ಚಿಕ್ಕನಾಯಕನಹಳ್ಳಿ: ವಿದ್ಯುತ್ ಶಾರ್ಟ್‍ಸಕ್ಯೂಟ್‍ನಿಂದಾಗಿ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟುಹೋಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮುಖ್ಯರಸ್ತೆಯಲ್ಲಿನ ಕೆನರಾಬ್ಯಾಂಕ್ ಪಕ್ಕದಲ್ಲಿನ ಗಣೇಶ ವೆರೈಟಿಸ್ಟೋರ್‍ವೊಂದರಲ್ಲಿ ಸೋಮವಾರ ಬೆಳಗಿನ ಜಾವ ಅಂಗಡಿಯಮೇಲಿನಿಂದ ದಟ್ಟವಾಗಿ ಹೊಗೆಕಂಡುಬಂದ ಕಾರಣ ತಕ್ಷಣ ಸಾರ್ವಜನಿಕರು ಅಗ್ನಿಶಾಮಕದಳಕ್ಕೆ ಕರೆಮಾಡಿದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಅಂಗಡಿಯ ಬಾಗಿಲುಮೀಟಿ ಕಾರ್ಯಾಚರಣೆ ನಡೆಸಿದ ಹಿನ್ನಲೆಯಲ್ಲಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು. ಇದಕ್ಕೆ ವಿದ್ಯುತ್ ಶಾರ್ಷ್‍ಸರ್ಕೂಟ್ ಕಾರಣವೆಂದು ತಿಳಿದುಬಂದಿದೆ. ಈ ಅವಘಡದಲ್ಲಿ ಅಂಗಡಿಯಲ್ಲಿದ್ದ ಜೆರಾಕ್ಸ್ ಯಂತ್ರ, ಷೋಕೇಸ್‍ಗಳು ಹಾಗೂ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟುಕರಕಲಾಗಿದ್ದವು.
Author: News Desk Benkiyabale
ತುಮಕೂರು : ಕೊವೀಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಗೆ ಬಂದಿರುವ 480 ಮಂದಿಯನ್ನು ತೀವ್ರ ನಿಗಾವಣೆಯಲ್ಲಿಡಲಾಗಿದ್ದು, ಈ ಪೈಕಿ 242 ಮಂದಿಯನ್ನು ಹೋಂ ಕ್ವಾರೆಂಟೈನ್‍ನಲ್ಲಿ ಇರಿಸಲಾಗಿದೆ. ಅವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದೆಂದು ಸೂಚಿಸಲಾಗಿದೆ. ಒಟ್ಟು 123 ಮಂದಿಯನ್ನು ಐಸೋಲೇಷನ್‍ನಲ್ಲಿ ಇಡಲಾಗಿದ್ದು, 128 ಜನರ 28 ದಿನಗಳ ಹೋಂ ಕ್ವಾರೆಂಟೈನ್ ಅವಧಿ ಪೂರ್ಣಗೊಂಡಿದೆ. ಈವರೆವಿಗೂ 174 ಜನರ ಗಂಟಲುಸ್ರಾವ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೊಳಪಡಿಸಿದ್ದು, ಆ ಪೈಕಿ 169 ಮಾದರಿಗಳು ನೆಗೆಟಿವ್ ಎಂದು ದೃಢಪಟ್ಟಿದೆ. ಇನ್ನು 2 ಪ್ರಕರಣಗಳು ಪಾಸಿಟಿವ್ ಬಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ. 3 ಮಾದರಿಗಳು ತಿರಸ್ಕೃತಗೊಂಡಿವೆ ಎಂದು ಡಿಹೆಚ್‍ಓ ಡಾ: ಚಂದ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಮಕೂರು : ಜಿಲ್ಲೆಯ ವಸಂತನರಸಾಪುರ ಕೈಗಾರಿಕ ಪ್ರದೇಶದಲ್ಲಿರುವ ಗಿನಾ ಕನಸ್ಟ್ರಕ್ಷನ್ ಗ್ರೂಫ್‍ನ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ಪರೀಕ್ಷೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನೋಡೆಲ್ ಅಧಿಕಾರಿಗಳಾದ ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಂಗೇಗೌಡ, ವಿಕಲಚೇತನರ ಕಲ್ಯಾಣಾಧಿಕಾರಿ ರಮೇಶ್, ಮತ್ತಿತರರು ಹಾಜರಿದ್ದರು.
