Author: News Desk Benkiyabale

ತುಮಕೂರು : ಕುಡಿಯುವ ನೀರು ಹಾಗೂ ಜಾನುವಾರು ಮೇವಿನ ಸಮಸ್ಯೆಗಳಿಗೆ ಸಂಬAಧಿಸಿದ ಸಾರ್ವಜನಿಕ ದೂರುಗಳನ್ನು ಸಲ್ಲಿಸಲು ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ಸಂಜೆ ಕುಡಿಯುವ ನೀರು ಹಾಗೂ ಮೇವಿನ ಪರಿಸ್ಥಿತಿ ಕುರಿತಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಸಹಾಯವಾಣಿ ಕೇಂದ್ರವು ದಿನದ ೨೪ ಗಂಟೆಗಳ ಕಾಲವೂ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆಯನ್ನು ತ್ವರಿತವಾಗಿ ವಿಶ್ಲೇಷಿಸಿ, ಅಗತ್ಯವಿದ್ದಾಗ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು. ಸಹಾಯವಾಣಿ ಕೇಂದ್ರದಲ್ಲಿ ದಾಖಲಾಗುವ ಸಾರ್ವಜನಿಕರ ಸಮಸ್ಯೆ ಹಾಗೂ ಪರಿಹಾರ ಕ್ರಮದ ವರದಿಯನ್ನು ಪ್ರತಿದಿನ ತಮಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು. ಕುಡಿಯುವ ನೀರಿನ ಸಮಸ್ಯೆ ತಲೆದೋರಿದಾಗ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಜನ-ಜಾನುವಾರುಗಳಿಗೆ ನೀರಿನ ಪೂರೈಕೆ, ಶುದ್ಧೀಕರಣ ಮತ್ತು ಲಭ್ಯತೆ ಬಗ್ಗೆ ಮುಂದಿನ ಸಭೆಯಲ್ಲಿ ಮಾಹಿತಿ ನೀಡಬೇಕು ಸೂಚನೆ ನೀಡಿದರು. ಕೊಳವೆ ಬಾವಿ…

Read More

ಹುಳಿಯಾರು: ಬಡವರಿಗೆ ಗಂಭೀರ ಕಾಯಿಲೆಗಳಾದಾಗ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಪುನಃ ಯಶಸ್ವಿನಿ ಯೋಜನೆ ಜಾರಿಗೆ ತಂದಿದೆ. ಆದರೆ ಜನರಿಗೆ ಅನುಕೂಲವಾಗುವ ಈ ಯೋಜನೆಯ ನೊಂದಣಿಗೆ ಕ್ಷಿಣಿಸಿದೆ. ಸಿಬ್ಬಂದಿಗಳ ಮೂಲಕ ಅರಿವು ಮೂಡಿಸಿ ಯಶಸ್ವಿನಿ ನೊಂದಣಿ ಪ್ರಗತಿ ಶೇ.೧೦೦ ರಷ್ಟು ಸಾಧಿಸುವಂತೆ ಹುಳಿಯಾರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಡ್ಡಿಪುಟ್ಟಣ್ಣ ಅವರು ಸಿಇಒ ಶಿವಣ್ಣ ಅವರಿಗೆ ಸೂಚನೆ ನೀಡಿದರು. ಹುಳಿಯಾರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೋಮವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶೇರುದಾರರಾಗಿರುವ ಎಸ್‌ಸಿಎಸ್‌ಟಿ ಸಮುದಾಯದವರಿಗೆ ಉಚಿತ ವಾಗಿ ಯಶಸ್ವಿನಿ ಯೋಜನೆಗೆ ನೊಂದಾ ಣಿ ಮಾಡಬಹುದಾಗಿದೆ. ಆದರೆ ಅರಿವಿನ ಕೊರತೆ ಯಿಂದಾಗಿ ಇದೂವರೆವಿಗೂ ಬಹಳಷ್ಟು ಮಂದಿ ನೊಂದಣಿ ಮಾಡಿಸಿಲ್ಲ ಎಂದು ತಿಳಿಸಿದರು. ೧ ಗ್ರಾಂ ಒಡವೆಗೆ ೪೬೦೦ ರೂನಂತೆ ಶೇ.೧ ರ ಬಡ್ಡಿ ದರದಲ್ಲಿ ಇದುವರೆವಿಗೂ ಒಡವೆ ಸಾಲ ಕೊಡಲಾಗುತ್ತಿತ್ತು. ಈಗ ೧ ಗ್ರಾಂ ಒಡವೆ ಬೆಲೆ…

