ತುಮಕೂರು : ಯಾವುದೇ ಕೌಟುಂಬಿಕ ಕಲಹಗಳಿಗೆ ಬೇಗ ನ್ಯಾಯ ಸಿಗಬೇಕು. ಇಲ್ಲವಾದಲ್ಲಿ ಕಲಹಗಳ ನಡುವಿನ ಅಂತರ ಹೆಚ್ಚಾಗಿ ಭಿನ್ನಾಬಿಪ್ರಾಯಕ್ಕೆ ಕಾರಣವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬದಾಮಿಕರ್ ಅಭಿಪ್ರಾಯಪಟ್ಟರು. ಜಿಲ್ಲಾ ಕೌಟುಂಬಿಕ ನ್ಯಾಯಾಲಯಗಳ ಆವರಣದಲ್ಲಿಂದು 1ನೇ ಅಧಿಕ ಪ್ರಧಾನ ಕೌಟುಂಬಿಕ ನ್ಯಾಯಾಲಯ ಉದ್ಘಾಟಿಸಿ ಅವರು ಮಾತನಾಡುತ್ತಾ, ಕೌಟುಂಬಿಕ ಪ್ರಕರಣಗಳು ಎಷ್ಟು ಕಡಿಮೆಯಾಗುತ್ತವೆಯೋ ಅಷ್ಟು ಸಮಾಜದ ಏಳ್ಗೆಯಾಗುತ್ತದೆ. ಯಾವುದೇ ಕಕ್ಷಿದಾರರಿಗೆ ಕೌಟುಂಬಿಕ ನ್ಯಾಯಾಲಯದಲ್ಲಿ ಬೇಗ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಈ ಕೌಟುಂಬಿಕ ನ್ಯಾಯಾಲಯವನ್ನು ಸ್ಥಾಪಿಸಲಾಗಿದ್ದು, ಕಕ್ಷಿದಾರರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಮನವಿ ಮಾಡಿದರು. ಕೌಟುಂಬಿಕ ನ್ಯಾಯಾಲಯದ 1ನೇ ಅಧಿಕ ಪ್ರಧಾನ ನ್ಯಾಯಾಧೀಶೆ ಉಷಾರಾಣಿ ಮಾತನಾಡಿ, ಮನಸ್ಸಿದ್ದರೆ ಮಾರ್ಗ ಎಂಬಂತೆ ಯಾವುದೇ ಕೆಲಸ ಕಷ್ಟವಾದರೂ ಸಹ ಮನಸಾರೆ ಸಂತೋಷದಿಂದ ಆ ಕೆಲಸವನ್ನು ಮಾಡಬೇಕು. ಕೌಟುಂಬಿಕ ನ್ಯಾಯಾಲಯಕ್ಕೆ ಬರುವ ಕಕ್ಷಿದಾರರ ಕಲಹಗಳನ್ನು ಬೇಗನೆ ಇತ್ಯರ್ಥಪಡಿಸಲು ತಮ್ಮೆಲ್ಲರ ಸಹಕಾರ…
Author: News Desk Benkiyabale
ತುಮಕೂರು : ದೆಹಲಿಯಲ್ಲಿ ಕಳೆದ ಜನವರಿ 26ರಂದು ನಡೆದ ಗಣರಾಜ್ಯೋತ್ಸವ ದಿನದಂದು ಎನ್‍ಸಿಸಿ ಶಿಬಿರವನ್ನು ಪ್ರತಿನಿಧಿಸಿ ಭಾಗವಹಿಸುವ ಮೂಲಕ ಕು.ಕವನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ|| ಕೇಶವ್ ರಾಜ್ ಹಾಗೂ ಡಾ|| ಆಶಾ ದಂಪತಿಗಳ ಪುತ್ರಿಯಾಗಿರುವ ಕವನ ಅವರು ನಗರದ ಬಿಷಪ್ ಸಾರ್ಜೆಂಟ್ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಎನ್‍ಸಿಸಿ ಕೆಡೆಟ್‍ಗೆ ಆಯ್ಕೆಯಾದ ಜಿಲ್ಲೆಯ ಏಕೈಕ ಬಾಲಕಿಯಾಗಿರುವ ಇವರು ಎನ್‍ಸಿಸಿ ಕೆಡೆಟ್‍ನಲ್ಲಿ ಭಾಗವಹಿಸುವ ಕನಸನ್ನು ಕಂಡಿದ್ದರು. ರಾಷ್ಟ್ರ ಮಟ್ಟದ ಈ ಎನ್‍ಸಿಸಿ ಶಿಬಿರಕ್ಕೆ ಕರ್ನಾಟಕ-ಗೋವಾ ವಿಭಾಗದಿಂದ ಒಟ್ಟು 106 ಎನ್‍ಸಿಸಿ ಕೆಡೆಟ್‍ಗಳು ಪ್ರತಿಧಿಸಲು ಆಯ್ಕೆಯಾಗಿ ಪ್ರಧಾನಮಂತ್ರಿ ಬ್ಯಾನರ್ ಹಾಗೂ ಟ್ರೋಫಿ ಪ್ರಶಸ್ತಿ ಪಡೆದಿರುತ್ತಾರೆ. ಕರ್ನಾಟಕವು 15 ವರ್ಷಗಳ ನಂತರ ಈ ಪ್ರಶಸ್ತಿಯನ್ನು ಪಡೆದಿರುವುದು ಸಂತಸದ ವಿಚಾರವಾಗಿದೆ.
