ತುರುವೇಕೆರೆ: ಪಟ್ಟಣದ ಮಹೇಶ್ ಟ್ರಾವೆಲ್ ಏಜೆನ್ಸಿಯಿಂದ ಅಂಡಮಾನ್ ಪ್ರವಾಸ ಹೋಗಿದ್ದ ತಾಲ್ಲೂಕಿನ ಕೆಲವರು ಪೋನಿಚಂಡಮಾರುತದಿಂದ ವಿಮಾನ ಹಾರಾಟ ಸ್ಥಗಿತವಾಗಿರುವ ಹಿನ್ನಲೆಯಲ್ಲಿ ಪ್ರವಾಸಿಗರು ತುರುವೇಕೆರೆಗೆ ಹಿಂತಿರುಗಲಾಗದ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಏ.29ರಂದು ಬೆಂಗಳೂರಿನಿಂದ ಸು.50 ಮಂದಿ ವಿಮಾನದಲ್ಲಿ ಅಂಡಮಾನ ದ್ವೀ ಫೋನಿ ಚಂಡಮಾರುತ : ವಿಮಾನ ಹಾರಾಟ ಸ್ಥಗಿತಗೊಂಡು ಊರಿಗೆ ಹಿಂತಿರುಗಲಾರದ ಸ್ಥಿತಿಯಲ್ಲಿ ಪ್ರಯಾಣಿಕರುಪಕ್ಕೆ ತೆರಳಿದ್ದರು ಇದರಲ್ಲಿ ರಂಗನಾಥ್ ಕುಟುಂಬ, ಶಂಕರ್‍ಶಾಮಿಲ್‍ನ ಬಾಲಕೃಷ್ಣ ಕುಟುಂಬ ಮತ್ತು ಕಾಚಿಹಳ್ಳಿ ಗರಡೇಶ್ವರಯ್ಯ ಸೇರಿದಂತೆ 14 ಮಂದಿ ತುರುವೇಕೆರೆಯವರಿದ್ದು ಇನ್ನುಳಿದವರು ಬೇರೆ ಜಿಲ್ಲೆಯವರೆಂದು ತಿಳಿದು ಬಂದಿದೆ.ಆರು ದಿನಗಳ ಪ್ರವಾಸ ಮುಗಿಸಿಕೊಂಡು ಮೇ.4ರಂದು ಮತ್ತೆ ಪ್ರವಾಸದಿಂದ ಹಿಂತಿರುಗಬೇಕಿತ್ತು. ಇದಕ್ಕಾಗಿ ಸ್ಪೈಸ್‍ಏರ್‍ಜೆಟ್ ವಿಮಾನವನ್ನು ಬುಕ್ ಮಾಡಲಾಗಿತ್ತು. ಆದರೆ ಪೋನಿ ಚಂಡಮಾರುತದ ಪ್ರತಿಕೂಲಹಮಾನದ ತೊಂದರೆಯಿಂದಾಗಿ ವಿಮಾನ ಹಾರಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ಆಗಾಗಿ ಒಂದು ದಿನ ಎಲ್ಲಾ ಪ್ರವಾಸಿಗರೂ ಕೂಡ ಅಂಡಮಾನ್‍ನಲ್ಲಿಯೇ ಉಳಿದುಕೊಂಡಿದ್ದರು.ನಂತರ ಸ್ಪೈಸ್‍ಏರ್‍ಜೆಟ್ ವಿಮಾನದವರು ಮೇ5ರ ಭಾನುವಾರ 50 ಜನ…
Author: News Desk Benkiyabale
ತುಮಕೂರು: ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ 121 ಪ್ರಕರಣಗಳ ಪೈಕಿ 65 ಪ್ರಕರಣಗಳಲ್ಲಿ ಲೈಸನ್ಸ್‍ಗಳನ್ನು ರದ್ದುಗೊಳಿಸಲಾಗಿದೆ. ಬಾರ್/ ವೈನ್ಸ್ ಅಂಗಡಿಗಳಿಂದ ಮದ್ಯಪಾನ ಮಾಡಿ ವಾಹನ ಚಲಾಯಿಸಿಕೊಂಡು ಬರುವವರ ಮೇಲೆ ನಿಗಾವಹಿಸಬೇಕು. ಅಲ್ಲದೆ ಹೆಚ್ಚು ವ್ಯಾಪಾರವಾಗುವ ಬಾರ್‍ಗಳ ಮೇಲೂ ನಿಗಾವಹಿಸಿ ಈ ಬಗ್ಗೆ ವರದಿಯನ್ನು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಳ್ಳುವಂತೆ ಅಬಕಾರಿ ಇಲಾಖೆಯ ಡಿಸಿ ಅವರಿಗೆ ಸೂಚನೆ ನೀಡಿದರು. ರಸ್ತೆ ನಿಯಮಗಳು, ರಸ್ತೆಯ ಸುರಕ್ಷತೆ, ರಸ್ತೆ ಗುಂಡಿಗಳು, ಸ್ಪೀಡ್ ಬ್ರೇಕ್ ಅಳವಡಿಕೆ, ಸೈನ್‍ಬೋರ್ಡ್, ರಸ್ತೆ ರಿಪೇರಿ ಸೇರಿದಂತೆ ರಸ್ತೆಯ ಸುರಕ್ಷತೆಯ ಸುಧಾರಣೆಗೆ ದೀರ್ಘಕಾಲೀನ ಹಾಗೂ ಅಲ್ಪಕಾಲೀನ ಕ್ರಿಯಾ ಯೋಜನೆ ರೂಪಿಸಿ ಬರುವ 15ರೊಳಗೆ ಸಲ್ಲಿಸುವಂತೆ ಪೊಲೀಸ್, ಶಿಕ್ಷಣ ಇಲಾಖೆ, ಮಹಾ ನಗರಪಾಲಿಕೆ, ಲೋಕೋಪಯೋಗಿ, ಕೇಶಿಪ್, ಪಿ.ಆರ್.ಇ.ಡಿ. ಸೇರಿದಂತೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಇಲಾಖೆಗಳು ಸಲ್ಲಿಸಬೇಕು ಎಂದರು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಕೇರಳ ಮಾದರಿಯಲ್ಲಿ (ಪಿ.ಎಸ್.ಸಿ.) ವಿದ್ಯಾರ್ಥಿ…
