ಪಾವಗಡ: ತಾಲ್ಲೂಕಿನ ಗುಜ್ಜನಡು ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತರಾಯ ತಾವು ಮತ ಹಾಕಿದ ಚಿತ್ರವನ್ನು ಗುರುವಾರ ಫೇಸ್ ಬುಕ್‍ಗೆ ಅಪ್ ಲೋಡ್ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಆಕ್ಷೇಪ ವ್ಯಕ್ತವಾಗಿದೆ. ಜನಪ್ರತಿನಿಧಿ ಕಾಯ್ದೆ ಪ್ರಕಾರ ಮತದಾನವನ್ನು ಬಹಿರಂಗಪಡಿಸುವಂತಿಲ್ಲ. ಆದ್ದರಿಂದಲೇ ಗುಪ್ತ ಮತದಾನ ಎಂದು ಕರೆಯಲಾಗುತ್ತದೆ. ಆದರೆ, ಗುಜ್ಜನಡು ಗ್ರಾಮದ ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತರಾಯ ಅವರು ತಾವು ಯಾರಿಗೆ ಮತ ಹಾಕಿದ್ದು ಎಂಬುದನ್ನು ಚಿತ್ರ ಸಹಿತ ಫೇಸ್ ಬುಕ್ ನಲ್ಲಿ ಬಹಿರಂಗಪಡಿಸಿದ್ದಾರೆ. ಓರ್ವ ಜನಪ್ರತಿನಿಧಿಯೇ ಕಾನೂನು ಉಲ್ಲಂಘಿಸಿರುವ ಬಗ್ಗೆ ಯುವ ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತಗಟ್ಟೆಗೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. ಆದರೂ ಮೈತ್ರಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರಿಗೆ ಮತ ಹಾಕಿದ ರೀತಿಯಲ್ಲಿ, ಲೈಟ್ ಬೆಳಗುತ್ತಿದ್ದಾಗಲೇ ಚಿತ್ರ ತೆಗೆಯಲಾಗಿದೆ. ಶುಭಾರಂಭ ಬಿ.ಎನ್. ಚಂದ್ರಪ್ಪ, ಜೈ ಚಂದ್ರಪ್ಪ ಎಂಬ ಹೇಳಿಕೆಯೊಂದಿಗೆ ಚಿತ್ರವನ್ನು…
Author: News Desk Benkiyabale
ತುರುವೇಕೆರೆ: ತುಮಕೂರು ಲೋಕಸಭಾ ಚುನಾವಣೆ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಏ.18 ರಂದು ಗುರುವಾರ ಶಾಂತಿಯುತ ಮತದಾನಕ್ಕೆ ತಾಲೂಕು ಆಡಳಿತ ಎಲ್ಲ ರೀತಿಯ ಸಕಲ ಸಿದ್ದತೆ ಮಾಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಕೆ.ಶಶಿಧರ್ ತಿಳಿಸಿದ್ದಾರೆ. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮತಘಟ್ಟೆಗೆ ಮತಯಂತ್ರ ಸಾಗಣೆ ಕೇಂದ್ರದಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ 229 ಮತಘಟ್ಟೆಗಳನ್ನು ಸ್ಥಾಪಿಸಲಾಗಿದ್ದು ಒಂದು ಮತಘಟ್ಟೆಗೆ ಪೋಲೀಸ್ ಹಾಗೂ 4 ಸಿಬ್ಬಂದಿಗಳು ನಿಯೋಜಿಸಲಾಗಿದೆ. 10 ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿ.ಸಿ ಕ್ಯಾಮರ ಅಳವಡಿಸಲಾಗಿದೆ. ಕ್ಷೇತ್ರದಲ್ಲಿ 177988 ಮತದಾರರಿದ್ದು 89446 ಪುರುಷರು, 88535 ಮಹಿಳೆಯರು, 7 ಇತರೆ ಮತದಾರರು ಹೊಂದಿದ್ದು. 30 ಮಾರ್ಗಗಳನ್ನು ಮಾಡಿದ್ದು ಚುನಾವಣೆ ಸಿಬ್ಬಂದಿ ಮತಘಟ್ಟೆಗೆ ತೆರಳಲು 50ಕ್ಕೂ ಹೆಚ್ಚು ವಾಹನಗಳನ್ನು ತೆಗೆದುಕೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ಭಯವಿಲ್ಲದೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂದರ್ಬದಲ್ಲಿ ತಹಶೀಲ್ದಾರ್ ನಯೀಂಉನ್ನಿಸಾ ಇದ್ದರು.