ತುಮಕೂರು: ಯಾರು ಅಹಂಕಾರವನ್ನು ನಿರಾಕರಿಸುತ್ತಾನೋ ಅವನೇ ನಿಜವಾದ ಶರಣ ಎಂದು ಶಾಸಕ ಜಿ.ಬಿ ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಮತ್ತು ತಾಲೂಕು ಮಡಿವಾಳ ಜನಸಂಘಗಳ ಸಹಯೋಗದಲ್ಲಿಂದು ನಗರದ ಬಾಲಭವನದಲ್ಲಿ ಏರ್ಪಡಿಸಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಮಾಚಿದೇವರು 12ನೇ ಶತಮಾನದಲ್ಲಿ ನಡೆದ ವಚನ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದ್ದವರು. ಸಮಾಜವನ್ನು ಸರಿದಾರಿಗೆ ತಂದ ಮಹಾ ದಾರ್ಶನಿಕರು. ಶಿಕ್ಷಣ ಪಡೆದವರು ಮಾತ್ರ ಸಬಲರಾಗಲು ಸಾಧ್ಯ. ಈ ನಿಟ್ಟಿನಲ್ಲಿ ಮಡಿವಾಳ ಜನಾಂಗದವರು ವಿದ್ಯಾವಂತರಾಗಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡುವಂತೆ ತಿಳಿಸಿದರು. ಸಮುದಾಯದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯ ದೊರೆಯು ವಂತೆ ಮಾಡಲು ಪ್ರಯತ್ನಿಸುತ್ತನೆ ಎಂದರು. ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಹಿರೇಮಠದ ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಅವರು ಮಡಿವಾಳ ಮಾಚಿದೇವ…
ತುರುವೇಕೆರೆ : ‘ಧರ್ಮ ಮತ್ತು ರಾಜಕಾರಣಗಳು ಪರಸ್ಪರ ಕೈಜೋಡಿಸಿ ಉಂಟು ಮಾಡುತ್ತಿರುವ ಸಮಕಾಲೀನ ಭಾರತದ ತಲ್ಲಣ ಮತ್ತು ಸಂಘರ್ಷಮಯ ಸನ್ನಿವೇಶ ಕವಿ, ಕಲಾವಿದ ಮತ್ತು ಚಿಂತಕನಿಗೆ ತೀವ್ರ ಸ್ವರೂಪದ ಬೆದರಿಕೆ ಹಾಗು ಆತಂಕ ಸೃಷ್ಟಿಸಿದೆ. ಕವಿಯಾದವನು ಇದನ್ನು ಸವಾಲಾಗಿ ಸ್ವೀಕರಿಸಿ ಮಹತ್ವಕಾಂಕ್ಷೆಯಿಂದ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕಿದೆ’ ಎಂದು ಸಾಹಿತಿ ಕೆ.ಪಿ.ನಟರಾಟ್ ಯುವ ಕವಿಗಳಿಗೆ ಕಿವಿ ಮಾತು ಹೇಳಿದರು. ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದದಲ್ಲಿ ಜರುಗಿದ ನಾಲ್ಕನೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ತಾಳಕೆರೆಸುಬ್ರಹ್ಮಣ್ಯಂ ವೇದಿಕೆಯಲ್ಲಿ ಎರಡನಢ ದಿನ ನಡೆದ ನನ್ನ ಕವಿತೆ ನನ್ನದು ಎಂಬ ಕವಿ ಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫೇಸ್ ಬುಕ್‍ನಂತಹ ಡಿಜಿಟಲ್ ಸ್ವರೂಪದ ಸಾಮಾಜಿಕ ಜಾಲ ತಾಣಗಳ ಮಾದ್ಯಮಗಳು ಬರೆಯುವ, ಚಿಂತಿಸುವ ಅನುಸಂಧಾನ ಮಾಡುವ ಜ್ಞಾನ ವಿನಿಮಯದ ಅನಂತ ಸಾದ್ಯತೆಗಳನ್ನು ನಮ್ಮೆದುರಿಟ್ಟಿದ್ದು ಮುದ್ರಣ ಮತು ದೃಶ್ಯ ಮಾದ್ಯಮಗಳ ಪಟ್ಟಭದ್ರ ಚಿಂತನೆಯ ಕೇಂದ್ರಗಳಿಂದ…
ತುಮಕೂರು : ಬುದ್ಧನ ಕಾರಣ್ಯ, ಬಸವಣ್ಣನ ಸಮಾನತೆ ತತ್ವವನ್ನು ಚಾಚೂ ತಪ್ಪದೇ ಪಾಲಿಸಿದ ಲಿಂಗೈಕ್ಯ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ವಿಶ್ವರತ್ನಕ್ಕೆ ಸಮಾನ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಣ್ಣಿಸಿದರು. ಸಿದ್ಧಗಂಗಾ ಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿಂದು ಏರ್ಪಡಿಸಿದ್ದ ಲಿಂಗೈಕ್ಯ ಡಾ|| ಶ್ರೀ ಶ್ರೀ ಶಿವಕುಮಾರಸ್ವಾಮಿಗಳ ಪುಣ್ಯಸ್ಮರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ನೆರವನ್ನು ಕೋರದ ಶ್ರೀಗಳು: ನಾಡಿನ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೀಗಳ ಸೇವೆ ಅನನ್ಯ. ಲಕ್ಷಾಂತರ ದೀನ-ದಲಿತರು, ಕಡು ಬಡ ಮಕ್ಕಳಿಗೆ ಶಿಕ್ಷಣ, ಅನ್ನ ಹಾಗೂ ವಸತಿ ದಾಸೋಹ ನೀಡುವ ಮೂಲಕ ತ್ರಿವಿಧ ದಾಸೋಹಿಗಳಾಗಿದ್ದ ಅವರು ಸಿದ್ದಗಂಗಾ ಕ್ಷೇತ್ರದ ಅಭಿವೃದ್ಧಿಗಾಗಿ ಎಂದೂ ಸರ್ಕಾರದ ನೆರವನ್ನು ಕೋರಿಲ್ಲ. ಪೂಜ್ಯರು ಯಾವುದೇ ರೀತಿಯ ಪ್ರಚಾರಕ್ಕೊಳಗಾಗದೆ 1930 ರಿಂದ ತಮ್ಮ ಅಂತಿಮ ದಿನಗಳವರೆಗೂ ಧಾರ್ಮಿಕ ಸೇವೆಯನ್ನು ಸಲ್ಲಿಸುವ ಮೂಲಕ ಭಕ್ತರ ಹೃದಯಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರ ಅಂತಿಮದರ್ಶನಕ್ಕಾಗಿ…
ತುಮಕೂರು: ಕಾಯಕ, ದಾಸೋಹ ಎನ್ನುವ ಬಸವಣ್ಣನವರ ತತ್ವವನ್ನು ಅಕ್ಷರಷಃ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಧುನಿಕ ಬಸವಣ್ಣನಂತೆ ಬದುಕಿದ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರನ್ನು ಕಳೆದುಕೊಂಡಿರುವ ಭಕ್ತವೃಂದ ಬಡವಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ. ನಗರದ ಎಸ್.