Author: News Desk Benkiyabale

ತುಮಕೂರು ನಗರದ ಪ್ರಮುಖ ರಸ್ತೆಗಳಲ್ಲಿ ಆಟೋ ನಿಲ್ದಾಣ ಇಲ್ಲದೆ ಆಟೋ ಚಾಲಕರು ಹೈರಾಣಗಿದ್ದು ಕೂಡಲೇ ಜಿಲ್ಲಾಡಳಿತ ಪ್ರಮುಖ ರಸ್ತೆಗಳಲ್ಲಿ ಆಟೋ ನಿಲ್ದಾಣ ಸ್ಥಾಪನೆ ಮಾಡುವ ಮೂಲಕ ಆಟೋ ಚಾಲಕರಿಗೆ ಅನುಕುಲ ಮಾಡುವುದರೊಂದಿಗೆ ಆಟೋ ಚಾಲಕರ ರಕ್ಷಣೆಗೆ ತುಮಕೂರು ಜಿಲ್ಲಾಡಳಿತ ಮುಂದಾಗಬೇಕು ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಪ್ರತಾಪ್ ಒತ್ತಾಯಿಸಿದ್ದಾರೆ. ಶುಕ್ರವಾರ ಮಧ್ಯಾನ ದಿಡೀರ್ ಪ್ರತಿಭಟನೆ ನಡೆಸಿದ ಆಟೋ ಚಾಲಕರು ಸಂಚಾರಿ ಪೆÇಲೀಸರು ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದು ಇನ್ನು ತುಮಕೂರು ಹೃದಯ ಭಾಗವಾದ ಬಸ್ ನಿಲ್ದಾಣದ ಎದುರು ಆಟೋ ನಿಲ್ದಾಣ ಇಲ್ಲದ ಕಾರಣ ರಸ್ತೆಯಲ್ಲಿ ಆಟೋಗಳನ್ನು ನಿಲ್ಲಿಸುವ ವೇಳೆಯಲ್ಲಿ ಸಂಚಾರಿ ಪೆÇಲೀಸರಿಂದ ಸಹ ತೀವ್ರ ತೊಂದರೆ ಉಂಟಾಗುತ್ತಿದ್ದು ದುಬಾರಿ ಮೊತ್ತದ ದಂಡ ಹಾಕುವ ಮೂಲಕ ಆಟೋ ಚಾಲಕರಿಗೆ ಪ್ರತಿನಿತ್ಯ ಕಿರಿಕಿರಿ ಉಂಟಾಗುತ್ತಿದೆ ಇದರಿಂದ ಆಟೋ ಚಾಲಕರ ಜೀವನ ಸoಕಷ್ಟಕ್ಕೆ ಇಡಾಗಿದ್ದು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಆಟೋ ಚಾಲಕರ ರಕ್ಷಣೆಗೆ ಮುಂದಾಗಬೇಕು ಎಂದು ಆಟೋ ಚಾಲಕರು ಒತ್ತಾಯಿಸಿದ್ದಾರೆ. ಇನ್ನು…

Read More

ತುಮಕೂರು ಜೆಡಿಎಸ್ ಮುಖಂಡ ಅಟಿಕಾ ಬಾಬು ಅವರ ಕಾರಿಗೆ ಮುತ್ತಿಗೆ ಹಾಕಿದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಬೆಂಬಲಿಗರು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ತುಮಕೂರು ನಗರದ ಟೌನ್ ಹಾಲ್ ನಲ್ಲಿ ನಡೆದಿದೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತುಮಕೂರು ನಗರದಲ್ಲಿ ದಿನದಿನ ಚುನಾವಣಾ ಕಾವು ಹೆಚ್ಚಾಗುತ್ತಿದ್ದು ತುಮಕೂರು ನಗರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಸಲುವಾಗಿ ಜೆಡಿಎಸ್ ಪಕ್ಷದ ಮುಖಂಡ ಆಟಿಕ ಬಾಬು ರವರು ಸ್ಥಳೀಯ ಮುಖಂಡರನ್ನು ಭೇಟಿ ಮಾಡುವ ಮೂಲಕ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ . ಶುಕ್ರವಾರ ರಾತ್ರಿ ಜೆಡಿಎಸ್ ಮುಖಂಡ ಗೋವಿಂದರಾಜು ರವರ ಬೆಂಬಲಿಗರು ಉದ್ಯಮಿ, ಜೆಡಿಎಸ್ ಮುಖಂಡ ಅಟಿಕಾ ಬಾಬು ಅವರ ಕಾರಿಗೆ ಮುತ್ತಿಗೆ ಹಾಕಿದಾಗ, ಚಿಕ್ಕಪೇಟೆಯ ಸುಹೇಲ್ ಪಾಷ ಎಂಬುವರು ಹೀಗೆ ಮಾಡಬೇಡಿ, ಇಲ್ಲಿಂದ ಹೋಗಿ, ಟ್ರಾಫಿಕ್ ನಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ 8 ರಿಂದ 10 ಜನ ಗೋವಿಂದರಾಜು ಕಡೆಯ ಕಿಡಿಗೇಡಿಗಳು ಹತ್ಯೆ ಮಾಡುವ…

Read More

ತುಮಕೂರು ಸಂಘಮಿತ್ರ ಸ್ಲಂ ನಿವಾಸಿಗಳ ಸೌಹಾರ್ಧ ಸಹಕಾರಿ ನಿ. ಸರ್ವಸದಸ್ಯರ ವಾರ್ಷಿಕ ಸಭೆ ಮತ್ತು ಸ್ಲಂ ಜನರ ಜಾಗೃತಿ ಸಮಾವೇಶ ಉದ್ಘಾಟನಾ ಸಮಾರಂಭವನ್ನು ಕನ್ನಡ ಭವನದಲ್ಲಿ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಸಮಿತಿ ಹಾಗೂ ಸಂಘಮಿತ್ರ ಸ್ಲಂ ನಿವಾಸಿಗಳ ಸೌಹಾರ್ಧ ಸಹಕಾರಿ ಸಂಘದಿಂದ ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನೆಯನ್ನು ನೆರವೇರಿಸಿ ಆರ್ಶೀವಚನ ನೀಡಿದ ತಪೋವನ ಹಿರೇಮಠದ ಡಾ.ಶಿವಾನಂದ ಶಿವಚಾರ್ಯ ಮಹಾಸ್ವಾಮಿಜಿಯವರು ಸಂಘಮಿತ್ರ ಸ್ಲಂ ಜನರ ಭರವಸೆ ಹೆಸರಿನಲ್ಲೇ ಭವಿಷ್ಯದ ಮುನ್ನೋಟ ಹೊಂದಿರುವ ಸಂಘ ಕೊಳಗೇರಿಗಳನ್ನು ಅಗ್ರಹಾರಗಳನ್ನಾಗಿ ಬೆಳಗುವ ದೀಪವಾಗಲಿ ಸೊನ್ನೆಗೂ ಮೌಲ್ಯವಿದೆ ಹಾಗಾಗಿ ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ಕೊಳಗೇರಿಗಳು ವ್ಯವಸ್ಥೆ ಮತ್ತು ಸಮಯದ ಜೊತೆಯಲ್ಲಿ ರಾಜಿ ಮಾಡಿಕೊಳ್ಳದೇ ನಮ್ಮ ಅಭಿವೃದ್ದಿಗೆ ಮುಂದಾದರೆ ಸ್ಲಂ ಜನರಿಗೆ ಸಂವಿಧಾನದ ಸಮಪಾಲು ಸಮಬಾಳು ದಕ್ಕಲು ಸಾಧ್ಯವಾಗುತ್ತದೆ. ಇದಕ್ಕಾಗಿ ನಾವು ಎಚ್ಚರದ ಹೋರಾಟವನ್ನು ಕೈಗೊಳ್ಳಬೇಕಾಗಿದೆ. ಅಂಬೇಡ್ಕರ್ ತುಳಿದ ದಾರಿ ಸುಖದ ದಾರಿಯಾಗಿರಲಿಲ್ಲ ಹಾಗಾಗಿ ಅಂಬೇಡ್ಕರ್ ಅರಿವು ಭೀಮನ ದಾರಿಯಿಂದ ಬಾಬಾನಾಗುವ ಹಂತಕ್ಕೆ ತಲುಪಿತು ಆದ್ದರಿಂದ ಸಮಾಜದಲ್ಲಿರುವ ಎಲ್ಲಾ ಬಡವರ ಹಾದಿ ಸುಗಮವಲ್ಲ…

Read More

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಅಕ್ರಮವಾಗಿ ನಕಲಿ ಸ್ತ್ರೀ ಸಂಘಗಳನ್ನು ರಚಿಸಿ ಚುನಾವಣೆಯಲ್ಲಿ ಲಾಭ ಪಡೆಯಲು ಮುಂದಾಗಿದ್ದು, ಇವುಗಳ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಬಿಜೆಪಿ ಮಹಿಳಾ ಮೋರ್ಚಾ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ಮಾತನಾಡಿದ ಮಹಿಳಾ ಮೋರ್ಚಾ ಅಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಸರ್ಕಾರವೇ ಸ್ತ್ರೀ ಶಕ್ತಿ ಸಂಘಗಳನ್ನು ರಚಿಸಬೇಕು. ಇಂಥ ಸಂಘಗಳಿಗೆ ಸರ್ಕಾರದ ಮಾನ್ಯತೆ ಸಿಗಲಿದೆ. ಆದರೆ ಶಾಸಕರು ಚುನಾವಣೆ ದೃಷ್ಠಿಯಿಂದ ಮಹಿಳೆಯರ ಕಣ್ಣಿಗೆ ಮಣ್ಣೆರಚಲು ಯತ್ನಿಸುತ್ತಿದ್ದಾರೆ. ಈ ಸಂಘಗಳಿಗೆ ಸರ್ಕಾರದಿಂದ ಸಾಲ ಕೊಡಿಸುತ್ತೇನೆ. ಸಂಘ ರಚಿಸಿಕೊಳ್ಳಿ ಎಂದು ದುಂಬಾಲು ಬೀಳುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಎಚ್ಚರವಹಿಸಬೇಕು. ಸರ್ಕಾರದ ಹೆಸರಿನಲ್ಲಿ ನಕಲಿ ಸಂಘಗಳ ರಚಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ಶಾಸಕರು ಕಳೆದ ಚುನಾವಣೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನಕಲಿ ಬಾಂಡ್ ವಿತರಿಸಿದ್ದರು. ನಕಲಿ ಕೊರೊನಾ ವ್ಯಾಕ್ಸೀನ್ ನೀಡಿಸಿದ್ದಾರೆ ಎಂಬ ಆರೋಪವೂ…

Read More

ತುಮಕೂರು ನಗರದ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಹೆ.ಎಸ್ ರವಿಶಂಕರ್ ಹೆಬ್ಬಾಕ ರವರ ಸಮ್ಮುಖದಲ್ಲಿ ನಗರದ 25, 30, 31 ಹಾಗೂ 35ನೇ ವಾರ್ಡಿನ ಅನೇಕ ಜನರು ಕಾಂಗೆಸ್ ಹಾಗೂ ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಆದ ನಂತರ ಸಾಕಷ್ಟು ಬದಲಾವಣೆಗಳಾಗಿವೆ. ಸತತ ಏಂಟು ವರ್ಷಗಳ ಕಾಲ ಸುದೀರ್ಘ ದೇಶದ ಅಭಿವೃದ್ಧಿಗೆ ಶ್ರಮಿಸಿದ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಅನೇಕ ಜನಪರ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ದೇಶದ ಕೊನೆಯ ಪ್ರಜೆಗೂ ತಲುಪಿಸುವ ನಿಟ್ಟಿನಲ್ಲಿ ಅವರೆ ಕಾರ್ಯವೈಖರಿ ಎಲ್ಲರಿಗೂ ಮಾರ್ಗದರ್ಶನವಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ರಾಜ್ಯ ಬಿಜೆಪಿ ಸರ್ಕಾರವು ಅನುಷ್ಠಾನಗೊಳಿಸುತ್ತಿದ್ದು, ಇಂದು ಎಲ್ಲರ ಅಭಿವೃದ್ಧಿಯ ಹೊಣೆಯನ್ನು ಬಿಜೆಪಿ ಸರ್ಕಾರ ಹೊತ್ತಿದೆ ಎಂದರು. ಕೊರೋನಾ ಸಂದರ್ಭದಲ್ಲಿ ಭಾರತದ ಕಟ್ಟು ನಿಟ್ಟಿನ ಕ್ರಮದಿಂದಾಗಿ…

