Author: News Desk Benkiyabale

ತುಮಕೂರು : ಸ್ಥಳೀಯ ಸಂಸ್ಥೆಗಳಿಗೆ ಕಾಲ-ಕಾಲಕ್ಕೆ ಚುನಾವಣೆಗಳು ನಡೆದಾಗ ಮಾತ್ರ ಹಣಕಾಸು ಆಯೋಗವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡಲಿದೆ ಎಂದು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ: ಸಿ. ನಾರಾಯಣಸ್ವಾಮಿ ತಿಳಿಸಿದರು. ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ 5ನೇ ರಾಜ್ಯ ಹಣಕಾಸು ಆಯೋಗದ ವಿಷಯಗಳ ಕುರಿತು ಜಿಲ್ಲಾ ಪಂಚಾಯತಿಯಲ್ಲಿ ಬುಧವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೇಂದ್ರ ಹಣಕಾಸು ಆಯೋಗವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ಮಾಡುವ ಸಂದರ್ಭದಲ್ಲಿ ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಗಮನದಲ್ಲಿಟ್ಟುಕೊಂಡು ಹಂಚಿಕೆ ಮಾಡಲಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ ನಿರ್ಮಾಣ, ವಿದ್ಯುತ್ ಸೇರಿದಂತೆ ಜನಸಾಮಾನ್ಯರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸ್ಥಳೀಯ ಸಂಸ್ಥೆಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು. “ತೆರಿಗೆ ಮೊದಲು-ಸೇವೆ ನಂತರ” ಎಂಬ ಧ್ಯೇಯವಾಕ್ಯದಡಿ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸಿ ಸರ್ಕಾರದ…

Read More

ತುಮಕೂರು: ಮತ್ಸö್ಯದರ್ಶಿನಿ ಹೋಟೆಲ್ ನಲ್ಲಿ ಕಳೆಪೆ ಗುಣಮಟ್ಟದ ಪದಾರ್ಥಗಳನ್ನು ಬಳಸುವ ಮೂಲಕ ಆಹಾರ ಗುಣಮಟ್ಟವನ್ನು ಕಡಿಮೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಹೋಟೆಲ್‌ನ ವ್ಯವಸ್ಥಾಪಕಿಯ ದುರ್ವರ್ತನೆಗೆ ಗ್ರಾಹಕರು ಬೇಸತ್ತಿದ್ದು, ಈಕೆಯ ವರ್ಗಾವಣೆಗೆ ಆಗ್ರಹಗಳು ಕೇಳಿ ಬರುತ್ತಿದೆ. ತುಮಕೂರು ವಿವಿಯ ಹಿಂದೆ ಸರ್ಕಾರದ ಮತ್ಸö್ಯ ದರ್ಶಿನಿ ಹೋಟೆಲ್ ಇದೆ. ಇಲ್ಲಿಗೆ ನಿತ್ಯ ನೂರಾರು ಜನರು ಊಟಕ್ಕೆಂದು ಬರುತ್ತಿದ್ದರು. ಆದರೆ, ಗ್ರಾಹಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆ ಹೋಟೆಲ್ ವ್ಯವಸ್ಥಾಪಕಿ ಕಾವ್ಯಾ ಅವರ ಗ್ರಾಹಕರೊಂದಿಗಿನ ಅನುಚಿತ ವರ್ತನೆಯೇ ಮುಖ್ಯವಾದ ಕಾರಣವೆಂದು ಹೇಳಲಾಗಿದೆ. ರುಚಿ ಶುಚಿ ಇರದ ಊಟ: ಅಡುಗೆ ಮಾಡಿ ಬಡಿಸುವಲ್ಲಿ ಹಿಂದೆ ಇದ್ದಂತಹ ಶ್ರದ್ಧೆ ಈಗ ಇಲ್ಲವಾಗಿದೆ. ಸಾಂಬರು ರುಚಿ ಇರದ ಬಗ್ಗೆ ಗ್ರಾಹಕರು ಕೇಳಿದರೆ `ಬೇಕಾದರೆ ತಿನ್ನಬಹುದು, ಇಲ್ಲವಾದರೆ ನಡೆಯಿರಿ’ ಎಂಬ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂಬ ದೂರು ಕೇಳಿ ಬಂದಿದೆ. ಅಡುಗೆಗೆ ಬಳಸುವ ಆಹಾರ ಪದಾರ್ಥಗಳು ಕಡಿಮೆ ಬೆಲೆಗೆ ಕೊಳ್ಳಲಾಗುತ್ತಿದ್ದು, ಅತ್ಯಂತ ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಿ ಗ್ರಾಹಕರಿಗೆ…

