ಚಿಕ್ಕನಾಯಕನಹಳ್ಳಿ: ಇಂಜಿನ್‍ಲ್ಲಿ ಶಾರ್ಟ್ ಸಕ್ರ್ಯಟ್ ನಿಂದಾಗಿ ಒಮ್ನಿಕಾರೊಂದು ಮಾರ್ಗಮಧ್ಯದಲ್ಲಿ ಹೊತ್ತಿ ಉರಿದ ಘಟನೆ ಶೆಟ್ಟಿಕೆರೆ ಬಳಿ ನಡೆದಿದೆ. ಚಿಕ್ಕನಾಯಕನಹಳ್ಳಿ – ತಿಪಟೂರಿನ ಮಾರ್ಗದ ನಡುವೆ ಶೆಟ್ಟಿಕೆರೆ ಬಳಿ ಚಲಿಸುತ್ತಿದ್ದ ಮಾರುತಿ ಒಮ್ನಿಯ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿದ ಪರಿಣಾಮ ಚಲಿಸುತ್ತಿದ್ದಾಗಲೇ ಹೊತ್ತಿ ಉರಿಯಿತು. ಈ ಸಂದರ್ಭದಲ್ಲಿ ವಾಹನದಲ್ಲಿದ್ದವರು ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ವಾಹನ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ವಾಹನ ಭಾಗಶಃ ಸುಟ್ಟುಹೋಗಿದ್ದು ಸುಮಾರು ರೂ.3 ಲಕ್ಷರೂ ನಷ್ಟ ಸಂಭವಿಸಿದೆ. ವಾಹನ ಶೆಟ್ಟಿಕೆರೆಯ ಲೋಕೇಶ್ ಎಂಬುವರದ್ದಾಗಿದ್ದು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯಲ್ಲಿ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕದಳದ ಜ್ಞಾನಮೂರ್ತಿ ತಂಡ ಕಾರ್ಯನಿರ್ವಹಸಿದರು.
Author: News Desk Benkiyabale
ತುಮಕೂರು : ಸರ್ಕಾರದ ಆದೇಶದಂತೆ ಕೋವಿಡ್-19 ಲಾಕ್‍ಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೊಳಗಾಗಿರುವ ಮುಸುಕಿನ ಜೋಳ ಬೆಳೆದ ರೈತರಿಗೆ ಬೆಳೆ ಪರಿಹಾರವಾಗಿ 5ಸಾವಿರ ರೂ.ಗಳ ಆರ್ಥಿಕ ನೆರವು ನೀಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚನ ತಿಳಿಸಿದ್ದಾರೆ. ಲಾಕ್‍ಡೌನ್‍ನಿಂದ ಮುಸುಕಿನ ಜೋಳಕ್ಕೆ ಬೇಡಿಕೆ ಇಲ್ಲದಂತಾಗಿ 2019-20ನೇ ಸಾಲಿನಲ್ಲಿ ಮುಸುಕಿನ ಜೋಳ ಬೆಳೆದು ಸಂಕಷ್ಠಕ್ಕೊಳಗಾಗಿರುವ ರೈತರಿಗೆ ಅಲ್ಪಾವಧಿ ಆರ್ಥಿಕ ನೆರವು ನೀಡಲು ಸರ್ಕಾರ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ 2019-20ನೇ ಸಾಲಿನಲ್ಲಿ ಮುಸುಕಿನ ಜೋಳ ಬೆಳೆದ ರೈತರಿಗೆ ಬೆಳೆ ಸಮೀಕ್ಷೆಯ ತಂತ್ರಾಂಶದಲ್ಲಿ ಈಗ ದಾಖಲಾಗಿರುವ ಬೆಳೆ ವಿವರಗಳ ಆಧಾರದ ಮೇರೆಗೆ ಬೆಳೆ ಪರಿಹಾರವನ್ನು ಪಾವತಿಸಲಾಗುವುದು. ಬೆಳೆ ಸಮೀಕ್ಷೆಯಲ್ಲಿರುವಂತೆ ಮುಸುಕಿನ ಜೋಳದ ಬೆಳೆಗಾರರ ಪಟ್ಟಿಯನ್ನು ಗ್ರಾಮ ಪಂಚಾಯಿತಿ, ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಕಛೇರಿಯ ನಾಮಫಲಕಗಳಲ್ಲಿ ಪ್ರದರ್ಶಿಸಲಾಗುವುದು. ಬೆಳೆ ಪರಿಹಾರವನ್ನು DBT Portal ಮುಖಾಂತರ ನೇರವಾಗಿ ಫಲಾನುಭವಿ ಖಾತೆಗೆ ಜಮಾ ಮಾಡಲಾಗುವುದು. ನಷ್ಠಕ್ಕೊಳಗಾದ ಮುಸುಕಿನ…
ತುಮಕೂರು: ಜಿಲ್ಲಾ ವಕ್ಫ್ ಸಮಿತಿಗೆ ನಿರ್ವಹಣಾ ಸಮಿತಿಯನ್ನು ರಾಜ್ಯ ವಕ್ಫ್ ಸಮಿತಿ ಏಕಪಕ್ಷೀಯವಾಗಿ ನೇಮಿಸಿರುವುದಕ್ಕೆ ಜಿಲ್ಲಾ ವಕ್ಫ್ ಸಮಿತಿ ಸದಸ್ಯರು ವಿರೋಧ ವ್ಯಕ್ತಪಡಿಸಿ, ವಕ್ಫ್ ಸಮಿತಿ ಆಡಳಿತಾಧಿಕಾರಿಯನ್ನು ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ವಕ್ಫ್ ಸಮಿತಿಗೆ ಚುನಾವಣೆ ನಡೆಸಲು ಸದಸ್ಯತ್ವ ಅಭಿಯಾನವನ್ನು ಬೈಲಾ ತಿದ್ದುಪಡಿ ಮಾಡಿ, ಜಿಲ್ಲೆಯಾದ್ಯಂತ ಸದಸ್ಯತ್ವ ನೋಂ ದಣಿಯನ್ನು ಮಾಡಲಾಗಿದ್ದು, ಈಗ ಬೈಲಾವನ್ನು ಉಲ್ಲಂಘಿಸಿ, ಮಾಜಿ ಶಾಸಕ ರಫೀಕ್ ಅಹ್ಮದ್ ಅವರ ಶಿಫಾರಸ್ಸಿನಂತೆ ನಿರ್ವಹಣಾ ಸಮಿತಿಯನ್ನು ನೇಮಕ ಮಾಡಲಾಗಿದೆ ಎಂದು ದೂರಿದ ಸದಸ್ಯರು ಜಿಲ್ಲಾ ವಕ್ಫ್ ಸಮಿತಿಯನ್ನು ಗಣನೆಗೆ ತೆಗೆದು ಕೊಳ್ಳದೇ ರಾಜ್ಯ ವಕ್ಫ್ ಸಮಿತಿ ನೇಮಿಸಿರುವ ನಿರ್ವಹಣಾ ಸಮಿತಿಗೆ ಅಧಿಕಾರವನ್ನು ನೀಡಬಾರದು ಎಂದು ಆಗ್ರಹಿಸಿದರು. ಸದಸ್ಯರಿಗೆ ಗೊತ್ತಿಲ್ಲ: ಜಿಲ್ಲಾ ವಕ್ಫ್ ಸಮಿತಿಗೆ ನೇಮಕವಾಗಿರುವ ನಿರ್ವಹಣಾ ಸಮಿತಿಯಲ್ಲಿರುವ ಸದಸ್ಯರಿಗೆ ನೇಮಕವಾಗಿರುವ ವಿಚಾರವೇ ಗೊತ್ತಿಲ್ಲದಂತೆ ನಿರ್ವಹಣಾ ಸಮಿತಿಯನ್ನು ಅಕ್ರಮವಾಗಿ ನೇಮಿಸಲಾಗಿದೆ. ವಕ್ಫ್ ಸಮಿತಿಯಲ್ಲಿ ಅನಾವಶ್ಯಕವಾಗಿ ರಾಜಕಾರಣವನ್ನು…
ತುಮಕೂರು: ಕೊರೊನಾ ಮಹಾಮಾರಿಯಿಂದ ಪಾರಾಗುವ ಸಲುವಾಗಿ ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಸ್ಯಾನಿಟೈಜೇಶನ್, ಕಲ್ಪಶುದ್ಧಿ ಸ್ಯಾನಿಟರಿ ಘಟಕ (ಗೇಟ್ ವೇ)ವನ್ನು ಸ್ಥಾಪಿಸಲಾಗಿದೆ. ಈ ಕಲ್ಪಶುದ್ಧಿ ಸ್ಯಾನಿಟರ್ ಘಟವನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಉದ್ಘಾಟಿಸಿದರು. ಸಂಜೀವಿನಿ ರಕ್ತನಿಧಿ ಕೇಂದ್ರದ ಅರುಣ್‍ಕುಮಾರ್ ಕೊಡುಗೆಯಾಗಿ ನೀಡಿರುವ ಸ್ಯಾನಿಟೈಸ್ ಗೇಟ್ ವೇಯನ್ನು ಎಸ್‍ಐಟಿ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿ ಚಿದಾನಂದ್ ಸ್ಥಾಪಿಸಿದ್ದು, ಮಠಕ್ಕೆ ಬರುವ ಭಕ್ತಾದಿಗಳಿಗೆ ಸ್ವಯಂ ಚಾಲಿತವಾಗಿ ಈ ಘಟಕದ ಉಪಕರಣ ಸ್ಯಾನಿಟೈಸ್ ಮಾಡಲಿದೆ. ಈ ಘಟಕ ಉದ್ಘಾಟಿಸಿದ ನಂತರ ಮಾತನಾಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕ್ಯಾತ್ಸಂದ್ರದಿಂದ ಶ್ರೀಮಠಕ್ಕೆ ಪ್ರವೇಶ ಪಡೆಯುವ ವಸ್ತುಪ್ರದರ್ಶನದ ಮುಂಭಾಗದ ಗೇಟ್ ಬಳಿ ಈ ಸ್ಯಾನಿಟೈಸ್ ಗೇಟ್ ವೇ ಸ್ಥಾಪಿಸಲಾಗಿದೆ. ಈ ಬೂತ್‍ನಲ್ಲಿನ ಉಪಕರಣ ಮನುಷ್ಯನಿಗೆ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಿದೆ. ಹೀಗಾಗಿ ಮಠಕ್ಕೆ ಬರುವ ಭಕ್ತರಿಗೆ ಪ್ರತ್ಯೇಕವಾಗಿ ಸ್ಯಾನಿಟೈಸ್ ಹಾಕುವ ಅವಶ್ಯಕತೆ…
ಮದುವೆ ಮಾಡುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಜನ್ಮ ನೀಡಿದ ತಂದೆಯನ್ನೇ ಕೊಲೆಗೈದ ಘಟನೆ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಇಂದು ಮೃತ ವ್ಯಕ್ತಿ ಸಣ್ಣಯ್ಯ {65) ವರ್ಷ ಎಂದು ತಿಳಿಯಲಾಗಿದೆ ಮೃತನ ಮಗ 30 ವರ್ಷಗಳಾದರೂ ನನಗೆ ಮದುವೆ ಮಾಡುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕುಡಿದು ಬಂದು ಮನೆಯಲ್ಲಿ ಮಲಗಿದ್ದ ತನ್ನ ತಂದೆಗೆ ಹಿಗ್ಗಾಮುಗ್ಗಾ ಬೈದು ಮನೆಯಲ್ಲಿ ಇದ್ದ ದೊಣ್ಣೆಯಿಂದ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ತಾಯಮ್ಮ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಾಯಮ್ಮನಿಗೆ ಎರಡನೇಯ ಗಂಡ ಎಂದು ತಿಳಿದು ಬಂದಿದೆ ಸ್ಥಳಕ್ಕೆ ತಿಪಟೂರು ಡಿ ವೈ ಎಸ್ ಪಿ ಚಂದನ್ ಕುಮಾರ್ ಹಾಗೂ ಆರಕ್ಷಕ ವೃತ್ತ ನಿರೀಕ್ಷಕ ವೀಣಾ ಬೇಟೆ ನೀಡಿ ಪರಿಶೀಲಿಸಿದರು ಆರೋಪಿ ವೆಂಕಟೇಶ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ
ಗುಬ್ಬಿ: ಮದುವೆ ಊಟ ಸೇವಿಸಿದ್ದ 16 ಮಂದಿ ವಾಂತಿ ಬೇದಿಯಿಂದ ಅಸ್ವಸ್ಥರಾಗಿರುವ ಘಟನೆ ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲೇ ನಡೆದ ಸರಳ ಮದುವೆಯಲ್ಲಿ ಊಟ ತಿಂಡಿ ಸೇವಿಸಿ ನೀರು ಕುಡಿದವರಿಗೆ ಈ ರೀತಿಯ ಸಮಸ್ಯೆಯಾಗಿದ್ದು ವಾಂತಿ ಬೇದಿಯಿಂದ ಅಸ್ವಸ್ಥರಾಗಿದ್ದರು. ಈ ಪೈಕಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಮದಲ್ಲಿನ ಶುಧ್ದ ಕುಡಿಯುವ ನೀರಿನ ಘಟಕ ಕೆಟ್ಟುಹೋಗಿದ್ದು ಟ್ಯಾಂಕರ್‍ನಿಂದ ಮದುವೆಗೆ ಬಳಸಿದ ನೀರು ಈ ಸಮಸ್ಯೆಗೆ ಕಾರಣವಾಗಿರಬಹುದೆಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೊರೋನಾ ರೋಗ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಜನ ಸೇರಿಸಿಕೊಂಡು ಮದುವೆ ಮಾಡುವುದು ಸಾಮಾಜಿಕ ಅಂತರ ಕಾಪಾಡದಿರುವುದು, ಶುಧ್ದಕುಡಿಯುವ ನೀರು ಬಳಕೆ ಮಾಡದಿರುವುದು ಈ ರೀತಿಯ ಸಮಸ್ಯೆಗೆ ಕಾರಣವಾಗುತ್ತಿರುವ ಬಗ್ಗೆ ತಿಳಿಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ ಅವರ ನೇತೃತ್ವದ ತಂಡ ಅಸ್ವಸ್ಥಗೊಂಡಿದ್ದವರಿಗೆ ಸೂಕ್ತ ಚಿಕಿತ್ಸೆ ನೀಡಿದರು. ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡಿದ ಬಳಿಕ ಕುಡಿಯುವ ನೀರು ಮತ್ತು ಸ್ವಚ್ಚತೆ ಬಗ್ಗೆ ಜಾಗೃತಿ…
ಮಧುಗಿರಿ: ತಾಲ್ಲೂಕಿನ ಕುಪ್ಪಾಚಾರಿರೊಪ್ಪ (ಕೆ.ಸಿ. ರೊಪ್ಪ)ದಲ್ಲಿ ವ್ಯಕ್ತಿಯೊಬ್ಬನಿಗೆ ಕೋರನ ಸೋಂಕು ದೃಢಪಟ್ಟಿದ್ದು ಈತ ಗೌರಿಬಿದನೂರು ತಾಲ್ಲೂಕಿನ ಅಲಿಪುರಕ್ಕೆ ಹೋಗಿ ಬಂದಿದ್ದೇನೆ ಎಂದು ತಿಳಿದು ಬಂದಿದೆ. ಜೂನ್ ಒಂಬತ್ತು ರಂದು ಈತನಿಗೆ ಜ್ವರ ಕಾಣಿಸಿಕೊಂಡಿದ್ದು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ ,ನಂತರ ಈತನ ಗಂಟಲಿನ ದ್ರವವನ್ನು ಪಡೆಯಲಾಗಿದ್ದು ಜೂನ್ ಹನ್ನೊಂದು ರಂದು ಬೆಳಿಗ್ಗೆ ಕೋರನ ಪಾಸಿಟಿವ್ ಇರುವುದು ಪರೀಕ್ಷೆಯಿಂದ ತಿಳಿದು ಬಂದಿದೆ. ಈತನ ಕುಟುಂಬದ ಆರು ಜನ ಸದಸ್ಯರನ್ನು ಸಮೀಪದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಹೌಸ್ ಕ್ವಾರಂಟೈನ್ ಮಾಡಲಾಗಿದೆ.ಇತನನ್ನು ತುಮಕೂರಿಗೆ ಚಿಕಿತ್ಸೆ ಗೆ ಕಳುಹಿಸಲಾಗಿದೆ. ಕೊಪ್ಪಚಾರಿರೊಪ್ಪಕ್ಕೆ ಉಪವಿಭಾಧಿಕಾರಿ ಡಾ. ಕೆ. ನಂದಿನಿ ದೇವಿ, ಡಿವೈಎಸ್ಪಿ ಎಂ. ಪ್ರವೀಣ್ ,ತಹಶೀಲ್ದಾರ್ ಡಾ.