Author: News Desk Benkiyabale

ತುಮಕೂರು :       ನಗರದ ಸೋಮೇಶ್ವರ 15ನೇ ಕ್ರಾಸ್‍ನಲ್ಲಿ ಸ್ಮಾರ್ಟ್‍ಸಿಟಿಯಿಂದ ನಡೆಯುತ್ತಿರುವ ಕಾಮಗಾರಿಯ ವಿರುದ್ಧ ಸಾರ್ವಜನಿಕರು, ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿ, ಸ್ಮಾರ್ಟ್‍ಸಿಟಿ ಎಂಜಿನಿಯರ್ ದರ್ಶನ್ ಅವರನ್ನು ಮೇಯರ್ ಫರೀದಾಬೇಗಂ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.       ನಗರದ ಸೋಮೇಶ್ವರನ 15ನೇ ಅಡ್ಡರಸ್ತೆಯಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿಯಿಂದ ನೀರು, ವಿದ್ಯುತ್ ಹಾಗೂ ಯುಜಿಡಿ ಸಂಪರ್ಕ ಕಡಿತಗೊಂಡಿತ್ತು, ಕಾಮಗಾರಿಯಿಂದ ಫಣೀಂದ್ರ(ಸುರಭಿ) ಅವರ ಮನೆಯಲ್ಲಿ ಶಾರ್ಟ್‍ಸಕ್ರ್ಯೂಟ್ ಸಂಭವಿಸಿದೆ, ಸುರಕ್ಷ ಕ್ರಮಗಳನ್ನು ಅನುಸರಿಸದೇ ಅವೈಜ್ಞಾನಿಕವಾಗಿ ಕಾಮಗಾರಿಯನ್ನು ನಿರ್ವಹಿಸಲಾಗಿದ್ದು, ಸ್ಮಾರ್ಟ್‍ಸಿಟಿ ಎಂಜನಿಯರ್‍ಗಳು ಸ್ಪಂದಿಸುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.        15ನೇ ವಾರ್ಡ್ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಮಾತನಾಡಿ, ಸ್ಮಾರ್ಟ್‍ಸಿಟಿ ಅಧಿಕಾರಿಗಳು ಜನಪ್ರತಿನಿಧಿಗಳ ಮಾತಿಗೆ ಗೌರವ ಕೊಡುತ್ತಿಲ್ಲ, ಕಾಮಗಾರಿ ಪ್ರಾರಂಭಿಸದಂತೆ ಸೂಚಿಸಿದ್ದರು, ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಈ ಕಾಮಗಾರಿಯಿಂದ ಹೇಮಾವತಿ ಪೈಪ್‍ಲೈನ್ ಕಡಿತಗೊಂಡಿದ್ದು, ನೀರು ಪೋಲಾಗಿದೆ, ಜನರು ಹಾಗೂ ಜನಪ್ರತಿನಿಧಿಗಳು ಸ್ಮಾರ್ಟ್‍ಸಿಟಿ ಅಧಿಕಾರಿಗಳು ಕರೆ ಮಾಡಿದರು ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.…

Read More

ತುರುವೇಕೆರೆ :        ಪಟ್ಟಣದ ಪ್ರಮುಖ ರಸ್ತೆಯಾದ ದೆಬ್ಬೇಘಟ್ಟ ರಸ್ತೆಯನ್ನು ಜಿಲ್ಲಾ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಿದ್ದು, ಶೀಘ್ರದಲ್ಲಿಯೇ 25 ಮೀಟರ್ ಅಳತೆಯುಳ್ಳ ಸುಸಜ್ಜಿತ ರಸ್ತೆ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.          ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಬೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಈ ಹಿಂದೆ ದಬ್ಬೇಘಟ್ಟ ರಸ್ತೆಯನ್ನು 13.50 ಮೀಟರ್ ಮಾಡಲು ತಿರ್ಮಾನಿಸಲಾಗಿತ್ತು ಅದರಂತೆ ರಸ್ತೆ ಕಾಮಗಾರಿ ಪ್ರಾರಂಬಿಸಲಾಗಿತ್ತು ನಂತರ ಕೆಲವು ಕಟ್ಟಡದ ಮಾಲೀಕರು ಮಾಡಿದ ಗೊಂದಲದಿಂದಾಗಿ ರಸ್ತೆ ಅರ್ದಕ್ಕೆ ನಿಂತಿದೆ. ಜಿಲ್ಲಾದಿಕಾರಿಗಳ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ಈಗಾಗಲೆ ನಡೆದಿದ್ದು, ದಬ್ಬೇಘಟ್ಟ ರಸ್ತೆಯ ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿಮಳಿಗೆಗಳ ತೆರವುಗೊಳಿಸುವ ಕಾರ್ಯವನ್ನು ಶೀಘ್ರ ಮಾಡಲಾಗುವುದು ಎಂದು ತಿಳಿಸಿದರು.        ಸರಿಯಾದ ಮಾಹಿತಿ ಇಲ್ಲದೆ ಮೀಟಿಂಗ್ ಬಂದಿದ್ದಿರಾ ಇಲಾಖೆ ಇಂಜಿನಿಯರ್ ಹಾಗೂ ಇಲಾಖೆಯ ಸರಿಯಾದ ಮಾಹಿತಿನೇ ನಿಮ್ಮಲಿ ಇಲ್ಲ ದಬ್ಬೇಘಟ್ಟ…

