ತುಮಕೂರು: ಅಕ್ಷರ ದಾಸೋಹದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಾ ಅಕ್ಷರ ದಾಸೋಹದ ಅವ್ಯವಹಾರದ ತನಿಖೆಗಾಗಿ ತಂಡ ರಚಿಸಿದ್ದು, ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ಸಭೆಯಲ್ಲಿ ತುಮಕೂರು ಮತ್ತು ಮಧುಗಿರಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ವಿವಿಧ ಕಾಮಗಾರಿಗಳ 1.93 ಕೋಟಿ ರೂಪಾಯಿಗಳ ಹಣದ ಬಿಲ್ ರದ್ದಾಗಿರುವ ಕುರಿತು ಅಧ್ಯಕ್ಷರ ಗಮನಕ್ಕೆ ತರಲಾಯಿತು. ಬಿಲ್ ರದ್ದಾಗಿರುವ ಕುರಿತು ಮಾಹಿತಿ ಪಡೆದ ಸಿಇಒ ಅವರು ಬಿಲ್‍ಗಳನ್ನು ಸೂಕ್ತ ದಿನಾಂಕದೊಳಗೆ ಪಾವತಿಸಿರುವ ಬಗ್ಗೆ ಖಾತರಿ ಪಡಿಸಿಕೊಂಡು ಬಿಲ್ ರದ್ದಾಗಿರುವ ಬಗ್ಗೆ ಪರಿಶೀಲನೆ ನಡೆಸಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಪಶುಭಾಗ್ಯ ಯೋಜನೆ ಮತ್ತು ಅಮೃತ ಯೋಜನೆಯನ್ನು…
Author: News Desk Benkiyabale
ತುಮಕೂರು: ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕಿಗೆ ಹೇಮಾವತಿ ಕುಡಿಯುವ ನೀರು ಸರಬರಾಜು ಮಾಡುವ ತುಮಕೂರು ತಾಲ್ಲೂಕು ಬೆಳ್ಳಾವಿ ಹೋಬಳಿ ಬಳ್ಳಾಪುರ ಸಮೀಪವಿರುವ ಪಂಪ್‍ಹೌಸ್‍ನಲ್ಲಿ ಕಳ್ಳರು ಯಂತ್ರೋಪಕರಗಣಳನ್ನು ಕಳವು ಮಾಡಿದ್ದು, ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ಸಂಸದ ಜಿ.ಎಸ್. ಬಸವರಾಜು ಅವರನ್ನು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಆರ್.ರಾಜೇಂದ್ರ ಅವರು ಕರೆದೊಯ್ದು ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಸಂಸದ ಜಿ.ಎಸ್. ಬಸವರಾಜು ಅವರು, ಮಧುಗಿರಿ-ಕೊರಟಗೆರೆಗೆ ಹೇಮಾವತಿ ಕುಡಿಯುವ ನೀರು ಸರಬರಾಜಾಗುವ ತುಮಕೂರು ಗ್ರಾಮಾಂತರದ ಬಳ್ಳಾಪುರ ಪಂಪ್‍ಹೌಸ್‍ನಲ್ಲಿ ಯಂತ್ರೋಪಕರಣಗಳನ್ನು ಕಳ್ಳರು ಕಳವು ಮಾಡಿದ್ದು, ಈಗ ದುರಸ್ಥಿ ಕಾರ್ಯ ನಡೆಯುತ್ತಿದೆ. ಸಂಜೆ ವೇಳೆಗೆ ದುರಸ್ಥಿ ಕಾರ್ಯ ಮುಗಿದು ಕೊರಟಗೆರೆ ಅಗ್ರಹಾರ ಕೆರೆಗೆ ನೀರು ತಲುಪಲಿದ್ದು, ಮಂಗಳವಾರ ಸಂಜೆ ವೇಳೆಗೆ ಮಧುಗಿರಿ ಸಿದ್ಧಾಪುರ ಕೆರೆಗೆ ನೀರು ಹರಿಯಲಿದೆ ಎಂದು ತಿಳಿಸಿದರು. ಈ ಭಾರಿ ಮಧುಗಿರಿಗೆ ಅಗತ್ಯಕ್ಕಿಂತ ಹೆಚ್ಚಿನ ಹೇಮಾವತಿ ನೀರು ಬಿಡುಗಡೆ ಮಾಡಲು ವ್ಯವಸ್ಥೆ…