Read More

ಚಿಕ್ಕನಾಯಕನಹಳ್ಳಿ; ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಅಲರ್ಜಿ ಔಷಧಿ ಕುಡಿದ ವಿದ್ಯಾರ್ಥಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ ಪಟ್ಟಣದ ಹೊರವಲಯದಲ್ಲಿರುವ ಮೇಲ್ನಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಧನುಷ್ ಎಂದು ತಿಳಿದುಬಂದಿದೆ ಇAದು ಬೆಳಿಗ್ಗೆ ರೂಮ್ನಲ್ಲಿ ತನ್ನ ಸಹಪಾಠಿಯ ತಿನ್ನಲು ತಂದಿಟ್ಟುಕೊAಡಿದ್ದ ಚಿಪ್ಸನ್ನು ಧನುಷ್ ತಿಂದ ಪರಿಣಾಮ ಅವನ ಸ್ನೇಹಿತ ಈ ವಿಷಯವನ್ನು ಪ್ರಾಂಶುಪಾಲರ ಗಮನಕ್ಕೆ ತರುತ್ತೇನೆ ಎಂದು ಸಹಪಾಠಿ ಮತ್ತೊಬ್ಬ ವಿದ್ಯಾರ್ಥಿ ಹೇಳಿದರ ಪರಿಣಾಮ ಈ ವಿದ್ಯಾರ್ಥಿಗೆ ಭಯಪಟ್ಟು ಮೈ ಅಲರ್ಜಿಗೆ ತಂದಿಟ್ಟುಕೊAಡಿದ್ದ ಬೇರೆ ವಿದ್ಯಾರ್ಥಿಯ ಔಷಧಿಯನ್ನು ಈತ ಕುಡಿದ ಪರಿಣಾಮ ಯಾರಿಗೂ ತಿಳಿಸದೆ ಬೆಳಗ್ಗಿನ ತಿಂಡಿ ಮಧ್ಯಾಹ್ನದ ಊಟ ಸೇವಿಸಿದ ಪರಿಣಾಮ ಸಂಜೆ 4:00 ಹೊತ್ತಿಗೆ ಅವನ ದೇಹ ಅಸ್ವಸ್ಥ ಗೊಂಡಿದೆ ಅದಕ್ಕೆ ಕೂಡಲೇ ಧನುಷ್ ಎಂಬ ವಿದ್ಯಾರ್ಥಿಯನ್ನು ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿ ವಿದ್ಯಾರ್ಥಿಯ ಪೋಷಕರಿಗೂ ತಿಳಿಸಲಾಗಿದೆ ವಿದ್ಯಾರ್ಥಿ ಪರೀಕ್ಷಿಸಿದ ವೈದ್ಯ ಡಾ. ಉಮೇಶ್ ಕುಡಿದ ಒಂದು…

