Author: News Desk Benkiyabale

ಚಿಕ್ಕನಾಯಕನಹಳ್ಳಿ:     ಲಾಕ್ಡೌನ್ ಸಡಿಲದ ಸಮದರ್ಭದಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಅನುಸರಿಸಬೇಕಾದ ನಿಯಮಗಳ ಬಗ್ಗೆ ತಿಳುವಳಿಕೆ ಸಭೆಯನ್ನು ಪಿಎಸ್‍ಐ ಪಿ. ಶಿವಪ್ಪ ನಡೆಸಿದರು.       ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಭೆಯು ಪಿಎಸೈ ಪಿ. ಶಿವಪ್ಪನವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿ ಕೊರೊನಾ ವೈರಾಣು ವಿರುದ್ದ ಹೋರಾಟದಲ್ಲಿ ಲಾಕ್‍ಡೌನ್ ನಿಯಮ ಜಾರಿಗೆ ಬಂದಿದ್ದು ಈಚೆಗೆ ಇದನ್ನು ಹಂತಹಂತವಾಗಿ ಸಡಿಲಗೊಳಿಸಲಾಗಿದೆ.       ಇದರ ಮುಂದುವರಿಕೆಯ ಭಾಗದಂತೆ ಆಟೋ ಹಾಗೂ ಟ್ಯಾಕ್ಸಿಗಳಿಗೆ ರಸ್ತೆಯಲ್ಲಿ ಓಡಾಡಲು ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲಾಗಿದೆ. ವಾಹನಗಳಲ್ಲಿ ಎಲ್ಲಾ ರೀತಿಯ ದಾಖಲಾತಿಗಳಿರಬೇಕು. ಆಟೋ ಚಾಲಕರಿಗೂ ಹಾಗೂ ಪ್ರಯಾಣಿಕರಿಗೂ ನಡುವೆ ಅಂತರದ ಪಟ್ಟಿಯನ್ನು ಹಾಕಿಕೊಳ್ಳಬೇಕು, ಚಾಲಕ ಹೊರತಾಗಿ ಇಬ್ಬರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ.       ಎಲ್ಲರೂ ಮಾಸ್ಕ್ ದರಿಸುವುದು ಕಡ್ಡಾಯ, ಪ್ರಯಾಣಿಕರನ್ನು ಆಟೋ ಹಾಗೂ ಟ್ಯಾಕ್ಸಿಗಳಿಗೆ ಹತ್ತಿಸಿಕೊಳ್ಳಬೇಕಾದರೆ ಸ್ಯಾನಿಟೈಸರ್ ಬಳಸುವುದು…

Read More

ತುಮಕೂರು:       ನಗರದ ಬಟವಾಡಿ ಮೇಲುಸೇತುವ ಬಳಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವ್ಯಕ್ತಿಯ ಶವ ನೇತಾಡುತ್ತಿದದ್ದು ಕಂಡು ಬಂದಿದೆ.       ಇಂದು ಮುಂಜಾನೆ ಬಡವಾಡಿ ಮೇಲುಸೇತುವೆ ಬಳಿ ಓಡಾಡುತ್ತಿದ್ದ ಜನತೆಯನ್ನು ಈ ಘಟನೆ ಬೆಚ್ಚಿಬಿಳಿಸಿದಂತು ನಿಜ, ಮೇಲುಸೇತುವೆಯ ಎತ್ತರದಲ್ಲಿ ವ್ಯಕ್ತಿಯೊಬ್ಬ ನೇತಾಡುತ್ತಿದ್ದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.       ಇನ್ನೂ ವ್ಯಕ್ತಿಯು ರಾಮನಗರದ ಹಾರೋಹಳ್ಳಿಯ ಮಧು ಎಂದು ಗುರುತಿಸಿಲಾಗಿದೆ (ವ್ಯಕ್ತಿಯ ಬಳಿ ಇದ್ದ ಮೊಬೈಲ್ ಮೂಲಕ ತಿಳಿದುಕೊಳ್ಳಲಾಗಿದೆ) ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