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಪ್ರಯಾಣಿಕರನ್ನು ಸಾಗಾಟ ಮಾಡುವ ಟ್ಯಾಕ್ಟರ್, ಟೆಂಪೋ, ಲಗೇಜು ಆಟೋಗಳು ಸೇರಿದಂತೆ ಸರಕು ವಾಹನಗಳನ್ನು ವಶಕ್ಕೆ ಪಡೆದು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರಕುಗಳನ್ನು ಹೊತ್ತೊಯ್ಯಬೇಕಾಗಿರುವ ಟೆಂಪೋ, ಲಗೇಜು ಆಟೋ, ಟ್ಯಾಕ್ಟರ್‍ಗಳು ಜನರನ್ನು ಸಾಗಾಟ ಮಾಡುತ್ತಿವೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಜಿಲ್ಲೆಯಲ್ಲಿರುವ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರನ್ನು ಸಾಗಾಟ ಮಾಡುವ ಸರಕು ವಾಹನಗಳನ್ನು ವಶಕ್ಕೆ ಪಡೆದು ಸಾರಿಗೆ ಕಾಯ್ದೆ ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡುವಂತೆ ಸಭೆಯಲ್ಲಿ ಹಾಜರಿದ್ದ ವಿವಿಧ ಪೊಲೀಸ್ ಠಾಣೆಗಳ ಇನ್‍ಪೆಕ್ಟರ್‍ಗಳಿಗೆ ಅವರು ಸೂಚನೆ ನೀಡಿದರು. ಸಂತೆ, ಜಾತ್ರೆ ಹಾಗೂ ವಿಶೇಷ ಸಂದರ್ಭಗಳಲ್ಲಿ…
ತುಮಕೂರು: ರಾಜ್ಯ ಚುನಾವಣಾ ಆಯೋಗವು ಜಿಲ್ಲೆಯ ತಿಪಟೂರು ನಗರಸಭೆ, ಕುಣಿಗಲ್ ಹಾಗೂ ಪಾವಗಡ ಪುರಸಭೆ, ತುರುವೇಕೆರೆ ಪಟ್ಟಣ ಪಂಚಾಯತಿ ಹಾಗೂ ತುಮಕೂರು ಮಹಾನಗರಪಾಲಿಕೆಯ 22ನೇ ವಾರ್ಡ್‍ಗೆ ಮೇ 29ರಂದು ಉಪ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದೆ. ವೇಳಾಪಟ್ಟಿ :- ಚುನಾವಣೆಗೆ ಸಂಬಂಧಿಸಿದಂತೆ ಮೇ 9ರಂದು ನೋಟೀಸನ್ನು ಹೊರಡಿಸಲಾಗುವುದು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಮೇ 16 ಕಡೆಯ ದಿನವಾಗಿದ್ದು, ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮೇ 20 ಕಡೆಯದಿನವಾಗಿದೆ. ಮತದಾನದ ಅವಶ್ಯವಿದ್ದರೆ ಮೇ 29ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಮರು ಮತದಾನ ಇದ್ದಲ್ಲಿ ಮೇ 30ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಮತ ಎಣಿಕೆ ಮೇ 31ರಂದು ಬೆಳಿಗ್ಗೆ 8 ಗಂಟೆಗೆ ಆಯಾ ತಾಲ್ಲೂಕು ಕೇಂದ್ರ ಸ್ಥಳಗಳಲ್ಲಿ ನಡೆಯಲಿದೆ. ಚುನಾವಣೆ ನಡೆಯಲಿರುವ…
ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರು ಗುರುವಾರ ನಗರದ ಉತ್ತರಹಳ್ಳಿಯ ಬಿಜಿಎಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಮೂಲದ 84 ವರ್ಷದ ಮಾಸ್ಟರ್ ಹಿರಣ್ಣಯ್ಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಗುರುವಾರ ಬೆಳಗ್ಗೆ 8:30ರ ವೇಳೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಹಿರಣ್ಣಯ್ಯ ಪತ್ನಿ ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ. ಇವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ. ಬೆಳಗ್ಗೆ ನಿಧನರಾದ ಮಾಸ್ಟರ್ ಹಿರಣ್ಣಯ್ಯ ಅವರ ಅಂತ್ಯ ಸಂಸ್ಕಾರ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಸಂಜೆ ನೆರವೇರಿತು. ಅವರ ಮೂವರು ಪುತ್ರರು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ವಿಧಿವಿಧಾನ ಪೂರೈಸಿದರು. ಪುತ್ರರಾದ ಬಾಬು ಹಿರಣ್ಣಯ್ಯ, ಶ್ರೀಕಾಂತ್ ಹಿರಣ್ಣಯ್ಯ ಮತ್ತು ಗುರುನಾಥ್ ಹಿರಣ್ಣಯ್ಯ ಅಂತಿಮ ವಿಧಿವಿಧಾನಗಳನ್ನು ಪೂರೈಸಿದರು. ಕೇವಲ ಕುಟುಂಬಸ್ಥರು ಮತ್ತು ಹಿರಣ್ಣಯ್ಯ ಅವರ ಕೆಲ ಆಪ್ತರ ಉಪಸ್ಥಿತಿಯಲ್ಲಿ…
ತುಮಕೂರು: ಈಗ ರಜಾ ದಿನವಾಗಿರುವುದರಿಂದ ಜಿಲ್ಲೆಯ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿರುವ ಅವ್ಯವಸ್ಥೆಯನ್ನು ಮೇ 20ರೊಳಗಾಗಿ ಸರಿಪಡಿಸಿ ಫೋಟೋ ಸಹಿತ ತಮಗೆ ವರದಿ ಸಲ್ಲಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ನಡೆದ ಜಿಲ್ಲೆಯ ವಸತಿ ನಿಲಯಗಳ ಮೇಲ್ವಿಚಾರಕರು/ಪಾಲಕರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ರಜಾ ದಿನಗಳು ಮುಗಿಯುವುದರೊಳಗೆ ಜಿಲ್ಲೆಯ ಸರ್ಕಾರಿ ಮೆಟ್ರಿಕ್ ಪೂರ್ವ/ಮೆಟ್ರಿಕ್ ನಂತರ ಮತ್ತು ಸರ್ಕಾರಿ ವಸತಿ ನಿಲಯಗಳಲ್ಲಿ ದುರಸ್ಥಿಯಲ್ಲಿರುವ ಶೌಚಾಲಯ, ಅಡುಗೆ ಮನೆ, ಶುದ್ಧ ಕುಡಿಯುವ ನೀರಿನ ಘಟಕ, ವಿದ್ಯಾರ್ಥಿಗಳ ಕೊಠಡಿಗಳನ್ನು ದುರಸ್ಥಿಪಡಿಸಿ ಅಗತ್ಯ ಮೂಲಭೂತ ಸೌರ್ಕಯಗಳನ್ನು ಕಲ್ಪಿಸಬೇಕೆಂದು ಅವರು ನಿರ್ದೇಶನ ನೀಡಿದರು. ನಗರ, ಗ್ರಾಮೀಣ ಪ್ರದೇಶಗಳಲ್ಲಿರುವ ವಸತಿ ನಿಲಯಗಳಲ್ಲಿ ಶೌಚಾಲಯ ಹಾಗೂ ಸ್ನಾನದ ಕೊಠಡಿಗಳಿಗೆ ಮೊದಲ ಆದ್ಯತೆ ನೀಡಬೇಕು. ಪ್ರತಿದಿನ ಸ್ವಚ್ಛತೆ ಕಾಪಾಡಲು ಚಾರ್ಟ್ ಬಳಸಬೇಕು. ಸ್ವಚ್ಛ ಮಾಡುವವರು ಈ ಚಾರ್ಟ್‍ನಲ್ಲಿ ಕಡ್ಡಾಯವಾಗಿ ಸಹಿ ಮಾಡಬೇಕು.…
