ಮಧುಗಿರಿ: ಸತತ ಬರಗಾಲದಿಂದ ತತ್ತರಿಸುತ್ತಿರುವ ಜನತೆಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ಮಧುಗಿರಿ ಕಸಬಾ ವ್ಯಾಪ್ತಿಯ ಸಿದ್ದಾಪುರದ ಹಿಪ್ಪೇ ತೋಪಿನಲ್ಲಿ ಹೈ ಕೊರ್ಟ್ ಆದೇಶದ ಮೇರೆಗೆ ಸರ್ಕಾರದ ವತಿಯಿಂದ ಆರಂಭಿಸಿದ ಮೊದಲ ಗೋಶಾಲೆಯನ್ನು ಗೋವಿನ ಪೂಜೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಳೆದ ಸರ್ಕಾರದ ಅವಧಿಯಲ್ಲಿ ತಾಲೂಕಿನಲ್ಲಿ ರೈತರ ಮನೆ ಬಾಗಿಲಿಗೆ ಮೇವನ್ನು ವಿತರಿಸಿ ಯಶಸ್ವಿ ಕಾರ್ಯಕ್ರಮ ನೀಡಿದ್ದೆವು. ಆದರೂ ಬರಗಾಲ ಮುಂದುವರೆದ ಕಾರಣ ಈಗಿನ ಸರ್ಕಾರವು ಹೈ ಕೋರ್ಟ್ ಆದೇಶದಂತೆ ಗೋಶಾಲೆ ಆರಂಭಿಸಲಾಗಿದೆ. ಇಲ್ಲಿ ಪ್ರತಿ ರಾಸುಗಳಿಗೆ 6 ಕೆಜಿ ಒಣ ಮೇವು, ಒಣ ಮೇವು ಸಿಗದಿದ್ದಲ್ಲಿ 18 ಕೆಜಿ ಹಸಿ ಮೇವನ್ನು ಪ್ರತಿ ದಿನ ಉಚಿತವಾಗಿ ನೀಡಲಾಗುತ್ತದೆ. ಒಣಮೇವು ಸಿಗದ ಕಾರಣ ಹಸಿ ಮೇವು ವಿತರಿಸಲು ಜಿಲ್ಲಾಧಿಕಾರಿಗಳು ಸರ್ಕಾದಿಂದ ಆದೇಶ ತರಬೇಕಿದೆ. ತದ ನಂತರ…
Author: News Desk Benkiyabale
ತುರುವೇಕೆರೆ: ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪರಿಚಿತ ಸ್ಕಾರ್ಪಿಯೋ ಕಾರು ಹಿಂಬದಿಯಿಂದ ಗುದ್ದಿದ ಪರಿಣಾಮ ವಾಹನ ಸವಾರ ಸಾವನ್ನಪ್ಪಿರುವ ಘಟನೆ ತಾಲೂಕಿನ ಚಿಕ್ಕೋನಹಳ್ಳಿ ಗೇಟ್ ಬಳಿ ಶನಿವಾರ ಮದ್ಯಾಹ್ನ ನೆಡೆದಿದೆ. ಮೃತ ದುರ್ದೈವಿ ಶಿವಶಂಕರ್ (50) ಇತನು ಮಾದಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನೀರು ವಿತರಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಶನಿವಾರ ಮಾಯಸಂದ್ರ ರಸ್ತೆಯಲ್ಲಿ ತನ್ನ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ತುರುವೇಕೆರೆ ಕಡೆಗೆ ಚಲಿಸುವಾಗ ಹಿಂದಿನಿಂದ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ಗುದ್ದಿದ ಪರಿಣಾಮ ದ್ವಿಚಕ್ರವಾಹನ ಸವಾರ ಬಿದ್ದು ತೀವ್ರತರವಾಗಿ ಗಾಯ ಗೊಂಡಿದ್ದಾರೆ. ಕೂಡಲೇ ಸ್ಥಳಿಯರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು ಚಿಕಿತ್ಸೆ ಪಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರು ಎಂದು ತಿಳಿದುಬಂದಿದ್ದು ಕಾರು ನಿಲ್ಲಿಸದೆ ಚಾಲನೆ ಮಾಡಿಕೊಂಡು ತೆರಳಿದ್ದಾರೆ. ಪಟ್ಟಣದ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಕಾರು ಶೋದ ಕಾರ್ಯ ಮುಂದುವರೆಸಿದ್ದಾರೆ.