ಜಿ. ವಿಶ್ವನಾಥ್ , ಪುರಸಭಾ ಮುಖ್ಯಾಧಿಕಾರಿ ಅಮರನಾರಾಯಣ ಹಾಗೂ ಆರೋಗ್ಯಾ ಧಿಕಾರಿ ಬಾಲಾಜಿ ತಾಲ್ಲೂಕು ವೈದ್ಯಾಧಿಕಾರಿ ರಮೇಶ್ ಬಾಬು ಹಾಗೂ ಹಲವು ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಮುಂಜಾಗ್ರತಾ…
ಮಧುಗಿರಿ : ಮಧುಗಿರಿ ತಾಲ್ಲೂಕು ಡಿ.ವಿ.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಸಿ.ರೊಪ್ಪ ಗ್ರಾಮದ ವ್ಯಕ್ತಿಗೆ ಕೊರೊನಾ ಸೋಂಕು ದೃಡಪಟ್ಟಿದ್ದು, ಸದರಿ ಗ್ರಾಮವನ್ನು ಕಂಟೈನ್‍ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಇಂದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದಲ್ಲಿ 70 ವಾಸದ ಮನೆಗಳಿದ್ದು, 334 ಜನಸಂಖ್ಯೆ ಹೊಂದಿದ್ದು ಪೂರ್ಣ ಗ್ರಾಮವನ್ನು ಬಫರ್ ಜೋನ್ ಆಗಿ ಪರಿವರ್ತಿಸಲಾಗಿದೆ. ಸದರಿ ಗ್ರಾಮವನ್ನು ಪರಿವೀಕ್ಷಣೆ ಮಾಡಿದ ಸಿಇಓ ಅವರು ಗ್ರಾಮದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿ ಹಾಜರಿದ್ದ ಆರೋಗ್ಯ, ಕಂದಾಯ ಮತ್ತು ಪಂಚಾಯಿತಿ ಇಲಾಖೆ ಅಧಿಕಾರಿಗಳು ಮತ್ತು ನೌಕರರಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತ ವ್ಯಕ್ತಿಗಳನ್ನು ಗುರುತಿಸಿ ಕ್ವಾರಂಟೈನ್ ಮಾಡಲು ಸೂಚನೆ ನೀಡಿದ ಅವರು ಕಂಟೈನ್‍ಮೆಂಟ್ ಜೋನ್‍ನಲ್ಲಿರುವ ಜನರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು…
ಮಧುಗಿರಿ: ಉಪವಿಭಾಗದ ಲೋಕೋಪಯೋಗಿ ವಿಭಾಗ ವ್ಯಾಪ್ತಿಯಲ್ಲಿ 2019-20 ನೇ ಸಾಲಿನಲ್ಲಿ ಒಟ್ಟು 227 ಕೋಟಿ ರೂಗಳ 5641 ವಿವಿಧ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೆಲವು ಪ್ರಗತಿಯಲ್ಲಿವೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು. ಪಟ್ಟಣದ ಸಿರಾಗೇಟ್‍ನಲ್ಲಿ ಶುಕ್ರವಾರ ನೂತನ ಲೋಕೋಪಯೋಗಿ ವಿಭಾಗೀಯ ಕಚೇರಿ ಉದ್ಘಾಟಿಸಿ ಮಾತನಾಡಿದರು. 