ತುಮಕೂರು: ತುಮಕೂರು ಜಿಲ್ಲೆಯಲ್ಲಿ ಕೋವಿಡ್-19ರ ಸೋಂಕಿನಿಂದ ಮರಣ ಉಂಟಾಗದಂತೆ ಎಚ್ಚರವಹಿಸಿ ಉತ್ತಮವಾಗಿ ಚಿಕಿತ್ಸೆ ನೀಡಲು ಕ್ರಮ ವಹಿಸುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಇಲ್ಲಿಯವರೆಗೂ ಮೂರು ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಪೈಕಿ ನೆಲಮಂಗಲ ತಾಲ್ಲೂಕಿನ ಪಿ-1686 55ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ಭಾನುವಾರ ವರದಿಯಾಗಿದೆ ಎಂದರು. ತುಮಕೂರು ಜಿಲ್ಲೆಯಲ್ಲಿ ಕೋವಿಡ್-19ರ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ ಸಚಿವರು, ಕೊರೋನಾ ಸೋಂಕಿತರಿಗೆ ಉತ್ತಮವಾದ ಚಿಕಿತ್ಸೆಯನ್ನು ನೀಡಿ ಸಾವು ಪ್ರಕರಣಗಳು ಸಂಭವಿಸದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು. ಹೇಮಾವತಿ ಹಾಗೂ ಎತ್ತಿನ ಹೊಳೆ ಯೋಜನೆಯ ಅನುಷ್ಠಾನ/…
Author: News Desk Benkiyabale
ಚಿಕ್ಕನಾಯಕನಹಳ್ಳಿ: ಈವರೆಗೆ ತಾಲ್ಲೂಕಿನಲ್ಲಿ 12 ಮಂದಿಯನ್ನು ಮಾತ್ರ ಕ್ವಾರಂಟೈನ್ ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿ ಶ್ರೀನಿವಾಸಾಚಾರ್ಯ ತಿಳಿಸಿದರು. ಈಚೆಗೆ ತಾಲ್ಲೂಕಿನ ಹುಳಿಯಾರಿನಲ್ಲಿ ಕಾಣಿಸಿಕೊಂಡ ಹೊರಗಡೆಯಿಂದ ಬಂದಂತಹ ವ್ಯಕ್ತಿಗಳ ಬಗ್ಗೆ ತಾಲ್ಲೂಕಿನಾದ್ಯಂತ ಉಹಾಪೋಹ ವ್ಯಕ್ತವಾಗಿದ್ದ ಹಿನ್ನಲೆಯಲ್ಲಿ ಈ ಕುರಿತು ಸ್ಪಷ್ಣನೆ ನೀಡಿದರು. ಟ್ರಾವಲರ್ ಹಿಸ್ಟರಿಯಡಿ ಈ ನಾಲ್ವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇವರು ಶಂಕಿತರೇ ಹೊರತು ಸೋಂಕಿತರಲ್ಲ ಹಾಗೂ ಇವರಾರಿಗೂ ಯಾವುದೇ ಸೋಂಕಿನ ಲಕ್ಷಣಗಳೂ ಕಂಡುಬಂದಿಲ್ಲವೆಂದು ಸ್ಪಷ್ಣನೆ ನೀಡಿದರು. ಜನರು ವದಂತಿಗಳನ್ನು ನಂಬಬೇಡಿ ಹಾಗೂ ಯಾರೂ ಗಾಬರಿಪಡುವ ಅವಶ್ಯಕತೆಯಿಲ್ಲವೆಂದರು. ಈವರೆಗೆ ತಾಲ್ಲೂಕಿನಲ್ಲಿ 12 ಮಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಪಟ್ಟಣದ ಹಾಸ್ಟಲ್‍ನಲ್ಲಿ ನಾಲ್ವರು, ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ವರು ಹಾಗೂ ಹುಳಿಯಾರಿನಲ್ಲಿ ನಾಲ್ಕು ಮಂದಿಯನ್ನು ಇರಿಸಲಾಗಿದೆ. ಬಾಲಕಿಯರ ಹಾಸ್ಟಲ್ ಪಟ್ಟಣದೊಳಗಿರುವುದರಿಂದ ಗಾಬರಿಪಡುವ ಅಗತ್ಯವಿಲ್ಲ ಈವರೆಗೆ ಯಾವುದೇ ಸೋಂಕಿನ ಪ್ರಕರಣವಾಗಿಲ್ಲವೆಂದರು. ಎರಡು ಪ್ರಕರಣಗಳಿಂದ ಗೊಂದಲ: ತಾಲ್ಲೂಕಿನಲ್ಲಿ ಯಾವುದೇ ಪಾಸಿಟೀವ್ ಪ್ರಕರಣ…
ತುಮಕೂರು: ಕೊರೊನಾ ಮಹಾಮಾರಿ ಅಟ್ಟಹಾಸ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಮುಂದುವರೆದಿರುವುದರಿಂದ ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಉಲ್ ಫಿತುರ್ ರಂಜಾನ್ ಹಬ್ಬವನ್ನು ತಮ್ಮ ತಮ್ಮ ಮನೆಗಳಲ್ಲೇ ಸರಳವಾಗಿ ಆಚರಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ತಮ್ಮ ತಮ್ಮ ಮನೆಗಳಲ್ಲೇ ಹೊಸ ಉಡುಪುಗಳನ್ನು ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆ ಸಲ್ಲಿಸಿದರು. ಯಾರೊಬ್ಬರೂ ಈದ್ಗಾ ಮೊಹಲ್ಲಾಗೆ ತೆರಳದೆ ಮನೆಗಳಲ್ಲೇ ಹಬ್ಬವನ್ನು ಸರಳವಾಗಿ ಆಚರಿಸಿದ್ದು ಕಂಡು ಬಂತು. ಮಾಜಿ ಶಾಸಕ ಡಾ.ರಫೀಕ್‍ಅಹಮದ್ ಅವರು ಜಯನಗರದ ತಮ್ಮ ನಿವಾಸದಲ್ಲಿ ಕುಟುಂಬದ ಸದಸ್ಯರೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಿದರು. ನಂತರ ಮಾತನಾಡಿದ ಡಾ. ರಫೀಕ್‍ಅಹಮದ್ ಅವರು, ನಾಡಿನ ಸಮಸ್ತ ಜನತೆಗೆ ಹಾಗೂ ಮುಸ್ಲಿಂ ಬಾಂಧವರಿಗೆ…
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಸುತ್ತಲಿನ ಇತರೆ ತಾಲ್ಲೂಕುಗಳಿಂದ ಸೋಂಕಿತರ ವರದಿ ಪ್ರಕಟವಾಗುತ್ತಿದ್ದಂತಯೇ ಪಟ್ಟಣ ಹಾಗೂ ಗ್ರಾಮಗಳಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ. ಭೀತಿ ಹುಟ್ಟಿಸಿದ ಮಹಾರಾಷ್ಟ್ರ ಸಂಪರ್ಕಿತ: ಮಾವಿನ ಹಣ್ಣಿನ ಲೋಡಿನೊಂದಿಗೆ ಮಹಾರಾಷ್ಟ್ರದ ಸೊಲಾಪುರಕ್ಕೆ ತೆರಳಿ ಸೋಮವಾರ ಬೆಳಿಗ್ಗೆ ವಾಪಸ್ ಬಂದು ಪಟ್ಟಣದ ಮನೆಯಲ್ಲಿದ್ದ ವ್ಯಕ್ತಿಯ ಬಗ್ಗೆ ಸ್ಥಳೀಯ ಪೊಲೀಸರು, ಆರೋಗ್ಯ ಸಿಬ್ಬಂದಿಯೊಂದಿಗೆ ವಿಚಾರಿಸಲು ಹೋದಾಗ ಆತನು ನಾನು ಅಲ್ಲಿಗೇ ಹೋಗೆಇಲ್ಲ ಸಾಕ್ಷಿಕೊಡಿ ಎಂದು ಬಂದವರನ್ನು ದಬಾಯಿಸಿ ವಾಪಸ್ ಕಳುಹಿಸಿದ ಪ್ರಸಂಗ ಪಟ್ಟಣದಲ್ಲಿ ಸೋಮವಾರ ನಡೆದಿದೆ. ಈ ಪ್ರಕರಣದ ಬಗ್ಗೆ ಪತ್ರಿಕೆ ಸತ್ಯಾಸತ್ಯತೆಯ ಮಾಹಿತಿಯ ಬೆನ್ನೆತ್ತಿದಾಗ ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಆರೋಗ್ಯ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಲು ಮುಂದಾದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಬಿ. ತೇಜಸ್ವಿನಿಯಯವರು ಮಾಹಿತಿ ನೀಡಿ ಈ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯಂತೆ ಆತನು ಮಹಾರಾಷ್ಟ್ರಕ್ಕೆ ಹೋಗಬಂದಿರುವುದು ದೃಢಪಟ್ಟಿದೆ ಆ ವ್ಯಕ್ತಿಯನ್ನು ತಪಾಸಣೆಗೊಳಪಡಿಸಲು ಆದೇಶಿಸಿದ್ದಾರೆ. ಅಕ್ಕ ಪಕ್ಕದ ತಾಲ್ಲೂಕಿನಲ್ಲಿ…
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ ಇಬ್ಬರು ವ್ಯಕ್ತಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ, ಕೆ. ರಾಕೇಶ್‍ಕುಮಾರ್ ಅವರು ತಿಳಿಸಿದರು. ಗುಜರಾತ್ ರಾಜ್ಯದಿಂದ ಮೇ 5ರಂದು ಪಾವಗಡ ತಾಲ್ಲೂಕಿಗೆ ಆಗಮಿಸಿದ್ದ 13 ಜನರ ಪೈಕಿ 3ಮಂದಿಗೆ ಸೋಂಕು ದೃಢಪಟ್ಟಿತ್ತು ಆದರೆ ಇದೀಗ 12ದಿನದ ಮಾದರಿ ಪರೀಕ್ಷೆಯಲ್ಲಿ 22ವರ್ಷದ ಪಿ-1970, ಮತ್ತೊಬ್ಬರಿಗೆ ಸೋಂಕು ದೃಢಪಟ್ಟಿದೆ ಹಾಗೂ ಮಹಾರಾಷ್ಟ್ರದ ನಾಂದೇಡ್‍ನಿಂದ ಮೇ19ರಂದು ತಿಪಟೂರು ತಾಲ್ಲೂಕಿಗೆ ಬಂದಿರುವ 50ವರ್ಷದ ಟ್ರಕ್ ಚಾಲಕರಾಗಿದ್ದ ಪಿ-1971 ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದೆ, ಇಬ್ಬರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು. ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಕ್ವಾರೆಂಟೈನ್‍ನಲ್ಲಿ ಇಡಲು ಕ್ರಮವಹಿಸಲಾಗಿದೆ. ತಿಪಟೂರಿನ ಗಾಂಧಿನಗರವನ್ನು ಹೊಸದಾಗಿ ಕಂಟೈನ್ಮ್‍ಂಟ್ ಜೋನ್ ಆಗಿ ಘೋಷಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ಇಂದೆ ದಾಖಲಾಗಿದ್ದ ಸೋಂಕಿತ ಪ್ರಕರಣಗಳಾದ ಪಿ-1688…
