Author: News Desk Benkiyabale

ತುರುವೇಕೆರೆ:       ತಾಲೂಕಿನ ದಂಡಿನಶಿವರ ಹೋಬಳಿಯ ಅಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಡಿ.ಹೊಸಹಳ್ಳಿ ಗ್ರಾಮದಲ್ಲಿರುವ ಲಕ್ಷ್ಮೀದೇವರ ದೇವಾಲಯ ನಮ್ಮ ಪೂರ್ವಜರ ಸ್ವತ್ತಾಗಿದ್ದು ಆದರೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಮ್ಮ ಸಹೋದರರೊಡಗೂಡಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದು ಮಾಹಿತಿ ಹಕ್ಕು ಅಧಿನಿಯಮದಡಿ ದೇವಾಲಯದ ಖಾತೆ ನಕಲು ಕೇಳಿದರೆ ದಾಖಲೆ ನೀಡುತ್ತಿಲ್ಲವೆಂದು ಸಾಮಾಜಿಕ ಹೋರಾಟಗಾರ ಹಾಗೂ ನಿವೃತ್ತ ಶಿಕ್ಷಕ ಹೆಚ್.ಎಲ್.ಕೃಷ್ಣಮೂರ್ತಿ ಆರೋಪಿಸಿದರು.       ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮೀದೇವರ ದೇವಾಲಯ ನಮ್ಮ ಪೂರ್ವಜರ ಸ್ವತ್ತು ಈ ದೇವಾಲಯದ ನಿರ್ಮಾಣವನ್ನು ನಮ್ಮ ತಂದೆಯವರು ತಮ್ಮ ಸ್ವಂತ ಜಾಗದಲ್ಲಿ ಸ್ವಂತ ಕರ್ಚಿನಲ್ಲಿ ನಿರ್ಮಿಸಿದ್ದರು. ನಾವು ಮೂವರು ಸಹೋದರರು ಆದರೆ ನನ್ನನ್ನು ಹೊರತುಪಡಿಸಿ ದೇವಾಲಯದ ಜಾಗವನ್ನು ನನ್ನ ಸಹೋದರರು ಖಾತೆ ಮಾಡಿಸಿಕೊಂಡಿರುವ ಸಂಶಯ ನನ್ನಲಿದೆ. ದೇವಾಲಯದ ಪೂಜಾಕೈಂಕರ್ಯಗಳಿಂದ ನನ್ನನ್ನು ಹೊರಗಿಟ್ಟಿರುವುದು ಒಂದೆಡೆಯಾದರೆ ದೇವಾಲಯದ ಖಾತೆ ನಕಲನ್ನು ಮಾಹಿತಿ ಹಕ್ಕಿನ ಅಧಿನಿಯಮದಡಿ ಸ್ಥಳೀಯ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ಮಾಹಿತಿ ಹಕ್ಕು ನಿಯಮದ…

Read More

ಮಧುಗಿರಿ :        ಚುನಾವಣೆಯಲ್ಲಿ ನೀಡಿದ ಮಾತಿನಂತೆ ಈ ಗ್ರಾಮದ ರಸ್ತೆಗೆ ಅನುದಾನ ನೀಡಿದ್ದು, ಜನರ ಸೇವೆಗಾಗಿ ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಅಭಿಪ್ರಾಯಪಟ್ಟರು.       ಮಧುಗಿರಿ ತಾಲೂಕು ಕಸಬಾ ಹೋಬಳಿಯ ಸೋಗೇನಹಳ್ಳಿಯಲ್ಲಿ 1 ಕೋಟಿ ರೂ. ವೆಚ್ಚದ ಸೋಗೇನಹಳ್ಳಿ-ಗೊಲ್ಲರಹಟ್ಟಿ-ಗೌರಿಬಿದನೂರು-ಹಿಂದೂಪೂರ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರದಲ್ಲಿ ಶಾಂತಿಯ ವಾತವರಣವನ್ನು ನಾನು ಬಯಸಿದ್ದು, ಜನರ ಸೇವಕರಂತೆ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲಗುರಿಯಾಗಿದ್ದು, ಯಾರೂ ರಾಜಕೀಯ ಬೆರಸಬಾರದು ಎಂದರು.       ಅಭಿವೃದ್ಧಿ ಕಾಮಗಾರಿಗೆ ಹಣಕಾಸಿನ ತೊಂದರೆಯಿಲ್ಲ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎತ್ತಿನಹೊಳೆ ಯೋಜನೆಯ 410 ಕೋಟಿ ಅನುದಾನ ಬಿಡುಗಡೆಯಾಗಿದ್ದು, ನೀರಾವರಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ. 3-4 ವರ್ಷಗಳಲ್ಲಿ ನೀರು ನಮ್ಮ ಕೆರೆಗಳಿಗೆ ಹರಿಯಲಿದೆ. ಆದ್ದರಿಂದ ಎಲ್ಲರೂ ಧೈರ್ಯದಿಂದ ಬದುಕು ಸಾಗಿಸಬೇಕು. ಬರಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಅಗತ್ಯ ಕಾರ್ಯವನ್ನು ಮಾಡುತ್ತಿದ್ದು, ರೈತರು ಹಾಗೂ…

