Author: News Desk Benkiyabale

ಕೊರಟಗೆರೆ ಡಾ.ಜಿ.ಪರಮೇಶ್ವರನ್ನ ಕಾಂಗ್ರೇಸ್ ಪಕ್ಷದವರೇ ವೈರಿಗಳಾಗಿ ಸೋಲಿಸ್ತಾರೇ. ಅದು ಸ್ವತಃ ಶಾಸಕ ಡಾ.ಜಿ.ಪರಮೇಶ್ವರ್ ಅವರಿಗೂ ಕಟುಸತ್ಯ ಗೋತ್ತಾಗಿದೆ.. ಕೊರಟಗೆರೆ ಕ್ಷೇತ್ರದಲ್ಲಿ 2023ಕ್ಕೆ ಬಿಜೆಪಿ ಪಕ್ಷದ ಅಭ್ಯರ್ಥಿಯೇ ಗೇಲ್ತಾರೇ.. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ 130ಸೀಟು ಬರುವುದು ಗ್ಯಾರಂಟಿ ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ತಿಳಿಸಿದರು. ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಭಾರತೀಯ ಜನತಾ ಪಾರ್ಟಿ ಕೊರಟಗೆರೆ ಮಂಡಲದಿಂದ ಬುಧವಾರ ಏರ್ಪಡಿಸಲಾಗಿದ್ದ ಜನಸಂಕಲ್ಪ ಯಾತ್ರೆಯ ಸಾರ್ಥಕ ಸೇವೆ-ಯುವ ಸಬಲೀಕರಣ ವೇದಿಕೆಯ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಭಾರತದೇಶದ 20ರಾಜ್ಯದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಅಧಿಕಾರದಲ್ಲಿದೆ. ಕಾಂಗ್ರೇಸ್ ಪಕ್ಷವು ಕೇವಲ 2ರಾಜ್ಯದಲ್ಲಿ ಅಧಿಕಾರದಲ್ಲಿದೆ. 2023ಕ್ಕೆ ಅದು ಕಳೆದುಕೊಂಡು ಕಾಂಗ್ರೇಸ್ ಮುಕ್ತ ರಾಷ್ಟ್ರ ಆಗಲಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸುನಾಮಿ ಎದ್ದು ನಿಂತಿದೆ. ಕಾಂಗ್ರೇಸ್ ಪಕ್ಷವು ಈಗಾಗಲೇ ಕೊಚ್ಚಿಹೋಗಿ ರಾಜಕೀಯ ಅಸ್ತೀತ್ವ ಕಳೆದುಕೊಂಡಿದೆ. 2023ಕ್ಕೆ ಜನಸಂಕಲ್ಪ ಯಾತ್ರೆಯು ವಿಜಯ ಸಂಕಲ್ಪ ಯಾತ್ರೆ ಆಗುವ ಭರವಸೆ ನನಗಿದೆ ಎಂದು ಹೇಳಿದರು. ಕರ್ನಾಟಕ ಸರಕಾರದ…

Read More

ತುಮಕೂರು ಜ್ಞಾನಕ್ಕೆ ಯಾವುದೇ ರೀತಿಯ ಇತಿಮಿತಿಗಳು ಇರುವುದಿಲ್ಲ. ಅದನ್ನು ಗರಿಷ್ಠ ಮಟ್ಟದಲ್ಲಿ ಯುವಜನರಿಗೆ ನೀಡುವಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ತುಮಕೂರು ವಿಶ್ವವಿದ್ಯಾನಿಲಯ ಸಮಕುಲಾಧಿಪತಿ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾನಿಲಯದ ಬಿದರಕಟ್ಟೆ ಕ್ಯಾಂಪಸ್‍ನಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡಗಳ ಉದ್ಘಾಟನೆ ನೆರವೇರಿಸಿದ ಬಳಿಕ, ವಿವಿ ಸಭಾಂಗಣದಲ್ಲಿ ನಡೆದ ‘ಉನ್ನತ ಶಿಕ್ಷಣದಲ್ಲಿ ಸುಶಾಸನ: ಪರಿಕಲ್ಪನೆ ಮತ್ತು ಅನುμÁ್ಠನ’ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಜ್ಞಾನ ನೀಡುವವರು ಒಂದು ಪರಿಕಲ್ಪನೆಯನ್ನು ರೂಪಿಸಿ ಅದನ್ನು ಅನುμÁ್ಠನಗೊಳಿಸಿದಾಗ ಮಾತ್ರ ಅದು ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಕಾಲೇಜಿಗೆ ಕೇವಲ ಮೋಜು ಮಸ್ತಿ ಮಾಡಲು ಬರುವುದಲ್ಲ. ಇಲ್ಲಿ ಜ್ಞಾನ ಪಡೆಯಲು, ತನ್ನನ್ನು ತಾನು ರೂಪಿಸಿಕೊಳ್ಳಲು ಬಂದಿರುವುದು ಎಂಬುದು ವಿದ್ಯಾರ್ಥಿಗಳ ಅರಿವಿನಲ್ಲಿರಬೇಕು ಎಂದು ತಿಳಿಸಿದರು. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸಲು ಅವರ ಜನ್ಮದಿನವನ್ನು ಸುಶಾಸನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು. ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು ಮಾತನಾಡಿ, ಹೊಸ ಕ್ಯಾಂಪಸ್ ಅಭಿವೃದ್ಧಿಗೆ…