Read More

 ಮಧುಗಿರಿ :       ಸರ್ಕಾರ ನೀರು ಬಿಡಲು ಒಪ್ಪಿದ್ದು, ಶೀಘ್ರದಲ್ಲಿಯೇ ಮಧುಗಿರಿಯ ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಯಲಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.       ಪಟ್ಟಣದ ತಾ.ಪಂ.ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಿಡಿಓಗಳ ಸಭೆಯಲ್ಲಿ ಮಾತನಾಡಿದ ಅವರು ಎರಡನೇ ಅವಧಿಗೆ ಮಧುಗಿರಿಗೆ ಹೇಮೆ ಹರಿಯಲಿದ್ದು, ಪಟ್ಟಣದಲ್ಲಿ ನೀರಿನ ಸಮಸ್ಯೆ ದೂರಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.      ಗ್ರಾಮೀಣ ಭಾಗದಲ್ಲಿ 50 ಖಾಸಗಿ ಕೊಳವೆಬಾವಿಯಿಂದ ನೀರು ಪಡೆದು ಜನರಿಗೆ ನೀಡುತ್ತಿದ್ದು, ತಹಶೀಲ್ದಾರ್ ಡಾ. ವಿಶ್ವನಾಥ್ ರವರು ಹಣ ಬಿಡುಗಡೆಗೆ ವಿಳಂಬ ಮಾಡುತ್ತಿದ್ದಾರೆ ಎಂದು ಪಿಡಿಓಗಳು ಶಾಸಕರ ಗಮನಕ್ಕೆ ತಂದಾಗ, ಕಷ್ಟದಲ್ಲಿ ಹಣ ಸಿಗಲಿದೆ ಎಂಬ ಕಾರಣಕ್ಕೆ ರೈತರು ಸರ್ಕಾರಕ್ಕೆ ನೀರು ಕೊಡುತ್ತಾರೆ. ನೀವು ಹಣ ಬಿಡುಗಡೆ ಮಾಡದಿದ್ದರೆ ಪಿಡಿಓಗಳು ಏನು ಮಾಡಬೇಕು. ಇದರಿಂದ ಸರ್ಕಾರಕ್ಕೂ ನಮಗೂ ಕೆಟ್ಟ ಹೆಸರು ಬರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದಾಗ, ಕೆಲ ಗ್ರಾ.ಪಂ ಗಳು ಹಿಂದಿನ ವರ್ಷ ನೀರು ಪೂರೈಕೆಯಾದ ಬಿಲ್ಲುಗಳನ್ನು…

Read More

 ತುಮಕೂರು:       ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ 10 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡುವ ಗುರಿ ಹೊಂದಲಾಗಿದ್ದು, ಕಳೆದ ಮೇ 21ರೊಳಗೆ ಒಟ್ಟು 55456 ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ತುಮಕೂರು ಜಿಲ್ಲೆ ನರೇಗಾ ಅನುಷ್ಠಾನದಲ್ಲಿ ದಾಪುಗಾಲು ಹಾಕಿದೆ.        ಪಾವಗಡ ತಾಲೂಕಿನ 39 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವೈಯಕ್ತಿಕ ಹಾಗೂ ಸಮುದಾಯದ 338 ಕಾಮಗಾರಿಗಳು ಪ್ರಗತಿಯಲ್ಲಿದ್ದು ಜಿಲ್ಲೆಗೆ 5ನೇ ಸ್ಥಾನದಲ್ಲಿದೆ.    ಕ್ಯಾತಗಾನಕೆರೆ ಹೂಳೆತ್ತುವ ಕಾಮಗಾರಿ:-        ಪಾವಗಡ ತಾಲೂಕು ಬಿ.ಕೆ ಹಳ್ಳಿ ಗ್ರಾಮಪಂಚಾಯಿತಿ ಕ್ಯಾತಗಾನಹಳ್ಳಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಯನ್ನು 3 ಲಕ್ಷ ವೆಚ್ಚದಲ್ಲಿ ಕೈಗೊಂಡಿದ್ದು, ಸಾಮಾಗ್ರಿ ವೆಚ್ಚ-20,000 ರೂ. ಕೂಲಿ ವೆಚ್ಚ 2.80 ಲಕ್ಷ ರೂಪಾಯಿಗಳು ಈವರೆಗೆ 1018 ಮಾನವ ದಿನಗಳು ಸೃಜನೆಯಾಗಿದ್ದು, ಗ್ರಾಮದ ಸುತ್ತಮುತ್ತಲಿನ 11 ಜನರ 16 ಗುಂಪುಗಳಿಗೆ…