ಐ.ಟಿ. ಬಡಾವಣೆಯ ಶ್ರೀಸಿದ್ದೇಶ್ವರ್ ಕನ್ವೆಷನ್ ಹಾಲ್‍ನಲ್ಲಿ 26ನೇ ವಾರ್ಡಿನ ನಾಗರಿಕರು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶ್ರೀಶಿವಕುಮಾರಸ್ವಾಮೀಜಿಗಳಿಗೆ ಆಯೋಜಿಸಿದ್ದ ನುಡಿನಮನ ಹಾಗೂ ಗುರುವಂದನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,1941ರಲ್ಲಿ ಮಠದ ಪೀಠಾಧ್ಯಕ್ಷರಾಗಿ ನೇಮಕಗೊಂಡ ದಿನದಿಂದಲೂ ಮಠದಲ್ಲಿ ಕಲಿಯುತ್ತಿ ರುವ ಮಕ್ಕಳು,ಮಠಕ್ಕೆ ಬರುವ ಭಕ್ತರ ಯೋಗಕ್ಷೇಮಕ್ಕಾಗಿಯೇ ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟ ಡಾ.ಶ್ರೀಶಿವಕು ಮಾರಸ್ವಾಮೀಜಿ ಅವರು,ತಮ್ಮ ತ್ರಿವಿಧ ದಾಸೋಹ ಎಂಬ ತತ್ವದ ಮೂಲಕ ಬಡವರು, ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡಲು ನಿರಂತರ ಶ್ರಮಿಸಿದವರು ಎಂದರು. ಲಿಂಗೈಕ್ಯ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಜಾನಪದ ವಿದ್ವಾಂಸ ಹಾಗೂ ಉಪನಾಸ್ಯಕ ಹೆಚ್.ವಿ.ವೀರಭದ್ರಯ್ಯ ಮಾತನಾಡಿ,ಚಿಕ್ಕವಯಸ್ಸಿನಿಂದ…
ತುಮಕೂರು: ರಾಜ್ಯ ಸರಕಾರ ಕಳೆದ 4 ವರ್ಷಗಳಿಂದ ಶಿವಕುಮಾರಶ್ರೀಗಳಿಗೆ ಭಾರತ ರತ್ನ ಪ್ರದಾನ ಮಾಡುವಂತೆ ಶಿಫಾರಸ್ಸು ಮಾಡುತ್ತಿದ್ದರು, ಕೇಂದ್ರ ಸರಕಾರ ಸಿದ್ಧಗಂಗಾಶ್ರೀಗಳ ಹೆಸರನ್ನು ನಿರಾಕರಿಸುವ ಮೂಲಕ ಅಪಾರ ಭಕ್ತ ಸಮೂಹಕ್ಕೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ವಕ್ತಾರ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕರ್ನಾಟಕದ ಹೆಸರಿನಲ್ಲಿ ಕೊಡಲಾಗಿರುವ ಪದ್ಮಶ್ರೀಯಲ್ಲಿ ಸಾಲುಮರದ ತಿಮ್ಮಕ್ಕ ಒಬ್ಬರೇ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದಾರೆ, ಉಳಿದವರು ಯಾರು ಕರ್ನಾಟಕದಲ್ಲಿ ಸೇವೆಯನ್ನು ಸಲ್ಲಿಸದೇ ಇದ್ದರೂ ಅವರಿಗೆ ಕರ್ನಾಟಕದ ಹೆಸರಿನಲ್ಲಿ ಪ್ರಶಸ್ತಿ ಘೋಷಣೆ ಮಾಡುವ ಮೂಲಕ, ಕನ್ನಡಿಗರನ್ನು ಪ್ರಶಸ್ತಿ ಆಯ್ಕೆಯಲ್ಲಿ ಕಡೆಗಣಿಸಲಾಗಿದೆ ಎಂದರು. ಕರ್ನಾಟಕ ಮೂಲದವರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ತಮಿಳುನಾಡು