Read More

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಮಾಜಿ ಶಾಸಕ ಸುರೇಶ್‍ಗೌಡ ಗೆದ್ದೇ ಗೆಲ್ಲುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದರು. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಬಿ. ಸುರೇಶ್‍ಗೌಡ ಅವರು ನಿರ್ಮಿಸಿರುವ ಗ್ರಾಮಾಂತರ ಬಿಜೆಪಿ ಕಚೇರಿ ಶಕ್ತಿಸೌಧವನ್ನು ಉದ್ಘಾಟಿಸಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ. ವಿಶಿಷ್ಟವಾದ ವ್ಯಕ್ತಿತ್ವ ಹೊಂದಿರುವ ಸುರೇಶ್‍ಗೌಡ ಅವರು ಶಾಶ್ವತವಾಗಿ ಶಾಸಕರಾಗುವಂತಹ ಕೆಲಸವನ್ನು ಈ ಕ್ಷೇತ್ರದಲ್ಲಿ ಮಾಡಿದ್ದಾರೆ ಎಂದರು. ಸ್ವಚ್ಛವಾದ ಹೃದಯ, ಕೊಟ್ಟ ಮಾತಿನಂತೆ ನಡೆಯುವ ಧೀಮಂತಿಕೆ ಸುರೇಶ್‍ಗೌಡ ಅವರಲ್ಲಿದೆ. ಅವರು ಮಾಡಿರುವ ಕೆಲಸ ನೋಡಿದರೆ 2008 ರಿಂದ 13 ರವರೆಗೆ ಅವರು ಶಾಶ್ವತ ಶಾಸಕರಾಗುವ ಕೆಲಸ ಮಾಡಿದ್ದಾರೆ. ವಿದ್ಯುತ್ ಶಕ್ತಿ ಗ್ರಿಡ್, ಶಾಲೆಗಳು, ರೈತರಿಗೆ ಉಪಯುಕ್ತವಾಗುವ ಪಂಪ್ ಸೆಟ್‍ಗಳಿಗೆ ವಿದ್ಯುತ್ ಪರಿವರ್ತಕ ಅಳವಡಿಕೆ ಸೇರಿದಂತೆ ಸರ್ಕಾರದ ಕಾರ್ಯಕ್ರಮವನ್ನು ಜನರಿಗೆ ಮುಟ್ಟಿಸುವ ಹಂಬಲ ಅವರಿಗಿದೆ ಎಂದರು. ತಾತ್ಕಾಲಿಕವಾಗಿ ಅವರು ವಿಧಾನಸೌಧದಲ್ಲಿ ಇರದಿದ್ದರೂ ಕ್ಷೇತ್ರದ ಪ್ರತಿಯೊಬ್ಬ ಮತದಾರನ…

