ತುಮಕೂರು: ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ತಡೆಯಲು ಜಿಲ್ಲಾ ಪೊಲೀಸರಿಂದ ಎಲ್‍ಹೆಚ್‍ಎಂಎಸ್ ತುಮಕೂರು ಪೊಲೀಸ್ ಆ್ಯಪ್ ವಿನೂತನ ಪ್ರಯೋಗವನ್ನು ಇಡಿ ರಾಜ್ಯದಲ್ಲಿ ಇದೆ ಮೊದಲ ಬಾರಿಗೆ ತುಮಕೂರು ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ಕೆ.ವಂಶಿಕೃಷ್ಣ ತಿಳಿಸಿದರು. ನಗರದ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ, ಮಾತನಾಡಿ, ಜಿಲ್ಲೆಯಲ್ಲಿ ಇದು ಯಶಸ್ವಿಯಾದರೆ ಇಡಿ ರಾಜ್ಯಕ್ಕೆ ವಿಸ್ತರಿಸಲು ಚಿಂತನೆ ನಡೆದಿದೆ ಎಂದ ಅವರು, ರಾಜ್ಯಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದಾಗ ಐ.ಜಿ. ಅವರು ಇದಕ್ಕೆ ಅನುಮೋದನೆ ನೀಡಿದ್ದಾರೆ ಎಂದರು. ಮನೆಗಳಿಗೆ ಬೀಗ ಹಾಕಿಕೊಂಡು ಬೇರೆ ಊರುಗಳಿಗೆ ತೆರಳುವ ಮಾಲೀಕರು ಮೊಬೈಲ್ ಆ್ಯಪ್ ಮೂಲಕ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ನೊಂದಾಯಿಸಿಕೊಂಡರೆ ಪೊಲೀಸ್ ಇಲಾಖೆಯಿಂದ ಅಂತಹ ಮನೆಗಳಿಗೆ ಸಿ.ಸಿ. ಕ್ಯಾಮರಾ ಟೆಕ್ನಾಲಜಿ ಮೂಲಕ ಮನೆಗಳ ಮೇಲೆ ನಿಗಾವಹಿಸಲಾಗುತ್ತದೆ ಎಂದರು.…
Author: News Desk Benkiyabale
ತುಮಕೂರು: ಜಿಲ್ಲೆಯಲ್ಲಿ 128 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2209 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 27, ಪಾವಗಡ-2 ಕುಣಿಗಲ್-28 ಮಧುಗಿರಿ-9, ಕೊರಗಟಗೆರೆ-25, ತುರುವೇಕೆರೆ-2, ಶಿರಾ-21, ತಿಪಟೂರು-1, ಗುಬ್ಬಿ-6, ಚಿಕ್ಕನಾಯಕನಹಳ್ಳಿ-7 ಮಂದಿ ಸೇರಿ ತಾಲೂಕಿನಲ್ಲಿ ಒಟ್ಟು 128 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯಿಂದ 90 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 1200 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 944 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 65 ಸಾವನ್ನಪ್ಪಿದ್ದು, ಬುಧವಾರ-02 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತುಮಕೂರು: ಹಲವು ಆಮಿಷಗಳೊಡ್ಡಿದರೂ ಅದಕ್ಕೆ ಮಾರುಹೋಗದ ಪಕ್ಷದಲ್ಲೇ ನಿಷ್ಠಾವಂತರಾಗಿ ಉಳಿದುಕೊಂಡ ವ್ಯಕ್ತಿ ಬಿ.ಸತ್ಯನಾರಾಯಣ್ ನನ್ನ ಮಗನಂತಿದ್ದರು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬಣ್ಣಿಸಿದ್ದಾರೆ. ತುಮಕೂರಿನ ಜೆಡಿಎಸ್ ಕಚೇರಿಯಲ್ಲಿ ಸಾರ್ವಜನಿಕ ಪ್ರದರ್ಶನಕ್ಕಿಟ್ಟಿದ್ದ ಬಿ.