Read More

ಹುಳಿಯಾರು: ಹುಳಿಯಾರು ಹೋಬಳಿಯ ಬೋರನಕಣಿವೆ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡಸುತ್ತಿದ್ದ ಹಸಿರು ಶಾಲಾ ಕಾರ್ಯಕ್ರಮ ಶನಿವಾರ ಸಂಪನ್ನಗೊAಡಿತು. ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರ ನಡೆದ ಚಟುವಟಿಕೆಯಾಧಾರಿತ ಕಾರ್ಯಕ್ರಮ ಮಕ್ಕಳಲ್ಲಿ ಪರಿಸರ ಪ್ರಜ್ಞೆಮೂಡಿಸುವಲ್ಲಿ ಯಶ ಕಂಡಿದೆ. ಮಾಸ್ ಟ್ರಸ್ಟ್ ಅಧ್ಯಕ್ಷೆ ಎನ್,ಇಂದಿರಮ್ಮ ಮಾತನಾಡಿ, ಇದೊಂದು ವಿಶಿಷ್ಟ ಕಾರ್ಯಕ್ರಮ. ಇಂತಹ ಕಾರ್ಯಕ್ರಮ ಯಾವ ಶಾಲೆಯಲ್ಲೂ ನಡೆದಿರಲು ಸಾಧ್ಯವಿಲ್ಲ. ನಾಲ್ಕು ಜನ ಸಂಪನ್ಮೂಲ ವ್ಯಕ್ತಿಗಳ ಸ್ವಪ್ರೇರಣೆಯಿಂದ ಈ ಕಾರ್ಯಕ್ರಮ ನಡೆಸಲಾಯಿತು. ಪಠ್ಯಾದಾರಿತ ಮತ್ತು ಜೀವನ್ಮಖಿ ಆಶಯ ಹೊಂದಿದ್ದ ಕಾರ್ಯಕ್ರಮ ಮಕ್ಕಳಲ್ಲಿ ಪಠ್ಯ ವಿಷಯ ಆಸಕ್ತಿ ಬೆಳೆಸುವುದಕ್ಕಿಂತ ಪರಿಸರ ಪ್ರೀತಿಯನ್ನು ಹೆಚ್ಚು ಬೆಳೆಸಿದೆ ಎಂದು ಹೇಳಿದರು. ವಿಶ್ರಾಂತ ಪ್ರಾಂಶುಪಾಲರಾದ ಯು.ಪಿ. ಉಮಾದೇವಿ ಮಾತನಾಡಿ ಪರಿಸರ ಪ್ರೀತಿಯನ್ನು ಬೆಳಸಿಕೊಂಡಿರುವ ನೀವು ತರಗತಿಯಲ್ಲಿ ಸಕ್ರಿಯವಾಗಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದು ನಮಗೆ ಖುಷಿ ತಂದಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಮಾಸ್ ಟ್ರಸ್ಟ್ ಕಾರ್ಯದರ್ಶಿ ರಾಮಕೃಷ್ಣಪ್ಪ ಮಾತನಾಡಿ ನಾವೆಲ್ಲರೂ ಪಕ್ಷಿ ತಜ್ಞ ಸಲಿಂ ಆಲಿ ಯವರ ಹೇಳಿಕೆ ಮನುಷ್ಯನಿಲ್ಲದೆ ಪ್ರಾಣಿ…