Read More

ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಗಾಜಿನ ಮನೆಯಲ್ಲಿ ಡಿಸೆಂಬರ್ 15 ಹಾಗೂ 16ರಂದು ನಡೆಯಲಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸಾಹಿತ್ಯ ಮತ್ತು ಸಾಂಸ್ಕøತಿಕ ಜಾತ್ರೆಯಾದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸುವ ದೃಷ್ಟಿಯಿಂದ ಸಮ್ಮೇಳನದಲ್ಲಿ ಕನ್ನಡ ನಾಡು-ನುಡಿ ಕುರಿತು ಉತ್ತಮ ಕವಿಗೋಷ್ಠಿ, ಸಂವಾದ, ವಿಶೇಷ ಉಪನ್ಯಾಸ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ಆಯಾಮಗಳು, ಸಾಹಿತ್ಯ ಪರಂಪರೆ, ಸಾಂಸ್ಕøತಿಕ ಪರಂಪರೆ, ಜಾನಪದ ಕಲಾ ಪ್ರದರ್ಶನ, ಸಂಗೀತ ಕಾರ್ಯಕ್ರಮಗಳು, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮ ಜರುಗುವ ಗಾಜಿನಮನೆ ಸೇರಿದಂತೆ ಸುತ್ತಮುತ್ತ ಸ್ವಚ್ಛಗೊಳಿಸಿ ಸಮ್ಮೇಳನಕ್ಕಾಗಮಿಸುವವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಪಾಲಿಕೆಗೆ ಸೂಚನೆ ನೀಡಿದರು. ವೇದಿಕೆ ಹಾಗೂ ಸಭಾಂಗಣವನ್ನು ಸಜ್ಜುಗೊಳಿಸುವ ಜವಾಬ್ದಾರಿಯನ್ನು ನಗರಾಭಿವೃದ್ಧಿ…

Read More

ತುಮಕೂರು ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ 18 ವರ್ಷ ಪೂರೈಸಿದ ಜಿಲ್ಲೆಯ ಎಲ್ಲಾ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಕಾಲೇಜು ಶಿಕ್ಷಣ ಸಂಸ್ಥೆಗಳಿಂದ ನಿಗಧಿತ ನಮೂನೆಯಲ್ಲಿ ವಿದ್ಯಾರ್ಥಿಗಳ ವಿವರವನ್ನು ಪಡೆದು ಕಳುಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ/ ತಾಲ್ಲೂಕು ಮಟ್ಟದ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾತನಾಡುತ್ತಾ, ಸಂಬಂಧಪಟ್ಟ ಕಾಲೇಜು/ ಸಂಸ್ಥೆಯ ಹೆಸರು, ಸಹಿ ಮತ್ತು ಆಯಾ ಪ್ರಾಂಶುಪಾಲರ ಮೊಹರಿನೊಂದಿಗೆ ನಮೂನೆ 1 ರಲ್ಲಿ ಜ.01.2023ಕ್ಕೆ 18 ವರ್ಷ ತುಂಬುವ ಯುವಮತದಾರರ ಮಾಹಿತಿಯನ್ನು ಪಡೆಯುವುದು. ನಮೂನೆ-2ರಲ್ಲಿ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು ಎಲ್ಲಾ ಕಾಲೇಜು/ಸಂಸ್ಥೆಗಳ ಮಾಹಿತಿಯನ್ನು ಕ್ರೋಢೀಕರಿಸಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಕಳುಹಿಸಿಕೊಡುವಂತೆ ಅವರು ಸೂಚಿಸಿದರು. ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಹುತೇಕ ಕೆರೆಗಳು ತುಂಬಿದ್ದು, ನೀರು ಭರ್ತಿಯಾಗಿ ಒಡೆದು ಹೋಗುವಂತಹ ಅಪಾಯಕಾರಿ ಪರಿಸ್ಥಿತಿ ಇರುವಂತಹ ಕೆರೆಗಳ ಬಗ್ಗೆ ಪಿಡಿಓಗಳು ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಪರಿಶೀಲಿಸಬೇಕು…

