ತುಮಕೂರು : ಮಧುಗಿರಿ ತಾಲ್ಲೂಕು ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ವಜಾ ಗೊಳಿಸದೇ ವಿಳಂಬ ಧೋರಣೆಯನ್ನು ಖಂಡಿಸಿ ಶ್ರೀ ಪಂಡಿತ್ ಪುಟ್ಟರಾಜು ಗವಾಯಿ ತಾಲ್ಲೂಕು ಅಂಗವಿಕಲರ ಒಕ್ಕೂಟ, ಮಧುಗಿರಿ ಇವರಿಂದ ಜಿಲ್ಲಾ ಪಂಚಾಯತಿ ಕಾರ್ಯಾಲಯದ ಮುಂಭಾಗ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ. ಶತ ಶತಮಾನಗಳಿಂದ ಸಕಲ ಸವಲತ್ತು ಸಂಪನ್ಮೂಲ ಮತ್ತು ಅವಕಾಶಗಳಿಂದ ವಂಚಿತಗೊಂಡ ವಿಕಲ ಚೇತನ ಸಮಾಜ 1995 ಅಂಗವಿಕಲರ ಅಧಿನಿಯಮ ಕಾಯ್ದೆಯಿಂದ ವಿಮೋಚನೆಗೊಂಡಿತ್ತು. ಈ ಸದರಿ ಕಾಯ್ದೆ ಮಹತ್ತರ ಬದಲಾವಣೆ ತಂದಿದೆ. ಈ ಕಾಯ್ದೆಯ ಆಶಯದಂತೆ ಶ್ರೀ ಪಂಡಿತ್ ಪುಟ್ಟರಾಜು ಗವಾಯಿ ತಾಲ್ಲೂಕು ಅಂಗವಿಕಲರ ಒಕ್ಕೂಟ ಸುಮಾರು 8 ವರ್ಷಗಳಿಂದಲೂ ಮಧುಗಿರಿ ತಾಲ್ಲೂಕಿನ ಎಲ್ಲಾ ವಿಕಲ ಚೇತನ ವ್ಯಕ್ತಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಸರಿಯಷ್ಟೇ. ಯಾವುದೇ ಪ್ರೋತ್ಸಾಹ ಧನವಿಲ್ಲದೆ ಒಕ್ಕೂಟವು ತನ್ನ ಪದಾಧಿಕಾರಿಗಳಾದ ನಾವುಗಳು ದುಡಿಯುವ ಹಣದಲ್ಲಿಯೇ ಇದಕ್ಕೆ ತಗಲುವ ಖರ್ಚು, ವೆಚ್ಚಗಳನ್ನು ನಾವೇ ಭರಿಸುತ್ತಾ ಬಂದಿದ್ದೇವೆ. ತಿಂಗಳಿಗೊಮ್ಮೆ ಸಭೆಗಳನ್ನು ಸೇರಿ ತಾಲ್ಲೂಕಿನ ವಿಕಲ ಚೇತನ…
Author: News Desk Benkiyabale
ತುರುವೇಕೆರೆ : ತಾಲೂಕಿನ ಮಾಯಸಂದ್ರ ಹೋಬಳಿಯ ದೊಡ್ಡಶೆಟ್ಟೀಕೆರೆಯ ರೈತ ಶಿವಕುಮಾರ್ ಎಂಬುವವರ ದೇಶೀ ತಳಿ ಹಸುವನ್ನು ಚಿರತೆ ತಿಂದು ಹಾಕಿದೆ. ನಿನ್ನೆ ಸಾಯಂಕಾಲ ಮೇವು ತಿನ್ನುತ್ತಿದ್ದ ಹಸು ಮನೆಗೆ ಬಂದಿರಲಿಲ್ಲ. ಮೇವಿಗಾಗಿ ಬೇರೆಡೆ ಹೋಗಿರಬಹುದು ಎಂದು ಶಿವಕುಮಾರ್ ಭಾವಿಸಿದ್ದರು. ಆದರೆ ಬೆಳಗ್ಗೆ ತೋಟದ ಬಳಿಗೆ ಬಂದು ನೋಡಲಾಗಿ ತಮ್ಮ ದೇಶಿ ಹಸುವನ್ನು ಚಿರತೆ ತಿಂದು ಹಾಕಿದ್ದ ದೃಶ್ಯ ಕಂಡುಬಂತು. ಈ ಪ್ರದೇಶದಲ್ಲಿ ಬೆಟ್ಟ ಗುಡ್ಡಗಳು ಇದ್ದು ಚಿರತೆಯ ಹಾವಳಿ ಇದೆ. ಹಲವಾರು ಬಾರಿ ಅರಣ್ಯ ಇಲಾಖೆಗೆ ಈ ಕುರಿತು ಒತ್ತಾಯ ಮಾಡಿದ್ದರೂ ಸಹ ಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಎನ್.ಆರ್.ಜಯರಾಮ್ ಆರೋಪಿಸಿದ್ದಾರೆ. ದೇಶೀ ತಳಿ ನಾಟಿ ಹಸುಗಳನ್ನು ಸಾಕುವುದು ದುರ್ಲಬವಾಗಿರುವ ಈ ಸಂಧರ್ಭದಲ್ಲಿ ಚಿರತೆಗಳು ಹಸುಗಳನ್ನು ಭೇಟೆಯಾಡುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಶಿವಕುಮಾರ್ ರವರ ಈ ದೇಶೀ…
ತುಮಕೂರು: ನಗರದ 24ನೇ ವಾರ್ಡ್‍ನ ಉಪ್ಪಾರಹಳ್ಳಿಯ ಮುನೇಶ್ವರ ದೇವಸ್ಥಾನದ ಬಳಿ ಸರಿಯಾದ ರಸ್ತೆ, ಒಳಚರಂಡಿ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು, ಶಾಲಾ ಮಕ್ಕಳು ಓಡಾಡಲು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದ ರಸ್ತೆ ಕೆಸರು ಗದ್ದೆಯಂತಾಗಿದ್ದು, ಚರಂಡಿ ನೀರು ರಸ್ತೆಯಲ್ಲಿ ಹರಿಯುವುದರಿಂದ ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಓಡಾಡಲು ತುಂಬಾ ಕಷ್ಟವಾಗಿದೆ. ಈ ಸಂಬಂಧ ಪಾಲಿಕೆ ಸದಸ್ಯರು ಇತ್ತ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇಷ್ಟೇ ಅಲ್ಲದೆ ಈ ಜಾಗದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಡೆಂಗ್ಯೂ ರೋಗ ಹರಡುವ ಭೀತಿಯಲ್ಲಿ ಜನರಿದ್ದಾರೆ. ಸ್ಥಳಕ್ಕೆ ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಎಂಜಿನಿಯರ್‍ಗೆ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಶಂಕರ್, ಬಾಬು ಮತ್ತಿತರರು ಉಪಸ್ಥಿತರಿದ್ದರು.