Read More

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕು ವಜ್ಜನಕುರಿಕೆ ಗ್ರಾಮ ಪಂಚಾಯತಿ ಮೋರಗಾನಹಳ್ಳಿ ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಬಳಿ ಗ್ರಾಮಸ್ಥರು ಅಳಲು ತೋಡಿಕೊಂಡರು. ಮೋರಗಾನಹಳ್ಳಿ ಗ್ರಾಮದಲ್ಲಿ ಕಳೆದ ಕೆಲವು ತಿಂಗಳುಗಳಿAದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಗ್ರಾಮಸ್ಥರು ಅಹವಾಲು ನೀಡಿದ್ದರು. ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರ ಅಹವಾಲಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಕುಡಿಯುವ ನೀರಿನ ಸಮಸ್ಯೆಗೆ ತುರ್ತಾಗಿ ಪರಿಹಾರ ಒದಗಿಸಬೇಕೆಂದು ತಹಶೀಲ್ದಾರ್ ಮಂಜುನಾಥ್ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಾಂತರಾಜು ಅವರಿಗೆ ಸೂಚನೆ ನೀಡಿದರು. ನಂತರ ಜಾನುವಾರುಗಳ ಮೇವಿನ ಬಗ್ಗೆ ಆಲಿಸಿದ ಅವರು ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗದAತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರಲ್ಲದೆ ಜನರು ವಾಸಿಸುವ ಸ್ಥಳದ ಸುತ್ತಮುತ್ತ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಿಬ ರಲು…

Read More

ತುಮಕೂರು: ಸುಮಾರು ೪ ಲಕ್ಷ ರೂಪಾಯಿ ಮೌಲ್ಯದ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಆಟೋ ಚಾಲಕರೊಬ್ಬರು ವಾರಸುದಾರರಿಗೆ ಹಿಂತಿ ರುಗಿಸಿ ಮಾನವೀಯತೆ ಮೆರೆದಿದ್ದಾರೆ. ನಗರದ ಹನುಮಂತಪುರ ನಿವಾಸಿ ರವಿಕುಮಾರ್ ಎಂಬುವರೇ ವಾರಸುದಾರರಿಗೆ ಚಿನ್ನದ ಒಡವೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ. ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಗಾಯತ್ರಿ ಎಂಬುವರು ೪ ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಒಡವೆಗಳಿದ್ದ ಬ್ಯಾಗ್‌ನ್ನು ಬಿಟ್ಟು ಹೋಗಿದ್ದರು. ಈ ಚಿನ್ನದ ಒಡವೆಗಳಿದ್ದ ಬ್ಯಾಗ್‌ನ್ನು ಆಟೋ ಚಾಲಕ ರವಿಕುಮಾರ್ ಅವರು ಗಾಯತ್ರಿರವರಿಗೆ ವಾಪಸ್ ನೀಡಿದ್ದು, ಆಟೋ ಚಾಲಕ ರವಿಕುಮಾರ್‌ರವರಿಗೆ ಗಾಯತ್ರಿ ರವರು ಧನ್ಯವಾದ ತಿಳಿಸಿದ್ದಾರೆ. ಗಾಯತ್ರಿ ಅವರು ಕುಂದೂರು ಗ್ರಾಮದಲ್ಲಿ ತಮ್ಮ ಸಂಬAಧಿಕರೊಬ್ಬರ ಮನೆಗೆ ಸೀಮಂತ ಕಾರ್ಯಕ್ರಮಕ್ಕೆ ಬಂದಿದ್ದರು. ಸೀಮಂತ ಮುಗಿದ ಮೇಲೆ ಮೂವರು ಆಟೋದಲ್ಲಿ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಆಟೋದಿಂದ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಮಹಿಳೆ ಚಿನ್ನದ ಆಭರಣಗಳು ಇರುವ ಬ್ಯಾಗ್ ಮರೆತು ಹೋಗಿದ್ದರು. ಬಳಿಕ ಸ್ವಲ್ಪ ದೂರ ಹೋದ ಮೇಲೆ ನೆನಪು ಮಾಡಿಕೊಂಡು…