ಮಿಡಿಗೇಶಿ : ಮಧುಗಿರಿ-ಪಾವಗಡ ರಾಜ್ಯ ಹೆದ್ದಾರಿಯ ನಲ್ಲೇಕಾಮನಹಳ್ಳಿ ಬಳಿ ಆ.4 ರಂದು ಬೆಳಗ್ಗೆ 7-15 ರ ಸಮಯದಲ್ಲಿ ಇಂಡಿಕಾ ಕಾರು (ಕೆಎ 04 ಎಂಎಂ 2354) ಅಪಘಾತಕ್ಕೀಡಾಗಿದೆ. ಬೆಂಗಳೂರಿನಿಂದ ಪಾವಗಡಕ್ಕೆ ಕನ್ನಡಿಗರ ರಕ್ಷಣಾ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ರಮೇಶ್, ಭಾಸ್ಕರ್, ಗುರು, ಈಶ್ವರಪ್ಪ (ತಾತ) ಹಾಗೂ ಬಸವರಾಜು ಪ್ರಯಾಣಿಸುತ್ತಿದ್ದರು. ಅತಿ ವೇಗದ ಚಾಲನೆಯಿಂದ ಕಾರು ರಸ್ತೆಯನ್ನು ಬಿಟ್ಟು ಸುಮಾರು 200 ಮೀಟರ್ ದೂರದ ಜಮೀನಿಗೆ ಬಿದ್ದಿದೆ. ರಮೇಶ್ ಎಂಬುವರಿಗೆ ಕಾಲು ಮುರಿದಿದ್ದು, ಇನ್ನುಳಿದ ನಾಲ್ವರಿಗೆ ಬಲವಾದ ಪೆಟ್ಟುಗಳು ಬಿದ್ದಿರುವ ಬಗ್ಗೆ ವರದಿಯಾಗಿದೆ. ಘಟನಾ ಸ್ಥಳಕ್ಕೆ ಮಿಡಿಗೇಶಿಯ ಪೊಲೀಸ್ ಸಿಬ್ಬಂದಿ ಆಗಮಿಸಿ ಗಾಯಾಳುಗಳನ್ನು ಕೆ.ಶಿಪ್ ಆಯಂಬ್ಯುಲೆನ್ಸ್ ಮೂಲಕ ಮಧುಗಿರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ .ಅಪಘಾತಕ್ಕೀಡಾಗಿ ನುಚ್ಚು ನೂರಾಗಿರುವ ಕಾರನ್ನು ಪೊಲೀಸರು ವಶಕ್ಕೆ ಪಡೆದು, ತನಿಖೆ ಕೈ ಗೊಂಡಿದ್ದಾರೆ.