Read More

ಹೆಬ್ಬೂರು: ನಾವು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ನಿರ್ಮಾಣ ಮಾಡಿಯೇ ತೀರುತ್ತೇವೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಜಯಗಳಿಸಿದರೆ ಇತಿಹಾಸ ಸೃಷ್ಟಿಯಾಗುತ್ತದೆ. ಹೋರಾಟಗಳಲ್ಲಿ ನಾವು ಸತ್ತರೆ ನಮ್ಮ ಮುಂದಿನ ಪೀಳಿಗೆ ಕನಸುಗಳನ್ನು ಸಾಕಾರಗೊಳಿಸಲಿದೆ ಎಂಬ ನಂಬಿಕೆ ನಮಗಿದೆ ಎಂದು ಮುಖಂಡರಾದ ಹೆತ್ತೇನಹಳ್ಳಿ ಮಂಜುನಾಥ್ ಅವರು ತಿಳಿಸಿದರು. ಹೋಬಳಿಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಅವರ ಕಂಚಿನ ಪುತ್ಥಳಿ ನಿರ್ಮಾಣದ ಭೂಮಿ ಪೂಜೆಯನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಜುನಾಥ್, ಸಮ ಸಮಾಜಕ್ಕಾಗಿ ನಮ್ಮ ರಕ್ತದ ಕಣಕಣವೂ ಮಿಡಿಯುತ್ತಿದೆ. ಈ ನಾಡಿನ ಜನರಿಗಾಗಿ ನಮ್ಮ ಪ್ರಾಣ ತ್ಯಾಗಕ್ಕೂ ಸಿದ್ಧರಿದ್ದೇವೆ. ನಾವೆಲ್ಲರೂ ಜಾತಿ ಭೇದಗಳನ್ನು ಮರೆತು ಪರಸ್ಪರ ಕೈ ಹಿಡಿದು ಬದುಕೋಣ ಎಂದು ಸಾರಿದರು. ನಾವೆಲ್ಲಾ ಒಂದಾದಾಗ ಮಾತ್ರ ಈ ಸಾಮಾಜಿಕ ವ್ಯವಸ್ಥೆ ಸರಿಹೋಗುತ್ತದೆ. ಅಂಬೇಡ್ಕರ್ ಭಾರತದ ಕಣ್ತೆರೆಸಿದರು. ಆದರೆ, ಶ್ರೀವಾಲ್ಮೀಕಿ ಬದುಕಿನ ಮೌಲ್ಯಗಳನ್ನು ತಿಳಿಸಿಕೊಟ್ಟರು. ಇಂತಹ ದಾರ್ಶನಿಕರ ಮಾರ್ಗದರ್ಶನದಲ್ಲಿ…

Read More

ತುಮಕೂರು: ತುಮಕೂರು ಹಾಲು ಒಕ್ಕೂಟದ ನೂತನ ಅಧ್ಯಕ್ಷ ಹಾಗೂ ಶಾಸಕ ಹೆಚ್.ವಿ. ವೆಂಕಟೇಶ್ ಅವರು ಸೋಮವಾರ ತುಮುಲ್‌ನ ಅಧ್ಯಕ್ಷರ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಅಧಿಕಾರ ವಹಿಸಿಕೊಂಡರು. ನಂತರ ಮಾತನಾಡಿದ ಅವರು, ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಹಾಲು ಒಕ್ಕೂಟದ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುವ ನಿಟ್ಟಿನಲ್ಲಿ ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ಪಡೆದು ಕಾರ್ಯನಿರ್ವಹಿಸುತ್ತೇನೆ ಎಂದರು. ಹಾಲು ಒಕ್ಕೂಟವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಜಿಲ್ಲೆಯ ಸಚಿವರುಗಳು, ಶಾಸಕರು ಹಾಗೂ ಹಾಲು ಒಕ್ಕೂಟದ ನಿರ್ದೇಶಕರುಗಳ ಸಲಹೆ, ಮಾರ್ಗದರ್ಶನದೊಂದಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು. ಹಾಲು ಒಕ್ಕೂಟದ ವತಿಯಿಂದ ರೈತರಿಗೆ ಏನೇನು ಅನುಕೂಲ ಮಾಡಲು ಸಾಧ್ಯವೋ ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ನಾಗೇಶ್‌ಬಾಬು, ಎಸ್.ಆರ್. ಗೌಡ, ಡಿ. ಕೃಷ್ಣಕುಮಾರ್, ಮಾದಿಹಳ್ಳಿ ಪ್ರಕಾಶ್, ನಂಜೇಗೌಡ, ಸಿ.ವಿ. ಮಹಲಿಂಗಯ್ಯ, ಸಿದ್ದಗಂಗಯ್ಯ, ಚಂದ್ರಶೇಖರೆಡ್ಡಿ, ತುಮುಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ಕಲ್ಲಹಳ್ಳಿ ದೇವರಾಜು,…