Read More

ಚಿಕ್ಕನಾಯಕನಹಳ್ಳಿ:       ಕಾನೂನು ಎಲ್ಲರ ಸ್ವತ್ತು ಕುಟುಂಬದಲ್ಲಿ ಅತ್ತೆ ಹಾಗೂ ಗಂಡ ಎನೋ ಅಂದರು ಅಂತ ಸಣ್ಣ ಪುಟ್ಟ ವಿಚಾರಗಳಿಗೆ ನ್ಯಾಯಾಲಯದ ಮೆಟ್ಟಿಲನ್ನು ಯಾರೂ ಹತ್ತಬೇಡಿ. ಮಹಿಳೆಯರಿಗೆ ನೀಡಿರುವ ಕಾನೂನು ಸೌಲಭ್ಯಗಳನ್ನು ನ್ಯಾಯೋಚಿತವಾಗಿ ಪಡೆದು ಸದುಪಯೋಗ ಮಾಡಿಕೊಂಡು ಸಾಮರಸ್ಯ ಜೀವನದಲ್ಲಿ ಮಹಿಳೆಯರು ಮುಂದೆ ಹೋಗಬೇಕಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ ಪ್ರಮೀಳಾ ಹೇಳಿದರು.       ಅವರು ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಕಾನೂನು ಸೇವಾ ಪ್ರಾಧಿಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಾ ಮೊದಲು ಬಾಲ್ಯಾವಸ್ಥೆಯಲ್ಲಿ ಮಹಿಳೆಗೆ ಜವಬ್ದಾರಿ ಹೆಚ್ಚಿಸಿ ಶಿಕ್ಷಣ ವಂಚಿತಳಾಗುತ್ತಿದ್ದಳು ಮಹಿಳೆಯ ಶೋಷಣೆ ಹಾಗೂ ಭ್ರೂಣ ಹತ್ಯೆ ಇವುಗಳಲ್ಲೂ ಮಹಿಳೆ ಸಿಲುಕಿ ನಲುಗಿದ್ದಳು ಕಾಲ ಬದಲಾದಂತೆ ನಾಗರೀಕತೆ ಬೆಳೆದಂತೆ ಮಹಿಳೆ ಶಿಕ್ಷಣ ಪಡೆಯುವತ್ತ ಸಾಗಿ ಹಂತ ಹಂತವಾಗಿ ಪುರುಷನಷ್ಠೇ ಮಹಿಳೆ ಸಮಾನಗಳು ಎನ್ನುವತ್ತ ಸಾಗಿದಳು ಮಹಿಳೆಯರ ಶೋಷಣೆ ಈ…