ರಾಜ್ಯದಿಂದ ಆಯ್ಕೆಯಾದವರ ಪಟ್ಟಿಯಲ್ಲಿಯೂ ಇವರ ಹೆಸರು ಉಲ್ಲೇಖಿಸಲಾಗಿದೆ, ಅವರ ಸಾಧನೆಗೆ ಪ್ರಶಸ್ತಿ ನೀಡಿರುವುದರಲ್ಲಿ ನಮಗೆ ಯಾವುದೇ ಆಕ್ಷೇಪವಿಲ್ಲ, ಆದರೆ ಕರ್ನಾಟಕದಲ್ಲಿ ಅನನ್ಯ ಸೇವೆ ಸಲ್ಲಿಸಿದರವರಿಗೆ ಪ್ರಶಸ್ತಿ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು. ಲಕ್ಷಾಂತರ ಜನರಿಗೆ ವಿದ್ಯಾದಾನ…
ತುಮಕೂರು: ಕುಷ್ಠರೋಗವು ದೇವರ ಶಾಪ ಅಥವಾ ಪಾಪದ ಫಲಗಳಿಂದ ಬರುವುದಿಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಗಣೇಶ ತಿಳಿಸಿದರು. ಸ್ಪರ್ಶ ಕುಷ್ಠರೋಗ ಅರಿವು ಆಂದೋಲನದ ಅಂಗವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿಂದು ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗಾಂಧೀಜಿಯವರು ಹುತಾತ್ಮರಾದ ದಿನವಾದ ಇಂದು ಅವರ ಸ್ಮರಣೆಯಲ್ಲಿ ರಾಷ್ಟ್ರಾದ್ಯಂತ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನವನ್ನು ಹಮ್ಮಿಕೊಳ್ಳಾಗುತ್ತಿದೆ. ಗಾಂಧೀಜಿಯವರ “ಕುಷ್ಠ ಮುಕ್ತ ದೇಶ”ದ ಕನಸನ್ನು ನಾವೆಲ್ಲಾ ನನಸಾಗಿಸೋಣ ಎಂದು ಹೇಳಿದರಲ್ಲದೆ ಕುಷ್ಠರೋಗವನ್ನು ಸುಲಭವಾಗಿ ಪತ್ತೆ ಹಚ್ಚಿ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಕುಷ್ಠರೋಗಿಗಳನ್ನು ಕಂಡರೆ ತಾರತಮ್ಯ ತೋರದೆ ದೌರ್ಜನ್ಯಕ್ಕೊಳಗಾದ ಕುಷ್ಠರೋಗಿಗಳನ್ನು ಮುಖ್ಯವಾಹಿನಿಗೆ ತಂದು ಸಾಮಾನ್ಯರೊಂದಿಗೆ ಬದುಕಲು ಅವಕಾಶ ಕಲ್ಪಿಸಬೇಕೆಂದು ಅವರು ಮನವಿ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಿಕಾ ಮಾತನಾಡಿ ಜಿಲ್ಲಾದ್ಯಂತ ಜನವರಿ 30 ರಿಂದ ಫೆಬ್ರುವರಿ 13ರವರೆಗೆ 15 ದಿನಗಳ ಕಾಲ…
ತುರುವೇಕೆರೆ: ಕನ್ನಡ ಬೆಳಸಬೇಕು ಉಳಿಸಬೇಕು ಎನ್ನುವ ಸಂಘಟನೆಗಳಿಗಿಂತ ಬಳಸಿ ಉಳಿಸುವ ಮನಸ್ಸಿನ ಸಂಘಟನೆಗಳ ಅವಶ್ಯಕತೆ ಪ್ರಸ್ಥುತ ದಿನಮಾನಗಳಲ್ಲಿ ಅತಿ ಅವಶ್ಯಕವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಪವಾಡ ಬಯಲು ತಜ್ನ ಹುಲಿಕಲ್ ನಟರಾಜ್ ಅಭಿಪ್ರಾಯಪಟ್ಟರು. ಪಟ್ಟಣದ ಹಿರಣ್ಣಯ ಬಯಲು