ತುಮಕೂರು: ನಗರದ ಸರಸ್ವತಿಪುರಂನ ದೇವರಾಜಅರಸು ರಸ್ತೆಯಲ್ಲಿ ಸಂಸದರ ನಿಧಿಯಡಿ ನಿರ್ಮಾಣ ಮಾಡಿರುವ ಶುದ್ಧಕುಡಿಯುವ ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕದ ಕಾರಣ ನೀಡಿ, ಬೀಗ ಹಾಕಲಾಗಿದ್ದು, ಸರಸ್ವತಿಪುರಂ, ಮರಳೂರು, ಅಮರಜ್ಯೋತಿನಗರ ಭಾಗದ ನಾಗರೀಕರು ಕುಡಿಯುವ ನೀರಿಗೆ ಪರದಾಡುವಂತೆ ಆಗಿದೆ. ಕಳೆದ ಡಿಸೆಂಬರ್‍ನಲ್ಲಿ ಉದ್ಘಾಟನೆಯಾಗಿದ್ದ ಈ ಶುದ್ಧ ಕುಡಿಯುವ ನೀರಿನ ಘಟಕ ಹೈಟೆನ್ಷನ್ ವಿದ್ಯುತ್ ತಂತಿಯಡಿ ಇದ್ದು, ಈ ಶುದ್ಧಕುಡಿಯುವ ನೀರಿನ ಘಟಕವನ್ನು ಬೆಂಗಳೂರಿನ ಗುತ್ತಿಗೆದಾರ ರಾಮಾಂಜಿ ಎಂಬುವರು ನಿರ್ವಹಣೆಗೆ ಪಡೆದುಕೊಂಡಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮಾಡುತ್ತಿರುವವರು ಯಾರು ಎಂಬುದರ ಬಗ್ಗೆ ಪಾಲಿಕೆಯಲ್ಲಿಯೂ ವ್ಯಾಪಕ ಚರ್ಚೆಗೆ ಒಳಗಾಗಿತ್ತು. ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ವಹಣೆ ಮಾಡುತ್ತಿರುವವರೇ, ವಿದ್ಯುತ್ ಬಿಲ್ ಭರಿಸಬೇಕು ಎಂದು ಪಾಲಿಕೆ ಆಯುಕ್ತ ಭೂಬಾಲನ್ ಆದೇಶ ನೀಡಿರುವುದರಿಂದ ಅನೇಕ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೀಗ ಹಾಕಲಾಗಿದೆ. ದೇವರಾಜಅರಸು ರಸ್ತೆಯಲ್ಲಿರುವ ಈ ಶುದ್ಧ ಕುಡಿಯುವ ನೀರಿನ ಘಟಕ…
ಕೊರಟಗೆರೆ: ಬಿರುಗಾಳಿಯ ರಭಸಕ್ಕೆ ರೈತನು ಕಷ್ಟಪಟ್ಟು ಬೆಳೆದಿದ್ದ ಬಾಳೆ ತೊಟ ಮತ್ತು ಇಬ್ಬರು ರೈತರ ಮನೆಯ ಮೇಲಿನ 30ಕ್ಕೂ ಹೆಚ್ಚು ಸೀಟುಗಳು ಅರ್ಧ ಕೀಮೀ ದೂರಕ್ಕೆ ಹೋಗುವ ಮೂಲಕ ವಿದ್ಯುತ್ ತಂತಿ ತುಂಡಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ದುಗ್ಗೇನಹಳ್ಳಿ ಗ್ರಾಮದ ರೈತ ಡಕ್ಲಾರಾಂ ಎಂಬುವರ 2ಎಕರೇ ಬಾಳೆ ತೋಟದಲ್ಲಿ 1ಸಾವಿರಕ್ಕೂ ಹೆಚ್ಚು ಬಾಳೆಗಿಡಗಳು ಬಿರುಗಾಳಿಯಿಂದ ನಾಶವಾಗಿ 60ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ. ಇದೇ ಗ್ರಾಮದ ಸಿದ್ದಪ್ಪ ಎಂಬುವರ ಮನೆಯ 15ಶೀಟ್‍ಗಳು ಗಾಳಿಗೆ ಹಾರಿಹೋಗಿವೆ. ರೈತನಿಗೆ ವಾಸಿಸಲು ಮನೆಯಿಲ್ಲದೇ ಕಂಗಲಾಗಿದ್ದಾನೆ. ದುಗ್ಗೇನಹಳ್ಳಿ ಗ್ರಾಮದ ಮತ್ತೋರ್ವ ರೈತ ಮೋಹನ ಎಂಬುವರ ತೋಟದ ಸಮೀಪದ ಜಾನುವಾರುಗಳ ಶೇಡ್‍ನ 15ಅಡಿ ಉದ್ದದ 20ಶೀಟ್‍ಗಳು ಅರ್ಧ ಕೀಮೀ ದೂರಕ್ಕೆ ಹಾರಿಹೋಗಿವೆ. ಬಿರುಸಿನ ಬಿರುಗಾಳಿಗೆ ಶೀಟ್‍ಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದರ ಭಸಕ್ಕೆ ವಿದ್ಯುತ್ ತಂತಿಗಳು ತುಂಡಾಗಿದ್ದು ಯಾವುದೇ ಪ್ರಾಣಪಾಯ…
ತಿಪಟೂರು: ಎಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಬ್ಲಿಕ್ ಪ್ರಾಸಿಕ್ಯೂಟರ್ ಸಿಕ್ಕಿಬಿದ್ದಿದ್ದಾರೆ. 20 ಸಾವಿರ ಲಂಚ ಸ್ವೀಕಾರ ಮಾಡುವಾಗ ರೆಡ್ ಹ್ಯಾಂಡ್ ಅಗಿ ಬಲೆಗೆ ಬಿದ್ದಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ನ್ಯಾಯಾಲಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಪೂರ್ಣಿಮಾ ಅವರು ಕಕ್ಷಿದಾರರಿಂದ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೆಇಬಿಯ ಇಂಜಿನಿಯರ್ ಗುರುಸ್ವಾಮಿ ಅವರ ಬಳಿ ಪಬ್ಲಿಕ್ ಪ್ರಾಸಿಕ್ಯೂಟರ್ ಪೂರ್ಣಿಮಾ ಅವರು 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 20 ಸಾವಿರ ರೂ.ಗಳನ್ನು ಪಡೆಯುವಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಿಪಟೂರು ಟೌನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪೂರ್ಣಿಮಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತುಮಕೂರು: ಜಿಲ್ಲೆಯ 10 ತಾಲ್ಲೂಕುಗಳು ಬರಪೀಡಿತವಾಗಿರುವುದರಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರು ಮೇವಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮಕೈಗೊಳ್ಳಬೇಕೆಂದು ಯೋಜನೆ ಮತ್ತು ಸ್ಯಾಂಖಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ತುಮಕೂರು ಜಿಲ್ಲೆಯಲ್ಲಿ ಬರಪರಿಹಾರ ಹಾಗೂ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಕುರಿತ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬರವಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಇರುತ್ತದೆ. ಎಲ್ಲಿ ಸಮಸ್ಯೆ ಇದೆಯೋ ಅಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ಮಾಡಬೇಕು. ಅಲ್ಲದೆ ಜನರ ಬಳಿಗೆ ಧಾವಿಸಿ ಅವರ ಸಮಸ್ಯೆಗಳನ್ನು ಆಲಿಸಿ ಅವರ ಸಮಸ್ಯೆಗೆ ಸ್ಪಂದಿಸಬೇಕು. ಜಾನುವಾರುಗಳಿಗೂ ನೀರು ಮತ್ತು ಮೇವು ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಅವರು ತಿಳಿಸಿದರು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ:…