ಸತ್ಯನಾರಾಯಣ್ ಪಾರ್ಥೀವ ಶರೀರರದ ಅಂತಿಮ ದರ್ಶನ ಪಡೆದು ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಅತ್ಯಂತ ಸರಳ, ಸಜ್ಜನ ವ್ಯಕ್ತಿ. ನನ್ನ ಮಗನಂತೆಯೇ ನಡೆದುಕೊಳ್ಳುತ್ತಿದ್ದ. ಪಕ್ಷಕ್ಕೆ ನಿಷ್ಠೆ ಇಟ್ಟುಕೊಂಡಿದ್ದ. ಹಾಗಾಗಿ ಎರಡು ಬಾರಿ ಸಚಿವರನ್ನಾಗಿ ಮಾಡಿದ್ದೆ. ಒಮ್ಮೆ ಕಾರ್ಮಿಕ ಸಚಿವರನ್ನಾಗಿ ಕೆಲಸ ನಿರ್ವಹಿಸಿದ್ದರು. ಸತ್ಯನಾರಾಯಣ್ ಅವರನ್ನು ಕಳೆದು ಕೊಂಡಿರುವುದು ಅತೀವ ದುಃಖ ತಂದಿದೆ ಎಂದು ಕಂಬನಿ ಮಿಡಿದರು. ಬಿ.ಸತ್ಯನಾರಾಯಣ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಪಕ್ಷಾತೀತವಾಗಿ ಎಲ್ಲಾ ನಾಯಕರು ಆಗಿಮಿಸಿದ್ದರು. ಜೆಡಿಎಸ್. ಕಚೇರಿಯಲ್ಲಿ ಕೊರೊನ ಸಂದರ್ಭದಲ್ಲೂ ನೂರಾರು ಮಂದಿ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. …
ತುಮಕೂರು: ಕಳೆದ 3 ದಶಕಗಳಿಂದ ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ರಾಗ-ದ್ವೇಷಗಳಿಲ್ಲದೆ ನಿಷ್ಪಕ್ಷಪಾತವಾಗಿ ಸೇವೆ ಸಲ್ಲಿಸುತ್ತ ಬಂದಿದ್ದ ಶ್ರೀಯುತ ಬಿ.ಸತ್ಯನಾರಾಯಣರವರು ಎಪಿಎಂಸಿ ಸದಸ್ಯರು ಮತ್ತು ಅಧ್ಯಕ್ಷರಾಗುವ ಮುಖೇನ ರಾಜಕೀಯ ಜೀವನಕ್ಕೆ ಕಾಲಿಟ್ಟು ಕಳಂಕ ರಹಿತ ರಾಜಕಾರಣಿಯಾಗಿ ಸರಳ ಮತ್ತು ಸಜ್ಜನಿಕೆಯ ಶಾಸಕರೆಂದು ಗುರುತಿಸಲ್ಪಟ್ಟಿದ್ದರು. ಶಾಸಕರಾಗಿ, ಸಚಿವರಾಗಿ, ನಿಗಮ-ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಇವರು ತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟತೆಯ ಕರಿನೆರಳು ಸೋಕದಂತೆ ತಮ್ಮ ಸಚ್ಛಾರಿತ್ರ್ಯ ರಾಜಕಾರಣವನ್ನ ಮೈಗೂಡಿಸಿಕೊಂಡು ಅಪಾರ ಜನಮನ್ನಣೆಗಳಿಸಿದ ಇವರು ಹಾಲಿ ಜೆಡಿಎಸ್ ಶಾಸಕರಾಗಿ ಅಧಿಕಾರದಲ್ಲದ್ದಾಗಲೇ ಅನಾರೋಗ್ಯಕ್ಕೆ ತುತ್ತಾಗಿ ಅಕಾಲ ಮರಣ ಹೊಂದಿದ್ದಾರೆ. ಇವರ ನಿಧನ ವಾರ್ತೆ ಒಂದು ರೀತಿಯ ಬರಸಿಡಿಲಿನಂತೆ ಆ ಕ್ಷೇತ್ರದ ಜನತೆಯನ್ನಲ್ಲದೆ ಇಡೀ ಜಿಲ್ಲೆಯ ಜನರನ್ನ ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಇವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ, ಇವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನ ಅವರ ಕುಟುಂಬಕ್ಕೆ ಮತ್ತು ಆ ಕ್ಷೇತ್ರದ ಜನತೆಗೆ ನೀಡಲಿ…