ಶಿರಾ: ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಕಳೆದೆರಡು ದಿನಗಳಿಂದ ಬಂದ ಜಿಟಿ ಜಿಟಿ ಮಳೆಯಿಂದಾಗಿ ಇಡೀ ಬಸ್‍ನಿಲ್ದಾಣ ಕೆಸರು ಗದ್ದೆಯಾಗಿದ್ದು, ಸದರಿ ನಿಲ್ದಾಣದ ಇಂತಹ ಅವ್ಯವಸ್ಥೆಯನ್ನು ಸರಿಪಡಿಸುವಲ್ಲಿ ನಗರಸಭೆ ವಿಫಲಗೊಂಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ನಗರದ ಖಾಸಗಿ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ನಿಲ್ದಾಣಕ್ಕೆ ಮೇಲ್ಛಾವಣಿ ಹಾಕಲಾಗಿದೆ. ಈ ನಡುವೆ ಈ ಹಿಂದೆ ಇದ್ದ ನಿಲ್ದಾಣದ ನೆಲಹಾಸಿನ ಮಣ್ಣನ್ನು ತೆಗೆದು ಗುತ್ತಿಗೆದಾರರು ಜೇಡಿಮಣ್ಣಿನಂತಹ ಮಣ್ಣನ್ನು ನಿಲ್ದಾಣದಲ್ಲಿ ಹಾಕಿದ ಪರಿಣಾಮ ಪ್ರಯಾಣಿಕರು ಹಾಗೂ ಬಸ್‍ಗಳು ಸಂಚರಿಸಲು ತೀವ್ರತರವಾದ ತೊಂದರೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಪುಟ್ಟಮಕ್ಕಳು, ವಯಸ್ಸಾದವರು ಓಡಾಡುವುದೇ ಕಷ್ಟವಾಗಿದ್ದು, ಈ ಕೂಡಲೆ ನಗರಸಭೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ತುಮಕೂರು: ಜಿಲ್ಲೆಯಲ್ಲಿ ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಳೆಯಿಂದಾಗುವ ಅನಾಹುತಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ವಿವಿಧ ಇಲಾಖೆಗಳ ಅಧಿಕಾರಿಗಳ ತುರ್ತುಸಭೆ ನಡೆಸಿ ಮಾತನಾಡಿದ ಅವರು ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಮಳೆ ಆರಂಭವಾಗುತ್ತಿದ್ದು, ಮಳೆಯಿಂದಾಗುವ ಅನಾಹುತಗಳನ್ನು ತಪ್ಪಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಬೇಕಿದೆ ಎಂದರು. ಮಳೆಯಿಂದ ಉಂಟಾಗಬಹುದಾದ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಲು ಅರಣ್ಯ ಇಲಾಖೆ, ಕಂದಾಯ ಇಲಾಖೆ, ಬೆಸ್ಕಾಂ, ಲೋಕೋಪಯೋಗಿ ಇಲಾಖೆ, ಅಗ್ನಿಶಾಮಕದಳ, ಪೊಲೀಸ್ ಇಲಾಖೆ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸನ್ನದ್ದರಾಗಿರಬೇಕು. ಈಗಾಗಲೇ ಉತ್ತರಕರ್ನಾಟಕ ಹಾಗೂ ಪಶ್ಚಿಮಘಟ್ಟದ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ತುಮಕೂರು ಜಿಲ್ಲೆಯಲ್ಲೂ ಮಳೆ ಆರಂಭವಾಗುತ್ತಿದ್ದು, ಮಳೆಯಿಂದಾಗುವ ಸಮಸ್ಯೆಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಅವರು ತಿಳಿಸಿದರು. ಮಳೆಯಿಂದಾಗಿ ರಸ್ತೆಗಳು…