Read More

ತುಮಕೂರು :       ತಾತ್ಕಾಲಿಕ ಆಧಾರದ ಮೇಲೆ ದುಡಿಯುತ್ತಿರುವ ಕಾರ್ಮಿಕರ ಕೆಲಸ ಕಾಯಂಗೊಳಿಸಬೇಕು, ಸೇವಾ ಭದ್ರತೆ ನೀಡಬೇಕು ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫಿಟ್‍ವೆಲ್ ಟೂಲ್ಸ್ ಅಂಡ್ ಫೋರ್ಜಿಂಗ್ ಕಾರ್ಮಿಕರ ಸಂಘ ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಸತ್ಯಾಗ್ರಹ 10ನೇ ದಿನಕ್ಕೆ ಕಾಲಿಟ್ಟಿದೆ ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ 5 ಕೆಎಚ್‍ಟಿ ಫೇಸ್‍ನ ಕಾರ್ಖಾನೆ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಕಾರ್ಮಿಕರು ಕಳೆದ 9 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಆಡಳಿತ ಮಂಡಳಿ ತಿರುಗಿಯೂ ನೋಡುತ್ತಿಲ್ಲ. ಕಾರ್ಮಿಕರ ಬಗ್ಗೆ ಆಡಳಿತ ಮಂಡಳಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಕಾರ್ಮಿಕ ಅಧಿಕಾರಿಗಳು ಬಂದು ಆಡಳಿತ ಮಂಡಳಿಯವರ ಜೊತೆ ಮಾತುಕತೆ ನಡೆಸಿದರೂ ಅವರ ಮಾತಿಗೂ ಕಿಮ್ಮತ್ತು ಇಲ್ಲವಾಗಿದೆ. ಅಧಿಕಾರಗಳೆಂದರೆ ಆಡಳಿತ ಮಂಡಳಿ ಅಸಡ್ಡೆ ತೋರುತ್ತಿದ್ದಾರೆ ಎಂದು ಧರಣಿನಿರತರು ದೂರಿದರು.       ಅಢಳಿತ ಮಂಡಳಿ ಕಾರ್ಮಿಕರ ಒಗ್ಗಟ್ಟನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ. ಹತ್ತಾರ ವರ್ಷಗಳಿಂದ…