2020-21 ನೇ ಸಾಲಿನಲ್ಲಿ ಬಜೆಟ್‍ನಲ್ಲಿ ಇವುಗಳ ದುರಸ್ತಿ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಿ ತುರ್ತು ದುರಸ್ಥಿಗಾಗಿ 750 ಕೋಟಿ ಬಿಡುಗಡೆ ಮಾಡಿ ಕೆಲಸ ಕೈಗೆತ್ತಿಕೊಂಡಿದ್ದು, ಬಜೆಟ್ ಅನುಮೋದನೆಗೆ ಹೋಗುವ ಸಮಯದಲ್ಲಿ ಮಾರ್ಚ್‍ನಲ್ಲಿ ಕರೊನಾ ಹಾವಳಿಯಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಸಮಸ್ಯೆಗೆ ಸಿಲುಕಿದ್ದರಿಂದ ಕಾಮಗಾರಿಗಳ ಪ್ರಗತಿಗೆ ಹಿನ್ನಡೆಯಾಗಿದೆ. ಲಾಕ್‍ಡೌನ್ ವೇಳೆಯಲ್ಲಿ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಮರಳಿರುವುದರಿಂದ ಹೊರ ರಾಜ್ಯದ ಕಾರ್ಮಿಕರ ಕೊರತೆಯೂ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಕಾರ್ಮಿಕರ ಲಭ್ಯತೆಯ ನಂತರ ಕಾಮಗಾರಿಗಳನ್ನು ಪೂರ್ಣ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು. …
ಮಧುಗಿರಿ: ಪಟ್ಟಣದ ಬೈಪಾಸ್ ರಸ್ತೆಯ ಲ್ಲಿರುವ ಬಿಜವರ ಸಮೀಪ ವೃತ್ತದಲ್ಲಿ ಮದುವೆಗೆಂದು ಆಗಮಿಸಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಹಾಗೂ ಮೊಬೈಲನ್ನು ಕಸಿದು ನಾಲ್ವರು ಮದ್ಯಪ್ರಿಯರು ಪರಾರಿಯಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಕಲ್ಕೆರೆ ಗ್ರಾಮದ ನರಸಿಂಹ ಮೂರ್ತಿ ಎಂಬುವರು ಟಿವಿಎಸ್ ಎಕ್ಸೆಲ್ ನಲ್ಲಿ ಬಿಜವರದಲ್ಲಿರುವ ವೀರಾಂಜನೇಯಸ್ವಾಮಿ ದೇವಾಯದಲ್ಲಿ ನಡೆಯುತ್ತಿದ್ದ ಮದುವೆ ಎಂದು ಆಗಮಿಸುತ್ತಿದ್ದ ವೇಳೆ ನಾಲ್ವರು ಮದ್ಯಪ್ರಿಯರು ರಾತ್ರಿ ಒಂಬತ್ತು ಗಂಟೆಗೆ ಇವರ ಮೇಲೆ ಕಲ್ಲಿನಿಂದ ಮುಖಕ್ಕೆ ಹೊಡೆದು ಮೊಬೈಲನ್ನು ಕಸಿದು ಜೊತೆಗೆ ದ್ವಿಚಕ್ರ ವಾಹನವನ್ನು ಸಹ ಜಖಂ ಮಾಡಿದ್ದಾರೆ. ಈ ಬಗ್ಗೆ ಮಧುಗಿರಿ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ. “ದ್ವಿಚಕ್ರವಾಹನ ಸವಾರ ಸಾವು’ : ಮಧುಗಿರಿ ತಾಲ್ಲೂಕು ದೊಡ್ಡಯಲ್ಲೂರು ಗ್ರಾಮದ ಸೇತುವೆ ಬಳಿ ದ್ವಿಚಕ್ರ ವಾಹನದಿಂದ ಬಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ . ಮಂಗಳವಾರ ರಾತ್ರಿ 8-30ರ ಸುಮಾರಿನಲ್ಲಿ ಘಟನೆ ನಡೆದಿದ್ದು, ಐ.ಡಿ.ಹಳ್ಳಿ ಹೋಬಳಿ…