ತುಮಕೂರು : ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1608000 ಮತದಾರರು ಇದ್ದು, ಏಪ್ರಿಲ್ 18ರಂದು ನಡೆಯುವ ಚುನಾವಣಾ ಮತದಾನವನ್ನು ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 2209780 ಮತದಾರರಿದ್ದು, ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 803006 ಗಂಡಸರು, 804874 ಮಹಿಳೆಯರು, ಇತರೆ 120 ಒಟ್ಟು 1608000 ಮತದಾರರು ಇದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೂ ಸೇರುವ ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 410867 ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಕುಣಿಗಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 190913 ಮತದಾರರು ಇದ್ದಾರೆ ಎಂದರು. ಈಗಾಗಲೇ ಮತದಾರರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಮಾಡಿಫೈಡ್ ಓಟರ್‍ಸ್ಲಿಪ್‍ಗಳನ್ನು ಮನೆ ಮನೆಗೆ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ…
ತುಮಕೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ 1952 ರಿಂದ 2014ರವರೆಗಿನ ಚುನಾವಣಾ ಹಿನ್ನೋಟ ಕೈಪಿಡಿಯನ್ನು ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ಬಿಡುಗಡೆ ಮಾಡಿದರು. ತಮ್ಮ ಕಚೇರಿಯಲ್ಲಿಂದು ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿ ಏ.18ರಂದು ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮಾಧ್ಯಮ ಮಿತ್ರರಿಗೆ ಅನುಕೂಲವಾಗುವಂತೆ ಈ ಕೈಪಿಡಿಯನ್ನು ತಯಾರಿಸಲಾಗಿದ್ದು, ಕೈಪಿಡಿಯಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ವಿವರ, 2019ರ ಏ.9ಕ್ಕೆ ಇದ್ದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರವಾರು ಮತದಾರರ ಸಂಖ್ಯೆ, ಮತಗಟ್ಟೆಗಳ ವಿವರದೊಂದಿಗೆ 1952-2014ರವರೆಗಿನ ಲೋಕಸಭಾ ಚುನಾವಣಾ ಅಂಕಿ-ಅಂಶಗಳನ್ನು ನೀಡಲಾಗಿದೆ. ಕೈಪಿಡಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕಿ ಆರ್.ರೂಪಕಲಾ ಅವರು ಸಿದ್ಧಪಡಿಸಿದ್ದು, 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಾಧ್ಯಮ ಮಿತ್ರರಿಗೆ ಈ ಕೈಪಿಡಿ ಸದುಪಯೋಗವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಅವರು ಕೈಪಿಡಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚುನಾವಣಾ ಶಾಖೆಯ…