ಮಧುಗಿರಿ : ಕರೋನಾ ಸೋಂಕು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದ್ದು, ಜಿಲ್ಲೆಯ ಸುಮಾರು 1500 ಕ್ಕೂ ಹೆಚ್ಚು ಉಪನ್ಯಾಸಕರು ದ್ವಿತೀಯ ಪಿಯುಸಿ ಮೌಲ್ಯಮಾಪನಕ್ಕೆ ಬೆಂಗಳೂರಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ದ್ವಿತೀಯ ಪಿಯು ಮೌಲ್ಯ ಮಾಪನಕ್ಕೆ ಒಟ್ಟು 4 ಕೇಂದ್ರಗಳಾಗಿ ವಿಭಾಗಿಸಲಾಗಿದ್ದು, ಬೆಂಗಳೂರಿನ ವಿಭಾಗಕ್ಕೆ ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ ವಿಭಾಗದ ಉಪನ್ಯಾಸಕರು ಒಳಗೊಂಡಿದ್ದು, ಇವರೆಲ್ಲರೂ ಬೆಂಗಳೂರಿನ ವಿವಿಧ ಕೇಂದ್ರಗಳಿಗೆ ತೆರಳಿ ಮೌಲ್ಯಮಾಪನ ನಡೆಸಬೇಕಿದೆ. ಈ ಮೌಲ್ಯ ಮಾಪನವು ಸುಮಾರು 15 ದಿನಗಳವರೆಗೂ ನಡೆಯಲಿದೆ. ಆತಂಕ ಏಕೆ : ಲಾಕ್‍ಡೌನ್ ತೆರವಾದ ದಿನದಿಂದಲೂ ರಾಜ್ಯದಲ್ಲಿ ಸೊಂಕಿತರ ಪ್ರಕರಣಗಳು ಹೆಚ್ಚಾಗಿ ವರದಿ ಯಾಗುತ್ತಿದ್ದು, ಯಾವುದೇ ಅಪಾಯವಿಲ್ಲ ಎಂದುಕೊಂಡಿದ್ದ ಗ್ರೀನ್ ಜೋನ್ ಕೇಂದ್ರಗಳು ಈಗ ರೆಡ್ ಜೋನ್‍ಗಳಾಗಿ ಮಾರ್ಪಡುತ್ತಿದ್ದು, ಈಗ ಮೌಲ್ಯಮಾಪನಕ್ಕೆ ಬೆಂಗಳೂರಿಗೆ ತೆರಳಿದಾಗ ವಿವಿಧ ಜಿಲ್ಲೆಗಳಿಂದ ಉಪನ್ಯಾಸಕರು ಹಾಜರಾಗಲಿದ್ದು, ಒಂದೊಂದು ವಿಷಯಕ್ಕೆ 150 ಕ್ಕೂ ಹೆಚ್ಚು ಉಪನ್ಯಾಸಕರು ಮೌಲ್ಯಮಾಪನದಲ್ಲಿ ಭಾಗವಹಿಸಬೇಕಿದೆ.…
ತುರುವೇಕೆರೆ: ತುರುವೇಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೊನಾ ಸಾರ್ವನಿಕರ ಹಿತದೃಷ್ಟಿಯಿಂದ ಕ್ಷೇತ್ರದಾದ್ಯಂತ ಶನಿವಾರದಿಂದಲೇ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಅಂಗಡಿಮುಂಗಟ್ಟುಗಳನ್ನು ತೆರೆದು ಅನಂತರ ಜನತಾ ಕಫ್ರ್ಯೂ ಜಾರಿ ಮಾಡುವಂತೆ ತಾಲ್ಲೂಕು ಆಡಳಿತಕ್ಕೆ ಸೂಚಿಸಲಾಗಿದೆಂದು ಶಾಸಕ ಮಸಾಲಜಯರಾಮ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ತುರುವೇಕೆರೆ ಮತ್ತು ಗುಬ್ಬಿ ತಾಲ್ಲೂಕಿನ ಪೊಲೀಸ್, ಆರೋಗ್ಯ ಇಲಾಖೆ ಹಾಗು ತಾಲ್ಲೂಕು ಆಡಳಿತದ ಜಂಟಿ ಸಭೆ ನಡೆಸಿ ಮಾತನಾಡಿದರು. ಬಾಂಬೆಯಿಂದ ಬಂದು ತಾಲ್ಲೂಕಿನಲಿ ಕ್ವಾರಂಟೈನ್‍ನಲ್ಲಿದ್ದ 4 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ ತಾಲ್ಲೂಕಿನ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ವರ್ತಕರು, ಬೀದಿಬದಿ ವ್ಯಾಪಾರಿಗಳು ಹಾಗು ವಿವಿಧ ಸಂಘಸಂಸ್ಥೆಗಳಿಂದ ಸಲಹೆ ಪಡೆದು ಈ ಹಿಂದೆ ಇದ್ದ ನಿಗಧಿತ ಅವಧಿಯ ಜನತಾ ಕಫ್ರ್ಯೂವನ್ನು ಮೇ23ರಿಂದ 30 ತನಕ ಜಾರಿಗೆ ತರಲು ಎಲ್ಲರ ಒಮ್ಮತದ ಮೇರೆಗೆ ನಿರ್ಧಾರಕ್ಕೆ ಬರಲಾಗಿದೆ. ಔಷಧಿ…
ಮಧುಗಿರಿ: ಅಧಿಕಾರ ಇದ್ದರೂ, ಇಲ್ಲದಿದ್ದರೂ ನಾವು ಎಂದಿಗೂ ಬಡವರ ಪರ ಕೆಲಸ ನಿರ್ವಹಿಸುತ್ತೇವೆ ಎಂದು ರಾಷ್ಟ್ರೀಯ ಕ್ರಿಬ್ಕೋ ನಿರ್ದೇಶಕ ಆರ್. ರಾಜೇಂದ್ರ ತಿಳಿಸಿದರು. ಪಟ್ಟಣದ ಎಂ.ಎನ್.ಕೆ ಸಮುದಾಯ ಭವನದಲ್ಲಿ ಶನಿವಾರ ಬಡವರ ಬಂದು ಯೋಜನೆಯಡಿಯಲ್ಲಿ 62 ಜನ ಬೀದಿಬದಿ ವ್ಯಾಪಾರಿಗಳಿಗೆ 6.20 ಲಕ್ಷ ಸಾಲದ ಚೆಕ್ ವಿತರಿಸಿ ಮಾತನಾಡಿದರು. ಲಾಕ್‍ಡೌನ್‍ನಿಂದಾಗಿ ಬೀದಿಬದಿ ವ್ಯಾಪಾರಿಗಳಿಗೆ ಮತ್ತು ಬಡವರಿಗೆ ವ್ಯಾಪಾರ ವಹಿವಾಟು ನಡೆಸಲು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು, ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಿಗಳು ಜೀವನ ನಿರ್ವಹಣೆಗೆ ಸಾಲ ಮಾಡಿ ದಲ್ಲಾಳಿಗಳ ಕೈಗೆ ಸಿಲುಕಿ ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಡಿಸಿಸಿ ಬ್ಯಾಂಕಿನ ವತಿಯಿಂದ ಸಾಲ ಸೌಲಭ್ಯ ಕಲಿಸಲಾಗಿದ್ದು, ಈ ಯೋಜನೆಯಡಿಯಲ್ಲಿ 1 ಸಾವಿರದಿಂದ 10 ಸಾವಿರದವರೆಗೆ ಸಾಲ ಸೌಲಭ್ಯ ದೊರೆಯಲಿದೆ. ಇದರ ಸದುಪಯೋಗಪಡಿಸಿಕೊಂಡು ಜೀವನ ರೂಪಿಸಿಕೊಳ್ಳಿ ಎಂದರು. ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್. ಗಂಗಣ್ಣ ಮಾತನಾಡಿ, ಕೆ.ಎನ್. ರಾಜಣ್ಣನವರು ಶಾಸಕರಾಗಿದ್ದ…