Read More

ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಂಬೇಡ್ಕರ್‍ರವರ ಪರಿನಿರ್ವಾಣ ದಿನ ಆಚರಣೆಯಲ್ಲಿ ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಅಂಬೇಡ್ಕರ್‍ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರು, ಇಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ಪರಿನಿರ್ವಾಣವಾದಂತಹ ದಿನ. ದೇಶಾದ್ಯಂತ ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅಷ್ಟೇ ಭಕ್ತಿ, ಗೌರವದೊಂದಿಗೆ ಆಚರಿಸಲಾಗುತ್ತಿದೆ ಎಂದರು. ಇಂದು ಅಂಬೇಡ್ಕರ್ ರವರ ಪರಿನಿರ್ವಾಣ ದಿನ ಆಗಿರುವುದರಿಂದ ಯಾವುದೇ ಆಡಂಬರ ಇಲ್ಲದೆ ಅವರ ತತ್ವಾದರ್ಶಗಳ ಬಗ್ಗೆ ಪ್ರಚಾರ ಮಾಡಬೇಕು ಎನ್ನುವುದು ರಾಜ್ಯ ಸರ್ಕಾರ ಹಾಗೂ ಸಂಘಟನೆಗಳ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಅಂಬೇಡ್ಕರ್‍ರವರು ಶ್ರೇಷ್ಠವಾದ ತತ್ವವನ್ನು ನಮಗೆ ಕೊಟ್ಟಿದ್ದಾರೆ. ಸಂವಿಧಾನದ ಜತೆಗೆ ಸಮಾಜಕ್ಕೆ ಬಸವಣ್ಣನವರಂತೆ ಸಮಾನತೆಯನ್ನು ಸಾರಿದ್ದಾರೆ…

Read More

ತುಮಕೂರು ದೇಶದ ಎಲ್ಲಾ ವರ್ಗ, ಶೋಷಿತ ಸಮುದಾಯ ವರ್ಗದವರ ಧ್ವನಿಯಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರು ಜ್ಞಾನದ ಬೆಳಕು-ಜ್ಯೋತಿಯನ್ನು ದೇಶವಾಸಿಗಳಿಗೆ ನೀಡಿದ ಮಹಾನ್ ಪುರುಷ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಬಣ್ಣಿಸಿದರು. ಇವರು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಸಮಾನತೆಯ ಹರಿಕಾರ ಮತ್ತು ಮಹಾಮಾನವತಾವಾದಿ, ಭಾರತದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್‍ರವರ 66ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ನಮಿಸಿ ಮಾತನಾಡುತ್ತಾ, ವಿಶ್ವಜ್ಞಾನಿ, ದಲಿತರ ಸೂರ್ಯರಂತೆ ಪ್ರಜ್ವಲಿಸಿದ ಅಂಬೇಡ್ಕರ್, ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದವರು. ಅವರೊಳಗೆ ದೇಶದ ಐಕ್ಯತೆ, ರಾಷ್ಟ್ರಪ್ರೇಮ, ಜಾಗೃತ ಜ್ಯೋತಿ ಇದ್ದು, ಸಮಾನತೆಯ ಹರಿಕಾರ, ಮೀಸಲಾತಿ ನೀಡಿಕೆಯ ಮಹಾತಪಸ್ವಿಯಾಗಿದ್ದರು. ಅವರ ಪುಸ್ತಕ ಭಂಡಾರದಲ್ಲಿ 50000ಕ್ಕೂ ಹೆಚ್ಚು ಪುಸ್ತಕ ಸಂಗ್ರಹವಿತ್ತು. ಸುಮಾರು 195 ದೇಶಗಳಲ್ಲಿ ಅವರು ಪ್ರಖ್ಯಾತರಾಗಿದ್ದವರು ಎಂದು ವೈ.ಹೆಚ್.ಹುಚ್ಚಯ್ಯ ವಿವರಿಸಿದರು. ಸಂವಿಧಾನ ರಚನಾ ಸಭೆಯ ಕಾರ್ಯ ಚಟುವಟಿಕೆಗಳಲ್ಲಿ ರಾಷ್ಟ್ರೀಯತೆ, ಐಕ್ಯತೆ ಚೌಕಟ್ಟು ಮೀರಲಾಗದ ಹಾಗೆ ಎಚ್ಚರ ವಹಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್,…