Read More

ತುಮಕೂರು :      ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಹೆಬ್ಬೂರು ಹೋಬಳಿಯ ಬಳ್ಳಗೆರೆ ಗ್ರಾಮ ಪಂಚಾಯತಿ ಮಾಯಣ್ಣನ ಪಾಳ್ಯದಲ್ಲಿ ಕರೋನ ಸೋಂಕು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ವಿಷಯ ತಿಳಿದ ತಕ್ಷಣ ಆ ಗ್ರಾಮಕ್ಕೆ ಮಾಜಿ ಶಾಸಕರಾದ ಬಿ.ಸುರೇಶ್ ಗೌಡ ರವರು ಭೇಟಿ ನೀಡಿಸರ್ಕಾರ ಯಾವ ಯಾವ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ ಎಂದು ಪರಿಶೀಲಿಸಿದರು.       ಎಂಬುದರ ಬಗ್ಗೆ ತಾಲ್ಲೂಕು ದಂಡಾಧಿಕಾರಿ, ತಾಲ್ಲೂಕು ಪಂಚಾಯತಿ EO, ತಾಲ್ಲೂಕು ಆರೋಗ್ಯಅಧಿಕಾರಿ, ಪೊಲೀಸ್ ವೃತ್ತ ನಿರೀಕ್ಷಕರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ನರ್ಸ್ ಹಾಗೂ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರೊಂದಿಗೆ ಪರಿಶೀಲನೆ ನೆಡಸಿ, ಗ್ರಾಮಸ್ಥರಿಗೆ ಕೋವಿಡ್ 19 ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರುವುದರೊಂದಿಗೆ ಜೀವ ಹಾಗೂ ಜೀವನವನ್ನು ಕಾಪಾಡಿಕೊಳ್ಳುವಂತೆ ಹಾಗೂ ಏನೇ ಆದರೂ ದೃತಿಗೆಡಬೇಡಿ, ನಿಮ್ಮೊಂದಿಗೆ ನಾನು ಹಾಗೂ ನಮ್ಮ ಸರ್ಕಾರ ಸದಾ ನಿಮ್ಮ ಜೊತೆ ಇದೆ ಎಂದು ಜಾಗೃತಿ ಮೂಡಿಸಲಾಯಿತು.

Read More

ತುಮಕೂರು :       ಜಿಲ್ಲೆಯಲ್ಲಿ ಇಂದು ಒಂದೇ ದಿನ ಹೊಸದಾಗಿ‌ 9 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು ಸೊಂಕಿತರ ಸಂಖ್ಯೆ 25 ಕ್ಕೆರಿದೆ ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.       ಮುಂಬೈ ನಿಂದ ತುರುವೆಕೆರೆಗೆ ವಾಪಾಸಾಗಿರುವ ನಾಲ್ಕು ಜನರಿಗೆ ಕೋವಿಡ್ 19 ದೃಡಪಟ್ಟಿದ್ದು ಪಿ 1611 ಹೆಣ್ಣು 29 ವರ್ಷ, ಪಿ 1612 ಗಂಡು 39 ವರ್ಷ, ಪಿ1613 ಗಂಡು 10 ವರ್ಷ, ಪಿ 1614 ಗಂಡು 21 ವರ್ಷ ಎಂದು ಗುರುತಿಸಲಾಗಿದೆ. ನಾಲ್ವರನ್ನ ತುರುವೆಕೆರೆಯಲ್ಲಿ ಕ್ವಾರೈಂಟೈನ್ ಮಾಡಲಾಗಿತ್ತು ನೆನ್ನೆ ತುಮಕೂರಿನ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.       ಮುಂಬೈ ಮಹಾರಾಷ್ಟ್ರದಿಂದ ತುಮಕೂರಿಗೆ ಬಂದಿದ್ದ ಇಬ್ಬರಿಗೆ ಪಾಸಿಟಿವ್ ಬಂದಿದ್ದು ಪಿ 1615 ಗಂಡು 08 ವರ್ಷ, ಪಿ 1623 ಗಂಡು 60 ವರ್ಷ ಎಂದು ಗುರುತಿಸಲಾಗಿದೆ. ಕ್ವಾರೈಂಟೈನ್ ನಲ್ಲಿದ್ದ ಇವರಿಗೆ ಇಂದು ಪಾಸಿಟಿವ್ ಬಂದಿದ್ದು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.  …