ತುಮಕೂರು : ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಇವಿಪಿ)ಯು ನವೆಂಬರ್ 18ರವರೆಗೆ ನಡೆಯಲಿದ್ದು, ಮತದಾರರ ಪಟ್ಟಿಯಲ್ಲಿರುವ ತಪ್ಪುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್ ಕುಮಾರ್ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗವು 2020ರ ಜನವರಿ 1ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯು ಕಳೆದ ಸೆಪ್ಟೆಂಬರ್ 1ರಿಂದ ಆರಂಭಗೊಂಡಿದ್ದು, ನವೆಂಬರ್ 18ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಬಿಎಲ್‍ಒಗಳು ಮನೆಮನೆಗೂ ತೆರಳಿ ಮತದಾರರ ಪಟ್ಟಿಯನ್ನು ಪರಿಶೀಲಿಸಲಿದ್ದಾರೆ. ಅಲ್ಲದೇ ಮತದಾರರೇ ಎನ್‍ವಿಎಸ್‍ಪಿ ಪೋರ್ಟಲ್ ಹಾಗೂ ವೋಟರ್ ಹೆಲ್ಪ್‍ಲೈನ್ ಆ್ಯಪ್ ಮೂಲಕ ಖುದ್ದು ಪರಿಶೀಲಿಸಬಹುದು ಎಂದರು. ಇವಿಪಿ ಕಾರ್ಯಕ್ರಮದಡಿ ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಂಡಿರುವ ಮತದಾರರು, ಮತದಾರರ ನೋಂದಣಾಧಿಕಾರಿ ಕಚೇರಿ, ಸಹಾಯಕ ಮತದಾನ ನೋಂದಣಾಧಿಕಾರಿ ಕಚೇರಿ, ಬಿಎಲ್‍ಒ ಹಾಗೂ ಸಿಎಸ್‍ಸಿ ಕೇಂದ್ರಗಳಲ್ಲಿ…
ತುಮಕೂರು: ಕಿತ್ತೂರು ರಾಣಿ ಚನ್ನಮ್ಮ ಬ್ರಿಟೀಷರ ವಿರುದ್ಧ ಹೋರಾಡುವುದರ ಜೊತೆಗೆ ಸಾಮಾಜಿಕ ಚಿಂತನೆಯಲ್ಲೂ ಸಹ ಹಲವಾರು ಮಾರ್ಗದರ್ಶನಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಯುವ ಪೀಳಿಗೆಯ ಮಹಿಳೆಯರಿಗೆ ಆದರ್ಶವಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಹೇಳಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಕಿತ್ತೂರು ರಾಣಿ ಚನ್ನಮ್ಮ ಧೈರ್ಯ ಮತ್ತು ಸ್ಥೈರ್ಯಕ್ಕೆ ಹೆಸರುವಾಸಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಸಾಧನೆಗಳು ಇಂದಿನ ಸಮಾಜದಲ್ಲಿ ಮುಂದೆ ಬರಲು ಮಹಿಳೆಯರಿಗೆ ಪ್ರೇರಣೆಯಾಗಿವೆ ಎಂದರು. ಕಿತ್ತೂರು ರಾಣಿ ಚನ್ನಮ್ಮ ಅವರಂತಹ ಹೋರಾಟಗಾರರ ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಅವರಲ್ಲಿ ದೇಶಾಭಿಮಾನ ತುಂಬಬೇಕು. ಇಂದಿನ ಯುವಜನಾಂಗಕ್ಕೆ ಹಿಂದಿನ ಇತಿಹಾಸ ತಿಳಿಯುವ ಆಸಕ್ತಿಯಿಲ್ಲ. ಮೊಬೈಲ್ ಯುಗದಲ್ಲಿರುವ ಕಾರಣ ಸ್ವಾತಂತ್ರ್ಯ ಹೋರಾಟಗಾರರ ಸಾಧನೆಯ ಬಗ್ಗೆ ತಿಳಿದುಕೊಳ್ಳುವ ಮನಸ್ಸನ್ನು…