Read More

 ತುಮಕೂರು:       ಮತದಾನ ಕುರಿತು ಯುವ ಮತದಾರರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಕ್ಯಾಂಪಸ್ ಅಂಬಾಸಿಡರ್‍ಗಳು ಹೊಂದಿದ್ದು, ಪ್ರಾಮಾಣಿಕವಾಗಿ ನಿಭಾಯಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಕರೆ ನೀಡಿದರು.       ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮತದಾನದ ಕುರಿತು ಕಾಲೇಜು ಕ್ಯಾಂಪಸ್ ಅಂಬಾಸಿಡರ್‍ಗಳಿಗಾಗಿ ಏರ್ಪಡಿಸಿದ್ದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿಂದು ಮಾತನಾಡಿದ ಅವರು 18 ವರ್ಷ ತುಂಬಿದ ಎಲ್ಲಾ ಯುವಕ/ಯುವತಿಯರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವುದಕ್ಕಾಗಿ ತಪ್ಪದೇ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದರು.       ಮತದಾರರ ಕುಂದು ಕೊರತೆಗಳನ್ನು ಆಲಿಸಿ, ಅವರಿಗೆ ಮಾಹಿತಿ ಅಥವಾ ಪರಿಹಾರ ನೀಡಲು ಉಚಿತ ಸಹಾಯವಾಣಿ 1950 ಆರಂಭಿಸಿರುವ ಬಗ್ಗೆ ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ವ್ಯಾಪಕ ಪ್ರಚಾರ ಮಾಡಬೇಕೆಂದು ತಿಳಿಸಿದರು. ಚುನಾವಣೆಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ದೂರುಗಳಿದ್ದಲ್ಲಿ ಸಲ್ಲಿಸಲು “ಸಿವಿಜಿಲ್” ಎಂಬ ನೂತನ ಮೊಬೈಲ್ ಆ್ಯಪ್ ಅನ್ನು ಸೃಜಿಸಲಾಗಿದ್ದು, ಚುನಾವಣಾ ನೀತಿ ಉಲ್ಲಂಘನೆ ಕುರಿತು ಮಾಹಿತಿ ಸಿಕ್ಕಲ್ಲಿ…

Read More

ತುಮಕೂರು:       ಮಾಹತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೋಟರಿ ಸಂಸ್ಥೆ ಸಹಯೋಗದಲ್ಲಿ ತುಮಕೂರು ತಾಲೂಕನ್ನು ಹಸಿರು ತಾಲೂಕನ್ನಾಗಿಸುವ ನಿಟ್ಟಿನಲ್ಲಿ ಕೋಟಿ ಗಿಡಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.       ತಮ್ಮ ಕಚೇರಿಯಲ್ಲಿಂದು ಪೂರ್ವಭಾವಿ ಸಿದ್ಧತಾ ಸಭೆ ನಡೆಸಿ ಮಾತನಾಡಿದ ಅವರು ಕೋಟಿ ಗಿಡಗಳನ್ನು ನೆಡಲು ರೂಪುರೇಷೆಗಳನ್ನು ಸಿದ್ಧಪಡಿಸುವ ಸಲುವಾಗಿ ಮಾರ್ಚ್ 12ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ತುಮಕೂರು ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ತಾಲೂಕಿನ ಎಲ್ಲ ಶಾಲೆಗಳನ್ನು ಸ್ವಚ್ಛ ಹಾಗೂ ಸುಂದರವನ್ನಾಗಿಸುವ ಚಿಂತನೆ ನಡೆಸಿದ್ದು, ಇದಕ್ಕಾಗಿ ಪ್ರತಿ ಶಾಲೆಗೆ ತಲಾ 2 ಲಕ್ಷ ರೂ.ಗಳನ್ನು ನೀಡಲು ರೋಟರಿ ಸಂಸ್ಥೆ ಮುಂದಾಗಿದೆ. ಮೊದಲಿಗೆ ಸುಮಾರು 30 ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.      …

