ತುಮಕೂರು ಖಾಸಗಿಯವರು ಅಕ್ರಮವಾಗಿ ಒತ್ತುವರಿ ಮಾಡದಂತೆ ಸರ್ಕಾರಿ ಆಸ್ತಿಯನ್ನು ಸಂರಕ್ಷಿಸಿ ನ್ಯಾಯಾಲಯದಲ್ಲಿ ವ್ಯಾಜ್ಯಗಳನ್ನು ನಿರ್ವಹಿಸಲು ಸರ್ಕಾರಿ ಅಧಿಕಾರಿ/ನೌಕರರು ಕಾನೂನು ವಿಷಯದಲ್ಲಿ ಪರಿಣತಿ ಹೊಂದಿರುವುದು ಅತ್ಯಗತ್ಯವೆಂದು ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಬೆಂಗಳೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಾಜಿ ಅಧ್ಯಕ್ಷರಾದ ವೆಂಕಟ ಸುದರ್ಶನ್ ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿಂದು ಸರ್ಕಾರಿ ಅಧಿಕಾರಿ/ನೌಕರರಿಗಾಗಿ “ಸರ್ಕಾರದ ಹಾಗೂ ಸಾರ್ವಜನಿಕ ಆಸ್ತಿಗಳ ಸಂರಕ್ಷಣೆ” ಕುರಿತು ಆಯೋಜಿಸಿದ್ದ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿ ಸಂರಕ್ಷಣೆಗಾಗಿ ಅಧಿಕಾರಿ/ನೌಕರರು ಕಾಲ-ಕಾಲಕ್ಕೆ ಹೊರಡಿಸಲಾಗುವ ಕಾನೂನು ತಿದ್ದುಪಡಿಗಳ ಬಗ್ಗೆ ತಿಳಿದುಕೊಂಡಿರಬೇಕು. ಸರ್ಕಾರದ ವಿರುದ್ಧ ಯಾವುದೇ ವ್ಯಕ್ತಿಗಳು ನ್ಯಾಯಾಲಯದಲ್ಲಿ ದಾವೆ ಹೂಡಿದಾಗ ಯಾವ ರೀತಿ ಕ್ರಮಗಳನ್ನು ಅನುಸರಿಸಬೇಕೆಂದು ಮಾಹಿತಿ ನೀಡಿದರು. ವಿಷಯ ನಿರ್ವಾಹಕರಿಗೆ ಕಾನೂನಿನ ಬಗ್ಗೆಯಿರುವ ಅರಿವಿನ ಕೊರತೆಯಿಂದ ಹಾಗೂ ನ್ಯಾಯಾಲಯದಲ್ಲಿರುವ ಸರ್ಕಾರಿ ವ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೆ ಇರುವುದರಿಂದ…
Author: News Desk Benkiyabale
ತುಮಕೂರು ಇಂದು ರಾಜ್ಯದಲ್ಲಿ ಡಿ.ಕೆ ಶಿವಕುಮಾರ್ ಅವರಿಗೆ ಉತ್ತಮ ನಾಯಕತ್ವ ಇದೆ ಶೇಕಡ ೧೦೦ರಷ್ಟು ಮುಖ್ಯಮಂತ್ರಿ ಆಗುವ ಎಲ್ಲಾ ರ‍್ಹತೆ ಡಿ.ಕೆ ಶಿವಕುಮಾರ್ ರವರಲ್ಲಿ ಇದೆ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಡಿ.ಕೆ ಶಿವಕುಮಾರ್ ಅವರ ನಾಯಕತ್ವ ಹಾಗೂ ಶಕ್ತಿ ಕಾರಣ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ ಸುರೇಶ್ ಗೌಡ ಡಿ.