ಮಧುಗಿರಿ : ಮಧುಗಿರಿಯ ಸಿದ್ದಾಪುರ ಕೆರೆಯ ಬಳಿ ನಿರ್ಮಿಸುತ್ತಿರುವ ಪೆಟ್ರೋಲ್ ಬಂಕ್ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಹಲವು ಕನ್ನಡಪರ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದವು. ಮಧುಗಿರಿ ಪಟ್ಟಣಕ್ಕೆ ಕುಡಿಯುವ ನೀರೋದಗಿಸುವ ಸಿದ್ದಾಪುರ ಕೆರೆಯ ಬಳಿಯಲ್ಲಿ ಖಾಸಗಿ ಜಮೀನಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಪೆಟ್ರೋಲ್ ಬಂಕ್‍ನಿಂದ ಪೆಟ್ರೋಲಿಯಂ ಉತ್ಪನ್ನಗಳು ಸೋರಿಕೆಯಾಗಲಿದ್ದು, ಇದರಿಂದ ಸಮಸ್ಯೆಗಳು ಹೆಚ್ಚಾಗಲಿವೆ ಎಂದು ಒತ್ತಾಯಿಸಿ ಗ್ರೇಡ್ 2 ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದವು. ಮನವಿ ನೀಡಿ ಮಾತನಾಡಿದ ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ರಾಘವೇಂದ್ರ, ಈ ಬಂಕ್ ನಿರ್ಮಾಣದಿಂದ ಕೆರೆಯಲ್ಲಿನ ನೀರು ಕಲುಷಿತಗೊಳ್ಳುತ್ತದೆ. ಪಟ್ಟಣದಲ್ಲಿನ 30 ಸಾವಿರ ಜನರಿಗೆ ಇದರಿಂದ ಆರೋಗ್ಯ ಸಮಸ್ಯೆ ಕಾಡುತ್ತದೆ ಎಂದು ತಿಳಿಸಿ, ಕಾಮಗಾರಿಯನ್ನು ನಿಲ್ಲಿಸಿ ಕೆರೆಯನ್ನು ಉಳಿಸುವಂತೆ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯ ಗಂಗರಾಜು, ಮುಖಂಡ ರವಿಕಾಂತ್ ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ರಾಘವೇಂದ್ರ, ಕನ್ನಡ ರಕ್ಷಣಾ ವೇದಿಕೆಯ ಶಿವಕುಮಾರ್, ಜಯಕರ್ನಾಟಕ ಸಂಘಟನೆಯ…
ತುಮಕೂರು : ತುಮಕೂರು ನಗರದಲ್ಲಿ ಮುಖ್ಯರಸ್ತೆಗಳು ಸೇರಿದಂತೆ ವಿವಿಧ ವಾರ್ಡ್‍ಗಳಲ್ಲಿ, ಬಡಾವಣೆಗಳಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ತುಮಕೂರು ನಗರವು ಸ್ಮಾರ್ಟ್ ಸಿಟಿಯಾಗುತ್ತಿದ್ದು, ವಿವಿಧ ಕಾಮಗಾರಿಗಳು ಬಿರುಸಿನಿಂದ ನಡೆಯುತ್ತಿವೆ. ಇದರ ಜೊತೆಯಲ್ಲಿ ಬೆಸ್ಕಾಂ ಇಲಾಖೆಯವರು, 24 ಗಂಟೆಗಳ ಕುಡಿಯುವ ನೀರಿನ ಸರಬರಾಜು, ಉಜ್ವಲ ಯೋಜನೆಯಡಿಯಲ್ಲಿ ಮನೆಮನೆಗೆ ಗ್ಯಾಸ್ ಸಂಪರ್ಕ ಕಲ್ಪಿಸಲು ವಿವಿಧ ಭಾಗಗಳಲ್ಲಿ ಹಳ್ಳಗಳನ್ನು ತೆಗೆದು ಹಾಗೆ ಬಿಡಲಾಗುತ್ತಿದೆ. ಅಲ್ಲದೆ ಒಂದು ಕಡೆ ಹಳ್ಳ ಮುಚ್ಚಿದರೆ ಇನ್ನೊಂದು ಕಡೆ ಹಳ್ಳ ತೆಗೆಯುತ್ತಾರೆ. ಯಾರು ಯಾವ ಕಾಮಗಾರಿ ಮಾಡುತ್ತಿದ್ದಾರೆ ಎಂಬುದು ತಿಳಿಯದಾಗಿದೆ ಎಂದು 15ನೇ ವಾರ್ಡ್ ಪಾಲಿಕೆ ಸದಸ್ಯೆ ಗಿರಿಜಾಧನಿಯಾಕುಮಾರ್ ಆರೋಪಿಸಿದ್ದಾರೆ. ಸ್ಮಾರ್ಟ್ ಸಿಟಿ ಕಾಮಗಾರಿಗಳು ಎಲ್ಲೆಲ್ಲಿ ನಡೆಯುತ್ತಿದೆಯೋ..? ಯಾವ ಹಂತದಲ್ಲಿದೆ. ಎಂಬುದು ಏನು ತಿಳಿಯದಾಗಿದೆ. ಒಂದು ಕಡೆ ಗುಂಡಿ ಅಗಿದು ಹೋಗಿರುತ್ತಾರೆ. ಮತ್ತೊಂದು ಕಡೆ ಪೈಪ್‍ಲೈನ್ ಹಾಕುತ್ತೇವೆ…
ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾಜಿ ಮಂತ್ರಿ ಹಾಗೂ ಬಿಜೆಪಿ ಮುಖಂಡರಾದ ಸೊಗಡು ಶಿವಣ್ಣ ಅವರು ನೀಡಿರುವ ಹಣದ ಭಯೋತ್ಪಾಧಕ ಹೇಳಿಕೆಯನ್ನು ಮಾಜಿ ಶಾಸಕರಾದ ಡಾ.ಎಸ್.ರಫೀಕ್ ಅಹಮದ್ ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯದಲ್ಲಿ ಐದು ವರ್ಷಗಳ ಕಾಲ ಜನಪರ ಆಡಳಿತ ನೀಡಿ, ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಮನಸ್ವಿನಿ ಹೀಗೆ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಸಿದ್ದರಾಮಯ್ಯನವರು, ಬಿಜೆಪಿ ಪಕ್ಷದವರು ಮಹಾರಾಷ್ಟ್ರ ಚುನಾವಣೆಗೆ ಗೆಲ್ಲಲ್ಲು ಟ್ರಂಪ್ ಕಾರ್ಡಾಗಿ ಬಳಕೆ ಮಾಡುತ್ತಿರುವ ಭಾರತ ರತ್ನ ಪ್ರಶಸ್ತಿಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ. ವೀರ ಸಾರ್ವಕರ್‍ಗೆ ನೀಡುವ ಮೊದಲು ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಸಿದ್ದಗಂಗಾ ಶ್ರೀಗಳಿಗೆ ನೀಡುವಂತೆ ಹೇಳಿಕೆ ನೀಡಿದ್ದಾರೆ. ಇದನ್ನು ತುಮಕೂರು ಜಿಲ್ಲೆಯ ಜನರಾದ ನಾವುಗಳು ಸ್ವಾಗತಿಸಬೇಕಾಗಿದೆ. ಅದರೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಿ ಎಂದು ತಾವು ಮುಖ್ಯಮಂತ್ರಿಯಾಗಿದ್ದಾಗಲೂ ಕೇಂದ್ರಕ್ಕೆ ಪತ್ರ ಬರೆದಿದ್ದ…
ತುರುವೇಕೆರೆ: ಪಟ್ಟಣದ ಕ್ರೀಡಾಂಗಣ ತುಂಬ ನೀರು ನಿಂತು ವಾಯು ವಿಹಾರಿಗಳಿಗೆ ತೊಂದರೆಯಾಗಿದ್ದು ರೊಚ್ಚಿಗೆದ್ದ ಮುಂಜಾನೆ ಗೆಳೆಯರ ಬಳಗದ ಸದಸ್ಯರು ಸೋಮವಾರ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಗಿಡ ನೆಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ವಾಯುವಿಹಾರಿಗಳಿಗೆ ಇದೊಂದೇ ಸೂಕ್ತ ಸ್ಥಳವಾಗಿದ್ದು ಇಲ್ಲಿ ಪ್ರತಿದಿನ ಮುಂಜಾನೆ ನೂರಾರು ನಾಗರೀಕರು ವಾಯು ವಿಹಾರಕ್ಕೆ ಆಗಮಿಸುತ್ತಾರೆ. ಪಟ್ಟಣದಲ್ಲಿ ಇದೊಂದು ಕ್ರೀಡಾಂಗಣ ಹೊರತುಪಡಿಸಿದರೆ ಯಾವುದೇ ಸ್ಥಳವಿಲ್ಲ. ಆದರೆ ಇತ್ತೀಚೆಗೆ ಮೈದಾನದಲ್ಲಿ 200 ಮೀಟರ್ ಟ್ರಾಕ್ ಫಾರ್ಮೇಶನ್‍ನ ಕಾಮಗಾರಿ ನೆಪದಲ್ಲಿ ಕ್ರೀಡಾಂಗಣವನ್ನು ಹಾಳುಗೆಡವಿದ್ದಾರೆ. ಇದನ್ನು ಮಾಡಿದ ಉದ್ದೇಶವಾದರೂ ಏನು? ಯಾರಿಗೆ ಉಪಯೋಗವಾಗಲಿದೆ ಎಂಬುದೂ ಗೊತ್ತಿಲ್ಲ. ಮಾಡಿದ ಕಾಮಗಾರಿ ಸಮರ್ಪಕವಾಗಿಲ್ಲ. ವ್ಯವಸ್ಥಿತವಾಗಿ ಮಾಡದ್ದರಿಂದ ಕ್ರೀಡಾಂಗಣದಲ್ಲಿ ಮಳೆ ನೀರು ಆಚೆ ಹೋಗಲು ವ್ಯವಸ್ಥೆಯಿಲ್ಲದೆ ಕ್ರೀಡಾಂಗಣ ಒಳಗೆ ನೀರಿನಿಂದ ಆವೃತವಾಗಿದೆ. ಮುಂಜಾನೆ ಗೆಳೆಯರ ಬಳಗದ ಡಿ.ಜೆ.ರಂಗಸ್ವಾಮಿ ಮಾತನಾಡಿ, ಈಗ್ಗೆ ಐದಾರು ತಿಂಗಳ ಹಿಂದೆ ಸ್ಪೋಟ್ಸ್ ಅಂಡ್‍ಕಲ್ಚರಲ್ ಆಕ್ಟಿವಿಟೀಸ್ ವತಿಯಿಂದ ಕ್ರೀಡಾಂಗಣದಲ್ಲಿ 200…
ತುಮಕೂರು : ಜನರಲ್ ಕಾರಿಯಪ್ಪ ರಸ್ತೆ ಕಾಮಗಾರಿಗೆ ಕಾರ್ಯಾದೇಶ ನೀಡಿ ಈಗಾಗಲೇ 10 ತಿಂಗಳು ಕಳೆದಿದ್ದರೂ ಸಹ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಯಾವುದೇ ಪ್ರಗತಿ ಹೊಂದಿರುವುದಿಲ್ಲ. ಇನ್ನೊಂದು ವಾರದೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಗುತ್ತಿಗೆದಾರರೊಂದಿಗೆ ಮಾಡಿಕೊಂಡಿರುವ ಕರಾರು ಒಪ್ಪಂದವನ್ನು ಅಂತಿಮಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅವರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಅಜಯ್ ಅವರಿಗೆ ಸೂಚನೆ ನೀಡಿದರು. ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಪೂರ್ಣಗೊಳ್ಳದಿರುವ ಬಗ್ಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಗುತ್ತಿಗೆದಾರರು, ಸ್ಮಾರ್ಟ್‍ಸಿಟಿ ಅಧಿಕಾರಿಗಳು ಹಾಗೂ ಪಿ.ಎಂ.ಸಿ ಅಭಿಯಂತರರೊಂದಿಗೆ ಚರ್ಚಿಸಿದ ಅವರು ಗುತ್ತಿಗೆದಾರರು ಹಾಗೂ ಇತರೆ ಇಲಾಖೆಯವರ ಸಮನ್ವಯತೆ ಇಲ್ಲದಿರುವುದರಿಂದ ಕಾಮಗಾರಿ ಪ್ರಗತಿಯಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಳೆದ 1 ವಾರದಿಂದ ತೀವ್ರ ಮಳೆಯಾಗುತ್ತಿರುವುದರಿಂದ…