ತುಮಕೂರು: ಶಿರಾ ತಾಲ್ಲೂಕಿನಲ್ಲಿ ಕೊರೋನಾ ವೈರಸ್ ಸೋಂಕಿತ ವ್ಯಕ್ತಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿರಾ ಸಾರ್ವಜನಿಕ ಆಸ್ಪತ್ರೆ ಹಾಗೂ ಶಿರಾ ಪಟ್ಟಣದ ಆರೋಗ್ಯ ಕೇಂದ್ರದಲ್ಲಿ 2 ಫೀವರ್ ಕ್ಲಿನಿಕ್‍ಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಬಿ.ಆರ್. ಚಂದ್ರಿಕಾ ತಿಳಿಸಿದರು. ತಮ್ಮ ಕಛೇರಿಯಲ್ಲಿಂದು ಮಾಹಿತಿ ನೀಡಿದ ಅವರು, ಕೊರೋನಾ ಸೋಂಕಿತ ಮೃತ ವ್ಯಕ್ತಿಯ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಕಂಟೈನ್‍ಮೆಂಟ್ ವಲಯವೆಂದು ಘೋಷಿಸಿದ್ದು, ಈ ವಲಯದ ಮನೆಗಳನ್ನು ಪ್ರತಿದಿನ ಆರೋಗ್ಯ ಸಿಬ್ಬಂದಿಗಳು ಸಮೀಕ್ಷೆ ಮಾಡುತ್ತಿದ್ದಾರೆ. ಜ್ವರ, ತಲೆನೋವು, ಕೆಮ್ಮು, ನೆಗಡಿ ಮತ್ತಿತರ ಕೊರೋನಾ ವೈರಸ್ ರೋಗಲಕ್ಷಣಗಳು ಕಂಡು ಬಂದರೆ ಕೂಡಲೇ ಫೀವರ್ ಕ್ಲಿನಿಕ್‍ಗೆ ಚಿಕಿತ್ಸೆಗಾಗಿ ಕಳುಹಿಸಲಾಗುವುದು. ಯಾವುದೇ ತೊಂದರೆ ಇಲ್ಲವೆಂದು ದೃಢಪಟ್ಟಲ್ಲಿ ಮಾತ್ರ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗುವುದು. ಜ್ವರ ಕಡಿಮೆಯಾಗದೆ ಕೆಮ್ಮಿನಿಂದ ಬಳಲುತ್ತಿದ್ದು ಸಂದೇಹ ಬಂದರೆ ಆಸ್ಪತ್ರೆಯ ಐಸೋಲೇಷನ್‍ನಲ್ಲಿ ಇಡಲಾಗುವುದು ಎಂದು ತಿಳಿಸಿದರು. …
ತುಮಕೂರು: ಕೋವಿಡ್-19 ಸೋಂಕು ರೋಗದ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಅವರು ಭಾನುವಾರ ಗಾಂಧಿ ನಗರದ ಸರ್ಕಾರಿ ಬಾಲಕರ ಬಾಲಮಂದಿರ ಹಾಗೂ ಅಮರ ಜ್ಯೋತಿ ನಗರದ ಸರ್ಕಾರಿ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿ ಮಕ್ಕಳಿಗೆ ಒದಗಿಸಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು. ನಂತರ ಬಾಲಮಂದಿರದ ಮಕ್ಕಳ ಆರೋಗ್ಯ ವಿಚಾರಿಸಿದ ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಪ್ರತಿ 2 ಗಂಟೆಗಳಿಗೊಮ್ಮೆ ಕೈಗಳನ್ನು ತೊಳೆಯಬೇಕೆಂದು ಮಕ್ಕಳಿಗೆ ಸಲಹೆ ನೀಡಿದರಲ್ಲದೆ, ಕಾಲಕಾಲಕ್ಕೆ ಮಕ್ಕಳನ್ನು ವೈದ್ಯಕೀಯ ತಪಾಸಣೆಗೊಳಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಮಾತನಾಡಿ, ಬಾಲಮಂದಿರದಲ್ಲಿ 7 ಬಾಲಕರು ಹಾಗೂ 21 ಬಾಲಕಿಯರಿದ್ದು, ಎಲ್ಲಾ ಮಕ್ಕಳಿಗೂ ಕಣ್ಣು, ಬಾಯಿ, ಮೂಗನ್ನು ಮುಟ್ಟಿಕೊಳ್ಳದಂತೆ ಪ್ರತ್ಯೇಕವಾಗಿ ಹ್ಯಾಂಡ್ ಕರ್ಚೀಫ್‍ಗಳನ್ನು ಹಾಗೂ ಹ್ಯಾಂಡ್ ಟವಲ್‍ಗಳನ್ನು ಒದಗಿಸಲಾಗಿದೆ. ಸ್ಯಾನಿಟೈಸರ್ ಬಳಸುವ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು…