ಕೆ ಶಿವಕುಮಾರ್ ಅವರ ನಾಯಕತ್ವವನ್ನು ಹೊಗಳಿದ್ದಾರೆ. ತುಮಕೂರಿನ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತೋತ್ಸವ ಆಚರಣ ಸಮಿತಿಯಿಂದ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತೋತ್ಸವ ಜಿ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗಿದ್ದು ನಮ್ಮ ಸಮುದಾಯದ ಮುಖಂಡ ಡಿ.ಕೆ ಶಿವಕುಮಾರ್ ಅವರ ನಾಯಕತ್ವ ಕಾರಣ ಆದರೆ ಆದರೆ ಅಂತಹ ವ್ಯಕ್ತಿ ಮುಖ್ಯಮಂತ್ರಿಯಾಗುವ ಸನ್ನಿವೇಶ ಬಂದಾಗ ಅಂದು ಸಮುದಾಯದ ಯಾವುದೇ ಮುಖಂಡರು ಧ್ವನಿ ಎತ್ತಲಿಲ್ಲ ಎಂದು ತಿಳಿಸಿದರು. ಇನ್ನು ತುಮಕೂರು ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯ ಪ್ರಬಲವಾಗಿದೆ…
ತುಮಕೂರು ಸಂವಿಧಾನದಲ್ಲಿ ಸರ್ವ ಜನಾಂಗಕ್ಕೂ ಬದುಕುವ ಹಕ್ಕು ಕಲ್ಪಿಸುವ ಮೊದಲೇ ಕೆಂಪೇಗೌಡರು ಬೆಂಗಳೂರಿನಲ್ಲಿ ಎಲ್ಲಾ ಶ್ರಮಿಕ ಸಮುದಾಯಗಳಿಗೆ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿ, ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಟ್ಟಿರುವುದು ಮಹತ್ವದ ಹೆಜ್ಜೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಡಪ್ರಭು ಕೆಂಪೇಗೌಡರ ೫೧೪ನೇ ಜಯಂತೋತ್ಸವ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತಿ , ಕೆಂಪೇಗೌಡ ಪ್ರಶಸ್ತಿ ಪ್ರಧಾನ, ಪ್ರಗತಿಪರ ರೈತರಿಗೆ ಸನ್ಮಾನ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಶ್ರಮಿಕ ವರ್ಗವನ್ನು ಅಭಿವೃದ್ದಿಯ ಭಾಗವನ್ನಾಗಿಸುವ ಕೆಂಪೇಗೌಡರ ದೂರದೃಷ್ಠಿಯನ್ನು ನಾವೆಲ್ಲರೂ ಅನುಸರಿಸುವಂತಹದ್ದು ಎಂದರು. ಇAದಿನ ಅಧುನಿಕ ಜಗತ್ತಿಗೆ ಅನುಗುಣವಾಗಿ ೫೧೪ ವರ್ಷಗಳ ಹಿಂದೆಯೇ ಒಂದು ಪಟ್ಟಣವನ್ನು ವಿನ್ಯಾಸಗೊಳಿಸಿದ ವ್ಯಕ್ತಿಯನ್ನು ಇತಿಹಾಸದಲ್ಲಿ ಕಾಣಲು ಸಾಧ್ಯವಿಲ್ಲ.ವೃತ್ತಿಗೆ ಅನುಗುಣವಾಗಿ ಪೇಟೆಗಳ ನಿರ್ಮಾಣ ಮಾಡಿ,ಎಲ್ಲ ಶ್ರಮಿಕವರ್ಗಗಳು ಸಂತೋಷದಿAದ ಬದುಕುವಂತಹ ವಾತಾವರಣ ಅಂದೇ ನಿರ್ಮಾಣವಾಗಿತ್ತು ಎಂದರೆ,ಇದಕ್ಕಿAತ ದೊಡ್ಡ ಸಂತೋಷ ಮತ್ತೊಂದಿಲ್ಲ.ಹಾಗಾಗಿ ಕೆಂಪೇಗೌಡರನ್ನು ಒಂದು ವರ್ಗಕ್ಕೆ ಸಿಮೀತಗೊಳಿಸಿ,ಟೀಕಿಸುವುದು ಸಲ್ಲದು,ಎಲ್ಲರ ಅವರ ಆದರ್ಶ…
ತುಮಕೂರು: ತುಮಕೂರು ತಾಲೂಕು, ಅದರಲ್ಲಿಯೂ ಗ್ರಾಮಾಂತರ ಕ್ಷೇತ್ರದಲ್ಲಿ ಅಬಕಾರಿ ಇಲಾಖೆ ಸಂಪೂರ್ಣವಾಗಿ ನಿಷ್ಕಿçಯಗೊಂಡಿದ್ದು, ಗ್ರಾಮಾಂತರ ಪ್ರದೇಶದ ಮನೆ ಮನೆಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮದ್ಯಕ್ಕೆ ಕಡಿವಾಣ ಹಾಕದಿದ್ದರೆ, ಸಂಬAಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತುಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವುದಾಗಿ ಶಾಸಕ ಬಿ.ಸುರೇಶಗೌಡ ಎಚ್ಚರಿಕೆ ನೀಡಿದ್ದಾರೆ. ನಗರದ ತಾ.ಪಂ.ಸಭಾAಗಣದಲ್ಲಿ ಶಾಸಕ ಅಧ್ಯಕ್ಷತೆಯಲ್ಲಿ ನಡೆದ ೨೦೨೩-೨೪ ನೇ ಸಾಲಿನ ಮೊದಲ ತ್ರೆöÊಮಾಸಿಕ ಕೆ.ಡಿ.ಪಿ.ಸಭೆಯಲ್ಲಿ ಮಾತನಾಡಿದ ಅವರು,ಗಂಗೋನಹಳ್ಳಿಯಲ್ಲಿ ಯುವಕನೊಬ್ಬ ಮದ್ಯ ಕುಡಿದ ಅವಲಿನಲ್ಲಿ ಕೆರೆಗೆ ಹಾರಿದ್ದಾನೆ.ಪ್ರತಿ ಗ್ರಾಮದ ಹತ್ತಾರು ಮನೆಗಳಲ್ಲಿ ಮದ್ಯ ಮಾರಾಟ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದೆ.ಕೆಲವೊಂದು ಮದ್ಯದಂಗಡಿ ಮಾಲೀಕರೇ ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು ಮನೆ ಮನೆಗಳಲ್ಲಿ ಮದ್ಯ ಮಾರಾಟಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಆರೋಪವಿದೆ. ಕೂಡಲೇ ಆರೋಪವಿರುವ ಹಳ್ಳಿಗಳ ಮೇಲೆ ದಾಳಿ ಮಾಡಿ, ಕ್ರಮ ಕೈಗೊಳ್ಳದಿದ್ದರೆ ಮಹಿಳೆಯರೊಂದಿಗೆ ನಿಮ್ಮ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಶಾಸಕರು ಎಚ್ಚರಿಸಿದರು. ಅಬಕಾರಿ ನಿಯಮದ ಪ್ರಕಾರ ಸಿ.ಎಂ.೦೭ ಮತ್ತು ೦೯ ಅಂಗಡಿಗಳನ್ನು ಇಂತಿಷ್ಟು ಗಂಟೆಯಿAದ ತೆರೆಯಬೇಕೆಂಬ ನಿಯಮವಿದ್ದರೂ…
ತುಮಕೂರು ಸ್ತನ್ಯಪಾನ ಸಪ್ತಾಹದ ಅಂಗವಾಗಿ ತುಮಕೂರು ನಗರ ನಿರ್ವಾಣಿ ಲೇಔಟ್, ಅಂಬೇಡ್ಕರ್ ನಗರ ಭಾಗದ ಗರ್ಭಿಣಿ ಮಹಿಳೆಯರಿಗೆ ಸ್ತನ್ಯಪಾನದ ಅರಿವು ಹಾಗೂ ಮಹಿಳಾ ಜಾಗೃತಿ ಕಾರ್ಯಕ್ರಮವನ್ನು ಇನ್ನರ್ ವ್ಹೀಲ್ ಕ್ಲಬ್ ಆಫ್ ತುಮಕೂರು, ಸಾಂತ್ವನ ಕೇಂದ್ರ ತುಮಕೂರು ನಗರ, ಶಿಶು ಅಭಿವೃದ್ದಿ ಯೋಜನೆ ಅಂಗನವಾಡಿ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಹಿಳಾ ಸಾಂತ್ವನ ಕೇಂದ್ರದ ಸಮಾಜಕಾರ್ಯಕರ್ತೆ ಪಾರ್ವತಮ್ಮ ರಾಜಕುಮಾರ ಉಪನ್ಯಾಸ ನೀಡಿ ಬಾಣಂತಿ ಹಾಗೂ ಗರ್ಭಿಣಿಯರಲ್ಲಿ ಹಿಂದಿನಿAದಲೂ ಕೆಲವು ನಂಬಿಕೆಗಳು ಉಳಿದುಕೊಂಡು ಬಂದಿವೆ. ಆರೋಗ್ಯಕ್ಕೆ ಅನಾನುಕೂಲವಾದ ಆಚರಣೆಗಳನ್ನು ಕೈಬಿಡಬೇಕು. ಈಗಿನ ಕಾಲಘಟ್ಟದಲ್ಲಿ ನಮ್ಮ ಆರೋಗ್ಯಕ್ಕೆ ಯಾವುದು ಮುಖ್ಯವೋ ಅದನ್ನು ಮಾತ್ರ ಪಾಲಿಸಬೇಕು ಎಂದರು. ಪೌಷ್ಠಿಕಾAಶವುಳ್ಳ ಆಹಾರ ಸೇವಿಸುವ ಕಡೆಗೆ ಗರ್ಭಿಣಿ ಮಹಿಳೆಯರು, ಬಾಣಂತಿಯರು ಗಮನ ಹರಿಸಬೇಕು. ಆರು ತಿಂಗಳು ತುಂಬವ ತನಕ ಕೇವಲ ಎದೆಹಾಲು ಮಾತ್ರ ಕೊಡಬೇಕು. ಬಹಳಷ್ಟು ಕಡೆಗಳಲ್ಲಿ ಇಂದಿಗೂ ಸಹ ಬಾಟಲಿ ಹಾಲು ಕೊಡುವ ಪದ್ಧತಿ ಇದೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ಹೀಗೆ ಹಾಲು ಕೊಡುವ ವ್ಯವಸ್ಥೆಯನ್ನು ತಪ್ಪಿಸಬೇಕು. ಮಗುವಿಗೆ ತಾಯಿ…
ತುಮಕೂರು: ಸರಕಾರಿ ಶಾಲೆಯೊಂದರ ಆವರಣದಲ್ಲಿ ನಡೆಯುತ್ತಿರುವ ಮಾನಸ ಬುದ್ದಿಮಾಂಧ್ಯ ಮಕ್ಕಳ ಶಾಲೆಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ತಿಳಿಸಿದ್ದಾರೆ. ನಗರದ ಬಾಲಭವನದ ಹಿಂಭಾಗದಲ್ಲಿರುವ ಶ್ರೀಕೃಷ್ಣರಾಜೇಂದ್ರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ಆವರಣದಲ್ಲಿರುವ ಮಾನಸ ಬುದ್ದಿ ಮಾಂದ್ಯ ಮಕ್ಕಳ ಶಾಲೆಯಲ್ಲಿ ತಮ್ಮ ೭೨ನೇ ಹುಟ್ಟು ಹಬ್ಬ ಆಚರಣೆ ವೇಳೆ ಮಾತನಾಡಿದ ಅವರು,ವಿಕಲಚೇತನ ಮಕ್ಕಳ ಶಾಲೆಯ ಸ್ಥಿತಿ ಡೋಲಾಯಮಾನವಾಗಿದೆ.ಹಾಗಾಗಿ ಎಲ್ಲದಕ್ಕೂ ಹತ್ತಿರದಲ್ಲಿರುವ ಜಾಗವನ್ನು ಗುರುತಿಸಿ, ಅವರಿಗೆ ಶಾಶ್ವತ ಜಾಗ ನೀಡುವಲ್ಲಿ ನಿಮ್ಮೊಂದಿಗೆ ಕೈಜೋಡಿಸಲಿದ್ದೇನೆ ಎಂದರು. ವಿಕಲಚೇತನ, ಅದರಲ್ಲಿಯೂ ಬುದ್ದಿಮಾಂದ್ಯ ಮಕ್ಕಳ ಪೋಷಕರು ಮತ್ತು ಶಿಕ್ಷಕರು ನಿಜಕ್ಕೂ ತಾಳ್ಮೆಯ ಮೂರ್ತಿಗಳು,ಏನು ಅರಿಯದ ಮಕ್ಕಳಿಗೆ ಪ್ರತಿಯೊಂದನ್ನು ಕಲಿಸಿಕೊಡುವ ಕೆಲಸ ಮಾಡುತ್ತಾರೆ.