Read More

ತುಮಕೂರು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರು ಮಕ್ಕಳಿಗೆ ನಕಲಿ ವಿಮಾ ಕಾರ್ಡು ವಿತರಣೆ ಪ್ರಕರಣದಲ್ಲಿ ಚುನಾವಣಾ ಅಕ್ರಮ ಸಾಬೀತಾಗಿದ್ದು, ಕೆಲವೇ ದಿನಗಳಲ್ಲಿ ಶಾಸಕ ಸ್ಥಾನದಿಂದ ಅನರ್ಹ ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸೂರ್ಯ ಮುಕುಂದರಾಜ್ ಭವಿಷ್ಯ ನುಡಿದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,2018ರ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 16 ಸಾವಿರ ವಿದ್ಯಾರ್ಥಿಗಳಿಗೆ ನಕಲಿ ವಿಮೆ ಬಾಂಡ್ ಹಂಚಿದ್ದಾರೆ ಎಂಬುದು ಸಾಬೀತಾಗಿದೆ, ಸ್ವತಹಃ ಐಆರ್‍ಡಿಬಿಯೇ ಕಮ್ಮಗೊಂಡನಹಳ್ಳಿ ಶ್ರೀಮಾರುತಿ ಚಾರಿಟಬಲ್ ಟ್ರಸ್ಟ್‍ನಿಂದ ಗ್ರಾಮಾಂತರ ಕ್ಷೇತ್ರದ ಸುಮಾರು 16 ಸಾವಿರ ಮಕ್ಕಳಿಗೆ ನೀಡಿರುವ ವಿಮಾ ಬಾಂಡ್ ನಕಲಿ ಎಂಬುದನ್ನು ಒಪ್ಪಿಕೊಂಡಿದೆ.ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಶೀಘ್ರ ಅಂತಿಮ ತೀರ್ಪ ಹೊರಬೀಳಲಿದೆ ಎಂದರು. ಗ್ರಾಮಾಂತರ ಶಾಸಕರ ಬೇನಾಮಿಯಾಗಿರುವ ಪಾಲನೇತ್ರಯ್ಯ ಚುನಾವಣಾ ಸಂದರ್ಭದಲ್ಲಿ ವಿಜೆಲೆನ್ಸ್ ನವರ ಕೈಗೆ ಸಿಕ್ಕು, ತಾನು ಮಾಡಿರುವ ಅಕ್ರಮ ಒಪ್ಪಿ, ತುಮಕೂರು ನ್ಯಾಯಾಲಯದಲ್ಲಿ ಒಂದು ಸಾವಿರ ದಂಡ ಕಟ್ಟಿದ್ದಾರೆ,ಗೌರಿಶಂಕರ್ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿ ಹಿಂಪಡೆದಿದ್ದಾರೆ, ಪಾಲನೇತ್ರಯ್ಯ ಸಲ್ಲಿಸಿರುವ ಅರ್ಜಿ ವಜಾಗೊಂಡಿದೆ ನ್ಯಾಯಾಲಯದ…

Read More

ತುಮಕೂರು ರಾಜ್ಯ ಮಟ್ಟದ ಜನನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ.ಲಿನ ಆಡಳಿತ ಮಂಡಳಿ ನಿರ್ದೇಶಕರಾಗಿ ಬನಶಂಕರಿ ಬಾಬು ಆಯ್ಕೆಯಾಗಿದ್ದಾರೆ. ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ತುಮಕೂರು ಜಿಲ್ಲಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಬನಶಂಕರಿ ಬಾಬು ಅವರು, ಸಹಕಾರಿ ಮತ್ತು ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದು, ರಾಜ್ಯಮಟ್ಟದ ಸಂಸ್ಥೆಯಾದ ಜನನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್‍ನ ಆಡಳಿತ ಮಂಡಳಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಇತ್ತಿಚೆಗೆ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ ಅರುಣ್‍ಕುಮಾರ್ (ಬನಶಂಕರಿ ಬಾಬು) ಅವರಿಗೆ ಬ್ಯಾಂಕ್‍ನ ಅಧ್ಯಕ್ಷರಾದ ಎಚ್.ಮಂಜಪ್ಪ ಅವರು ಆಯ್ಕೆಯಾದ ದೃಢೀಕೃತ ಪತ್ರವನ್ನು ವಿತರಿಸಿದರು. ಈ ವೇಳೆ ಬ್ಯಾಂಕ್ ಉಪಾಧ್ಯಕ್ಷರಾದ ದಿನೇಶ್, ನಿರ್ದೇಶಕರಾದ ವಜ್ರಮುಡಿ, ಬಿ.ಸಿ.ಕೃಷ್ಣ, ದೇವರಾಜು, ರವಿಕುಮಾರ್, ಮೀನಾಕ್ಷಿ ಹಾಗೂ ಬಾಲಾಜಿ ಅವರು ಉಪಸ್ಥಿತರಿದ್ದರು.