Read More

ತುಮಕೂರು:       ತುಮಕೂರು ತಾಲ್ಲೂಕಿನ (ಸಬ್ ರಿಜಿಸ್ಟ್ರಾರ್) ಉಪನೋಂದಣಾಧಿಕಾರಿಗಳ ಕಛೇರಿಯ ನಿರ್ವಹಣೆಯಲ್ಲಿರುವ ಲೋಪದಿಂದ ಸರ್ಕಾರಕ್ಕೆ ನಷ್ಟವಾಗುತ್ತಿದ್ದು, ಸರ್ಕಾರದ ಗಮನಹರಿಸಬೇಕೆಂದು ಮನವಿ ಮಾಡಿದ್ದಾರೆ.       ತುಮಕೂರು ತಾಲ್ಲೂಕಿನಲ್ಲಿನ (ಸಬ್‍ರಿಜಿಸ್ಟ್ರಾರ್) ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ 3 ಜನ ಸಬ್‍ರಿಜಿಸ್ಟ್ರಾರ್‍ಗಳು ಇರುವುದು ಸರಿಯಷ್ಟೆ. ಆದರೆ ಈ 3 ಸಬ್‍ರಿಜಿಸ್ಟ್ರಾರ್‍ಗಳಲ್ಲಿ ಒಬ್ಬರು ಶ್ರೀರಾಘವೇಂದ್ರ ಎಂಬುವುವರು ಮಾರ್ಚ್ ತಿಂಗಳಿನಿಂದ ಕರ್ತವ್ಯಕ್ಕೆ ಹಾಜರಾಗಿಲ್ಲ. ಪ್ರತಿಯೊಬ್ಬ ಅಧಿಕಾರಿಗಳಿಗೆ ಡಿಜಿಟಲ್ ಸಿಗ್ನೇಚರ್ ಸಾಧನವನ್ನು ನೀಡಿದ್ದು. ಮೇ20ರವರಿಗೂ ಇದನ್ನು ನವೀಕರಿಸಿಕೊಂಡಲ್ಲ ಎಂಬ ವಿಷಯವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.       ತುಮಕೂರು ತಾಲ್ಲೂಕಿನಲ್ಲಿ ಸುಮಾರು 3000-4000ರಷ್ಟು ಜನ ಋಣಭಾರ ದೃಡೀಕರಣ ಪತ್ರಕ್ಕೆ ಮನವಿಸಲ್ಲಿಸಿದ್ದು. ಸಾಫ್ಟ್‍ವೇರ್ ಸರಿಯಿಲ್ಲ, ಡಿಜಿಟಲ್ ಕೀ ಇಲ್ಲ ಎಂದು ಹೇಳುತ್ತಾ ಸುಮಾರು 4 ತಿಂಗಳ ಹಿಂದಿನಿಂದಲೂ ಇ.ಸಿ. ಕೊಡುತ್ತಿಲ್ಲ. ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಕಳೆದ ಒಂದು ವಾರದಿಂದ ಪ್ರಾರಂಭ ಮಾಡಿರುತ್ತಾರೆ. ಡಿಜಿಟಲ್ ಕೀ ಇಲ್ಲ ಎಂದು ಇ.ಸಿ. ಕೊಡುತ್ತಿಲ್ಲ. ಸರ್ಕಾರ ರೈತರಿಗೆ ಕಿಸಾನ್ ಕಾರ್ಡು, ಬೆಳೆಸಾಲ,…