Read More

ತುಮಕೂರು :       ಶಾಲೆಗೆ ಗೈರು ಹಾಜರಾಗಿ ಗುಬ್ಬಿ ಕೆರೆಯಲ್ಲಿ ಈಜಲು ಹೋದ ಮೂವರು ಶಾಲಾ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.        ಗುಬ್ಬಿ ಪಟ್ಟಣದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯದಲ್ಲಿದ್ದ ವಿದ್ಯಾರ್ಥಿಗಳ ಪೈಕಿ 5 ವಿದ್ಯಾರ್ಥಿಗಳು ಬಯೋಮೆಟ್ರಿಕ್ ನೀಡಿದ ನಂತರ ಬೆಳಗಿನ ತಿಂಡಿಯನ್ನು ಸೇವಿಸಿ ಶಾಲೆಗೆ ತೆರಳುವಾಗಿ ಹೊರಟ ವಿದ್ಯಾರ್ಥಿಗಳು ಶಾಲೆಗೆ ಹೋಗದೇ ಗುಬ್ಬಿ ಕೆರೆಗೆ ಹೊಂದಿಕೊಂಡಿರುವ ಕೋಡಿಹಳ್ಳಿಯ ಕೆರೆಕೋಡಿಯ ಮಗ್ಗುಲಲ್ಲೇ ಈಜಲು ನೀರಿಗೆ ಇಳಿದ 3 ವಿದ್ಯಾರ್ಥಿಗಳು ಈಜಾಡುತ್ತ ಮುಂದೆ ಸಾಗಿದಾಗ ಜೆ.ಸಿ.ಬಿ.ಯಿಂದ ಮಣ್ಣನ್ನು ಅಗೆದ ಹಳ್ಳದಲ್ಲಿ ಬಿದ್ದು ಈಜಲಾಗದೇ ಸಾವನ್ನಪ್ಪಿರುತ್ತಾರೆ. ಜೊತೆಗೆ ತೆರಳಿದ 2 ವಿದ್ಯಾರ್ಥಿಗಳು ತಮಗೆ ಈಜಲು ಬರುವುದಿಲ್ಲ ಎಂಬ ಕಾರಣದಿಂದ ಪಕ್ಕದಲ್ಲೇ ಇರುವ ಆಂಜನೇಯ ದೇವಾಲಯಕ್ಕೆ ತೆರಳಿದ್ದು ನೀರಿನಲ್ಲಿ ಮುಳುಗುತ್ತಿದ್ದ ಗೆಳೆಯರನ್ನು ನೋಡಿ ಭಯಭೀತರಾಗಿ ಕೂಗಾಡುತ್ತಿದ್ದನ್ನು ಗ್ರಾಮಸ್ಥರು ಕಂಡು ಅಗ್ನಿಶಾಮಕ ತಂಡಕ್ಕೆ ವಿಷಯವನ್ನು ಮುಟ್ಟಿಸಿದ್ದು ಅಗ್ನಿಶಾಮಕದವರು ಸ್ಥಳಕ್ಕೆ ಆಗಮಿಸುವ ಸಮಯದಲ್ಲೇ ಉಸಿರುಗಟ್ಟಿ ವಿದ್ಯಾರ್ಥಿಗಳು…

Read More

ತುಮಕೂರು :       ನಗರದ ಜೆ.ಸಿ. ರಸ್ತೆಯಲ್ಲಿರುವ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್‍ನ ಪ್ರಧಾನ ಕಚೇರಿಯಲ್ಲಿಂದು ನೂತನವಾಗಿ ಆರಂಭಿಸಲಾಗಿರುವ ಎಟಿಎಂ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಉದ್ಘಾಟಿಸಿದರು.       ನಂತರ ಮಾತನಾಡಿದ ಸಚಿವ ಮಾಧುಸ್ವಾಮಿ ಅವರು,ತ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಗ್ರಾಹಕರಿಗೆ ಬಹಳ ವ್ಯಾಪಕ ಮತ್ತು ವಿಸ್ತಾರವಾದ ಸೇವೆ ನೀಡುತ್ತಿದೆ. ಸಹಕಾರ ಕ್ಷೇತ್ರದಲ್ಲಿ ಈ ರೀತಿಯ ಸೇವೆ ನೀಡುವುದು ಬಹಳ ಅಪರೂಪ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.       ಬ್ಯಾಂಕ್ ಅಧ್ಯಕ್ಷರಾದ ಜಯಕುಮಾರ್ ಅವರು ಈಗ ಎಟಿಎಂ ಸೇವೆಯನ್ನು ಸಹ ಗ್ರಾಹಕರಿಗೆ ನೀಡುತ್ತಿದ್ದು, ಈ ಎಟಿಎಂನಲ್ಲಿ ಯಾವುದೇ ಬ್ಯಾಂಕ್ ಡೆಬಿಟ್, ಕ್ರೆಡಿಟ್ ಕಾರ್ಡ್‍ಗಳನ್ನು ಬಳಸಿ ಹಣ ಡ್ರಾ ಮಾಡುವಂತಹ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದರು.       ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಎಸ್. ಜಯಕುಮಾರ್ ಮಾತನಾಡಿ, ಗ್ರಾಹಕರು ಮತ್ತು ಜನರ ನಿರೀಕ್ಷೆಗೆ ತಕ್ಕಂತೆ…