Read More

ತುಮಕೂರು : ರಾಷ್ಟçದ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ ಜನವರಿ 26ರ ಭಾನುವಾರ ನಡೆದ ಗಣರಾಜ್ಯೋತ್ಸವ ಸ್ತಬ್ಧಚಿತ್ರ ಪಥ ಸಂಚಲನದಲ್ಲಿ ಸರ್ವಜನಾಂಗದ ಶಾಂತಿಯ ತೋಟದಂತೆ ಕಂಗೊಳಿಸುತ್ತಿರುವ ‘ಲಕ್ಕುಂಡಿ : ಶಿಲ್ಪಕಲೆಯ ತೊಟ್ಟಿಲುʼ ರಾಜ್ಯದ ಸ್ತಬ್ಧಚಿತ್ರವು ನೆರೆದ ಜನಸ್ತೋಮವನ್ನು ಮಂತ್ರಮುಗ್ಧರನ್ನಾಗಿಸಿದ್ದಲ್ಲದೇ, ಚಪ್ಪಾಳೆಯ ಕರತಾಡನದ ಮೂಲಕ ಅದ್ದೂರಿ ಸ್ವಾಗತ ದೊರೆಯಿತು. ರಾಜಧಾನಿಯ ಕರ್ತವ್ಯ ಪಥದಲ್ಲಿ ರಾಜ್ಯದ ಸ್ತಬ್ಧಚಿತ್ರ ಸಾಗುವುದರೊಂದಿಗೆ ಕರ್ನಾಟಕ ರಾಜ್ಯದ ಹಿರಿಮೆ, ಸರ್ವಧರ್ಮ ಸಮನ್ವಯ, ಶಾಂತಿ, ಸಹಬಾಳ್ವೆಯನ್ನು ಪ್ರತಿಪಾದಿಸಿತು. ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ತನ್ನ ವೈಶಿಷ್ಟಪೂರ್ಣ ಸ್ತಬ್ಧಚಿತ್ರಗಳ ಮೂಲಕವೇ ದೇಶದ ಗಮನ ಸೆಳೆಯುತ್ತಿದೆ. ನಮ್ಮ ರಾಜ್ಯವು ವರ್ಷದಿಂದ ವರ್ಷಕ್ಕೆ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಲೇ ಸಾಗಿದ್ದು, ಈ ಬಾರಿ ಲಕ್ಕುಂಡಿಯ ಶಿಲ್ಪಕಲೆಯಿಂದ ಕೂಡಿರುವ ಐತಿಹಾಸಿಕ ದೇವಾಲಯಗಳು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿತು. ನಿಗಧಿತ ರೂಪು-ರೇಷೆಗಳಂತೆ ಈ ಸ್ತಬ್ಧಚಿತ್ರ ದಿನಗಳ ಲೆಕ್ಕದಲ್ಲಿ ಮೈದಳೆದಿದೆ. ಕಡಿಮೆ ಅವಧಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಸ್ತಬ್ಧಚಿತ್ರ ಕಣ್ಣಿಗೆ ಕಟ್ಟುವ ರೀತಿಯಲ್ಲಿ…

Read More

ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ, ತುಮುಲ್ ಅಧ್ಯಕ್ಷರನ್ನಾಗಿ ಚುನಾಯಿತರನ್ನು ಆಯ್ಕೆ ಮಾಡದೆ ನಾಮ ನಿರ್ದೇಶಕರಾಗಿದ್ದ ಶಾಸಕರನ್ನು ಮಾಡಿರುವುದು ರೈತರ ಪಾಲಿನ ಕರಾಳ ದಿನಗಳ ಆರಂಭ ಇದು ರೈತರ ಮುಖಕ್ಕೆ ಬಾರಿಸಿ ದಂತಾಗಿದೆ ಎಂದು ಮಾಜಿ ಸಚಿವ ಜೆಸಿ ಮಾಧುಸ್ವಾಮಿ ತೀವ್ರವಾಗಿ ಟೀಕಿಸಿದರು. ಪಟ್ಟಣದ ನಂದಿನಿ ಭವನದ ಆವರಣದಲ್ಲಿ ನಡೆದ ತುಮುಲ್ ನಾ ಆಡಳಿತ ಮಂಡಳಿ ಚುನಾವಣೆಯಲ್ಲಿ ತಾಲೂಕಿನ ನಿರ್ದೇಶಕರಾಗಿ ಆಯ್ಕೆಯಾದ ಬಿಎನ್ ಶಿವಪ್ರಕಾಶ್ ರವರು ಆಯೋಜಿಸಿದ್ದ ಮತದಾರರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ತಿಲಾಂಜಲಿ ನೀಡಿ ಸಹಕಾರ ಕ್ಷೇತ್ರಗಳನ್ನು ಕುಟುಂಬದ ಸಂಸ್ಥೆಗಳನ್ನಾಗಿಸುವ ಹುನ್ನಾರಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಕೆ ಎನ್ ರಾಜಣ್ಣ ಕೈಜೋಡಿಸಿ ಇರುವುದು ಇಡೀ ರೈತ ಸಮೂಹಕ್ಕೆ ಕಾಪಾಳ ಮೋಕ್ಷ ಮಾಡಿದಂತಾಗಿದೆ ಎಂದರು ಡಾ. ವರ್ಗೀಸ್ ಕುರಿಯನ್ ರವರ ಆಶಯವನ್ನು ಮಣ್ಣು ಪಾಲು ಮಾಡಿದ ಮಹನೀಯರ ನಡೆ ಕ್ಷಮಿಸಲಾರದೆಂದ ಅವರು ಹಾಲು ಒಕ್ಕೂಟದ ಎಲ್ಲಾ ವ್ಯವಸ್ಥೆಗಳು ಡೈರಿಗೆ ಹಾಲು ಹಾಕವ ರೈತರ ಹಕಾಗಿರಬೇಕೆನ್ನುವುದು ಕೊನೆ ಕುರಿಯನ್…

Read More

ತುರುವೇಕೆರೆ: ರೈತರಿಗೆ ನೀಡುವ ಸಾಲ ಕಡಿತ ಮಾಡಿರುವ ನಬಾರ್ಡ್ ನೀತಿ ವಿರೋದಿಸಿ ಹಾಗೂ ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ಕಿರುಕುಳ Àಡೆಗಟ್ಟುವಂತೆ ಆಗ್ರಹಿಸಿ ಜ.29 ರಂದು ಬೆಂಗಳರಿನ ರಿಸರ್ವ್ ಬ್ಯಾಂಕ್ ಕಚೇರಿ ಎದುರು ರೈತರ ಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾದ್ಯಕ್ಷ ರಾಜ್ಯ ಕಾರ್ಯದರ್ಶಿ ಎ.ಗೊವಿಂದರಾಜ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತ ದೇಶ ಕೃಷಿ ಪ್ರದಾನ ದೇಶವಾಗಿದೆ ಕೃಷಿ ಮಾಡುವ ರೈತರೂ ಇಂದಿಗೂ ಸಾಲದ ಸುಳಿಯಲ್ಲಿ ಸಿಲುಕಿ ಸಾಯುವಂತಹ ಪರಿಸ್ಥಿತಿ ಇದೆ. ದೇಶದಲ್ಲಿ 36 ನಿಮಿಷಕೊಬ್ಬ ರೈತರುಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ದೇಶದಲ್ಲಿ 1ಲಕ್ಷದ 46 ಸಾವಿರ ರೈತರು ಸಾಲದ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ವರದಿ ಇದೆ. ಈ ಹಿಂದೆ ಕೃಷಿ ಕ್ಷೇತ್ರವನ್ನು ಸದೃಡಗೊಳಿಸುವ ದೃಷ್ಟಿಯಿಂದ ನಬಾರ್ಡ್ ಬ್ಯಾಂಕ್ ಸಾಲದ ಮೂಲಕ ಆರ್ಥಿಕ ನೆರವುನೀಡುತಿತ್ತು. ಆದರೆ ನಬಾರ್ಡ್ ಕೃಷಿಗೆ ನೀಡುತ್ತಿದ್ದ ಅಲ್ಪಾವದಿ ಸಾಲದ ಮೊತ್ತವನ್ನು ಕಡಿತ ಗೊಳಿಸಿದ್ದು ಕೃಷಿ ಕ್ಷೇತ್ರದ…