Read More

ಕೊರಟಗೆರೆ:       ಕೃಷಿ ಸಚಿವರ ಸಹಾಯವಾಣಿಯು ಫಲ ನೀಡಲಿಲ್ಲ. ತೋಟಗಾರಿಕೆ ಇಲಾಖೆಯಿಂದ ಸ್ಪಂದನೆಯೇ ಸಿಕ್ಕಿಲ್ಲ. ಕಂದಾಯ ಇಲಾಖೆಯು ಅಂತರ್‍ಜಿಲ್ಲಾ ಪಾಸ್ ನೀಡಲಿಲ್ಲ. ತುಮಕೂರು ಜಿಲ್ಲಾಡಳಿತ ರೈತನ ಮನವಿಗೆ ಕ್ಯಾರೇ ಎನ್ನದ ಪರಿಣಾಮ ಪಾಲಿಹೌಸ್‍ನಲ್ಲಿ ಬೆಳೆದಿರುವ ಕೋಟ್ಯಾಂತರ ರೂ ಮೌಲ್ಯದ ಹತ್ತಾರು ಬಗೆಯ ಜರ್ಬೇರಾ ಮತ್ತು ಕಾರ್ನೇಷನ್ ಹೂಗಳಿಗೆ ಮಾರುಕಟ್ಟೆ, ವಹಿವಾಟು ಹಾಗೂ ಬೇಡಿಕೆ ಇಲ್ಲದೇ ತಿಪ್ಪೆಗೆ ಕಸವಾಗಿರುವ ಘಟನೆ ನಡೆದಿದೆ.       ಕಲ್ಪತರುನಾಡು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದ ಹೂವು ಬೆಳೆಗಾರ ಗಿರೀಶ್ ಎಂಬಾತ ತನ್ನ 10ಎಕರೇ ಜಮೀನಿನಲ್ಲಿ 5ಕೋಟಿಗೂ ಅಧಿಕ ಬಂಡವಾಳ ಹೂಡಿಕೆ ಮಾಡಿ ಪಾಲಿಹೌಸ್ ನಿರ್ಮಾಣ ಮಾಡಿದ್ದಾರೆ. ಶುಭ ಸಮಾರಂಭದ ವೇದಿಕೆ ಮತ್ತು ದೇವಾಲಯದ ಅಲಂಕಾರಕ್ಕೆ ಬಳಕೆಯಾಗುವ ಡಿಸೈನ್ ಹೂವು ಕೊರೊನಾ ಲಾಕ್‍ಡೌನ್ ಸಂಕಷ್ಟದಿಂದ ರೈತನಿಗೆ 80ಲಕ್ಷಕ್ಕೂ ಅಧಿಕ ರೂ ನಷ್ಟವಾಗಿದೆ.       ರಾಷ್ಟ್ರೀಯ ತೋಟಗಾರಿಕಾ ಮಿಷನ್ ಮತ್ತು ಮಂಡಳಿಯ ನೆರವಿನಿಂದ ಕೃಷಿಕ ಕೋಳಾಲ ಗಿರೀಶ್ ಕಳೆದ…