Read More

 ಕೊರಟಗೆರೆ:       ಖಾಸಗಿ ಜಮೀನಿನಲ್ಲಿ ಶೇಖರಣೆ ಆಗಿರುವ ಮರಳನ್ನು ಜೆಸಿಬಿ ಬಳಕೆಯಿಂದ ಟ್ರಾಕ್ಟರ್‍ನಿಂದ ಅಕ್ರಮವಾಗಿ ಗ್ರಾಮದ ಹೊರವಲಯದ ನಿರ್ಜನ ಪ್ರದೇಶಕ್ಕೆ ಸಾಗಾಣಿಕೆ ಮಾಡಿದ ನಂತರ ಲಾರಿ ಮೂಲಕ ಬೆಂಗಳೂರಿಗೆ ಸಾಗಿಸುವ ವೇಳೆ ಪಿಎಸ್‍ಐ ಮಂಜುನಾಥ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿರುವ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ.       ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಪಂ ವ್ಯಾಪ್ತಿಯ ಅಜ್ಜಿಹಳ್ಳಿ ಗ್ರಾಮದ ರಂಗಪ್ಪ ಎಂಬುವರ ಖಾಸಗಿ ಜಮೀನಿನಿಂದ ಅಕ್ರಮವಾಗಿ ಮಂಗಳವಾರ ಮಧ್ಯರಾತ್ರಿ ವೇಳೆ ಮರಳನ್ನು ಜೆಸಿಬಿಯ ಮೂಲಕ ಟ್ರಾಕ್ಟರ್‍ಗಳಿಗೆ ತುಂಬುತ್ತೀದ್ದ ವೇಳೆ ಸ್ಥಳದಲ್ಲಿದ್ದ 3ಟ್ರಾಕ್ಟರ್ ಮತ್ತು 1ಜೆಸಿಬಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.       ಅಜ್ಜಿಹಳ್ಳಿ ಗ್ರಾಮದ ರಂಗಪ್ಪ ಎಂಬುವರ ಖಾಸಗಿ ಜಮೀನಿನಿಂದ ಪ್ರತಿದಿನ ಅಕ್ರಮವಾಗಿ ಮರಳನ್ನು ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಶೇಖರಣೆ ಮಾಡಿ ನಂತರ ಅದನ್ನು ಲಾರಿಯ ಮೂಲಕ ಊರ್ಡಿಗೆರೆ-ದಾಬಸ್‍ಪೇಟೆ ಮಾರ್ಗವಾಗಿ ಬೆಂಗಳೂರಿಗೆ ಸಾಗಿಸುವ ಖಚಿತ ಮಾಹಿತಿಯನ್ನು ಪಡೆದು ಕೊರಟಗೆರೆ ಪೊಲೀಸರು ದಾಳಿ…

Read More

 ತಿಪಟೂರು:       ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಡ್ರಾಮಾ ಜ್ಯೂನಿಯರ್ಸ್ ಸೀಜನ್ -3ರ ಗ್ರ್ಯಾಂಡ್ ಫಿನಾಲೆ ಮಾ.9 ರಂದು ಸಂಜೆ 6 ಗಂಟೆಗೆ ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ದಿ. ನರಸಿಂಹರಾಜು ಅವರ ಹುಟ್ಟೂರು ತಿಪ ಟೂರಿನ ಕಲ್ಪತರು ಕ್ರೀಡಾಂಗಣ ದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.       ಕೇವಲ ರಂಗಭೂಮಿಯ ನಾಟಕಕ್ಕೆ ಸೀಮಿತವಾಗದೆ 1 ರಿಂದ 10ನೇ ತರಗತಿಯ ಮಕ್ಕಳ ಪಠ್ಯ ವಿಷಯಗಳನ್ನು ನಾಟಕಕ್ಕೆ ಅಳವಡಿಸಿಕೊಂಡು ಅಭಿನಯಿಸಿರುವುದು ಈ ಸೀಜನ್‍ನ ವಿಶೇಷ ಎಂದಿದ್ದಾರೆ.       ಡ್ರಾಮಾ ಜೀನಿಯರ್ಸ್ ಪುಟಾಣೆಗಳ ಮನರಂಜನೆ ಜೊತೆ ನೃತ್ಯ ಪ್ರದರ್ಶನ ಹಾಗೂ ಸರಿಗಮಪ ರಿಯಾ ಲಿಟಿ ಶೋ ವಿಜೇತರಾದ ಕೀರ್ತನ್ ಹೊಳ್ಳ ಹಾಗೂ ಹನುಮಂತಣ್ಣ ಇವರಿಂದ ಗಾಯನ ಕಾರ್ಯಕ್ರಮ ಇದ್ದು ತೀರ್ಪುಗಾರರಾದ ನಟಿ ಲಕ್ಷ್ಮಿ, ನಟರಾದ ಮುಖ್ಯ ಮಂತ್ರಿ ಚಂದ್ರು, ವಿಜಯ ರಾಘವೇಂದ್ರ, ನಿರೂಪಕ ಮಾ.ಆನಂದ್ ಈ ಕಾರ್ಯ ಕ್ರಮದಲ್ಲಿ ಭಾಗವಹಿಸುವರು.       ಮಾ.8…