Read More

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಈ ಸಲಿನ ಬಜೆಟ್ ಸಂಪೂರ್ಣ ರೈತ ವಿರೋಧಿ, ದಲಿತ ವಿರೋಧಿಜನ ವಿರೋಧಿ ಹಿಂದೂ ವಿರೋಧಿಯಾಗಿದೆ ಎಂದು ಆಪಾದಿಸಿ ಜಿಲ್ಲಾ ಬಿಜೆಪಿ ಮುಖಂಡರು ಸೋಮವಾರ ನಗರ ದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಟ್ರಾಕ್ಟರ್ ರ‍್ಯಾಲಿ ನಡೆಸಿದ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾ ಮಯ್ಯ ಮಂಡಿಸಿದ ಬಜೆಟ್ ಮತ ಬ್ಯಾಂಕ್ ರಾಜಕಾರಣಕ್ಕೋಸ್ಕರ ಅಲ್ಪಸಂಖ್ಯಾತರನ್ನು ಓಲೈಸಿರುವ ಹಿಂದೂ ವಿರೋಧಿ ಎಂದು ತಮ್ಮನ್ನು ಸಾಬೀತು ಮಾಡಿಕೊಂಡಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿ ಬಜೆಟ್‌ನಲಿ ರೈತರು, ದಲಿತರು, ಜನಸಾ ಮಾನ್ಯರ ಹಿತವನ್ನು ಧಿಕ್ಕರಿಸಿ ವಂಚಿಸಿದ್ದಾರೆ ಎಂದು ಟೀಕಿಸಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಮೋಸ ಮಾಡಿ, ಅವರು ರಚಿಸಿದ ಸಂವಿಧಾನಕ್ಕೆ ಕಾಂಗ್ರೆಸ್ ನವರು ಅಪಚಾರ ಮಾಡುತ್ತಿದ್ದಾರೆ. ಈ ಬಜೆಟ್‌ನಲ್ಲಿ…

Read More

ತುಮಕೂರು: ಮಹಿಳೆಯರ ಪರವಾಗಿ ಹೋರಾಟ ನಡೆಸಿದಮಹಿಳಾ ಸಾಧಕಿಯರನ್ನು ವಿಶ್ವ ಮಹಿಳಾ ದಿನದಂದು ಸ್ಮರಣೆಮಾಡಬೇಕು. ದರು. ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಮಾಡಿ ಉನ್ನತ ಸ್ಥಾನಮಾನ ಗಳಿಸಿದವರು ಇಂದಿನ ಮಹಿಳೆಯರಿಗೆಆದರ್ಶವಾಗಬೇಕು. ಆತ್ಮವಿಶ್ವಾಸ, ಆತ್ಮಸ್ಥೆöÊರ್ಯ ಬೆಳೆಸಿಕೊಂಡು ಮಹಿಳೆಯರು ಎಲ್ಲಾ ಕ್ಷೇತ್ರಗಳಲಿ ಸಾಮರ್ಥ್ಯ ಸಾಧಿಸಬಹುದು ಎಂದು ಹಿರಿಯ ನ್ಯಾಯವಾದಿ ಮರಿಚೆನ್ನಮ್ಮ ಹೇಳಿದರು. ತುಮಕೂರು ಜಿಲ್ಲಾ ಮಹಿಳಾ ವಕೀಲರು ಭಾನುವಾರ ನಗರದಲ್ಲಿವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕೇಕ್ ಕತ್ತರಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮರಿಚೆನ್ನಮ್ಮನವರು, ನಮ್ಮಲ್ಲಿ ಅನೇಕ ಮಹಿಳೆಯರು ಮಹಿಳಾ ಶೋಷಣೆ ವಿರುದ್ಧ ಧ್ವನಿ ಮಾಡಿ ಹೋರಾಟ ಮಾಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ, ಅಕ್ಕಮಹಾದೇವಿ, ಸಾವಿತ್ರಿ ಬಾಯಿ ಬಾಪುಲೆ ಮೊದಲಾದವರು ಮಹಿಳೆಯರ ಪರ ಕ್ರಾಂತಿಕಾರಕ ಹೋರಾಟ ಮಾಡಿದರು. ಅವರು ನಮಗೆ ಪ್ರೇರಣೆಯಾಗಬೇಕು. ಫ್ರಾನ್ಸ್, ಜರ್ಮನಿ, ರಷ್ಯಾ ಮುಂತಾದ ದೇಶಗಳಲ್ಲಿ ಮಹಿಳಾ ಕಾರ್ಮಿಕರ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ಶೋಷಣೆ, ಮಾನವಹಕ್ಕುಗಳ ಉಲ್ಲಂಘನೆ ವಿರುದ್ಧ ಆರಂಭವಾದ ಹೋರಾಟ ಮಹಿಳಾ ದಿನ ಆಚರಣೆಗೆ ಕಾರಣವಾಯಿತು. ಇಂದು ಪ್ರಪಂಚದ ಎಲ್ಲಾ…