ತುಮಕೂರು: ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ದಿಢೀರ್ ದಾಳಿ ನಡೆಸಿ ಎರಡು ಅಂಗಡಿಗಳಿಗೂ ಬೀಗ ಹಾಕಿಸಿರುವ ಘಟನೆ ನಗರದಲ್ಲಿಂದು ನಡೆದಿದೆ. ನಗರದ ಕೋತಿತೋಪು ಸೇರಿದಂತೆ ವಿವಿಧೆಡೆ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಟನ್ ಮತ್ತು ಚಿಕನ್ ಮಾರಾಟ ಮಾಡಲಾಗುತ್ತಿದೆ ಎಂಬ ಕುರಿತು ಬಂದ ದೂರಿನ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಟಿ. ಭೂಬಾಲನ್, ಆರೋಗ್ಯಾಧಿಕಾರಿ ಡಾ. ನಾಗೇಶ್‍ಕುಮಾರ್ ಅವರು ಇಂದು ಕೋತಿತೋಪಿನ ಎರಡು ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿದಾಗ ಹೆಚ್ಚಿನ ಬೆಲೆಗೆ ಮಾಂಸ ಮಾರಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ತಕ್ಷಣ ಆಯುಕ್ತರು ಒಂದು ಮಾಂಸದ ಅಂಗಡಿ ಮತ್ತು ಒಂದು ಕೋಳಿ ಅಂಗಡಿ ಸೇರಿ ಎರಡೂ ಅಂಗಡಿಗಳ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಅಂಗಡಿಗಳ ಬಾಗಿಲು ಮುಚ್ಚಿಸಿ ಬೀಗ ಹಾಕಿಸಿದರು. ನಂತರ…
ತುಮಕೂರು : ಕೊರೋನಾ ವೈರಸ್ ಕೋವಿಡ್-19 ಹರಡದಂತೆ ತಡೆಗಟ್ಟಲು ಜಿಲ್ಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೋನಾ ವೈರಸ್ ಕೋವಿಡ್-19 ಹರಡದಂತೆ ತಡೆಯಲು ಸೋಂಕಿತರ ಸಂಪರ್ಕದಲ್ಲಿದ್ದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದವರನ್ನು (ಪ್ರೈಮರಿ ಅಂಡ್ ಸೆಕೆಂಡರಿ ಕಾಂಟ್ಯಾಕ್ಟ್) ಸಂಪೂರ್ಣವಾಗಿ ಪತ್ತೆಹಚ್ಚಿ ಅವರನ್ನು ಕ್ವಾರಂಟೈನ್ ಮಾಡಿ, ಅವರ ಮೇಲೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್‍ಗೆ ಸಂಬಂಧಿಸಿದವರನ್ನು ತಾಲ್ಲೂಕು ಆಸ್ಪತ್ರೆ ಅಥವಾ ತಾಲ್ಲೂಕು ಕೇಂದ್ರಗಳಲ್ಲಿ ಇಟ್ಟು ನಿಗಾವಹಿಸುವ ಬದಲು ಎಲ್ಲರನ್ನು ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡಿ, ಅಲ್ಲಿಯೇ ಚಿಕಿತ್ಸೆ/ ನಿಗಾವಹಿಸಲು ಸುಲಭವಾಗುತ್ತದೆ. ಆರೋಗ್ಯ ಸಿಬ್ಬಂದಿಗಳಿಗೆ ಹಾಗೂ ನಿರ್ವಹಣೆಗೆ ಅನುಕೂಲವಾಗಲಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.…
ತುಮಕೂರು : ಕೊರೋನಾ ವೈರಸ್ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸಿದ್ಧಗಂಗಾ ಮಠ ಹಾಗೂ ಸಿದ್ಧಗಂಗಾ ವಿದ್ಯಾಸಂಸ್ಥೆ ವತಿಯಿಂದ 50ಲಕ್ಷ ರೂ.ಗಳ ಡಿಡಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಯಿತು. ಸಿದ್ಧಗಂಗಾ ಮಠದಲ್ಲಿಂದು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಸಿದ್ಧಗಂಗಾ ಮಠದಿಂದ 25ಲಕ್ಷ ರೂ. ಹಾಗೂ ಸಿದ್ಧಗಂಗಾ ವಿದ್ಯಾಸಂಸ್ಥೆಯಿಂದ 25ಲಕ್ಷ ರೂ.ಗಳು ಒಟ್ಟು 50 ಲಕ್ಷ ರೂ.ಗಳ ಡಿಡಿಯನ್ನು ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ಮೂಲಕ ಸಿಎಂ ಪರಿಹಾರ ನಿಧಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್, ಸಿದ್ಧಗಂಗಾ ಮಠದ ವಿಶ್ವನಾಥಯ್ಯ, ಟಿ.ಕೆ. ನಂಜುಂಡಪ್ಪ, ಮತ್ತಿತರರು ಹಾಜರಿದ್ದರು.