ಪಾವಗಡ : ಯಾವುದೇ ಸಮಯದಲ್ಲಾದರೂ ವೈದ್ಯಕೀಯ ಸೌಲಭ್ಯಕ್ಕಾಗಿ ಬರುವ ಜನತೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೆ ವೈಯುಕ್ತಿಕ ಪ್ರತಿಷ್ಠೆ ಪ್ರದರ್ಶಿಸಿದರೆ ಮುಲಾಜಿಲ್ಲದೆ ಕ್ರಮ ತಪ್ಪಿದಲ್ಲ ಎಂದು ಮಾಜಿ ಸಚಿವ ವೆಂಕಟರಮಣಪ್ಪ ತಿಳಿಸಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಗುರುವಾರ ಸಂಜೆ ಧಿಡಿರನೇ ಬೇಟಿ ನೀಡಿದಾಗ ಆಸ್ಪತ್ರೆಯಲ್ಲಿ ಯಾರು ವೈದ್ಯರಿಲ್ಲದನ್ನು ಕಂಡು ಮಾಜಿ ಸಚಿವರು ಕೆಂಡಮಂಡಲರಾದರು. ಆಸ್ಪತ್ರೆಯೋ ಏನೋ ಏಂಬುದು ಕೂಡ ನಮಗೆ ಅರ್ಥವಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಒಬ್ಬ ವೈದ್ಯರು ಕೂಡ ಇಲ್ಲವೆಂದರೆ ಹೇಗೆ.. ಗ್ರಾಮೀಣ ಭಾಗದಿಂದ ಬರುವ ಜನತೆಯ ಪಾಡೇನು.. ಅವರ ನೋವಿಗೆ ಯಾರಿಲ್ಲಿ ಸ್ಪಂದಿಸುವವರು.. ನಿಮ್ಮ ವೈಯುಕ್ತಿಕ ಪ್ರತಿಷ್ಠೆ ಬಿಟ್ಟು ಮೊದಲು ಕೆಲಸ ಮಾಡಿ ಇಲ್ಲದೆ ಹೋದಲ್ಲಿ ಮುಂದಾಗುವ ಆನಾಹುತಕ್ಕೆ ನೀವೆ ಬಲಿಯಾಗುತ್ತಿರೆಂದು ಎಚ್ಚರಿಕೆ ನೀಡಿದ ಘಟನೆ ನಡೆಯಿತು. ಮಾಜಿ ಸಚಿವರು ಆಸ್ಪತ್ರೆಗೆ ಬೇಟಿ ನೀಡಿರುವ ವಿಷಯ ತಿಳಿದು ಎಲ್ಲರೂ ಆಸ್ಪತ್ರೆಯಲ್ಲಿ ಪ್ರತ್ಯಕ್ಷವಾಗತೊಡಗಿದಾಗ ಮಾಜಿ ಸಚಿವರು ಇದು ಸರ್ಕಾರಿ ಆಸ್ಪತ್ರೆಯೋ…
ತುಮಕೂರು : ತುಮಕೂರು ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ, ಅಂಗಡಿಗಳಲ್ಲಿ ನಾಮಫಲಕ ಪ್ರದರ್ಶಿಸದಿರುವವರ, ತಂಬಾಕು ಉತ್ಪನ್ನಗಳನ್ನು ಜಾಹಿರಾತು ಮಾಡುವವರ, ಶಾಲಾ ಆವರಣಗಳಲ್ಲಿ ತಂಬಾಕು ಉತ್ಪನ್ನಗಳ ವಹಿವಾಟು ನಡೆಸುತ್ತಿರುವವರ ವಿರುದ್ಧ ಸತತವಾಗಿ ನಡೆಸಿದ 25 ದಿನಗಳ ಕಾರ್ಯಾಚರಣೆಯಲ್ಲಿ ಒಟ್ಟು 1403 ಪ್ರಕರಣ ದಾಖಲಿಸಿ 1,69,800 ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ರವಿಪ್ರಕಾಶ ಎಂ.ಆರ್ ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಸಮಾಜ ಕಾರ್ಯಕರ್ತ ಪುಂಡಲೀಕ ಲಕಾಟಿ, ಆರೋಗ್ಯ ಇಲಾಖೆ ಸಿಬ್ಬಂದಿ ನರಸಿಂಹರಾಜು, ತಾಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ತಾಲೂಕಿನ ಸಹಾಯಕ ಸಿಬ್ಬಂದಿಗಳು ಹಾಜರಿದ್ದರು.
