ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮಗಳಲ್ಲಿ ಕೋಲಹಲ ಎಬ್ಬಿಸಿದ್ದ ಶೃತಿ ಹರಿಹರನ್ಗೆ ಇದೀಗ ಸಂಕಷ್ಟ ಎದುರಾಗಿದ್ದು, ಶ್ರುತಿ ಹರಿಹರನ್ ಸೇರಿ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ತಮ್ಮ ಇಮೇಜ್ ಗೆ ಡ್ಯಾಮೇಜ್ ಆಗಿರುವ ಕಾರಣ, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿದ ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಹಾಗೂ ವಕೀಲರು ಲಿಖಿತ ದೂರು ನೀಡಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಐಟಿ ಆ್ಯಕ್ಟ್ 200 ಅಡಿಯಲ್ಲಿ ಶ್ರುತಿ ಹರಿಹರನ್ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇಬ್ಬರ ನಡುವೆ ಸಂಧಾನ ನಡೆಸಲು ಚಲನಚಿತ್ರ ರಂಗದ ಪ್ರಮುಖರು ಪ್ರಯತ್ನಿಸುತ್ತಿರುವ ಮಧ್ಯೆಯೇ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
Trending
- ಪೋಷಕರ ಆದರ್ಶಗಳು, ಮೌಲ್ಯಗಳನ್ನು ಮುಂದುವರೆಸಿ: ಸ್ವಾಮೀಜಿ
- ಹಮಾಲಿ ಕಲ್ಯಾಣ ಮಂಡಳಿಗೆ ೫೦೦ ಕೋಟಿ ಮೀಸಲಿಡಲು ಒತ್ತಾಯ
- ಸಮಾಜದಲ್ಲಿ ಜನರಿಗೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಬೇಕಿದೆ
- ಪುಟ್ಟ ಬಾಲೆಗೆ ನ್ಯಾಷನಲ್ ಬುಕ್ ಆಫ್ ದಿ ರೆಕಾರ್ಡ್ ಗರಿಮೆ ಹಿರಿಮೆ
- ಡಿ.೧೩: ಜಿಲ್ಲಾ ಬಂಜಾರ ಭವನದ ನೂತನ ಕಟ್ಟಡದ ಉದ್ಘಾಟನೆ
- ಪತ್ರಿಕಾ ವೃತ್ತಿಯಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಸಮಾಜ ಗೌರವ ನೀಡುತ್ತದೆ: ಶಾಸಕ
- ೩೨೫ ಬಾಲ ಗರ್ಭಿಣಿ ಪ್ರಕರಣ ನ್ಯಾಯಾಲಯ ಹಂತದಲ್ಲಿ ದಾಖಲು
- ಜನ ಕೊಟ್ಟ ಅಧಿಕಾರ ಶಾಶ್ವತವಲ್ಲ ನಾವು ಮಾಡಿದ ಕೆಲಸಗಳು ಶಾಶ್ವತ: ಶಾಸಕ ಸಿ. ಬಿ. ಸುರೇಶ್ ಬಾಬು ಹೇಳಿಕೆ