ಹಾಗಾಗಿ ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು, ನಾನು ಜಿಲ್ಲಾಧಿಕಾರಿಯಾಗಿ ಇದ್ದ ದಿನದಿಂದಲೂ ಮಾನಸ ಬುದ್ದಿಮಾಂದ್ಯ ಮಕ್ಕಳ ಶಾಲೆಗೂ ನನಗೂ ಅವಿನಾಭಾವ ಸಂಬAಧವಿದೆ.ತುಮಕೂರು ನನಗೆ ಒಂದು ರೀತಿಯಲ್ಲಿ ತವರು ಮನೆಯಿದ್ದಂತೆ,ಹಾಗಾಗಿ ವಿಕಲಚೇತನ ಮಕ್ಕಳನ್ನು ಸಶಕ್ತರನ್ನಾಗಿ ಸಲು ನಾವೆಲ್ಲರೂ…
ತುಮಕೂರು ವಿದ್ಯಾರ್ಥಿ ಜೀವನದಲ್ಲೇ ದೊಡ್ಡ ಕನಸುಗಳಿರಬೇಕು. ಆ ಕನಸುಗಳನ್ನು ಭವಿಷ್ಯದಲ್ಲಿ ಸಾಧಿಸಲೇಬೇಕೆಂಬ ಹಠ, ಛಲವಿರಬೇಕು. ಆಗ ಮಾತ್ರ ಬದುಕಿನಲ್ಲಿ ಗೆಲುವು ಖಚಿತ ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಮಂಗಳವಾರ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವ ‘ಸೃಜನ-೨೦೨೩’ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಹವ್ಯಾಸ, ಅಭ್ಯಾಸಗಳು ಗುಣಮಟ್ಟದ್ದಾಗಿರಬೇಕು. ಇಂದಿನ ವಿದ್ಯಾರ್ಥಿಗಳೇ ದೇಶದ ನಾಳಿನ ನಂಬಿಕೆ. ಬುದ್ಧಿವಂತರೂ, ಸೃಜನಶೀಲರೂ ದೇಶಕ್ಕೆ ಆಸ್ತಿ. ಎಲ್ಲ ಎತ್ತರದ ಆಸೆಗಳನ್ನು ಈಡೇರಿಸಿಕೊಳ್ಳಲು ಸ್ಫೂರ್ತಿಯ ಅಗತ್ಯವಿದೆ. ಶಿಕ್ಷಕನ ವಿದ್ಯಾರ್ಥಿಯ ನಂಟು ಕನ್ನಡಿ ಇದ್ದಂತೆ ಎಂದರು. ವಿಜ್ಞಾನ ವಿದ್ಯಾರ್ಥಿಗಳು ತಂತ್ರಜ್ಞಾನದ ಇತಿಹಾಸ ಹಾಗೂ ಪ್ರಸ್ತುತ ಮಾಹಿತಿ ತಿಳಿದುಕೊಂಡಿರಬೇಕು. ಪ್ರತಿಕ್ಷಣ ಹೊಸತನ್ನು ಕಾಣುವುದೇ ವಿಜ್ಞಾನ. ನೀವೆಲ್ಲರೂ ಪಾದರಸದಂತಿರಬೇಕು ಎಂದು ಹೇಳಿದರು. ರಂಗಕರ್ಮಿ ಹಾಗೂ ಹಿನ್ನೆಲೆ ಗಾಯಕ ಚಿಂತನ್ ವಿಕಾಸ್ ಮಾತನಾಡಿ, ನಮ್ಮಲ್ಲಿರುವ ವಿದ್ಯೆ ಬುದ್ಧಿಯನ್ನು ಯಾವ ಕೃತಕ ಬುದ್ಧಿಮತ್ತೆಯು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಸ್ವಂತಿಕೆ ಇದ್ದಷ್ಟು ನಾವು ಎಲ್ಲದಕ್ಕೂ ತಂತ್ರಜ್ಞಾನದ ಮೊರೆ ಹೋಗುವುದನ್ನು ಕಡಿಮೆ ಮಾಡುತ್ತೇವೆ. ಹೊರ ಜಗತ್ತಿನಲ್ಲಿ…