ತುಮಕೂರು: ಅಂಗನವಾಡಿ ಮಕ್ಕಳ ಆರೋಗ್ಯದ ಬಗ್ಗೆ ನಿಗಾ ಇಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಶುಭ ಕಲ್ಯಾಣ್ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಿದರು. ಕುಣಿಗಲ್ ತಾಲ್ಲೂಕಿನ ಮಡಿಕೆಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಅವರು ಗುರುವಾರ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರಲ್ಲದೇ ಅಲ್ಲಿನ ಸ್ವಚ್ಚತೆ, ಮಕ್ಕಳ ಶುಚಿತ್ವ, ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸುವುದರೊಂದಿಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಕೆ ಮಾಡಲು ಸೂಚನೆ ನೀಡಿದರು. ನಂತರ ಜಾಣಗರ ಹಾಗೂ ಕಳಸಿಪಾಳ್ಯ ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೂ ಭೇಟಿ ನೀಡಿದರಲ್ಲದೇ ಸದರಿ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ, ನರೇಗಾ ಯೋಜನೆ ಪ್ರಗತಿ ಕುರಿತಂತೆ ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ತುಮಕೂರು: ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟಲು ನಲವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ 40 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿ ಒಳಗೊಂಡ `ವಿಶೇಷ ಕಲ್ಪತರು ಪಡೆ’ಯನ್ನು ಜಿಲ್ಲಾ ಪೊಲೀಸ್ ಇಲಾಖೆ ರಚಿಸಿದೆ. ಈ ವಿಶೇಷ ಪಡೆ ಆಯಾ ಪೊಲೀಸ್ ಉಪ ವಿಭಾಗ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿವೆ. ಪ್ರಮುಖವಾಗಿ ಬಂದೋಬಸ್ತ್ ಕರ್ತವ್ಯ, ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣ ಮೇಲೆ ತುರ್ತು ನಿಗಾವಹಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತದೆ. ಮಹಿಳೆಯರು ಮತ್ತು ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ತಿಳಿಸಿದ್ದಾರೆ. ಈ ತಂಡಕ್ಕೆ ಜು.26ರಿಂದ ಆ.8ರವರೆಗೆ ಒಟ್ಟು 11 ದಿನ ವಿವಿಧ ರೀತಿಯ ತರಬೇತಿ ನೀಡಲಾಗಿದೆ. ಮೊದಲ 5 ದಿನ ದುರ್ಗಾ ಸಂಸ್ಥೆಯ ಸಂಸ್ಥಾಪಕರಾದ ಡಾ.ಬೃಂದಾ ಅಡಿಗ ಅವರು ತಮ್ಮ ತಂಡದೊಂದಿಗೆ ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಮಹಿಳೆ…