Read More

ತುಮಕೂರು:       ಮುಂಬರುವ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಗೊಂದಲ ಇನ್ನು ಮೂರ್ನಾಲ್ಕು ದಿನಗಳಲ್ಲಿ ಬಗೆಹರಿಯಲಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೋನರೆಡ್ಡಿ  ವಿಶ್ವಾಸ ವ್ಯಕ್ತಪಡಿಸಿದರು.       ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ನಂತರ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.       ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ನಡೆಸುತ್ತಿದ್ದು, ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಟ್ಟು ಕಾಂಗ್ರೆಸ್ ಪಕ್ಷ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಲೋಕಸಭಾ ಕ್ಷೇತ್ರಗಳಿಗೆ ಸೀಟು ಹಂಚಿಕೆ ಬಗ್ಗೆ ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿಯವರ ಬಳಿ ಚರ್ಚೆ ನಡೆಸಿದ್ದು ಜೆಡಿಎಸ್‌ಗೆ 12 ಕ್ಷೇತ್ರಗಳನ್ನು ಬಿಟ್ಟು ಕೊಡುವಂತೆ ಮನವಿ ಮಾಡಿದ್ದಾರೆ. ಆದರೆ ಅದು ಇನ್ನು ಸ್ಪಷ್ಟವಾಗಿಲ್ಲ. ಇನ್ನು ಮೂಱ್ನಾಲ್ಕು…

Read More

 ಕೊರಟಗೆರೆ:       ಗರ್ಭಕೋಶದ ಸಮಸ್ಯೆಯ ಹೊಟ್ಟೆ ನೋವಿನಿಂದ ಬಳಲುತ್ತೀದ್ದ ಮಹಿಳೆ ತನ್ನ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮನೆಯ ತೀರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ       ತಾಲೂಕಿನ ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಪಂ ವ್ಯಾಪ್ತಿಯ ಸೂರೇನಹಳ್ಳಿ ಗ್ರಾಮದ ವಾಸಿಯಾದ ಗೋವಿಂದರಾಜು ಎಂಬುವನ ಮಡದಿ ರಾಧಮ್ಮ(35) ತನ್ನ ತಂದೆಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಆಗಿದ್ದಾಳೆ.       ಮೃತ ಮಹಿಳೆ ಮೂಲತಃ ತುಮಕೂರು ತಾಲೂಕಿನ ಸಿಬಿ ಗ್ರಾಮದವರಾಗಿದ್ದು ತನ್ನ ತಂದೆಯ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ಪಿಎಸೈ ಮಂಜುನಾಥ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

 ಕೊರಟಗೆರೆ:       ರಸ್ತೆ ಬದಿಯಲ್ಲಿ ಪಾದಚಾರಿ ಚಲಿಸುವ ವೇಳೆ ಅಪರಿಚಿತ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಮೃತ ಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.       ತಾಲೂಕಿನ ಚನ್ನರಾಯನದುರ್ಗ ಹೋಬಳಿ ಸಿದ್ದರಬೇಟ್ಟಕ್ಕೆ ಹೋಗುವ ತುಂಬಾಡಿ ಬಳಿಯ ತಿರುವಿನಲ್ಲಿ ಫೆ.27ರಂದು ಅಪರಿಚಿತ  ದ್ವಿಚಕ್ರ ವಾಹನ ಫೆ.27ರಂದು ಡಿಕ್ಕಿ ಹೊಡೆದ ಪರಿಣಾಮ ಸುಬ್ಬರಾಯಪ್ಪ(65) ಆಸ್ಪತ್ರೆಯಲ್ಲಿ ಮೃತಪಟ್ಟ ದುದೈವಿ.       ಮೃತ ಸುಬ್ಬರಾಯಪ್ಪ ಮೂಲತಃ ಕೊರಟಗೆರೆ ಪಟ್ಟಣದ ವಾಸಿಯಾಗಿದ್ದಾನೆ. ಪೊಲೀಸ್ ಆರಕ್ಷಕ ವೃತ್ತ ಉಪನಿರೀಕ್ಷಕ ಮಂಜುನಾಥ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾರೆ.

Read More