Read More

ತುಮಕೂರು ಇಂದಿನ ರಾಜಕಾರಣ ಮತ್ತು ಚದುರಂಗದಾಟ ಎರಡರಲ್ಲಿಯೂ ಯಾವುದೇ ವೆತ್ಯಾಸ ಕಾಣುತ್ತಿಲ್ಲ. ಪ್ರತಿ ಹಂತದಲ್ಲಿಯೂ ಒಂದಿಲೊಂದು ಸವಾಲುಗಳನ್ನು ರಾಜಕಾರಣಿಗಳು, ಹಾಗೆಯೇ ಚೆಸ್ ಪ್ಲೆಯರ್‍ಗಳು ಅನುಭವಿಸಿಕೊಂಡೇ ತಮ್ಮ ಸಾಧನೆಯನ್ನು ಜನತೆಯ ಮುಂದಿಟಬೇಕಾದ ಅನಿವಾರ್ಯತೆ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ನಗರದ ಶ್ರೀದೇವಿ ಮೆಡಿಕಲ್ ಕಾಲೇಜು ಆವರಣದಲ್ಲಿ ನ್ಯೂ ತುಮಕೂರು ಚೆಸ್ ಅಸೋಸಿಯೇಷನ್, ಕರ್ನಾಟಕ ಚೆಸ್ ಅಸೋಸಿಯೇಷನ್ ಹಾಗೂ ಸಿಎಫ್‍ಪಿಡಿ ಸಹಯೋಗದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ 3ನೇ ರಾಷ್ಟ್ರೀಯ ವಿಕಲ ಚೇತನರ ಚೆಸ್ ಟೂರ್ನಿಯ ಸಮಾರೋಪ ಸಮಾರಂಭ ಉದ್ಘಾಟಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡುತಿದ್ದ ಅವರು,ವಿಕಲಚೇತನ ಮಕ್ಕಳು ಸಾಮಾನ್ಯರಿಗಿಂತ ಮತ್ತಷ್ಟು ಹೆಚ್ಚು ಸವಾಲುಗಳನ್ನು ಎದುರಿಸಿ, ಅದರಲ್ಲಿ ಯಶಸ್ಸು ಕಾಣುತ್ತಿದ್ದಾರೆ ಎಂಬುದಕ್ಕೆ ಈ ವಿಕಲಚೇತನರ ಟೂರ್ನಿಯಲ್ಲಿ ದೇಶದ 13ಕ್ಕೂ ಹೆಚ್ಚು ರಾಜ್ಯಗಳ ವಿಕಲಚೇತನ ಕ್ರೀಡಾಪಟುಗಳು ಮತ್ತು ಅವರ ಪೋಷಕರು ಪಾಲ್ಗೊಂಡಿರುವುದು ಸಾಕ್ಷಿ ಎಂದರು. ವಿಶೇಷ ಚೇತನ ಮಕ್ಕಳು ಸಮಾಜದಿಂದ ಸಹಾಯಕ್ಕಿಂತ, ತಮ್ಮ ಪ್ರತಿಭೆಗೆ ಪ್ರೋತ್ಸಾಹವನ್ನು ಬಯಸುತ್ತವೆ.ಚೆಸ್ ಎಂಬುದು…

Read More

ತುಮಕೂರು ರಾಷ್ಟ್ರೀಯ ವಿದ್ಯಾರ್ಥಿವೇತನ ಪೆÇೀರ್ಟಲ್‍ನ ಮೆಟ್ರಿಕ್ ವಿದ್ಯಾರ್ಥಿವೇತನ ಯೋಜನೆಯಲ್ಲಿ ಬರುವ 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ವಿದ್ಯಾರ್ಥಿವೇತನವನ್ನು ಕಡಿತಗೊಳಿಸುವುದು ವಿಷಾದ ಸಂಗತಿಯಾಗಿದ್ದು, ಕೂಡಲೇ ಈ ಮಕ್ಕಳಿಗೆ ವಿದ್ಯಾರ್ಥಿ ವೇತನ ಮುಂದುವರೆಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಮಹಅಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ ಪಾರ್ಟಿ ಜಿಲ್ಲಾಧ್ಯಕ್ಷ ಸೈಯದ್ ಬುಹಾರ್ನ್ ವುದ್ದೀನ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.. ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು,1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳು ಆರ್.ಟಿ.ಇ ಅಡಿಯಲ್ಲಿ ಬರುವ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯುತ್ತಿದ್ದು,ಅವರಿಗೆ ಸ್ಕಾಲಶಿಪ್‍ನ ಅಗತ್ಯಗೆ ಬೀಳುವುದಿಲ್ಲ.ಹಾಗಾಗಿ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಕೇಂದ್ರ ಸರಕಾರ ತಿಳಿಸಿದೆ.ಇದು ಆರ್.ಟಿ.ಇ ಕಾಯ್ದೆಯ ತಪ್ಪು ವ್ಯಾಖ್ಯಾನವಾಗಿದೆ.ಮೂಲಭೂತ ಹಕ್ಕಾದ ಆರ್.ಟಿ.ಇ ಕಾಯ್ದೆಯನ್ನು ಅನುμÁ್ಠನಗೊಳಿಸಲು ಸಹಕಾರಿಯಾಗುವ ಸ್ಟಾಲರ್‍ಶಿಪ್ ಅನ್ನು ಹೆಚ್ಚುವರಿ ಸಲವತ್ತು ಎಂಬಂತೆ ಬಿಂಬಿಸುವುದು ತಪ್ಪಾಗುತ್ತದೆ ಎಂದಿದ್ದಾರೆ. ಮಕ್ಕಳ ಶಾಲಾ ದಾಖಲಾತಿಯನ್ನು ಖಚಿತಪಡಿಸುವುದು ಸರಕಾರದ ಜವಾಬ್ದಾರಿಯಾಗಿದೆ.ಕೇಂದ್ರದ ಈ ಸುತ್ತೋಲೆಯು ಸಂವಿಧಾನದ ಮೂಲಭೂತ ಹಕ್ಕಾದ ಶಿಕ್ಷಣದ ಹಕ್ಕನ್ನು ದುರ್ಬಲಗೊಳಿಸುವ…

Read More

ತುಮಕೂರು ಕ್ರೀಡೆಗಳು ಮನುಷ್ಯನಲ್ಲಿ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ತಂದುಕೊಡುತ್ತವೆ ಎಂದು ಹಿರಿಯ ಸಾಹಿತಿ ಹಾಗೂ ಕಸಾಪ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಕುಮಾರಿ ಅಭಿಪ್ರಾಯಪಟ್ಟಿದ್ದಾರೆ. ನಗರದ ಎಸ್.ಐ.ಟಿ. ಬಡಾವಣೆಯ ವಾಸವಿ ಶಾಲೆಯ ಆವರಣದಲ್ಲಿ ಅಶೋಕ ನಗರ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ 26ನೇ ವಾರ್ಡಿನ ಕನ್ನಡ ರಾಜೋತ್ಸವ ಆಚರಣಾ ಸಮಿತಿ ಜಂಟಿಯಾಗಿ 67ನೇ ಕನ್ನಡ ರಾಜೋತ್ಸವದ ಅಂಗವಾಗಿ ವಾರ್ಡಿನ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಆಯೋಜಿಸಿದ್ದ ವಿವಿಧ ಅಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು. ಸಾಹಿತಿ ಡಾ.ಶೈಲಾನಾಗರಾಜು ಮಾತನಾಡಿ,26ನೇ ವಾರ್ಡಿನ ಕೌನಿಲರ್ಸ್ ಆದ ಮಲ್ಲಿಕಾರ್ಜುನಯ್ಯ ಅವರು ತಮ್ಮ ವಾರ್ಡಿನ ಸಮಗ್ರ ಅಭಿವೃದ್ದಿಯ ಜೊತೆಗೆ, ವಾರ್ಡಿನ ಜನರಿಗೆ ಉತ್ತಮ ಮನರಂಜನೆಯ ಜೊತೆಗೆ, ಅವರ ಬೌದ್ದಿಕ ವಿಕಾಸಕ್ಕೂ ವೇದಿಕೆ ಕಲ್ಪಿಸುವ ಮೂಲಕ ಇತರೆ ವಾರ್ಡುಗಳಿಗೆ ಮಾದರಿಯಾಗಿದ್ದಾರೆ.ಕನ್ನಡ ರಾಜೋತ್ಸವವನ್ನು ನಿತ್ಸೋತ್ಸವವಾಗಿ ಆಚರಿಸುತಿದ್ದಾರೆ.ಇಂತಹ ಆಚರಣೆಗಳು ಪ್ರತಿ ಮನೆಗಳಲ್ಲಿಯೂ ನಡೆಯುವಂತಾಗಲಿ ಎಂದರು. ವರದಕ್ಷಿಣೆ ವಿರೋಧಿ ವೇದಿಕೆಯ ಮಹಿಳಾ ಸಾಂತ್ವಾನ ಕೇಂದ್ರದ ಶ್ರೀಮತಿ ಪಾವರ್ತಮ್ಮ ಮಾತನಾಡಿ,ವರದಕ್ಷಿಣೆ ವಿರೋಧಿ ವೇದಿಕೆ ಕೌಟುಂಬಿಕ…

Read More