ತುಮಕೂರು : ಜಿಲ್ಲೆಯಲ್ಲಿಂದು 93 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2081 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇಂದು ತುಮಕೂರು-42, ಕುಣಿಗಲ್-11, ತಿಪಟೂರು-01, ಮಧುಗಿರಿ-08, ಪಾವಗಡ-09, ಗುಬ್ಬಿ-04, ತುರುವೇಕೆರೆ-05, ಕೊರಟಗೆರೆ-10, ಚಿಕ್ಕನಾಯಕನಹಳ್ಳಿ-01, ಶಿರಾ-02 ಸೇರಿದಂತೆ ಒಟ್ಟು 93 ಮಂದಿಯಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಇಂದು ಜಿಲ್ಲಾಸ್ಪತ್ರೆಯಿಂದ 63 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 1110 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 908 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 63 ಮಂದಿ ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಮಕೂರು: ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಮಠದ ಮಕ್ಕಳಿಗೆ ಮಂಗಳವಾರ ಸ್ಪಿರುಲಿನ ಚಿಕ್ಕಿ ವಿತರಣೆ ಮಾಡಿದರು. ಮಂಗಳವಾರ ಬೆಳಿಗ್ಗೆ ಸಿದ್ಧಗಂಗಾ ಮಠದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸ್ಪಿರುಲಿನ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಮಠದ ವಿದ್ಯಾರ್ಥಿಗಳಿಗೆ ಸ್ಪಿರುಲಿನ ಚಿಕ್ಕಿ ವಿತರಣಾ ಕಾರ್ಯಕ್ರಮದಲ್ಲಿ ಚಿಕ್ಕಿ ವಿತರಣೆ ಮಾಡಿದ ನಂತರ ಮಾತನಾಡಿದ ಅವರು ಕೋವಿಡ್-19 ಸಂದರ್ಭದಲ್ಲಿ ಈ ಸ್ಪಿರುಲಿನ ಚಿಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಹಲವಾರು ಸಮಸ್ಯೆಗಳಲ್ಲಿ ಅಪೌಷ್ಠಿಕತೆಯು ಸಹ ಒಂದು. ಅದರಲ್ಲಿಯೂ ಮಕ್ಕಳು, ಗರ್ಭಿಣಿ, ಬಾಣಂತಿ, ವಯೋವೃದ್ಧರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಸ್ಪಿರುಲಿನ ಚಿಕ್ಕಿಯು ಪೌಷ್ಠಿಕ ಆಹಾರವಾಗಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸ್ಪಿರುಲಿನ ಇದೊಂದು ಪಾಚಿ ಜಾತಿಗೆ ಸೇರಿದ ಸಸ್ಯವಾಗಿದ್ದು, ಜನರಿಗೆ ಇನ್ನೂ ಚಿರಪರಿಚಿತವಾಗಿಲ್ಲ. ಶ್ರೀ ಸಿದ್ದಗಂಗಾ ಮಠಕ್ಕೆ ಪ್ರತಿದಿನ ಗಣ್ಯಾತಿಗಣ್ಯರು, ವಿದೇಶೀಯರು,…
ಮಧುಗಿರಿ: ಪಟ್ಟಣದಲ್ಲಿರುವ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕ್ರೈಂ ಬ್ರಾಂಚ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟೀವ್ ಹಿನ್ನೆಲೆ ಮಧುಗಿರಿ ಪೊಲೀಸ್ ಠಾಣೆಯನ್ನು ಮಂಗಳವಾರ ಪುರಸಭೆಯವರು ಸೀಲ್ ಡೌನ್ ಮಾಡಿದರು. ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನ ಎಸ್.ಬಿ.ಐ ಬ್ಯಾಂಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೂವರು ನೌಕರರಿಗೆ ಕರೋನಾ ಪಾಸಿಟೀವ್ ದೃಡಪಟ್ಟ ಹಿನ್ನೆಲೆ ಎಸ್.ಬಿ.ಐ ಬ್ಯಾಂಕ್ ನ್ನು ಸೋಮವಾರದಂದು ಗ್ರಾಮಪಂಚಯಿತಿ ವತಿಯಿಂದ ಸಿಲ್ ಡೌನ್ ಮಾಡಲಾಯಿತು.