Read More

ತುಮಕೂರು ಹಿಂದುಳಿದ ವರ್ಗಗಳ ಸಮಾಜಕ್ಕೆ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನದ ಭರಪೂರ ಕೊಡುಗೆಗಳನ್ನು ನೀಡಿವೆ ಎಂದು ಬಿಜೆಪಿ ತುಮಕೂರು ನಗರ ಮಂಡಲದ ಒಬಿಸಿ ಮೋರ್ಚಾ ಅಧ್ಯಕ್ಷ ಹನುಂತಪುರ ಹನುಮಂತರಾಜು ತಿಳಿಸಿದರು. ಇವರು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ತುಮಕೂರು ನಗರ ಒಬಿಸಿ ಮೋರ್ಚಾದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕೇಂದ್ರದ ಪ್ರಧಾನಿ ನರೇಂದ್ರಮೋದಿರವರ ಸರ್ಕಾರವು ನಿರೀಕ್ಷೆಗೂ ಮೀರಿ ಅನುದಾನ ನೀಡಿದೆ. ರಾಜ್ಯದಲ್ಲೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ 400 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಘೋಷಿಸಿ 2ನೇ ಕಂತಿನ ಹಣವನ್ನೂ ಬಿಡುಗಡೆಗೊಳಿಸಿದೆಯಲ್ಲದೆ, ಬಹುತೇಕ ಹಿಂದುಳಿದ ವರ್ಗಕ್ಕೆ ಸೇರಿದ ಶ್ರಮಿಕ, ಕಾರ್ಮಿಕ ವಲಯಕ್ಕೆ 2000 ಕೋಟಿ ರೂ.ಗಳ ಹಣವನ್ನು ಡಿಬಿಟಿ ಮೂಲಕ ನೇರವಾಗಿ ಕಾರ್ಮಿಕರ ಖಾತೆಗೆ ಹಾಕಲಾಗಿದೆ ಎಂದು ವಿವರಿಸಿದರು. ತುಮಕೂರಿನಲ್ಲಿ ಕುರುಬ, ಉಪ್ಪಾರ, ತಿಗಳ, ನೇಕಾರ, ಗಂಗಮತಸ್ಥ, ಮಡಿವಾಳ, ಸವಿತ ಸಮಾಜಗಳ ಸಮುದಾಯ ಭವನಗಳಿಗೆ ಒಂದು ಕೋಟಿ 6 ಲಕ್ಷ ರೂ.ಗಳನ್ನು ಶಾಸಕರ ಶಿಫಾರಸ್ಸಿನಂತೆ ಬಿಡುಗಡೆಗೊಂಡಿರುವ ಬಗ್ಗೆಯೂ ತಿಳಿಸಿದರು. ಹಿಂದುಳಿದ…

Read More

ಗುಬ್ಬಿ ಗ್ರಾಮೀಣ ಭಾಗದ ಕಲೆ ಸಂಸ್ಕೃತಿ ಉಳಿಯಲು ಕಾರಣ ಕನ್ನಡ ಭಾಷೆ, ಕನ್ನಡ ನೆಲ, ಜಲ ಇವುಗಳ ಸಂಗಮವೇ ಎಂದು ಸಾಹಿತಿ ಮತ್ತು ಸಮ್ಮೇಳನ ಅಧ್ಯಕ್ಷ ಎಣ್ಣೆ ಕಟ್ಟೆ ಚಿಕ್ಕಣ್ಣ ಅಭಿಪ್ರಾಯಪಟ್ಟರು. ಜೇಳೂರು ನಲ್ಲಿ ಏರ್ಪಡಿಸಿದ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಆಧುನಿಕರಣ ಯುಗದಲ್ಲಿ ನಮ್ಮ ಸಂಸ್ಕೃತಿ ಉಳಿಯಬೇಕಾದರೆ ಗ್ರಾಮೀಣ ಭಾಗದ ಜೀವಂತ ಕಲೆಗಳು ಹಾಗೂ ಸಂಸ್ಕಾರಕ್ಕೆ ಹೆಚ್ಚು ಹೊತ್ತನ್ನು ನೀಡಬೇಕೆಂದು ತಿಳಿಸಿದರು. ನಾನು ತುಂಬಾ ಶ್ರೀಮಂತ ಮನತೆಂದ ಬಂದವನಲ್ಲ ಬಡತನದಿಂದ ಸರ್ಕಾರಿ ಶಾಲೆಯಲ್ಲಿ ಓದಿ ಇಂದು ನಿಮ್ಮೆಲ್ಲರ ಪ್ರೀತಿ ಪಾತ್ರವಾಗಿ ತೇನೆ ನನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಚೇಳೂರು ಹೋಬಳಿಯ ಜನ ರ ಹೃದಯದಲ್ಲಿದ್ದು ಇದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಸಹಾಯವಾಗುತ್ತದೆ ಎಂದರು. ಮುಂದುವರೆದು ಮಾತನಾಡಿ ಜಾನಪದ ಕಲೆಯು ನಮ್ಮ ನಾಡಿನ ಜೀವನದಿ ನಾನು ಸುಮಾರು ರಾಜ್ಯಗಳನ್ನು ಸುತ್ತಿದ್ದು ಇದರಿಂದ ಬೇರೆ ಬೇರೆ ರಾಜ್ಯಗಳ ಕಲಾತಂಡಗಳೊಂದಿಗೆ ಬೆರೆತು ಅವರ ಸಂಸ್ಕೃತಿಯನ್ನು ಕಲಿಯಲು ಸಹಾಯವಾಗಿದೆ ಎಂದರು. ಗುಬ್ಬಿ…