ತುಮಕೂರು: ಜಿಲ್ಲೆಯ ಮತದಾರರು ಈ ಬಾರಿ ನನ್ನ ಕೈ ಹಿಡಿದರೆ,ಅವರ ಋಣ ತೀರಿಸಿಯೇ ಜಿಲ್ಲೆಯಿಂದ ನಿಗರ್ಮಿಸುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಜಿಲ್ಲಾ ಕುಂಚಿಟಿಗರ ಸಮುದಾಯಭವನದಲ್ಲಿ ತುಮಕೂರು ಜಿಲ್ಲಾ ಮಡಿವಾಳ ಸಮಾಜ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ಜಿಲ್ಲೆಯ ಮತದಾರರು ವಿರೋಧ ಪಕ್ಷದವರು ಮಾಡುವ ಅಪಪ್ರಚಾರಗಳಿಗೆ ಕಿವಿಗೊಡದೆ,ನನ್ನನ್ನು ಆರಿಸಿ ಕಳುಹಿಸಿಕೊಡಿ, ಜಿಲ್ಲೆಯ ನೀರಾವರಿ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಯೇ ಇಲ್ಲಿಂದ ನಿಗರ್ಮಿಸುತ್ತೇನೆ.ನನ್ನ 60 ವರ್ಷಗಳ ರಾಜಕೀಯ ಜೀವನದಲ್ಲಿ ಎಂದಿಗೂ ಕೊಟ್ಟ ಮಾತಿಗೆ ತಪ್ಪಿ ನಡೆದಿಲ್ಲ.ನನ್ನ ಜೀವನದ ಕೊನೆಯ ವರೆಗೂ ಅದನ್ನು ಉಳಿಸಿಕೊಂಡು ಹೋಗಲಿದ್ದೇನೆ ಎಂದರು. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ 16 ಲಕ್ಷ ಮತದಾರರಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಮತಗಳು ಸುಮಾರು 23 ಸಣ್ಣ ಸಣ್ಣ ಸಮುದಾಯಗಳಿಗೆ ಸೇರಿದ್ದು,ಅವರ ಸ್ಥಿತಿಗತಿಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ.ನೀರಾವರಿ…
ಕುಣಿಗಲ್: ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ಮಹಾರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಚಾಲನೆಗೂ ಮುನ್ನ ಮೊದಲ ಪೂಜೆಯ ಷಟಸ್ಥ್ಥ ಧ್ವಜ ಹರಾಜು ನಡೆಯಿತು. ಬೆಳಗಾವಿ ಹರೇಮಠ ಅಮರನಾಥ ಗುರುಕುಲದ ಚಂದ್ರಶೇಖರ್ ಶಾಸ್ತ್ರಿ 2.46 ಲಕ್ಷ ರೂಪಾಯಿಗೆ ಪಡೆದರು. ಮಧ್ಯಾಹ್ನ 12.30ಕ್ಕೆ ರಥದ ಗಾಲಿಗೆ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ತೆಂಗಿನಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಸುಡುವ ಬಿಸಿಲು ಲೆಕ್ಕಿಸದೆ ರಾಜ್ಯದ ನಾನಾ ಭಾಗದಿಂದ ಬಂದಿದ್ದ ಭಕ್ತರು ರಥಕ್ಕೆ ಹೂ, ಧವನ, ಬಾಳೆಹಣ್ಣು ಹಾಗೂ ಕರಿ ಮೆಣಸು ತೂರಿ ಹರಕೆ ಸಲ್ಲಿಸಿದರು. ಭಕ್ತರ ದಣಿವಾರಿಸಲು ದಾರಿಯುದ್ದಕ್ಕೂ ನೀರು, ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪತ್ನಿ ತ್ರಿಷಿಕಾ ಯದುವೀರ, ಆರ್ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ.ವಿಜಯ ಸಂಕೇಶ್ವರ, ಬಾಳೆಹೊನ್ನೂರು ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಕುಪ್ಪೂರು…