Read More

ತುಮಕೂರು: ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಮಜತಿ ಗ್ರಾಮದ ಪರಸಪ್ಪ ಹಾಗೂ ಲಕ್ಷಿö್ಮÃ ದಂಪತಿ ಪುತ್ರ ಕೃಷ್ಣಾ ತಳವಾರ ಅವರು ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಬಿ.ರಮೇಶ್ ಮಾರ್ಗದರ್ಶನದಲ್ಲಿ ಮಂಡಿಸಿದ ‘ಕರ್ನಾಟಕದ ಶೈಕ್ಷಣಿಕ ಮತ್ತು ಔದ್ಯೋಗಿಕ ಸಾಧನೆಯ ಮೇಲೆ 371(ಜೆ) ಪ್ರಭಾವ’ ಕುರಿತ ಸಂಶೋಧನ ಮಹಾಪ್ರಬಂಧಕ್ಕೆ ತುಮಕೂರು ವಿವಿಯು ಪಿಎಚ್.ಡಿ ಪದವಿ ನೀಡಿದೆ.

Read More

ಕೊರಟಗೆರೆ: ಕೊರಟಗೆರೆ ತಾಲ್ಲೂಕಿನಲ್ಲಿ ನೂತನವಾಗಿ ರಾಗಿ ಖರೀದಿ ಕೇಂದ್ರವನ್ನು ತೆರೆಯಲಾಗಿದ್ದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಕೊರಟಗೆರೆ ತಾಲ್ಲೂಕಿನ ರೈತರಿಗೆ ಅನುಕೂಲವಾಗಲು ರಾಗಿ ಖರೀದಿ ಕೇಂದ್ರವನ್ನು ತಾಲ್ಲೂಕಿನಲ್ಲಿ ತೆರೆಯುವಂತೆ ಹಲವು ವರ್ಷಗಳ ಬೇಡಿಕೆಯನ್ನು ರೈತರು ಇಟ್ಟಿದ್ದರು, ಇದನ್ನು ಮನಗೊಂಡ ಗೃಹಸಚಿವ ಡಾ.ಜಿ.ಪರಮೇಶ್ವರ್ ಇತ್ತೀಚೆಗೆ ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಕೆ.ಡಿ.ಬಿ. ಸಾಮಾನ್ಯ ಸಭೆಯಲ್ಲಿ ತಾಲ್ಲೂಕಿನಲ್ಲಿ ಶೀಘ್ರವಾಗಿ ರಾಗಿ ಖರೀದಿ ಕೇಂದ್ರವನ್ನು ತೆರೆಯುವಂತೆ ಅಧಿಕಾರಿಗಳಗೆ ಆದೇಶಿಸಿದರು, ಸಚಿವರ ಆದೇಶದ ಅನ್ವಯ ತಾಲ್ಲೂಕಿನ ಅಕ್ಕಿರಾಂಪುರ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ರಾಗಿ ಖರೀದಿ ಕೇಂದ್ರವನ್ನು ಮಾರ್ಚ್ 6ರ ಬುಧವಾರದಂದು ತೆರೆಯಲಾಯಿತು. ರಾಗಿ ಖರೀದಿ ಕೇಂದ್ರ ಪ್ರಾರಂಭವಾದ ದಿನದಿಂದ ರೈತರು ದಾಖಲೆ ಸಂಖ್ಯೆಯಲ್ಲಿ ರಾಗಿಯನ್ನು ಎ.ಪಿ.ಎಂ.ಸಿ ಮಾರುಕಟ್ಟೆಗೆ ನೀಡುತ್ತಿದ್ದಾರೆ, ಪ್ರತಿ ಕ್ವಿಂಟಲ್‌ಗೆ ಸರ್ಕಾರವು 4290 ಸಾವಿರ ಹಣವನ್ನು ನಿಗಧಿಪಡಿಸಲಾಗಿದ್ದು ಒಬ್ಬ ರೈತ 20 ಕ್ವಿಂಟಲ್‌ವರೆಗೆ ರಾಗಿಯನ್ನು ನೀಡಬಹುದಾಗಿದೆ ಮಾರಾಟ ಮಾಡಿದ ಹಣವನ್ನು ಸರ್ಕಾರವು ರೈತರ ಖಾತೆಗೆ ನೇರ ಜಮಾವಣೆ ಮಾಡುತ್ತz. ತಾಲ್ಲೂಕಿನ ರೈತರು ಮಧುಗಿರಿ ಅಥವಾ ತುಮಕೂರು ಎ.ಪಿ.ಎಂ.ಸಿ. ಗಳಿಗೆ…