ತುಮಕೂರು: ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರದ ಮಾರ್ಗಸೂಚಿಯನ್ವಯ ಮೇ 24ರಂದು ಅಗತ್ಯ ಸೇವೆ ಹೊರತುಪಡಿಸಿ ಜಿಲ್ಲಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ. ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ: ಸರ್ಕಾರದ ಆದೇಶದಂತೆ ಲಾಕ್‍ಡೌನ್ ಅವಧಿಯಲ್ಲಿ ಅಗತ್ಯ ಸೇವೆಯಲ್ಲಿರುವವರಿಗೆ ಪಾರ್ಸಲ್ ಆಹಾರ ವಿತರಿಸುವ ಹೋಟೆಲ್‍ಗಳು, ದಿನಸಿ/ತರಕಾರಿ/ಹಾಲು/ಮಾಂಸದ ಅಂಗಡಿ, ಔಷಧ ಮಳಿಗೆ, ಆಸ್ಪತ್ರೆ/ ಕ್ಲಿನಿಕ್‍ಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಉಳಿದಂತೆ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶವಿಲ್ಲ. ವೈದ್ಯಕೀಯ ಉದ್ದೇಶ ಹಾಗೂ ತುರ್ತು ಕೆಲಸ ಹೊರತುಪಡಿಸಿ ಅನಾವಶ್ಯಕವಾಗಿ ಯಾರೂ ಹೊರಗಡೆ ತಿರುಗಾಡುವಂತಿಲ್ಲ. ಸಾರ್ವಜನಿಕರೆಲ್ಲರೂ ಸರ್ಕಾರದ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ. 5 ಮಂದಿ ಗುಣಮುಖ: ಜಿಲ್ಲೆಯಲ್ಲಿ ಈವರೆಗೂ 24 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 2 ಮೃತಪಟ್ಟಿದ್ದಾರೆ ಹಾಗೂ…
ತುಮಕೂರು: ಮಹಾ ಮಾರಿ ಕೊರೋನ ವಿಶ್ವವನ್ನೇ ತಲ್ಲಣಗೊಳಿಸಿ ಮಾನವ ಕುಲವನ್ನೇ ಬೆಚ್ಚಿಬೀಳಿಸಿದೆ. ವೈದ್ಯರು, ನರ್ಸ್ ಗಳು, ಸ್ವಚ್ಚತಾ ಕರ್ಮಿಗಳು, ಪೋಲೀಸರು ಜನರ ಜೀವದ ರಕ್ಷಣೆಗೆ ಪಣತೊಟ್ಟಿದ್ದಾರೆ. ಇದರ ನಡುವೆ ಜನರು ಸೋಂಕಿಗೆ ಹೆದರಿ ಕೊರೊನ ದೇವಿಯ ಮೊರೆ ಹೋಗಿರುವ ಘಟನೆ ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿಯ ಕೊಂಡಾಪುರ ಗೋಮಾಳ ಗ್ರಾಮದಲ್ಲಿ ನಡೆದಿದೆ. ಹೌದು.. ಭಯವೇ ಭಕ್ತಿಯ ಮೂಲ ಎಂಬ ನಾಣ್ಣುಡಿಯಂತೆ, ಕೊರೊನ ಖಾಯಿಲೆಗೆ ಭಯಭೀತರಾಗಿ ತಾವೇ ಕೊರೊನ ದೇವಿಯನ್ನು ಸೃಷ್ಟಿಸಿ ಪೂಜೆಗೈದಿರುವ ಘಟನೆ ಶುಕ್ರವಾರ ಜರುಗಿದೆ. ಬೇವಿನ ಮರದ ಬುಡದಲ್ಲಿ ಚಿಕ್ಕದಾದ ಹಸಿರೆಲೆ ಹೊದಿಕೆಯ ಚಪ್ಪರವನ್ನು ಹಾಕಿ ಹಣ್ಣು, ಹೂ, ಕಾಯಿ, ಮೊಸರನ್ನ ಮತ್ತು ಪೊಂಗಲ್ ಎಡೆ ಇಟ್ಟು ಹರಕೆ ಹೊತ್ತಿದ್ದಾರೆ. ನಮ್ಮೂರಿಗೆ ಯಾವುದೇ ಖಾಯಿಲೆ ಕಸಾರೆ ಬರದಿರಲಿ ಹಾಗೂ ಜನರ ಆರೋಗ್ಯ ಸುಧಾರಿಸಲಿ ಎಂಬ ಹಿತದೃಷ್ಟಿಯಿಂದ ಕೊರೊನ ದೇವಿಯ ಪೂಜೆಮಾಡಿದ್ದೇವೆ ಎನ್ನುತ್ತಾರೆ…