ತುಮಕೂರು : ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ವಿರುದ್ಧ ದೇಶದಾದ್ಯಂತ ದೊಡ್ಡ ಶಕ್ತಿ ರೂಪುಗೊಳ್ಳಲು ದೇವೇಗೌಡರ ಪಾತ್ರ ಪ್ರಮುಖವಾದದ್ದು. ಇತರೆ ರಾಜ್ಯಗಳ ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ವಿರುದ್ಧ ಸಂಘಟಿಸುವಲ್ಲಿ ಪ್ರಮುಖ ದೇವೇಗೌಡರು ಕಾರಣಕರ್ತರಾಗಿದ್ದಾರೆ ಎಂದು ಸಂಸದ ಎಸ್ ಪಿ ಮುದ್ದಹನುಮೇಗೌಡರು ಹೇಳಿದರು. ನಗರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಕಾನೂನು ಮತ್ತು ಮಾನವಹಕ್ಕುಗಳ ವಿಭಾಗ ಏರ್ಪಡಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವ ವಕೀಲರ ಸಮಾವೇಶದಲ್ಲಿ ಮಾತನಾಡಿದ ಮುದ್ದಹನುಮೇಗೌಡರು, ಇಡೀದೇಶದಲ್ಲಿ ಆಡಳಿತ ಪಕ್ಷದ ವಿರುದ್ದ ವಿವಿಧ ಪಕ್ಷಗಳ ಸಂಘಟಿಸುವ ಕಾರ್ಯದಲ್ಲಿ ದೇವೇಗೌಡರು ಮುಂಚೂಣಿಯಲ್ಲಿರುವ ಕಾರಣ, ಇವರು ಸ್ಪರ್ಧಿಸಿರುವ ತುಮಕೂರು ಕ್ಷೇತ್ರದ ಚುನಾವಣೆ ಮಹತ್ವ ಪಡೆದಿದ್ದು ದೇವೇಗೌಡರನ್ನು ಗೆಲ್ಲಿಸಬೇಕಾದ ಅಗತ್ಯವಿದೆ ಎಂದು ಹೇಳಿದರು. ತಮ್ಮ ಕಾಂಗ್ರೆಸ್ ಪಕ್ಷದ ತೀರ್ಮಾನದಂತೆ ತಾವು ಕ್ಷೇತ್ರವನ್ನು ದೇವೇಗೌಡರಿಗೆ ಬಿಟ್ಟುಕೊಡಬೇಕಾಯಿತು. ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್ ಅವರು ತಮಗೆ ದೂರವಾಣಿ ಕರೆ…
ತುಮಕೂರು: ಹೇಮಾವತಿ ನೀರಿನ ಹಂಚಿಕೆ ವಿಚಾರದಲ್ಲಿ ದೇವೇಗೌಡರ ಕುಟುಂಬ ಪ್ರಾಣ ಹೋಗುವವರೆಗೂ ತುಮಕೂರು ಜಿಲ್ಲೆಗೆ ದ್ರೋಹ ಮಾಡಲ್ಲ, ಜಿಲ್ಲೆಯ ಬಿಜೆಪಿ ನಾಯಕರು ತಮ್ಮ ಸ್ವಾರ್ಥಕ್ಕಾಗಿ ನಮ್ಮ ಕುಟುಂಬದ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ವಾಗ್ದಾಳಿ ಮಾಡಿದರು. ಅವರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಗೂಳೂರಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಪಕ್ಷದ ಕಾರ್ಯಕರ್ತರ ಬೃಹತ್ ಬಹಿರಂಗ ಸಮಾವೇಶ ಹಾಗು ಮೈತ್ರಿ ಪಕ್ಷದ ಅಭ್ಯರ್ಥಿ ಪರವಾಗಿ ಆಯೋಜಿತವಾಗಿದ್ದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾವೇರಿ ನ್ಯಾಯಾಧಿಕರಣದಲ್ಲಿ ತುಮಕೂರು ಜಿಲ್ಲೆಗೆ 25.31 ಟಿ ಎಂ ಸಿ ನೀರು ಹಂಚಿಕೆಯಾಗಿದೆ ಆದರೆ ಈ ಭಾರಿ 25.47 ಟಿ ಎಂ ಸಿ ಹೆಚ್ಚುವರಿ ನೀರು ತುಮಕೂರು ಜಿಲ್ಲೆಗೆ ಹರಿದಿದೆ,ಹೇಮಾವತಿ ನೀರಿನ ವಿಚಾರದಲ್ಲಿ ದೇವೇಗೌಡರ ಬಗ್ಗೆ ಅನಗತ್ಯ ಅಪಪ್ರಚಾರ ಮಾಡುವ ಬಿಜೆಪಿ ನಾಯಕರಿಗೆ ಭಗವಂತ ತಕ್ಕ ಪಾಠ ಕಲಿಸುತ್ತಾನೆ…
ಕೊರಟಗೆರ: ಭಾರತ ದೇಶದ ಸಮಗ್ರ ಅಭಿವೃದ್ದಿ ಮತ್ತು ಬಡವರ ರಕ್ಷಣೆಗಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಕುರುಬ ಸಮುದಾಯ ಮತ್ತೋಮ್ಮೆ ಬೆಂಬಲಸಿ ತುಮಕೂರು ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜುಗೆ ಮತ ನೀಡಬೇಕು ಎಂದು ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಮನವಿ ಮಾಡಿದರು. ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಬಿಜೆಪಿ ಯುವ ಮೋರ್ಚದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಕೊರಟಗೆರೆ ಕುರುಬ ಸಮುದಾಯದ ಮುಖಂಡರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹಂಚುವ ವಿಚಾರದಲ್ಲಿ ಮಾಜಿ ಪ್ರದಾನಿ ದೇವೇಗೌಡರು ತಾರತಮ್ಮ ಮಾಡಿದ್ದಾರೆ. ದೇವೇಗೌಡರು ಕುರುಬ ಸಮುದಾಯದ ವಿರೋದಿ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನ ಹೆಜ್ಜೆ ಹೆಜ್ಜೆಗೂ ತುಳಿದುಕೊಂಡು ಬಂದಿದ್ದಾರೆ. ಜಾತಿಯ ಮೂಲಕ ರಾಜಕಾರಣ ಮಾಡುವ ಮಾಜಿ ಪ್ರಧಾನಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಸೂಚನೆ ನೀಡಿದರು. …
ಮಧುಗಿರಿ: ಎಚ್.ಡಿ.ದೇವೇಗೌಡರ ಪರ ಮಾಜಿ ಸಿಎಂ ಸಿದ್ದರಾಮಯ್ಯ ಮೂರು ತಾಲೂಕುಗಳಲ್ಲಿ ಬುಧವಾರ ಪ್ರಚಾರ ನಡೆಸುವ ಮೂಲಕ ಜೆಡಿಎಸ್ ವಲಯದಲ್ಲಿ ಸ್ವಲ್ಪ ಸಮಾಧಾನ ಮೂಡಿಸಿದರು. ದೇವೇಗೌಡರ ರಾಜಕೀಯ ವಿರೋಧಿಗಳಾಗಿರುವ ಸಿದ್ದರಾಮಯ್ಯ ಪ್ರಚಾರ ನಡೆಸುವ ಬಗ್ಗೆ ಜಿಲ್ಲೆಯ ಜನರಲ್ಲಿ ಕುತೂಹಲವಿತ್ತು. ಮೈತ್ರಿ ಅಭ್ಯರ್ಥಿ ದೇವೇಗೌಡರನ್ನು ಗೆಲ್ಲಿಸಿ ಎಂದು ಮನವಿ ಮಾಡುವ ಮೂಲಕ ಗೊಂದಲಕ್ಕೆ ತೆರೆ ಎಳೆದರು. ಯುವಕರೇ ನಿಮ್ಮಲ್ಲಿ ಕೈ ಜೋಡಿಸಿ ಪ್ರಾರ್ಥಿಸುತ್ತೇನೆ. ಮೋದಿ, ಮೋದಿ ಎಂದು ಹೇಳ್ಬೇಡಿ. ಅವರು ನಿಮಗೇ ಟೋಪಿ ಹಾಕಿದ್ದಾರೆ. ಬಿಜೆಪಿ ಸೋಲಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸಿ ಎಂದು ಮನವಿ ಮಾಡಿದರು. ಕೊಡುಗೆ ಹೇಳಲು ಏನೂ ಇಲ್ಲದೆ ಚಿತ್ರದುರ್ಗ, ಮೈಸೂರಲ್ಲಿ ಮಾಡಿದ ಭಾಷಣ ಸುಬ್ಬರಾಯನ ಕೆರೆ ಥರ ಇತ್ತು. ಅಭಿವೃದ್ಧಿ ಕೆಲಸಗಳ ಬಗ್ಗೆ ಒಂದೂ ಮಾತನಾಡಲಿಲ್ಲ ಎಂದು ವ್ಯಂಗ್ಯವಾಡಿದರು. ಮೋದಿಯವರು ಏನು ಮಾಡಿದ್ದಾರೆ? ಉದ್ಯೋಗ ಕೇಳಿದ ಯುವಕರ ಬಳಿ…