ತುಮಕೂರು: ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಬೇಕೆಂದು ಸೂಚನೆ ನೀಡಲಾಗಿದ್ದರೂ ಕಸವನ್ನು ಬೀದಿ ಬದಿ ಎಸೆಯುವುದು ತಪ್ಪಿಲ್ಲ. ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಪ್ರತೀ ದಿನ ಮನೆ ಬಳಿಗೆ ಬರುವ ಕಸ ಸಂಗ್ರಹಿಸುವ ವಾಹನಗಳಲ್ಲಿಯೇ ವಿಲೇವಾರಿ ಮಾಡಬೇಕೆಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಮಧ್ಯರಾತ್ರಿ, ಬೆಳಗಿನ ಜಾವ, ಬೀದಿ ದೀಪ (ವಿದ್ಯುತ್ ಇಲ್ಲದಿದ್ದಾಗ) ದ್ವಿಚಕ್ರದಲ್ಲಿ ಬಂದು ಖಾಲಿನಿವೇಶನಗಳಲ್ಲಿ ಕಸ ಸುರಿದು ಹೋಗುವವರಿಗೇನು ಕಡಿಮೆ ಇಲ್ಲ. ಇಂಥ ಅವೈಜ್ಞಾನಿಕ ಕಸ ವಿಲೇವಾರಿಯನ್ನು ತಪ್ಪಿಸಲು ನಗರದ ವಾಣಿಜ್ಯ ಹಾಗೂ ವಸತಿ ಪ್ರದೇಶಗಳಲ್ಲಿ ಪಾಲಿಕೆ ಸಿಬ್ಬಂದಿಗಳು ರಾತ್ರಿ-ಹಗಲು ಪಾಳಿಯಲ್ಲಿ ಕಾರ್ಯ ನಿರ್ವಹಿಸಿ ಕಸ ಹಾಕುವವರನ್ನು ಹಿಡಿದು ಕೆಲವರಿಗೆ ತಿಳುವಳಿಕೆ ನೀಡಿ, ಕೆಲವರಿಗೆ ದಂಡ ವಿಧಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಭೂಬಾಲನ್ ತಿಳಿಸಿದ್ದಾರೆ. ಪಾಲಿಕೆಯು ಕಸ ವಿಲೇವಾರಿ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದಲ್ಲದೆ ನಗರವನ್ನು ಅಂದಗೊಳಿಸುವ ನಿಟ್ಟಿನಲ್ಲಿ ತನ್ನ ವ್ಯಾಪ್ತಿಯ…
ಮಧುಗಿರಿ: ಸತತ ಬರಗಾಲದಿಂದ ತತ್ತರಿಸುತ್ತಿರುವ ಜನತೆಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ಮಧುಗಿರಿ ಕಸಬಾ ವ್ಯಾಪ್ತಿಯ ಸಿದ್ದಾಪುರದ ಹಿಪ್ಪೇ ತೋಪಿನಲ್ಲಿ ಹೈ ಕೊರ್ಟ್ ಆದೇಶದ ಮೇರೆಗೆ ಸರ್ಕಾರದ ವತಿಯಿಂದ ಆರಂಭಿಸಿದ ಮೊದಲ ಗೋಶಾಲೆಯನ್ನು ಗೋವಿನ ಪೂಜೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಳೆದ ಸರ್ಕಾರದ ಅವಧಿಯಲ್ಲಿ ತಾಲೂಕಿನಲ್ಲಿ ರೈತರ ಮನೆ ಬಾಗಿಲಿಗೆ ಮೇವನ್ನು ವಿತರಿಸಿ ಯಶಸ್ವಿ ಕಾರ್ಯಕ್ರಮ ನೀಡಿದ್ದೆವು. ಆದರೂ ಬರಗಾಲ ಮುಂದುವರೆದ ಕಾರಣ ಈಗಿನ ಸರ್ಕಾರವು ಹೈ ಕೋರ್ಟ್ ಆದೇಶದಂತೆ ಗೋಶಾಲೆ ಆರಂಭಿಸಲಾಗಿದೆ. ಇಲ್ಲಿ ಪ್ರತಿ ರಾಸುಗಳಿಗೆ 6 ಕೆಜಿ ಒಣ ಮೇವು, ಒಣ ಮೇವು ಸಿಗದಿದ್ದಲ್ಲಿ 18 ಕೆಜಿ ಹಸಿ ಮೇವನ್ನು ಪ್ರತಿ ದಿನ ಉಚಿತವಾಗಿ ನೀಡಲಾಗುತ್ತದೆ. ಒಣಮೇವು ಸಿಗದ ಕಾರಣ ಹಸಿ ಮೇವು ವಿತರಿಸಲು ಜಿಲ್ಲಾಧಿಕಾರಿಗಳು ಸರ್ಕಾದಿಂದ ಆದೇಶ ತರಬೇಕಿದೆ. ತದ ನಂತರ…