Read More

ತುಮಕೂರು ಸರಕಾರ ಕ್ವಾರಿ ಮತ್ತು ಕ್ರಷರ್ ಮಾಲೀಕರ ಮೇಲೆ ವಿಧಿಸುತ್ತಿರುವ ಅವೈಜ್ಞಾನಿಕ ದಂಡವನ್ನು ಕೈಬಿಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದಿನಿಂದ ರಾಜ್ಯದಾದ್ಯಂತ ಕ್ವಾರಿ ಮತ್ತು ಕ್ರಷರ್ ಕೆಲಸ ಸ್ಥಗೀತಗೊಳಿಸಿ, ಅನಿರ್ಧಿಷ್ಠಾವಧಿ ಮುಷ್ಕರ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ಕ್ವಾರಿ ಮತ್ತು ಕ್ರಷರ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಕಾರ್ಯದರ್ಶಿ ಭಾಸ್ಕರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ರಾಜ್ಯದಲ್ಲಿ ಸುಮಾರು 3000 ಕ್ಕೂ ಅಧಿಕ ಕ್ವಾರಿ ಮತ್ತು ಕ್ರಷರ್‍ಗಳಿದ್ದು, ದಿನವೊಂದಕ್ಕೆ 50-60 ಸಾವಿರ ಟನ್ ಎಂ.ಸಾಂಡ್,ಜಲ್ಲಿ ಇನ್ನಿತರ ಕಚ್ಚಾ ಪದಾರ್ಥಗಳನ್ನು ಸರಕಾರದ ಯೋಜನೆಗಳ ಜೊತೆಗೆ, ಗೃಹ ನಿರ್ಮಾಣಕ್ಕೂ ಒದಗಿಸುವ ಕೆಲಸ ಮಾಡುತ್ತಿದ್ದೇವೆ.ಸರಕಾರ ಕ್ವಾರಿಗಳನ್ನು ಅಳತೆ ಮಾಡಿ,ನೀವು ನೀಡಿರುವ ಲೆಕ್ಕಕ್ಕಿಂತ ಅಧಿಕ ಖನಿಜ ತೆಗೆದಿದ್ದು,ಹೆಚ್ಚುವರಿ ಖನಿಜಕ್ಕೆ ಚಾಲ್ತಿ ರಾಜಧನದ 5 ಪಟ್ಟು ದಂಡ ಕಟ್ಟುವ ನೊಟೀಷ್ ಜಾರಿ ಮಾಡುತ್ತಿದೆ. ಒಬ್ಬರಿಗೆ 50ಲಕ್ಷದಿಂದ 20 ಕೋಟಿಯವರೆಗೆ ದಂಡ ವಿಧಿಸಿದ್ದಾರೆ.ಇದು ಸಂಪೂರ್ಣ ಅವೈಜ್ಞಾನಿಕವಾಗಿದ್ದು,ಕೂಡಲೇ ಇದನ್ನು ಕೈಬಿಡಬೇಕೆಂಬುದು ಕರ್ನಾಟಕ ರಾಜ್ಯ ಕ್ವಾರಿ ಮತ್ತು ಕ್ರಷರ ಮಾಲೀಕರ…

Read More