ತುಮಕೂರು: ದೇಶದಲ್ಲಿ ಇಂಜಿನಿಯರಿಂಗ್ ಪದವೀಧರರು ಉತ್ತಮ ಅಂಕಗಳಿಕೆಯಿದ್ದೂ, ಉತ್ತಮ ಉದ್ಯೋಗ ಪಡೆದುಕೊಳ್ಳುವುದು ಹಲವಾರು ಭಾರಿ ಕಷ್ಟಕರವಾಗಿ ಪರಿಣಮಿಸುವುದೇಕೆಂದರೆ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳ ಕೊರತೆಯಿಂದಲೇಯೆಂದು ಶ್ರೀವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಎಸ್.ವಿದ್ಯಾಶಂಕರ್‍ರವರು ನುಡಿದರು. ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ಬಿ.ಇ. ತರಗತಿಗಳನ್ನು ಡಿ.12ರಂದು ಉದ್ಘಾಟಿಸಿ ಮಾತನಾಡುತ್ತಾ ಅವರು ಭಾರತದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಪ್ರಥಮವಾಗಿ ರಾಜ್ಯ ಸರ್ಕಾರ ಹೆಚ್ಚಿನ ಅಸ್ಥೆಯಿಂದ ಜಾರಿಗೊಳಿಸುತ್ತಿದ್ದು, ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆಯಾಗಲಿದೆ ಮತ್ತು ಕೌಶಲ್ಯಾಧಾರಿತ ಕಲಿಕಾ ಕ್ರಮಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಉದ್ಯೋಗ ಲಭ್ಯತೆ ಮತ್ತು ಉದ್ಯಮ ಸ್ಥಾಪನಾ ಚಟುವಟಿಕೆಗಳು ಹೆಚ್ಚಾಗಿ ಅಭಿವೃದ್ಧಿಗೆ ಪೂರಕವಾಗಲಿದೆಯೆಂದು ತಿಳಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ಉತ್ತಮ ಅಂಶಗಳನ್ನು ಎಳೆ ಎಳೆಯಾಗಿ ವಿವರಿಸಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿದರು. ಮತ್ತೋರ್ವ ಮುಖ್ಯಅತಿಥಿಯಾಗಿದ್ದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಸಿ.ಟಿ.ಮುದ್ದುಕುಮಾರ್‍ರವರು ಮಾತನಾಡುತ್ತಾ ತುಮಕೂರು ನಗರದ ಹೊರವಲಯದಲ್ಲಿ ವಸಂತ ನರಸಾಪುರ ಸೇರಿದಂತೆ ಸುಮಾರು 12 ಸಾವಿರ ಎಕರೆ ಭೂಮಿಯಲ್ಲಿ…
Author: News Desk Benkiyabale
ತುಮಕೂರು ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 8-10 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಪಡೆಯುವಂತೆ ಮಾಡಲು ಪ್ರತಿ ಬೂತ್ ನಲ್ಲಿಯೂ ಕನಿಷ್ಠ 5 ಜನ ನಿμÁ್ಠವಂತ ಯುವಕಾರ್ಯಕರ್ತರನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ನಮ್ಮ ಬೂತ್, ನಮ್ಮ ಹೆಮ್ಮೆ ಎಂಬ ವಿನೂತನ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ ಮಠ್ ತಿಳಿಸಿದ್ದಾರೆ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕಳೆದ ಎರಡು ತಿಂಗಳ ಹಿಂದೆ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ರಾದ ಶ್ರೀನಿವಾಸ್ ಅವರು,ಯೂತ್ ಜೋಡೋ,ಬೂತ್ ಜೋಡೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮುಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಯುವಕಾಂಗ್ರೆಸ್ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಬೂತ್ ನಲ್ಲಿ ಐವರು ಯುವಕಾರ್ಯಕರ್ತರನ್ನು ನೇಮಿಸಿ, ಅವರ ಮೂಲಕ ಪ್ರತಿ ಮನೆ ಮನೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು ಹಾಗು ಬಿಜೆಪಿಯ ಜನವಿರೋಧಿ ನೀತಿಗಳನ್ಬು ತಿಳಿಸಿ, ಜನಸಾಮಾನ್ಯರ ವಿರೋಧಿ ಸರಕಾರವನ್ನು ಕಿತ್ತೊಗೆಯಲು ಸಹಕರಿಸುವಂತೆ ಮತದಾರರ…
ತುಮಕೂರು ಸರ್ಕಾರದ ಮಹತ್ವಾಕಾಂಕ್ಷೆಯ ‘ಜೆ.ಇ’ ಲಸಿಕಾ ಅಭಿಯಾನವನ್ನು ಈ ತಿಂಗಳ 24 ರೊಳಗಾಗಿ ಶೇ.100ರಷ್ಟು ಯಶಸ್ವಿಗೊಳಿಸಬೇಕಿದ್ದು, ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆದು 1 ರಿಂದ 15 ವರ್ಷದೊಳಗಿನ ಯಾವ ಮಕ್ಕಳೂ ಸಹ ಲಸಿಕೆಯಿಂದ ಹೊರಗುಳಿಯದಂತೆ ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಲಸಿಕಾಕರಣ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ/ ತಾಲ್ಲೂಕು ಮಟ್ಟದ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾತನಾಡುತ್ತಾ, ಜಿಲ್ಲೆಯ ಎಲ್ಲ ಅಂಗನವಾಡಿ ಮಕ್ಕಳನ್ನು ಲಸಿಕಾ ಕೇಂದ್ರಗಳಿಗೆ ಕರೆತಂದು ಲಸಿಕೆ ಹಾಕಿಸಬೇಕು. ಈ ನಿಟ್ಟಿನಲ್ಲಿ ಯೋಜನೆ ಹಾಗು ರೂಟ್‍ಮ್ಯಾಪ್ ಹಾಕಿಕೊಳ್ಳುವಂತೆ ಸಿಡಿಪಿಓ ಹಾಗೂ ಡಿಡಿಪಿಐ ಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ತಮ್ಮ ತಮ್ಮ ವ್ಯಾಪ್ತಿಯ ಶಾಲೆ ಹಾಗೂ ಅಂಗನವಾಡಿಯ ಎಲ್ಲ ಮಕ್ಕಳಿಗೂ ಸಹ ಜೆಇ ಲಸಿಕೆ ಹಾಕಿರುವ ಕುರಿತು ಸಿಡಿಪಿಓ ಹಾಗೂ ಡಿಡಿಪಿಐಗಳು ದೃಢೀಕರಣಪತ್ರ ನೀಡುವಂತೆ ಅವರು ತಿಳಿಸಿದರು. ಯೋಜನಾಬದ್ದವಾಗಿ ಲಸಿಕಾ ರೂಪುರೇಷೆ ರೂಪಿಸಿ, ಬಿಆರ್‍ಸಿ, ಸಿಆರ್‍ಸಿ ಸೇರಿದಂತೆ ಲಭ್ಯವಿರುವ…
ತುಮಕೂರು ಜಿಲ್ಲೆಯಲ್ಲಿ 2022-23ನೇ ಮುಂಗಾರು ಋತುವಿನ ಅವಧಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಡಿಸೆಂಬರ್ 15 ರಿಂದ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸರ್ಕಾರ ನಿಗಧಿಪಡಿಸಿರುವ ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿಸಲು ಡಿಸೆಂಬರ್ 15 ರಿಂದ ರೈತರ ನೋಂದಣಿಗೆ ಸೂಕ್ತ ಕ್ರಮ ಕೈಗೊಳ್ಳುವುದಲ್ಲದೆ, ವ್ಯವಸ್ಥಿತವಾಗಿ ನೋಂದಣಿ ಪ್ರಕ್ರಿಯೆಯನ್ನು ನಡೆಸಬೇಕೆಂದು ಸೂಚಿಸಿದರು. ರೈತರು ನೋಂದಣಿಯನ್ನು ಆಯಾ ಖರೀದಿ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಮಾಡಿಕೊಳ್ಳಬೇಕಾಗುತ್ತದೆ. ಕೃಷಿ ಇಲಾಖೆ ನೀಡಿರುವ ‘ಈಖUIಖಿS Iಆ’ ಯನ್ನು ಕಡ್ಡಾಯವಾಗಿ ಹಾಜರುಪಡಿಸಿ ನೋಂದಾಯಿಸಿಕೊಳ್ಳಬೇಕು ಎಂದರಲ್ಲದೆ, ಸರ್ಕಾರ ನಿಗಧಿಪಡಿಸಿರುವ ಮಾನದಂಡವನ್ನು ಅನುಸರಿಸಿ ಎಫ್.ಎ.ಕ್ಯೂ. ಗುಣಮಟ್ಟದ ರಾಗಿಯನ್ನು ಮಾತ್ರ ಖರೀದಿ ಮಾಡಬೇಕು. ಕಳಪೆ ಗುಣಮಟ್ಟದ ರಾಗಿ ಖರೀದಿಯಾದರೆ ಸಂಬಂಧಿಸಿದ ಖರೀದಿ ಅಧಿಕಾರಿ ಮತ್ತು ಕೃಷಿ ಇಲಾಖೆಯ ಗ್ರೇಡರ್‍ಗಳನ್ನೇ ಜವಾಬ್ದಾರಿ ಮಾಡಲಾಗುವುದು…
ತುಮಕೂರು ಒಕ್ಕಲಿಗರ ಸಂಘಟನೆ ಮತ್ತು ಶೈಕ್ಷಣಿಕ ಅಭಿವೃದ್ದಿಯ ದೃಷ್ಟಿಯಿಂದ 1906ರಲ್ಲಿ ಕೆ.ಹೆಚ್.ರಾಮಯ್ಯ ಅವರಿಂದ ಆರಂಭವಾದ ಒಕ್ಕಲಿಗರ ಸಂಘ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದ್ದು,ಸಮುದಾಯವನ್ನು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಅರ್ಥಿಕವಾಗಿ ಮುನ್ನೆಡೆಸುವಲ್ಲಿ ಯಶಸ್ವಿಯಾಗಿದೆ ಎಂದು ಆದಿಚುಂಚನಗಿರಿ ಸಂಸ್ಥಾನ ಪೀಠದ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ನಗರದ ಬಡ್ಡಿಹಳ್ಳಿ ಮುಖ್ಯರಸ್ತೆಯಲ್ಲಿರುವ ಕೃಷ್ಣಾ ನಗರದಲ್ಲಿ ರಾಜ್ಯ ಒಕ್ಕಲಿಗರ ಸಂಘದವತಿಯಿಂದ ನಿರ್ಮಾಣಗೊಂಡಿರುವ ಉಚಿತ ವಸತಿ ನಿಲಯ ಹಾಗೂ ಸಮುದಾಯಭವನ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡುತಿದ್ದ ಅವರು,ವಿವೇಕಾನಂದರ ಮಾತಿನಂತೆ ಸಂಘಟನೆಗಾಗಿ ರಾಜ್ಯ ಒಕ್ಕಲಿಗರ ಸಂಘ ಮತ್ತು ಧಾರ್ಮಿಕ, ಆದ್ಯಾತ್ಮಿಕ ಸಂಸ್ಕಾರಕ್ಕಾಗಿ ಆದಿಚುಂಚನಗಿರಿಯನ್ನು ಕೆ.ಹೆಚ್.ರಾಮಯ್ಯ ಆರಂಭಿಸಿದ್ದರ ಫಲ, ಇಂದು ನಾವು,ನೀವು ಎಲ್ಲರೂ ಒಂದೆಡೆ ಸೇರುವಂತಾಗಿದೆ ಎಂದರು. ನಿಕಟ ಪೂರ್ವ ಒಕ್ಕಲಿಗ ಸಂಘದ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಕನಿಷ್ಟ ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ಸಂಘ ಮಾಡಿಲ್ಲ ಎಂದು ನಿರ್ಮಲಾನಂದ ಸ್ವಾಮೀಜಿಗಳ ಮುಂದೆ ಆಕ್ರೋಶ ವ್ಯಕ್ತ ಪಡಿಸಿದರು. ಅಭಿವೃದ್ದಿ ಎಂಬುದು ನಿರಂತರ.ಒಂದು ಸಂಘದಲ್ಲಿ ಹಿಂದಿನವರ ಕಾಲದಲ್ಲಿ ಆರಂಭವಾದ ಕೆಲಸಗಳು, ಈಗಿನವರ ಕಾಲದಲ್ಲಿ…
ಕೊರಟಗೆರೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ತಹಶೀಲ್ದಾರ್ ಹೈಡ್ರಾಮ ಶುರುವಿಟ್ಟು ಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. 108 ಅಂಬ್ಯುಲೆನ್ಸ್ ಸೇವೆಯು ತುರ್ತು ಸಂದರ್ಭದಲ್ಲಿ ದೊರೆಯುತ್ತಿಲ್ಲ ಎಂಬ ಆರೋಪ ಕೊರಟಗೆರೆ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದ್ದು, ತಾಲ್ಲೂಕು ಆಡಳಿತ ಸಮರ್ಪಕವಾಗಿ ತನ್ನ ಕಾರ್ಯವ್ಯಪ್ತಿಯನ್ನು ಕಾರ್ಯ ರೂಪಕ್ಕೆ ತರುತ್ತಿಲ್ಲ ಎಂಬ ಆಪದನೆ ಬಹಿರಂಗವಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಟೀಕಾ ಪ್ರಹಾರವು ಹೆಚ್ಚಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯನ್ನೇ ಅಲ್ಲದೆ ತಾಲ್ಲೂಕು ಆಡಳಿತ ತಾಲ್ಲೂಕಿನ ಜನಪ್ರತಿನಿಧಿ ಶಾಸಕರ ವಿರುದ್ಧವೂ ಸಮರ್ಪಕ ಆಡಳಿತ ಕೊರತೆಯ ಆಪದನೆ ಕಂಡು ತಾಲ್ಲೂಕಿನ ಜನತೆ ಬೇಸತ್ತಿದ್ದಾರೆ. ತಿಂಗಳುಗಳು ವರ್ಷಗಳು ಉರುಳಿದರು ಸಾರ್ವಜನಿಕಸೇವೆಗೆ ಸಾದಾ ಸಿದ್ಧವಿರಬೇಕಿದ್ದ ವೈದ್ಯಕೀಯ ಸೇವೆಯ ಒಂದು ಭಾಗವಾದ ತುರ್ತು ಅಂಬ್ಯುಲೆನ್ಸ್ ಸೇವೆ ಸಾರ್ವಜಿಕರಿಗೆ ಗಗನ ಕುಸುಮವಾಗಿತ್ತು. ಇದರಿಂದ ಬಸವಳಿದ ಜನತೆ ಸರ್ಕಾರದ ಆಡಳಿತಾತ್ಮಕ ವಿಚಾರಗಳು ಮತ್ತು ದೊರೆಯದ ಉಚಿತ ಸೇವೆಗಳ ಕುರಿತು ಆಕ್ರೋಶ ಭರಿತರಾಗಿದ್ದರು ಎನ್ನಲಾಗುತ್ತಿದೆ. ಇದೇ ಸಂದರ್ಭದಲ್ಲಿ ಇತ್ತೀಚಿಗೆ ನಡೆದ ಚಿರತೆ ದಾಳಿಯಿಂದ ಗಾಯಗೊಂಡ ರೈತರು ಮತ್ತು ಮಕ್ಕಳ ದಯನೀಯ…
ತುಮಕೂರು ಶಿರಾ ನಗರದ ತಾಲೂಕು ಆಡಳಿತ ಕಚೇರಿ ಮಿನಿ ವಿಧಾನಸೌಧದ ಪಕ್ಕದಲ್ಲಿ ನೊಂದಣಿ ಮತ್ತು ಮುದ್ರಾಂಕ ಇಲಾಖೆಯವತಿಯಿಂದ ಸುಮಾರು 1.60 ಕೋಟಿ ವೆಚ್ಚದಲ್ಲಿ ಸರಕಾರ ತಾಲೂಕು ಸಬ್‍ರಿಜಿಸ್ಟಾರ್ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಆಡಳಿತ ಯಂತ್ರ ಸುಸೂತ್ರವಾಗಿ ನಡೆದುಕೊಂಡು ಹೋಗಲು ಎಲ್ಲಾ ರೀತಿಯ ಸಹಕಾರ ನೀಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಶಿರಾನಗರದ ಬುಕ್ಕಾಪಟ್ಟಣ ರಸ್ತೆಯ ತಾಲೂಕು ಆಡಳಿತ ಕಚೇರಿ ಮಿನಿ ವಿಧಾನಸೌಧದ ಸಮೀಪ ನಿರ್ಮಾಣಕ್ಕೆ ಉದ್ದೇಶಿಸಿರುವ ಸಬ್ ರಿಜಿಸ್ಟಾರ್ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತಿದ್ದ ಅವರು,ಇದು ಶಾಸಕರಾದ ಡಾ.ಎಂ.ಸಿ. ರಾಜೇಶಗೌಡ ಕೋರಿಕೆಯ ಮೇರೆಗೆ ಬಿಡುಗಡೆಯಾದ ಅನುದಾನದಲ್ಲಿ ನಿರ್ಮಿಸಲಿರುವ ಕಟ್ಟಡ.ಜನರಿಗೆ ಅನುಕೂಲವಾಗುವಂತೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ,ಕುಡಿಯುವ ನೀರು ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಶಾಸಕರ ಕೋರಿಕೆಯಂತೆ ವ್ಯವಸ್ಥೆ ಮಾಡಲಾಗುವುದು ಎಂದರು. ಶಿರಾ ಶಾಸಕ ಡಾ.ಎಂ.ಸಿ.ರಾಜೇಶಗೌಡ ಒರ್ವ ಸಜ್ಜನ ರಾಜಕಾರಣಿ, ಸೌಮ್ಯ ಸ್ವಭಾವದ ಜೊತೆಗೆ, ಸರಳ ಸಜ್ಜನಿಕೆಗೆ ಹೆಸರಾದವರು. ಸರಕಾರದಿಂದ ಕ್ಷೇತ್ರದಲ್ಲಿ ಯಾವುದೆ ಕೆಲಸ ಕಾರ್ಯವಾಗಬೇಕಾದರೂ, ಸಂಬಂಧಪಟ್ಟ ಸಚಿವರು, ಅಧಿಕಾರಿಗಳ…