ತುಮಕೂರು ರಾಜ್ಯದ ತೋಟಗಾರಿಕಾ ಕ್ಷೇತ್ರಕ್ಕೆ ಎಂ.ಹೆಚ್.ಮರಿಗೌಡರ ಕೊಡುಗೆ ಅಪಾರ. ರಾಜ್ಯದ ೧೯ ಜಿಲ್ಲೆಗಳಲ್ಲಿ ೩೫೭ ಫಾರಂಗಳನ್ನು ತೆಗೆದು ತೋಟಗಾರಿಕೆಗೆ ಉತ್ತೇಜನ ನೀಡಿದ್ದರು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ. ತುಮಕೂರು ತಾಲೂಕು ಸಿರಿವರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ತೋಟಗಾರಿಕಾ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟಿçÃಯ ತೋಟಗಾರಿಕಾ ದಿನಾಚರಣೆ ಹಾಗೂ ತೋಟಗಾರಿಕಾ ಭೀಷ್ಮ ಡಾ.ಎಂ.ಹೆಚ್. ಮರಿಗೌಡ ಜನ್ಮಜಯಂತಿ ಕಾರ್ಯಕ್ರಮಕ್ಕೆ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡುತಿದ್ದ ಅವರು,.ಕೃಷಿಯ ಜೊತೆಗೆ, ತೋಟಗಾರಿಕಾ ಬೆಳೆಗಳ ಮೂಲಕ ಪರಿಸರದ ಜೊತೆಗೆ,ಕೃಷಿ ಇಲಾಖೆಯಿಂದ ತೋಟಗಾರಿಕೆಯನ್ನು ವಿಭಾಗೀಸಿ,ಪ್ರತ್ಯೇಕ ಇಲಾಖೆಯನ್ನಾಗಿಸಿ,ತೋಟಗಾರಿಕೆ ಬೆಳೆಗಳ ಬಗ್ಗೆ ಒತ್ತು ನೀಡಿದರು ಎಂದರು. ಬೆAಗಳೂರು, ಕೋಲಾರ, ತುಮಕೂರು ಹುಣಸೆ, ಹಲಸು, ಮಾವು ಬೆಳೆಯುವ ಮೂಲಕ ಬಂಜರು ಭೂಮಿಯನ್ನು ತೋಟವಾಗಿ ಪರಿವರ್ತಿಸಿ, ರೈತನನ್ನು ಆರ್ಥಿಕವಾಗಿ ಸದೃಢರನ್ನಾಗಿಸಿದರು. ಇದರ ಫಲವಾಗಿ ಸರಕಾರ ೧೯೯೩ನಲ್ಲಿ ಡಾ.ಎಂ.ಹೆಚ್.ಮರಿಗೌಡರಿಗೆ ತೋಟಗಾರಿಕಾ ರತ್ನ ಬಿರುದು ನೀಡಿ ಗೌರವಿಸಿತು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು. ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿ ನಂತರ ಮುಂದೇನು ಎಂಬ ವಿಷಯದ…
ತುಮಕೂರು ವಿಶ್ವವಿದ್ಯಾನಿಲಯದ ೧೬ನೇ ವಾರ್ಷಿಕ ಘಟಿಕೋತ್ಸವವು ಆ.೭ ರಂದು ಸೋಮವಾರ ಬೆಳಗ್ಗೆ ೧೧-೦೦ ಗಂಟೆಗೆ ವಿಶ್ವವಿದ್ಯಾನಿಲಯದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ಜರುಗಲಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದರು. ತುಮಕೂರು ವಿಶ್ವವಿದ್ಯಾನಿಲಯದ ೧೬ನೇ ವಾರ್ಷಿಕ ಘಟಿಕೋತ್ಸವದ ಕುರಿತಂತೆ ನಡೆದ ಶನಿವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಅವರು ತಿಳಿಸಿದರು. ಕರ್ನಾಟಕದ ರಾಜ್ಯಪಾಲರೂ ತುಮಕೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ಥಾವರ್ ಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ ಉನ್ನತ ಶಿಕ್ಷಣ ಸಚಿವರೂ ತುಮಕೂರು ವಿಶ್ವವಿದ್ಯಾನಿಲಯದ ಸಮಕುಲಾಧಿಪತಿಗಳೂ ಆಗಿರುವ ಡಾ. ಎಂ. ಸಿ. ಸುಧಾಕರ್ ಉಪಸ್ಥಿತರಿರುವರು. ಪ್ರೊ. ಸಾಂತಿಶ್ರೀ ಧೂಳಿಪುಡಿ ಪಂಡಿತ್, ಮಾನ್ಯ ಕುಲಪತಿಗಳು, ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ, ನವದೆಹಲಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಘಟಿಕೋತ್ಸವ ಭಾಷಣ ನೆರವೇರಿಸಲಿರುವರು ಎಂದರು. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವರಾದ ನಾಹಿದಾ ಜಮ್ ಜಮ್ ಉಪಸ್ಥಿತರಿರುವರು ಎಂದರು. ಸಮಾಜ ಸೇವಕ ಶ್ರೀ ಆರ್.…
ಹುಳಿಯಾರು ಶಾಲಾ ಮಕ್ಕಳ ಅಪೌಷ್ಠಿಕತೆ ತಡೆಯಲು ಸರ್ಕಾರ ಜಾರಿಗೆ ತಂದಿರುವ ಬಿಸಿಯೂಟವನ್ನು ಬೆಲೆ ಏರಿಕೆಯ ನಡುವೆ ಗುಣಮಟ್ಟದಿಂದ ನೀಡುವುದು ಸದ್ಯಕ್ಕೆ ಶಿಕ್ಷಕರಿಗಿರುವ ಸವಾಲಾಗಿದೆ. ಅಲ್ಲದೆ ೨ ತಿಂಗಳಿAದ ಬಿಸಿಯೂಟದ ಹಣ ಬಾರದಿರುವುದು ಸಮರ್ಪಕ ಜಾರಿಗೆ ಮತ್ತೊಷ್ಟು ತೊಡಕಾಗಿದೆ. ಸರ್ಕಾರ ಅಕ್ಷರ ದಾಸೋಹ ಇಲಾಖೆಯ ಮೂಲಕ ಬಿಸಿಯೂಟಕ್ಕಾಗಿ ಅಕ್ಕಿ, ಬೇಳೆ, ಅಡುಗೆ ಅನಿಲ, ಗೋಧಿ, ಎಣ್ಣೆ, ಸರಬರಾಜು ಮಾಡುತ್ತಿದೆ. ಇನ್ನು ಉಳಿದಂತೆ ಸಾಂಬಾರು ಪದಾರ್ಥಗಳು, ಉಪ್ಪು, ತರಕಾರಿ ಶಾಲೆಯವರೇ ಖರೀದಿಸಬೇಕಾಗಿದೆ. ಸರ್ಕಾರ ೧ ರಿಂದ ೫ ನೇ ತರಗತಿ ಒಂದು ಮಗುವಿಗೆ ೫.೪೫ ರೂ. ನೀಡುತ್ತಿದೆ. ೬ ರಿಂದ ೧೦ ನೇ ತರಗತಿ ಮಕ್ಕಳಿಗೆ ೮.೧೭ ರೂ. ನೀಡುತ್ತಿದೆ. ಆದರೆ ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ತರಕಾರಿ ಸೊಪ್ಪು ಬೆಲೆ ದುಪ್ಪಟ್ಟಾಗಿದೆ. ಅಲ್ಪ ಅನುದಾನದಲ್ಲಿ ಒಂದು ಮಗುವಿಗೆ ತರಕಾರಿ-ಸೊಪ್ಪು ಖರೀದಿಗೆ ಸರ್ಕಾರದ ಹಣ ಸಾಕಾಗುತ್ತಿಲ್ಲ. ಪರಿಣಾಮ ಬಿಸಿಯೂಟದ ಹೊಣೆ ಹೊತ್ತ ಶಿಕ್ಷಕರ ಜೇಬಿಗೆ ಕತ್ತರಿಯಾಗುತ್ತಿದೆ. ಪ್ರತಿದಿನ ಆಹಾರದಲ್ಲಿ ಬಳಕೆಯಾಗಲೇ ಬೇಕಾಗಿರುವ ಬೀನ್ಸ್, ಟೊಮೊಟೊ, ಹಸಿಮೆಣಸಿನಕಾಯಿ…