ತುಮಕೂರು : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಲಿದ್ದು, ಜಿಲ್ಲಾದ್ಯಂತ ಹಿಂದೂಪರ ಸಂಘಟನೆಗಳು ದೇವಸ್ಥಾನಗಳಲ್ಲಿ ವಿಜಯೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ತುಮಕೂರು, ಸಿರಾ, ತಿಪಟೂರು, ಕುಣಿಗಲ್ ತಾಲ್ಲೂಕುಗಳು ಮತೀಯ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಶಾಂತಿ ಕಾಪಾಡುವ ಉದ್ದೇಶದಿಂದ ಮೇಲ್ಕಂಡ ಸೂಕ್ಷ್ಮ ಪ್ರದೇಶಗಳಲ್ಲಿ ಆಗಸ್ಟ್ 5ರ ರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ನಿಷೇಧಿತ ಅವಧಿಯಲ್ಲಿ ಎಲ್ಲಾ ರೀತಿ ಸನ್ನದು(ಕೆಎಸ್‍ಬಿಸಿಎಲ್ ಡಿಪೋ & ಡಿಸ್ಟಿಲರಿಗಳನ್ನು ಹೊರತುಪಡಿಸಿ)ಗಳನ್ನು ಮುಚ್ಚಬೇಕೆಂದು ಅವರು ಸೂಚನೆ ನೀಡಿದ್ದಾರೆ.
ತುಮಕೂರು : ಜಿಲ್ಲೆಯಲ್ಲಿಂದು 72 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1988 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇಂದು ತುಮಕೂರು-28, ಕುಣಿಗಲ್-12, ತಿಪಟೂರು-03, ಮಧುಗಿರಿ-05, ಪಾವಗಡ-02, ಗುಬ್ಬಿ-04, ತುರುವೇಕೆರೆ-05, ಕೊರಟಗೆರೆ-07, ಚಿಕ್ಕನಾಯಕನಹಳ್ಳಿ-04, ಶಿರಾ-02 ಸೇರಿದಂತೆ ಒಟ್ಟು 72 ಮಂದಿಯಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಇಂದು ಜಿಲ್ಲಾಸ್ಪತ್ರೆಯಿಂದ 76 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 1047 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 883 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 58 ಮಂದಿ ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಮಕೂರು : ನಗರದ ಅಮರಜ್ಯೋತಿ ನಗರದ ಬಾಲಕಿಯರ ಬಾಲಮಂದಿರದಿಂದ ಬಾಲಕಿಯೊಬ್ಬಳು ಭಾನುವಾರ ರಾತ್ರಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ತಿಪಟೂರು ಮೂಲದ ಈ ಬಾಲಕಿಗೆ ತಂದೆ-ತಾಯಿ ಯಾರೂ ಇಲ್ಲ ಎಂದು ತಿಳಿದುಬಂದಿದೆ. ಪರಾರಿಯಾಗಿರುವ ಬಾಲಕಿಯು ಗೌರಿ ಎಂದು ತಿಳಿದು ಬಂದಿರುತ್ತದೆ. ಈ ಹಿಂದೆಯೂ ಸಹ ಇದೇ ಬಾಲಕಿಯರ ಬಾಲಮಂದಿರದಿಂದ ಬಾಲಕಿಯರು ಪರಾರಿಯಾಗಿದ್ದಂತಹ ಪ್ರಕರಣಗಳು ಕಂಡು ಬಂದಿರುತ್ತವೆ. ಗೌರಿ ಸುಮಾರು 15 ವರ್ಷದ ಬಾಲಕಿ ಯಾಗಿದ್ದು ಈ ಬಾಲಕಿ ಪರಾರಿಯಾಗಲು ಅಲ್ಲಿನ ಇತರೇ ಬಾಲಕಿಯರು ಸಹಾಯ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ನಿನ್ನೆ ಮಧ್ಯರಾತ್ರಿ ವೇಳೆ ಪರಾರಿಯಾಗಿರುವ ಬಾಲಕಿ ಇದುವರೆಗೂ ಸಿಕ್ಕಿಲ್ಲ ಎಂಬ ಮಾಹಿತಿ ಇದ್ದು, ಈ ಬಾಲಕಿ ಗುಬ್ಬಿ ರೈಲ್ವೆ ಸ್ಟೇಷನ್ ಬಳಿ ಬಿಕ್ಷೆ ಬೇಡುವಾಗ ಮಕ್ಕಳ ಸಹಾಯವಾಣಿಯವರು ರಕ್ಷಣೆ ಮಾಡಿ ಬಾಲಮಂದಿರಕ್ಕೆ ಬಿಟ್ಟಿದರು ಎನ್ನಲಾಗಿದೆ. ತುಮಕೂರು ಬಾಲಮಂದಿರದಿಂದ ಬಾಲಕಿಯರು…