ತುಮಕೂರು : ಕೊವೀಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಗೆ ಬಂದಿರುವ 480 ಮಂದಿಯನ್ನು ತೀವ್ರ ನಿಗಾವಣೆಯಲ್ಲಿಡಲಾಗಿದ್ದು, ಈ ಪೈಕಿ 303 ಮಂದಿಯನ್ನು ಹೋಂ ಕ್ವಾರೆಂಟೈನ್‍ನಲ್ಲಿ ಇರಿಸಲಾಗಿದೆ. ಅವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದೆಂದು ಸೂಚಿಸಲಾಗಿದೆ. ಒಟ್ಟು 92 ಮಂದಿಯನ್ನು ಐಸೋಲೇಷನ್‍ನಲ್ಲಿ ಇಡಲಾಗಿದ್ದು, 67 ಜನರ 28 ದಿನಗಳ ಹೋಂ ಕ್ವಾರೆಂಟೈನ್ ಅವಧಿ ಪೂರ್ಣಗೊಂಡಿದೆ. ಈವರೆವಿಗೂ 140 ಜನರ ಗಂಟಲುಸ್ರಾವ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೊಳಪಡಿಸಿದ್ದು, ಆ ಪೈಕಿ 135 ಮಾದರಿಗಳು ನೆಗೆಟಿವ್ ಎಂದು ದೃಢಪಟ್ಟಿದೆ. 2 ಪ್ರಕರಣಗಳು ಪಾಸಿಟಿವ್ ಬಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ. 3 ಮಾದರಿಗಳು ತಿರಸ್ಕøತಗೊಂಡಿವೆ ಎಂದು ಡಿಹೆಚ್‍ಓ ಡಾ: ಚಂದ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊರಟಗೆರೆ: ಕೊರೊನಾ ವೈರೇಸ್ ಹರಡುವಿಕೆ ತಡೆಯಲು ಪ್ರತಿನಿತ್ಯ ಸೈನಿಕರಂತೆ ಕೆಲಸ ಮಾಡುತ್ತೀರುವ ಕೋಳಾಲ ಜಿಪಂ ಕ್ಷೇತ್ರದ ಆಸ್ಪತ್ರೆ, ಪೊಲೀಸ್, ಗ್ರಾಪಂ ಮತ್ತು ಆಶಾ ಕಾರ್ಯಕರ್ತೆಯರಿಗೆ ಉಚಿತವಾಗಿ 3 ಸಾವಿರ ಸಾನಿಟೈಸರ್ ಮತ್ತು ಮಾಸ್ಕ್ ವಿತರಣೆ ಮಾಡಲಾಗಿದೆ ಎಂದು ಕೋಳಾಲ ಜಿಪಂ ಸದಸ್ಯ ಶಿವರಾಮಯ್ಯ ತಿಳಿಸಿದರು. ತಾಲೂಕಿನ ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಕರ್ತವ್ಯನಿರತ ಕೊರೊನಾ ಸೈನಿಕರಿಗೆ ಉಚಿತವಾಗಿ ಇತ್ತೀಚಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಿದ ವೇಳೆ ಮಾತನಾಡಿದರು. ಕೋಳಾಲ ಜಿಪಂ ಕ್ಷೇತ್ರದಲ್ಲಿ ಕೊರೊನಾ ಸೈನಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಿದ್ದೇನೆ. ನನ್ನ ಮತಕ್ಷೇತ್ರದ ಪ್ರತಿಮನೆಯ ಸದಸ್ಯರಿಗೂ ಉಚಿತವಾಗಿ 30ಸಾವಿರ ಮಾಸ್ಕ್ ಮತ್ತು ಸ್ಯಾನಿಟೈಸರ್ ಅವರ ಮನೆಯ ಬಳಿಯೇ ಹೋಗಿ ವಿತರಣೆ ಮಾಡುತ್ತೇನೆ. ಈಗಾಗಲೇ ಜನಸಂಖ್ಯೆಯ ಅಂಕಿಅಂಶ ಕಳೆಹಾಕಿದ್ದೇನೆ ನಮ್ಮ ಕ್ಷೇತ್ರದ ಜನರ ಆರೋಗ್ಯ ರಕ್ಷಣೆ ನನಗೆ ಬಹುಮುಖ್ಯವಾಗಿದೆ ಎಂದು ಹೇಳಿದರು. …