Read More

ತುಮಕೂರು :          ಆನ್ ಲೈನ್ ಮೂಲಕ ಕ್ರಿಕೆಟ್ ಮತ್ತು ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ 6 ಜನರ ತಂಡವನ್ನು ಬಂಧಿಸಿರುವ  ಪೊಲೀಸರು, ಬಂಧಿತರಿಂದ ಒಟ್ಟು 7.15 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.       ಮೊಬೈಲ್ ಮೂಲಕ ಲೋಟಸ್ ಮತ್ತು ಸ್ಪೆಕ್ಟ್ಟಿಕ್ಯುಲರ್ ಎಂಬ ಆಪ್ ಮೂಲಕ ಕುದುರೆ ರೇಸ್ ಮತ್ತು ಕ್ರಿಕೆಟ್ ಬೆಟ್ಟಿಂಗ್ ಮಾಡಿ ತುಮಕೂರು ನಗರದ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಳ್ಳುವ ಮೂಲಕ ಅನಧಿಕೃತ ಜೂಜಾಟ ನಡೆಯುತ್ತಿದೆಯೆಂಬ ಮಾಹಿತಿ ಇತ್ತೀಚೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಅವರಿಗೆ ಲಭಿಸಿತು. ಈ ಹಿನ್ನೆಲೆಯಲ್ಲಿ ಪ್ರಕರಣ ಭೇದಿಸಲು ಅವರು ಸಿ.ಇ.ಎನ್. ಠಾಣೆಯ ಪೊಲೀಸರ ತಂಡವೊಂದನ್ನು ರಚಿಸಿದ್ದರು.       ಈ ತಂಡವು ತನಿಖೆ ಆರಂಭಿಸಿತು. ಫೆ.9 ರಂದು ಮಧ್ಯಾಹ್ನ 1-30 ರಲ್ಲಿ ಈ ತಂಡವು ನಗರದ ಐಶ್ವರ್ಯ ಲಾಡ್ಜ್‍ನ ಕೊಠಡಿ ಸಂಖ್ಯೆ 7 ರಮೇಲೆ ದಾಳಿ ನಡೆಸಿದಾಗ ಆರೋಪಿಗಳಾದ 1)ರಾಜೇಶ್ (27 ವರ್ಷ, ಖಾಸಗಿ ಕಂಪನಿಯಲ್ಲಿ…

Read More

 ತುಮಕೂರು :         ಬೇಸಿಗೆ ಕಾಲ ಸಮೀಪಿಸುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಲಿದ್ದು, ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶೀಘ್ರವಾಗಿ ದುರಸ್ಥಿಪಡಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ಥಿ ಬಗ್ಗೆ ಮಾಹಿತಿ ಕೇಳಿದಾಗ, ಇದಕ್ಕೆ ಉತ್ತರಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್ ಕೆ.ಆರ್.ಐ.ಡಿ ಎಲ್ ಸಂಸ್ಥೆಯಿಂದ 54 ಘಟಕಗಳು ಒಳಗೊಂಡಿರುತ್ತದೆ. ತುರುವೇಕೆರೆ ತಾಲೂಕಿನ 24, ಕೊರಟಗೆರೆ-4, ತಿಪಟೂರು ತಾಲೂಕಿನ 4 ಘಟಕಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗಾಗಿ ಹೊಸದಾಗಿ ಟೆಂಡರ್ ಕರೆಯಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.       ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ,…

Read More

ತುಮಕೂರು :       ಇತಿಹಾಸ ಪ್ರಸಿದ್ದ ಸಿದ್ದಗಂಗಾ ಮಠದಲ್ಲಿ ಫೆ. 12 ರಿಂದ ನಡೆಯಲಿರುವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ನಗರದಾದ್ಯಂತ ಭಿಕ್ಷಾಟನೆ ನಡೆಸಿದರು.       ಶ್ರೀಮಠದ ಸಂಪ್ರದಾಯದಂತೆ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಮಠಾಧ್ಯಕ್ಷರು ಭಿಕ್ಷಾಟನೆ ನಡೆಸುವ ಪದ್ದತಿ ನಡೆದು ಬಂದಿದ್ದು, ಲಿಂಗೈಕ್ಯ ಹಿರಿಯ ಶ್ರೀಗಳ ದಾರಿಯಲ್ಲೇ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಸಹ ಶ್ರೀಮಠವನ್ನು ಮುನ್ನಡೆಸುವ ಜತೆಗೆ ಜಾತ್ರಾ ಮಹೋತ್ಸವಕ್ಕೆ ದವಸ ಧಾನ್ಯ ಸಂಗ್ರಹಿಸಲು ನಗರದಾದ್ಯಂತ ಭಿಕ್ಷಾಟನೆ ನಡೆಸಿದರು.       ಮೊದಲು ಸಿದ್ದಗಂಗಾ ಮಠದಿಂದ ಬಟವಾಡಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಚೇರಿಗೆ ಭಿಕ್ಷಾಟನೆಗೆ ಆಗಮಿಸಿದ ಶ್ರೀಗಳಿಗೆ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾದಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು.       ಎಪಿಎಂಸಿ ಕಾರ್ಯದರ್ಶಿ ಡಿ.ಆರ್. ಪುಷ್ಪ, ಸಹಾಯಕ ಕಾರ್ಯದರ್ಶಿ ವೈ.ಎಂ. ಲಕ್ಷ್ಮೀಕಾಂತಯ್ಯ…