ತುಮಕೂರು ಮಾಂಡೋಸ್ ಚಂಡಮಾರುತದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಕಲ್ಪತರುನಾಡಿನಲ್ಲೂ ಶೀತ ಸಹಿತ ಜಿಟಿಜಿಟಿ ಮಳೆಯಾಗುತ್ತಿದ್ದು, ಜನಸಾಮಾನ್ಯರು ಮೈಬಿಡದ ಚಳಿ, ಶೀತಗಾಳಿ, ಜಿಟಿಜಿಟಿ ಮಳೆಯಿಂದ ಹೈರಾಣಾಗಿದ್ದಾರೆ. ಮುಂಜಾನೆಯಿಂದಲೇ ಜಿಟಿಜಿಟಿ ಮಳೆ ಆಗುತ್ತಿರುವುದರಿಂದ ಎಂದಿನಂತೆ ಕೆಲಸ ಕಾರ್ಯಗಳಿಗೆ ತೆರಳಲು ಜನಸಾಮಾನ್ಯರು ಸಾಧ್ಯವಾಗದೆ ಮಳೆಯಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಇಂದು ಶನಿವಾರ ಆಗಿರುವುದರಿಂದ ಶಾಲಾ-ಕಾಲೇಜುಗಳಿಗೆ ತೆರಳು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸ್ವೆಟರ್, ಜರ್ಕಿನ್ ಮೊರೆ ಹೋಗಿದ್ದು, ಛತ್ರಿಗಳನ್ನು ಹಿಡಿದು ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದ ದೃಶ್ಯಗಳು ಕಂಡು ಬಂದವು. ಎರಡನೇ ಶನಿವಾರ ಆಗಿರುವುದರಿಂದ ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳಿಗೆ ರಜೆ. ಹಾಗಾಗಿ ಸರ್ಕಾರಿ ನೌಕರರು ಇಂದಿನ ಶೀತ ಸಹಿತ ಮಳೆಯಿಂದ ಪಾರಾಗಿದ್ದಾರೆ. ಆದರೆ ಖಾಸಗಿ ಸಂಸ್ಥೆಗಳ ನೌಕರರು, ದಿನಗೂಲಿ ನೌಕರರು, ಕೂಲಿ ಕಾರ್ಮಿಕರು ಎಂದಿನಂತೆ ತಮ್ಮ ಕಚೇರಿಗಳಿಗೆ ಕೆಲಸ ಕಾರ್ಯಗಳಿಗೆ ಜಿಟಿಜಿಟಿ ಮಳೆಯಲ್ಲೆ ನೆನೆಯುತ್ತಾ ದ್ವಿಚಕ್ರ ವಾಹನಗಳಲ್ಲಿ ತೆರಳಿದರು. ಮೈ ಬಿಡಲು ಸಾಧ್ಯವಾಗದ ಚಳಿಯನ್ನು ಸಹಿಸಿಕೊಂಡೇ ಜನರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ವಯಸ್ಸಾದಂತಹವರು, ಮಕ್ಕಳು, ಮಹಿಳೆಯರು ಮಳೆ-ಚಳಿಯಿಂದಾಗಿ ಮನೆಯಿಂದ ಹೊರಗೆ ಬರಲಾಗದೆ ಮನೆಯಲ್ಲಿ…
ಕೊರಟಗೆರೆ ವಿಶ್ವನಾಯಕ ನರೇಂದ್ರಮೋದಿ ನೇತೃತ್ವದ ಬಿಜೆಪಿ ಪಕ್ಷವು ಗುಜರಾತ್ ರಾಜ್ಯದಲ್ಲಿ ಸತತ 7ನೇ ಸಲ ಜಯಭೇರಿ ಭಾರಿಸಿ ದಾಖಲೆ ಸೃಷ್ಟಿಸಿದೆ. 2023ಕ್ಕೆ ಕರ್ನಾಟಕ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಕೊರಟಗೆರೆ ಬಿಜೆಪಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಬಿ.ಹೆಚ್.ಅನಿಲಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಕೊರಟಗೆರೆ ಪಟ್ಟಣದ ಪಪಂ ಮುಂಭಾಗದಲ್ಲಿ ಭಾರತೀಯ ಜನತಾ ಪಾರ್ಟಿ ಕೊರಟಗೆರೆ ಮಂಡಲದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಗುಜರಾತ್ ರಾಜ್ಯದ ಬಿಜೆಪಿ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಗುಜರಾತ್ ರಾಜ್ಯದ ಚುನಾವಣೆಯ ಗೆಲುವು 2023ರ ಕರ್ನಾಟಕ ರಾಜ್ಯದ ಚುನಾವಣೆಗೆ ದಿಕ್ಸೂಚಿ ಆಗಲಿದೆ. ಕರ್ನಾಟಕ ರಾಜ್ಯದಲ್ಲಿಯು ಬಿಜೆಪಿ ಪಕ್ಷವು ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಲಿದೆ. ಮತದಾರ ರಾಜಕೀಯ ನಾಯಕರ ಆಶ್ವಾಸನೆಗೆ ಒಳಗಾಗದೇ ಅಭಿವೃದ್ದಿ ಪರವಾದ ಸರಕಾರಕ್ಕೆ ಬಹುಮತದ ಉಡುಗೊರೆ ನೀಡಿದ್ದಾರೆ ಎಂದು ಸಂತಷ ವ್ಯಕ್ತಪಡಿಸಿದರು. ಕೊರಟಗೆರೆ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಪವನಕುಮಾರ್ ಮಾತನಾಡಿ ನರೇಂದ್ರಮೋದಿ ಮತ್ತು ಅಮಿತ್‍ಷಾ ನೇತೃತ್ವದ ಬಿಜೆಪಿ ಪಕ್ಷವು ಗುಜರಾತ್…
ತುಮಕೂರು ದಲಿತ, ಶೋಷಿತ ಕುಟುಂಬಗಳ ಮಕ್ಕಳ ಅಭ್ಯುದಯಕ್ಕಾಗಿ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ವಸತಿ ಶಾಲಾ ಕಟ್ಟಡಗಳನ್ನು ರಾಜ್ಯಾದ್ಯಂತ ಸರ್ಕಾರ ನಿರ್ಮಾಣ ಮಾಡಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಕರೆ ನೀಡಿದರು. ಅವರು ಇಂದು ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ನರಸಾಪುರ ಗ್ರಾಮದಲ್ಲಿ 30.43 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಡಾ: ಬಿ.ಆರ್. ಅಂಬೇಡ್ಕರ್ ವಸತಿ ಶಾಲಾ ಕಟ್ಟಡ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು. ಬಡತನದಲ್ಲಿ ಬೆಳೆದ ಡಾ: ಬಿ.ಆರ್. ಅಂಬೇಡ್ಕರ್ ಅವರು ಬಾಲ್ಯದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿ, ಸಮಸ್ಯೆಗಳಿಗೆ ಎದೆ ಕೊಟ್ಟು ಹೋರಾಡಿ ದೇಶಕ್ಕಾಗಿ ಕೊಡುಗೆ ನೀಡಿದ್ದಾರೆ, ಸರ್ಕಾರ ಜನತೆಗೆ ನೀಡಿದ್ದ ಆಶ್ವಾಸನೆಯಂತೆ ಕೆಲಸ ಮಾಡುತ್ತಿದೆ. ಸರ್ಕಾರ ವಸತಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದು ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡಿಸಿಕೊಂಡು, ಎಷ್ಟೇ ಸಮಸ್ಯೆಗಳಿದ್ದರೂ ಅವುಗಳನ್ನು ಎದುರಿಸಿ ಪ್ರಗತಿಯೆಡೆಗೆ ಮುನ್ನಡೆಯಬೇಕು ಎಂದು ಸಚಿವರು ಹೇಳಿದರು. ನಂತರ ನೇಗಲಾಲ ಗ್ರಾಮದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ…