ತುರುವೇಕೆರೆ: ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪರಿಚಿತ ಸ್ಕಾರ್ಪಿಯೋ ಕಾರು ಹಿಂಬದಿಯಿಂದ ಗುದ್ದಿದ ಪರಿಣಾಮ ವಾಹನ ಸವಾರ ಸಾವನ್ನಪ್ಪಿರುವ ಘಟನೆ ತಾಲೂಕಿನ ಚಿಕ್ಕೋನಹಳ್ಳಿ ಗೇಟ್ ಬಳಿ ಶನಿವಾರ ಮದ್ಯಾಹ್ನ ನೆಡೆದಿದೆ. ಮೃತ ದುರ್ದೈವಿ ಶಿವಶಂಕರ್ (50) ಇತನು ಮಾದಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನೀರು ವಿತರಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಶನಿವಾರ ಮಾಯಸಂದ್ರ ರಸ್ತೆಯಲ್ಲಿ ತನ್ನ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ತುರುವೇಕೆರೆ ಕಡೆಗೆ ಚಲಿಸುವಾಗ ಹಿಂದಿನಿಂದ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ಗುದ್ದಿದ ಪರಿಣಾಮ ದ್ವಿಚಕ್ರವಾಹನ ಸವಾರ ಬಿದ್ದು ತೀವ್ರತರವಾಗಿ ಗಾಯ ಗೊಂಡಿದ್ದಾರೆ. ಕೂಡಲೇ ಸ್ಥಳಿಯರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು ಚಿಕಿತ್ಸೆ ಪಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರು ಎಂದು ತಿಳಿದುಬಂದಿದ್ದು ಕಾರು ನಿಲ್ಲಿಸದೆ ಚಾಲನೆ ಮಾಡಿಕೊಂಡು ತೆರಳಿದ್ದಾರೆ. ಪಟ್ಟಣದ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಕಾರು ಶೋದ ಕಾರ್ಯ ಮುಂದುವರೆಸಿದ್ದಾರೆ.
ಮಿಡಿಗೇಶಿ : ಮಧುಗಿರಿ-ಪಾವಗಡ ರಾಜ್ಯ ಹೆದ್ದಾರಿಯ ನಲ್ಲೇಕಾಮನಹಳ್ಳಿ ಬಳಿ ಆ.4 ರಂದು ಬೆಳಗ್ಗೆ 7-15 ರ ಸಮಯದಲ್ಲಿ ಇಂಡಿಕಾ ಕಾರು (ಕೆಎ 04 ಎಂಎಂ 2354) ಅಪಘಾತಕ್ಕೀಡಾಗಿದೆ. ಬೆಂಗಳೂರಿನಿಂದ ಪಾವಗಡಕ್ಕೆ ಕನ್ನಡಿಗರ ರಕ್ಷಣಾ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ರಮೇಶ್, ಭಾಸ್ಕರ್, ಗುರು, ಈಶ್ವರಪ್ಪ (ತಾತ) ಹಾಗೂ ಬಸವರಾಜು ಪ್ರಯಾಣಿಸುತ್ತಿದ್ದರು. ಅತಿ ವೇಗದ ಚಾಲನೆಯಿಂದ ಕಾರು ರಸ್ತೆಯನ್ನು ಬಿಟ್ಟು ಸುಮಾರು 200 ಮೀಟರ್ ದೂರದ ಜಮೀನಿಗೆ ಬಿದ್ದಿದೆ. ರಮೇಶ್ ಎಂಬುವರಿಗೆ ಕಾಲು ಮುರಿದಿದ್ದು, ಇನ್ನುಳಿದ ನಾಲ್ವರಿಗೆ ಬಲವಾದ ಪೆಟ್ಟುಗಳು ಬಿದ್ದಿರುವ ಬಗ್ಗೆ ವರದಿಯಾಗಿದೆ. ಘಟನಾ ಸ್ಥಳಕ್ಕೆ ಮಿಡಿಗೇಶಿಯ ಪೊಲೀಸ್ ಸಿಬ್ಬಂದಿ ಆಗಮಿಸಿ ಗಾಯಾಳುಗಳನ್ನು ಕೆ.ಶಿಪ್ ಆಯಂಬ್ಯುಲೆನ್ಸ್ ಮೂಲಕ ಮಧುಗಿರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ .ಅಪಘಾತಕ್ಕೀಡಾಗಿ ನುಚ್ಚು ನೂರಾಗಿರುವ ಕಾರನ್ನು ಪೊಲೀಸರು ವಶಕ್ಕೆ ಪಡೆದು, ತನಿಖೆ ಕೈ ಗೊಂಡಿದ್ದಾರೆ.