Read More

ತುಮಕೂರು :       ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಸದಸ್ಯರು ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಿ ಶಾಸಕ ಜ್ಯೋತಿಗಣೇಶ್ ಅವರಿಗೆ ಮನವಿ ಸಲ್ಲಿಸಿದರು.       ತುಮಕೂರು ನಗರದಲ್ಲಿ ಈಗಾಗಲೇ 130 ಅನುದಾನ ರಹಿತ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಶಾಲೆಗಳ ಹತ್ತಿರದಲ್ಲಿಯೇ ಮತ್ತೊಂದು ಪ್ರಿಸ್ಕೂಲ್ ಶಾಲೆಯನ್ನು ತೆರೆಯಲು ಡಿಡಿಪಿಐ ಹಾಗೂ ಬಿಇಒ ಅನುಮತಿ ನೀಡುತ್ತಿರುವುದು ಸರಿಯಲ್ಲ, ಕಾರ್ಪೋರೇಟ್ ಶಾಲೆಗಳ ವ್ಯಾಮೋಹದಲ್ಲಿ ಅಧಿಕಾರಿಗಳು ಸ್ಥಳೀಯ ಶಾಲಾ ಸಂಸ್ಥೆಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.       ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಹಾಲನೂರು ಎಸ್.ಲೇಪಾಕ್ಷಿ ಅವರು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳಿಗೆ ಕಡಿವಾಣ ಹಾಕುವಂತೆ ಕಳೆದ ಜೂನ್‍ನಲ್ಲಿಯೇ ಡಿಡಿಪಿಐ ಹಾಗೂ ಬಿಇಒ ಅವರಿಗೆ ಮನವಿ ಸಲ್ಲಿಸಿದರು, ಅಧಿಕಾರಿಗಳು…

Read More

ತುಮಕೂರು:       ಫೆ. 12ರಿಂದ ಫೆ.26ರವರೆಗೆ ಸಿದ್ದಗಂಗಾ ಮಠದಲ್ಲಿ ಪ್ರತಿ ವರ್ಷದಂತೆ ಕೃಷಿ ಮತ್ತು ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿ ಕಾರ್ಯದರ್ಶಿ ಶಿವಕುಮಾರಯ್ಯ ತಿಳಿಸಿದರು.       ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಪ್ರಾರಂಭಗೊಂಡ ನಂತರ ಬರಗಾಲದ ಕಾರಣ 1967ರಲ್ಲಿ ವಸ್ತು ಪ್ರದರ್ಶನವನ್ನು ಏರ್ಪಡಿಸಿರಲಿಲ್ಲ, ನಂತರ ಪ್ರತಿ ವರ್ಷವೂ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ ಎಂದರು.       ಮಠದಲ್ಲಿ ನಡೆಯುವ ವಸ್ತುಪ್ರದರ್ಶನ ರಾಜ್ಯದಲ್ಲಿ ಪ್ರತಿಷ್ಠಿತವಾಗಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಳಿಗೆಗಳು ಹಾಗೂ ವಿವಿಧ ಪ್ರಮುಖ ಸಂಸ್ಥೆಗಳ ಮಳಿಗೆಗಳು ವಸ್ತುಪ್ರದರ್ಶನದಲ್ಲಿದ್ದು, ಪ್ರತಿ ವರ್ಷದಂತೆ ಕೃಷಿ ಪ್ರದರ್ಶನ ರೈತರಿಗೆ ಅನುಕೂಲವಾಗಿದ್ದು, ಕಳೆದ ಆರು ತಿಂಗಳಿಂದಲೇ ತಯಾರಿ ಮಾಡಲಾಗಿದೆ ಎಂದರು.       ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಕೈಗಾರಿಕಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ನೀಡಲಾಗುತ್ತಿತ್ತು,…

Read More