Read More

ಚಿಕ್ಕನಾಯಕನಹಳ್ಳಿ:       ಚಿರತೆ ದಾಳಿಗೆ ವ್ಯಕ್ತಿಯೊಬ್ಬನಿಗೆ ತೀವ್ರಗಾಯಗಳಾದ ಘಟನೆ ತಾಲ್ಲೂಕಿನ ಮದನಮಡು ಗ್ರಾಮ ಬಳಿ ವರದಿಯಾಗಿದೆ.       ತಾಲ್ಲೂಕಿನ ಕಂದಿಕೆರೆ ಹೋಬಳಿ ಮದನಮಡು ಗ್ರಾಮದ ಸೀಡ್ಯಕೆರೆ ಬಳಿ ಬುಧವಾರ ಮಧ್ಯಾಹ್ನ 12ಗಂಟೆ ಸಮಯದಲ್ಲಿ ತನ್ನ ಮೇಕೆ, ಕುರಿ ಹಾಗೂ ದನಗಳನ್ನು ಮೇಯಿಸುತ್ತಿದ್ದ ಮೂಡ್ಲಯ್ಯನ ಮೇಲೆ ಚಿರತೆದಾಳಿ ಮಾಡಿದಾಗ ಆತನು ತನ್ನಲ್ಲಿದ್ದ ಮಚ್ಚಿನಿಂದ ಎದುರಿಸಿದಾಗ ಬೆದರಿ ಓಡಿಹೋಗಿದ್ದ ಚಿರತೆ ತಕ್ಷಣವೇ ಹೊಂಚುಹಾಕಿ ಮತ್ತೆ ಆತನ ಮೇಲೆರಗಿದ ಪರಿಣಾಮ ಆತನ ತಲೆಯ ಹಿಂಭಾಗ ಮತ್ತು ತಲೆಯ ಮೇಲೆ ಹಾಗೂ ಕಿವಿಗಳಿಗೆ ತೀವ್ರ ಗಾಯವಾಗಿದೆ.       ಈತನ ಕಿರುಚಾಟಕ್ಕೆ ಅಕ್ಕಪಕ್ಕದ ತೋಟದವರು ಬರುವುದನ್ನು ಕಂಡು ಚಿರತೆ ಓಡಿಹೋಗಿದೆ. ತೀವ್ರವಾಗಿ ಗಾಯಗೊಂಡ ಮದನಮಡು ವಾಸಿ ಮೂಡ್ಲಯ್ಯನಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.       ಈ ಭಾಗದಲ್ಲಿ ಚಿರತೆಹಾವಳಿ ಆಗಾಗ್ಗೆ ಕಂಡುಬಂದಿದ್ದು ಕಳೆದ ಒಂದು ತಿಂಗಳಹಿಂದೆ ಈತನ ಮೇಕೆಯೊಂದನ್ನು ಹೊತ್ತೊಯ್ದಿತ್ತು ಮತ್ತು ಸಮೀಪದ ಗಳಿಕೆಕೆರೆ ಬಳಿವ್ಯಕ್ತಿಯೊಬ್ಬನ…

Read More

ತುಮಕೂರು:       ಮುಂಬೈನಿಂದ ವಾಪಾಸ್ಸಾಗಿರುವ 58 ವರ್ಷದ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.       ನಗರದ ಖಾದರ್ ನಗರದ ನಿವಾಸಿಯಾದ 58 ವರ್ಷದ ವ್ಯಕ್ತಿ ಲಾರಿ ಚಾಲಕನಾಗಿದ್ದು, ಮುಂಬೈನಿಂದ ವಾಪಾಸ್ಸಾಗಿ ಮನೆಯಲ್ಲಿದ್ದ ಇವರನ್ನ ಪತ್ತೆಹಚ್ಚಿ ಕ್ವಾರೆಂಟೈನ್ ಮಾಡಲಾಗಿತ್ತು. ಗುರುವಾರ ಆತನ ಪರೀಕ್ಷಾ ವರದಿ ಬಂದಿದ್ದು ಪಾಸಿಟೀವ್ ಇರುವುದು ದೃಡಪಟ್ಟಿದೆ. ಸೋಂಕಿತ ವ್ಯಕ್ತಿ ಪಿ 1561 ಎಂದು ಗುರುತಿಸಲಾಗಿದ್ದು, ವ್ಯಕ್ತಿ ವಾಸವಿರುವ ಖಾದರ್ ನಗರವನ್ನ ಕಂಟೆನ್‍ಮೆಂಟ್ ಝೋನ್ ಗಿ ಪರಿವರ್ತಿಸಲಾಗಿದೆ. ಸೋಂಕಿತನ ಜೊತೆ ಹೆಂಡತಿ ಮಕ್ಕಳು ಮನೆಯಲ್ಲಿಯೇ ಇದ್ದು ಆವರನ್ನು ಕೂಡ ಕ್ವಾರೆಂಟೈನ್‍ನಲ್ಲಿ ಇಡಲಾಗಿದೆ.       ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 16 ಸೋಂಕಿತರು ಪತ್ತೆಯಾಗಿದ್ದು 5 ಜನರು ಗುಣ ಮುಖರಾಗಿದ್ದಾರೆ ಇಬ್ಬರು ಮೃತಪಟ್ಟಿದ್ದಾರೆ. 9 ಜನರು ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.       ಒಂದೆಡೆ ಇಡೀ ವಿಶ್ವದಲ್ಲಿಯೇ ಪ್ರತಿದಿನ ಲಕ್ಷಾಂತರ ಜನರು…

Read More