ರಂಗಮಂದಿರದ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಸಿ ಮಾತನಾಡಿ ಕನ್ನಡವನ್ನು ಬೆಳೆಸಬೇಡಿ ಬಳಸಿ, ಹಸಿರೇ ಹುಸಿರು ಪೃಕೃತಿಯನ್ನು ಕಾಪಾಡುವ ಹೊಣೆ ನಮ್ಮದು. ಸಾಹಿತ್ಯಾಸಕ್ತರಲ್ಲಿ ಮನಸ್ಸು ಬದಲಾಗುತ್ತಿದೆ ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿರುವುದು ಒಂದೆಡೆಯಾದರೆ ಸಮ್ಮೇಳನಗಳು ಜಾರ್ತೆಯಾಗಿ ಮಾರ್ಪಾಡಾಗುತ್ತಿರುವುದು ಮೊತ್ತೊಂದೆಡೆಯಾಗಿದೆ, ಸಮ್ಮೇಳನಗಳು ಕನ್ನಡಿಗರ ಮನಸ್ಸನ್ನು ಬೆಸೆಯುವ ನಾಡಹಬ್ಬವಾಗಬೇಕು ಎಂದರು. ಕೆಲ ಸಮೂಹ ಮಾಧ್ಯಮಗಳು ಜನಪರವಾಗದೆ ಕೇವಲ ಟಿ.ಆರ್.ಪಿ. ಪರವಾಗಿದ್ದು, ಸಮಾಜದಲ್ಲಿ ಒಡಕು ಮೂಡಿಸುವಂತಹ ಹಾಗೂ ಕೌಟುಂಬಿಕ ಸಮಸ್ಯೆಗಳನ್ನು ಬೀದಿಗೆ ತಂದು ಮನೆಯ ಮನಸ್ಸುಗಳ ಮಾನಸಿಕ ಖಿನ್ನತೆಗೆ ಪ್ರೇರಣೆ ನೀಡುತ್ತಿರುವುದರಿಂದ ಮಾನಸಿಕ…
ತುಮಕೂರು: ಮಹಾ ನಗರಪಾಲಿಕೆಯ ಮೇಯರ್, ಉಪ ಮೇಯರ್ ಹಾಗೂ 4 ವಿವಿಧ ಸ್ಥಾಯಿ ಸಮಿತಿಗಳಿಗೆ ಬುಧವಾರ ಪಾಲಿಕೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ನೂತನ ಮೇಯರ್ ಆಗಿ 21ನೇ ವಾರ್ಡ್‍ನ ಲಲಿತಾ ರವೀಶ್ ಹಾಗೂ ಉಪ ಮೇಯರ್ ಆಗಿ 19ನೇ ವಾರ್ಡ್‍ನ ರೂಪಶ್ರೀ ಅವರು ಆಯ್ಕೆಯಾದರು. ಬೆಂಗಳೂರು ಪ್ರಾದೇಶಿಕ ಆಯುಕ್ತರು ಹಾಗೂ ಪಾಲಿಕೆ ಚುನಾವಣಾಧಿಕಾರಿ ಶಿವಯೋಗಿ ಸಿ.ಕಳಸದ ಅವರು ಬೆಳಿಗ್ಗೆ 11.30 ರಿಂದ ನಡೆಸಿದ ಚುನಾವಣೆ ಪ್ರಕ್ರಿಯೆಯಲ್ಲಿ ಹಾಜರಿದ್ದ 34 ವಾರ್ಡ್‍ಗಳ ಪಾಲಿಕೆ ಸದಸ್ಯರ ಹಾಜರಾತಿ ಪಡೆದು, ಅಭ್ಯರ್ಥಿಗಳ ನಾಮಪತ್ರ ಸ್ವೀಕರಿಸಿ ಪರಿಶೀಲಿಸಲಾಯಿತು. ನಂತರ ಅಭ್ಯರ್ಥಿಗಳಿಗೆ ನಾಮಪತ್ರಗಳನ್ನು ಹಿಂಪಡೆಯಲು ಕಾಲಾವಕಾಶ ನೀಡಲಾಗಿತ್ತು. ಅಭ್ಯರ್ಥಿಗಳ ನಾಮನಿರ್ದೇಶನ ಪತ್ರ ಕ್ರಮಬದ್ಧಗೊಂಡ ನಂತರ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಘೋಷಿಸಲಾಯಿತು. ಇದಕ್ಕೂ ಮುನ್ನ ಕಳೆದ ಆಗಸ್ಟ್ 31ರಂದು ನಡೆದ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಸದಸ್ಯರಿಂದ ಪ್ರಮಾಣ ವಚನ ಸ್ವೀಕರಿಸಲಾಯಿತು. ಪಾಲಿಕೆಯ ಮೇಯರ್, ಉಪಮೇಯರ್…











