ ಕಳೆದುಕೊಂಡ ೧೪ರ ಬಾಲಕನ ಹೆಗಲ ಮೇಲೆ ಕುಟುಂಬದ ಹೊರೆ

September 28, 2026 5:08 pm

ಎಸ್‌ಐಆರ್ ಪ್ರಕ್ರಿಯೆಗಳನ್ನು ರದ್ದು ಮಾಡಬೇಕೆಂದು ಪ್ರತಿಭಟನೆ

September 28, 2026 5:06 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

 ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವ ರೇಬಿಸ್ ದಿನಾಚರಣೆಯ ಗುರಿ

By News Desk BenkiyabaleSeptember 28, 2026 5:12 pm

ತುಮಕೂರು: ಮನುಷ್ಯನ ಪ್ರೀತಿಯ ಪ್ರಾಣಿಯಾಗಿರುವ ನಾಯಿ ಮತ್ತು ಬೆಕ್ಕುಗಳಿಂದ ರೇಬಿಸ್ ರೋಗ ಹರಡದಂತೆ ತಡೆಗಟ್ಟುವುದೇ ವಿಶ್ವರೇಬಿಸ್ ದಿನಾಚರಣೆಯ ಗುರಿಯಾಗಿದ್ದು, ಪ್ರತಿಯೊಬ್ಬರೂ…

ಮಹಿಳೆಯರಿಗಾಗಿ ವಿಶೇಷ ಸೀರತ್ ಪ್ರವಚನ ಕಾರ್ಯಕ್ರಮ

September 28, 2026 5:10 pm

ಕನಿಷ್ಠ ಕೂಲಿ, ಗುತ್ತಿಗೆ ಕಾರ್ಮಿಕರ ಖಾಯಂಮಾತಿ ಶಾಸನಕ್ಕೆ ಒತ್ತಾಯಿಸಿ ಶಾಸಕರಿಗೆ ಮನವಿ

September 28, 2026 5:09 pm

ತಂದೆ ಕಳೆದುಕೊಂಡ ೧೪ರ ಬಾಲಕನ ಹೆಗಲ ಮೇಲೆ ಕುಟುಂಬದ ಹೊರೆ

September 28, 2026 5:08 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.