ತುಮಕೂರು : ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದರೂ ಸಹ ತುಮಕೂರು ಸಹಕಾರಿ ಹಾಲು ಒಕ್ಕೂಟದ ಹಾಲು ಶೇಖರಣೆ ದಿನೇ ದಿನೇ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿದ್ದು 2018-19 ನೇ ಸಾಲಿನಲ್ಲಿ ದಿನವಹಿ ಸರಾಸರಿ 6,71,712 ಲೀಟರ್ ಶೇಖರಣೆಯಾಗಿರುತ್ತದೆ. ಜೂನ್ 18 ರಂದು 8,01,313 ಲೀಟರ್ ಹಾಲು ಶೇಖರಿಸಿ ಸರ್ವಕಾಲಿಕ ದಾಖಲೆ ನಿರ್ಮಿಸಿದೆ. ಒಕ್ಕೂಟದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಿಕೊಂಡಿರುವುದರಿಂದ ಮತ್ತು ಮಾರುಕಟ್ಟೆ ವಿಸ್ತರಣೆ ಮಾಡಿಕೊಂಡಿರುವುದರಿಂದ ಅಧಿಕ ಹಾಲು ಶೇಖರಣೆಯಾದರೂ ಸಹ ಡೇರಿಯ ನಿರ್ವಹಣೆಗೆ ಯಾವುದೇ ತೊಂದರೆಯಾಗಿರುವುದಿಲ್ಲ. ಹಾಲು ಉತ್ಪಾದಕರಿಗೆ ಕಾಲಕಾಲಕ್ಕೆ ಬಟವಾಡೆ, ದೊರೆಯಬಹುದಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಹಾಲು ಉತ್ಪಾದಕರು ಈ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಾವು ಸಹ ಆರ್ಥಿಕವಾಗಿ ಸದೃಢವಾಗುವುದಲ್ಲದೇ ಒಕ್ಕೂಟದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ ಎಂದು ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಮಹಾಲಿಂಗಯ್ಯ ತಿಳಿಸಿದ್ದಾರೆ. ಒಕ್ಕೂಟದ ಮಾರಾಟದದ ಜಾಲವನ್ನು ಸಹ ವಿಸ್ತರಿಸಲಾಗಿದ್ದು, ತುಮಕೂರು ಮತ್ತು ಬೆಂಗಳೂರು ನಗರ ಪ್ರದೇಶದಲ್ಲಿ 2018-19 ನೇ ಸಾಲಿನಲ್ಲಿ ಸರಾಸರಿ…
ತುಮಕೂರು: ಜಿಲ್ಲೆಯಲ್ಲಿರುವ ಕಲೆ, ಸಂಸ್ಕೃತಿ, ಸಾಮಾಜಿಕ ಜೀವನಕ್ಕೆ ಸಂಬಂಧಪಟ್ಟಂತಹ ಪುರಾತನ ಕಾಲದಲ್ಲಿ ಪ್ರಾಚ್ಯವಾಗಿ ಅಳಿದು ಉಳಿದಿರುವ ಕೋಟೆ-ಕೊತ್ತಲಗಳ ಕುರಿತು ಮಕ್ಕಳಿಗೆ ಪ್ರಾಚ್ಯ ಪ್ರಜ್ಞೆ ಮೂಡಿಸುವ ಸಲುವಾಗಿ ಕಿರುಚಿತ್ರ/ಸಾಕ್ಷ್ಯಚಿತ್ರ/ಭಾಷಣದ ರೂಪದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸುವಂತೆ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ವಿವಿಧ ಪ್ರಾಚ್ಯ ಸ್ಥಳಗಳ ಕುರಿತು ಭಾಷಣ, ಚಿತ್ರಕಲೆ ಸ್ಪರ್ಧೆ, ಚರ್ಚಾಸ್ಪರ್ಧೆ ರಸಪ್ರಶ್ನೆ ಕಾರ್ಯಕ್ರಮ ಕೈಗೊಂಡು ಈ ತಿಂಗಳ 