Read More

ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯ್ತಿಯಲ್ಲಿ ಬುಧವಾರ ಬಹಿರಂಗ ಹರಾಜು ಇಸ್ತಿಹಾರ್ ಏರ್ಪಡಿಸಿದ್ದರು. ಇದರಲ್ಲಿ ಪಂಚಾಯ್ತಿಯ ಅನುಪಯುಕ್ತ ಸಾಮಗ್ರಿಗಳ ಹರಾಜು ಮಾಡಿದ್ದರು. ಆದರೆ ಕೊಳವೆಬಾವಿಗಳ ಪಂಪ್ ಮತ್ತು ಮೋಟರ್ ಇಡುವುದಾಗಿ ಹೇಳಿ ಇಡದೆ ಯಾಮಾರಿಸಿದರು ಎಂದು ಹರಾಜಿಗೆ ಬಂದಿದ್ದ ಗುಜರಿ ವ್ಯಾಪಾರಿಗಳು ಆರೋಪಿಸಿದರು. ಹರಾಜು ಪ್ರಕಟಣೆ ನೋಡಿದ ತಕ್ಷಣ ಪಪಂ ಮುಖ್ಯಾಧಿಕಾರಿ ನಾಗಭೂಷಣ್ ಅವರಿಗೆ ದೂರವಾಣಿ ಕರೆ ಮಾಡಿ ಹರಾಜಿಗೆ ಏನೇನು ಐಟಂ ಇಡುತ್ತಿದ್ದೀರಿ ಎಂದು ಕೇಳಿದಾಗ ನಿರುಪಯುಕ್ತ ಪಂಪ್ ಮೋಟರ್ ಸೇರಿದಂತೆ ವಿವಿಧ ಕಬ್ಬಿಣದ ಗುಜರಿ ಐಟಂಗಳಿವೆ ಎಂದಿದ್ದರು. ಹಾಗಾಗಿ ಹರಾಜಿನಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿAದ ಬಂದಿದ್ದೇನೆ. ಇಲ್ಲಿ ನೋಡಿದರೆ ಟ್ಯೂಬ್ ಲೈಟ್‌ನ ಫ್ರೇಮ್‌ಗಳೇ ಅಧಿಕವಾಗಿದ್ದು ೫ ಸಾವಿರ ರೂ.ಗಳಿಗೂ ಬೆಲೆ ಬಾಳದ ಸಾಮಗ್ರಿಗಳಿವೆ ಎಂದು ಗುಜರಿ ವ್ಯಾಪಾರಿ ಪಾಷಾ ಆರೋಪಿಸಿದರು. ಅಲ್ಲದೆ ನಿಮ್ಮನ್ನು ಬಾ ಎಂದು ಕರೆದಿದ್ದೇವೆಯೇ ಎಂದು ಅವಮಾನಿಸಿದ್ದಾರೆ ಎಂದರು. ಹುಳಿಯಾರಿನ ಗುಜರಿ ವ್ಯಾಪಾರಿ ನಾಗಣ್ಣ ಅವರು ಮಾತನಾಡಿ ಈ ಹಿಂದೆ ಗೋಡನ್‌ನಿಂದ ಗುಜರಿ ಐಟಂ ಹೊರತೆಗೆದಾದ ೧೦ ಸಣ್ಣ…

Read More