Read More

ತುಮಕೂರು: ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಸಂಸ್ಥೆಯಿAದ ಈ ತಿಂಗಳ 27ರಂದು ಸೋಮವಾರ ನಗರದಲ್ಲಿ ಸಂವಿಧಾನ ಸನ್ಮಾನ, ‘ಸಂವಿಧಾನ ಬದಲಾಯಿಸಿದ್ದು ಯಾರು’ ಎಂಬ ಪುಸ್ತಕ ಬಿಡುಗಡೆ ಹಾಗೂ ಸಂವಿಧಾನ ಗ್ರಂಥದ ಶೋಭಾಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಹೆಚ್.ಎ.ಆಂಜಿನಪ್ಪ ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, 27ರಂದು ಸೋಮವಾರ ನಗರÀದ ಬಿಜಿಎಸ್ ವೃತ್ತದಿಂದ ಮಂಗಳಾ ವಾದ್ಯದೊಂದಿಗೆ ಸಂವಿಧಾನ ಗ್ರಂಥದ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ನಂತರ ಬೆಳಿಗ್ಗೆ 10.30ಕ್ಕೆ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆಯುವ ಸಂವಿಧಾನ ಸನ್ಮಾನ ಸಮಾರಂಭವನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಉದ್ಘಾಟಿಸುವರು. ಮಾಜಿ ಉಪ ಮುಖ್ಯಮಂತ್ರಿ, ಲೋಕಸಭಾ ಸದಸ್ಯ ಗೋವಿಂದ ಕಾರಜೋಳ ಅವರು ವಿಕಾಸ್ ಪುತ್ತೂರು ರಚಿಸಿರುವ ‘ಸಂವಿಧಾನ ಬದಲಾಯಿಸಿದ್ದು ಯಾರು?’ ಪುಸ್ತಕ ಬಿಡುಗಡೆ ಮಾಡುವರು. ಶಾಸಕ ಬಿ.ಸುರೇಶ್‌ಗೌಡ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು. ಲೇಖಕ, ಸಾಮಾಜಿಕ ಕಾರ್ಯಕರ್ತ ವಾದಿರಾಜ್ ವಿಚಾರ ಮಂಡನೆ ಮಾಡುವರು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಮುಖಂಡ…

Read More

ತುಮಕೂರು: ನೀವು ಎತ್ತರಕ್ಕೆ ಏರಬೇಕೆಂದರೆ ಕಷ್ಟಪಟ್ಟು ಕೆಲಸಮಾಡುವುದೊಂದೇ ದಾರಿ. ಯಾವ ಕ್ಷೇತ್ರದಲ್ಲಿ ನಿಮಗೆ ಅಭಿರುಚಿ, ಸಾಮರ್ಥ್ಯ ಇದೆಯೋ ಅದನ್ನು ಕಂಡುಕೊAಡು ಅದರಲ್ಲಿ ಸಮರ್ಪಣಾ ಭಾವದಿಂದ ದುಡಿಯಿರಿ. ಯಾವ ದೇಶದಲ್ಲಿಯೂ ಸರ್ಕಾರವೇ ಎಲ್ಲರಿಗೂ ಉದ್ಯೋಗ ಕೊಡುತ್ತಿಲ್ಲ ಎಂದು ಇನ್ಫೋಸಿಸ್ ಸಂಸ್ಥೆಯ ಸಹಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾನಿಲಯವು ಶನಿವಾರ ಹಮ್ಮಿಕೊಂಡಿದ್ದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ನಾಯಕತ್ವ ಗುಣವುಳ್ಳವನನ್ನು ಸಮಾಜ ಗೌರವಿಸುತ್ತದೆ. ಉತ್ತಮ ಮೌಲ್ಯಗಳು, ಪ್ರಾಮಾಣಿಕತೆಯುಳ್ಳ ಶಿಕ್ಷಣವು ನಿಮ್ಮನ್ನು ಉತ್ತಮ ನಾಯಕನನ್ನಾಗಿಸುತ್ತದೆ. ಆ ನಾಯಕತ್ವವು ಉದ್ಯೋಗವನ್ನು ಕಲ್ಪಿಸುತ್ತದೆ. ಆಹಾರ, ವಸತಿ, ಶಿಕ್ಷಣ ಇವುಗಳ ಅಭಿವೃದ್ಧಿಯಾಗದ ಹೊರತು ದೇಶವು ಅಭಿವೃದ್ಧಿಯಾಗದು ಎಂದರು. ಖಾಸಗಿ ವಲಯ ಬಡತನವನ್ನು ದೂರ ಮಾಡುವಲ್ಲಿ ತಕ್ಕಮಟ್ಟಿಗೆ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಜನಸಂಖ್ಯೆಯಲ್ಲಿ ಇಂದಿಗೂ ಶೇ. 60ರಷ್ಟು ಜನರಲ್ಲಿ ಬಡತನ ಕಾಡುತ್ತಿದ್ದು ಅದನ್ನು ದೂರ ಮಾಡಲು ಸಾಧ್ಯವಾಗಿಲ್ಲ ಎಂದರು. ನಾವು ವರ್ತಮಾನದ ತಂತ್ರಜ್ಞಾನವನ್ನು ಅರಿಯುವ ಪ್ರಯತ್ನ ಮಾಡಬೇಕು. ಸಮಯದ ಸದುಪಯೋಗ, ನಾಳೆಗೆ ನಮ್ಮನ್ನು…

Read More