15ರೊಳಗೆ ತಾಲ್ಲೂಕು ಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಿ, ತಿಂಗಳ ಕೊನೆಯ ವಾರದಲ್ಲಿ ಜಿಲ್ಲಾಮಟ್ಟದ ಸ್ಪರ್ಧೆ ಏರ್ಪಡಿಸಿ ವಿಜೇತ ಮಕ್ಕಳಿಗೆ ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ಪ್ರದಾನ ಮಾಡುವಂತೆ ಸೂಚಿಸಿದರು. ಕರ್ನಾಟಕವು ಪ್ರಾಗೈತಿಕ ಇತಿಹಾಸದ ಪರಂಪರೆ ಹೊಂದಿರುವ ನಾಡು. ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಅರಸರು, ಮೈಸೂರು ಅರಸರು ಹೀಗೆ ಅನೇಕ ರಾಜ ಮನೆತನಗಳು…
ತುಮಕೂರು: ತುಮಕೂರು ತಾಲ್ಲೂಕು ಗೂಳೂರು ಹೋಬಳಿಯ ಕಾಳಿಂಗಯ್ಯನ ಪಾಳ್ಯ ಗ್ರಾಮದ ವಾಸಿಯಾದ ಲಕ್ಷ್ಮೀನರಸಮ್ಮನವರ ಸುಮಾರು 85 ಸಾವಿರ ಬೆಲೆಬಾಳುವ 70ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಪುಟ್ಟೇಗೌಡ ಎಂಬಾತ ಕಿತ್ತುಕೊಂಡು ಹೋಗಿರುವ ಆರೋಪಕ್ಕೆ 2 ವರ್ಷ ಜೈಲುವಾಸ ಮತ್ತು 10,000 ರೂ. ದಂಡ ವಿಧಿಸಿ 4ನೇ ಅಪರ ಸಿ.ಜೆ. ಮತ್ತು 5 ನೇ ಜೆ.ಎಂ.ಎಫ್.ಸಿ ನ್ಯಾಯಾಧೀಶ ವಿನೋದ್ ಬಾಲ್ ನಾಯ್ಕ ಅವರು ತೀರ್ಪು ನೀಡಿದ್ದಾರೆ. ಪ್ರಕರಣದ ಹಿನ್ನೆಲೆ: ಆರೋಪಿ ಪುಟ್ಟೇಗೌಡ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಸಹಶಿಕ್ಷಕಿ ಲಕ್ಷ್ಮೀನರಸಮ್ಮ ಅವರನ್ನು ದಾರಿ ಮಧ್ಯೆ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಮಾಂಗಲ್ಯಸರವನ್ನು ಕಿತ್ತುಕೊಂಡು ಹೋಗಿರುವುದು ವಿಚಾರಣೆಯಿಂದ ಸಾಬೀತಾಗಿದೆ. ಆರೋಪಿಗೆ ವಿಧಿಸಿರುವ ದಂಡದ ಮೊತ್ತ ಕೊಡಲು ತಪ್ಪಿದರೆ 6 ತಿಂಗಳ ಸಾದಾ ಸಜೆಯನ್ನು ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಹೆಬ್ಬೂರು ಠಾಣೆಯ ತನಿಖಾಧಿಕಾರಿ ಹಾಗೂ ಕ್ಯಾತ್ಸಂದ್ರ ವೃತ್ತದ ಸಿ.ಪಿ.ಐ ಕೆ.ಆರ್.…
ಮಧುಗಿರಿ: ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ಸೀಡ್‍ಬಾಲ್ ತಯಾರಿ ಹಾಗೂ ಬಿತ್ತನೆ ಕಾರ್ಯದ ತರಬೇತಿ ನೀಡುವುದು ಇಂದಿನ ದಿನಗಳಲ್ಲಿ ಮಹತ್ವದ್ದಾಗಿದೆ ಎಂದು ಬಿಇಓ ರಂಗಪ್ಪ ತಿಳಿಸಿದರು. ಮಧುಗಿರಿ ಪಟ್ಟಣದ ಮಾಲೀಮರಿಯಪ್ಪ ರಂಗ ಮಂದಿರದಲ್ಲಿ ಪುರಸಭೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೀಡ್‍ಬಾಲ್ ತಯಾರಿ ಹಾಗೂ ಬಿತ್ತನೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರದಿಂದ ಮನುಷ್ಯನ ಬದುಕು ಸುಂದರವಾಗಿ ಹಾಗೂ ಆರೋಗ್ಯವಾಗಿದೆ. ಇದನ್ನು ಇಂದು ನಾವೆಲ್ಲ ಅವನತಿಯ ಅಂಚಿಗೆ ತಂದು ನಿಲ್ಲಿಸಿದ್ದೇವೆ. ಹೀಗೆ ಮುಂದುವರಿದಲ್ಲಿ ಪರಿಸರದಿಂದ ಮನುಕುಲಕ್ಕೆ ಅಪಾಯವಿದೆ. ಅದಕ್ಕಾಗಿ ಪರಿಸರವನ್ನು ಶುಚಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಪುರಸಭೆ ಸಿಬ್ಬಂದಿಗಳು ಮಧುಗಿರಿ ಸುತ್ತಲಿನ ಪ್ರಾಕೃತಿಯ ಬೆಟ್ಟ ಹಾಗೂ ನೆಡುತೋಪಿನಲ್ಲಿ ಈ ಸೀಡ್‍ಬಾಲ್‍ಗಳನ್ನು ಬಿತ್ತನೆ ಮಾಡುವುದರಿಂದ ಉತ್ತಮ ಮಳೆಯಾದರೆ ಪ್ರಕೃತಿ ಸುಂದರ ಹಾಗೂ ಆರೋಗ್ಯಕರವಾಗಿರುತ್ತದೆ. ಈ ಕೆಲಸಕ್ಕೆ ಕೈ ಹಾಕಿರುವ ಪುರಸಭೆಯ ಮುಖ್ಯಾಧಿಕಾರಿ ಲೋಹಿತ್‍ರವರ ಕಾರ್ಯ ಶ್ಲಾಘನೀಯ ಎಂದರು. …
ತುಮಕೂರು: ಸಂಚಾರ ಪೊಲೀಸರು ಮತ್ತು ವಾಹನ ಸವಾರರ ವರ್ತನೆ ಮೇಲೆ ನಿಗಾ, ಪಾರದರ್ಶಕತೆ ಕಾಯ್ದುಕೊಳ್ಳಲು, ಸಂಚಾರ ನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಕಲು ಸಮವಸ್ತ್ರದಲ್ಲಿ(ಅಂಗಿ) ಅಳವಡಿಸಬಹುದಾದ 10 ಬಾಡಿ ಕ್ಯಾಮೆರಾಗಳನ್ನು ಸಂಚಾರ ಪೊಲೀಸರಿಗೆ ನೀಡಲಾಗಿದೆ. ನಗರದ ಸಂಚಾರ ಠಾಣೆ ಇಬ್ಬರು ಪಿಎಸ್‍ಐ ಮತ್ತು 8 ಎಎಸ್‍ಐಗಳು ಈ ಕ್ಯಾಮೆರಾಗಳನ್ನು ಧರಿಸಿ ಕಾರ್ಯನಿರ್ವಹಿಸಲಿದ್ದಾರೆ. ಇವುಗಳನ್ನು ಧರಿಸುವ ಪೊಲೀಸ್ ಮುಂದೆ ನಡೆಯುವ ಚಟುವಟಿಕೆಗಳು ಕ್ಯಾಮೆರಾದಲ್ಲಿ ಸೆರೆಯಾಗುತ್ತವೆ. ವಾಹನ ಸವಾರರು ಮತ್ತು ಚಾಲಕರು ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರಿಗೆ ಯಾಮಾರಿಸಿ ಪರಾರಿಯಾಗುವುದು, ಪೊಲೀಸ್ ಸಿಬ್ಬಂದಿ ಲಂಚ ಪೀಕುವುದು, ಕಿರುಕುಳ ನೀಡುವುದಕ್ಕೆ ಈ ವಿಶಿಷ್ಟ ಕ್ಯಾಮೆರಾ ಕಣ್ಗಾವಲಿನಿಂದ ಕಡಿವಾಣ ಬೀಳಲಿದೆ. ಗಲಾಟೆ, ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ವಾಗ್ವಾದ ಸಂದರ್ಭಗಳ ಅಸಲಿಯತ್ತು ಪತ್ತೆ ಮಾಡಲು ಈ ಕ್ಯಾಮೆರಾಗಳು ನೆರವಾಗಲಿವೆ. ಈ ಕ್ಯಾಮೆರಾ ಸರಾಸರಿ 300 ಗ್ರಾಂ ತೂಕವಿದೆ. ಅದರಲ್ಲಿ 100 ಮೀಟರ್…











