Author: News Desk Benkiyabale

ಬೆಂಗಳೂರು:        ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿ ಸ್ವಾಮೀಜಿ ಅವರು ತಮ್ಮ ಪ್ರತಿ ತಿಂಗಳ ಆರೋಗ್ಯದ ಸಲುವಾಗಿ ಇಂದು ಬಿಜಿಎಸ್ ಆಸ್ಪತ್ರೆಗೆ ಆಗಮಿಸಿದ್ದಾರೆ.        ನಿನ್ನೆ ಬಿಜಿಎಸ್ ಆಸ್ಪತ್ರೆ ವೈದ್ಯರು ಮಠಕ್ಕೆ ಬಂದು ಸ್ವಾಮಿಜಿಯವರ ಆರೋಗ್ಯ ತಪಾಸಣೆ ಮಾಡಿದ್ದರು. ಆದರೂ ಕೂಡ ಮತ್ತೊಮ್ಮೆ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಿಶೇಷ ತಪಾಸಣೆ ಮಾಡಬೇಕಿದೆ ಎಂದು ವೈದ್ಯರ ಬೇಡಿಕೆಯ ಮೇರೆಗೆ ಇಂದು ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ.        ಸಣ್ಣದಾಗಿ ಜ್ವರ ಕಾಡುತ್ತಿದ್ದು, ರಕ್ತ ಪರೀಕ್ಷೆ, ಅಲ್ಟ್ರಾ ಸೌಂಡ್ ಮತ್ತು ಕಿಬ್ಬೊಟ್ಟೆಯ ಸಿಟಿ ಸ್ಕ್ಯಾನ್ ಮಾಡಲಾಗುತ್ತೆ‌. ಇನ್ನು ಕಳೆದ ಎರಡೂವರೆ ವರ್ಷಗಳಲ್ಲಿ 5 ಬಾರಿ ಶ್ರೀಗಳ ಲಿವರ್​​ನಲ್ಲಿ ಸ್ಟಂಟ್ ಅಳವಡಿಸಲಾಗಿದೆ. ಶ್ರೀಗಳಿಗೆ ಡಾ. ರವೀಂದ್ರ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.       ಇಂದು ಬೆಂಗಳೂರಿನಲ್ಲೇ ಇರಲಿದ್ದು, ಇದಕ್ಕೆ ಪೂರ್ವಾಭಾವಿಯಾಗಿ ಮಠದಿಂದ  ಶ್ರೀಗಳ ಶಿಷ್ಯರು ಆಗಮಿಸಿದ್ದಾರೆ. ನಾಳೆ ಸಂಜೆವರೆಗೂ ಶ್ರೀಗಳು ಆಸ್ಪತ್ರೆಯಲ್ಲೇ ಇರಲಿದ್ದು, ಅವರ…

Read More

 ತುಮಕೂರು:        ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್.ಐ.ವಿ(ಏಡ್ಸ್) ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಸೋಂಕಿನ ಪ್ರಮಾಣವನ್ನು ಸೊನ್ನೆಗೆ ತರುವಲ್ಲಿ ಆರೋಗ್ಯ ಇಲಾಖೆಯೊಂದಿಗೆ ಎಲ್ಲಾ ಇಲಾಖೆಗಳು, ಸಂಘ-ಸಂಸ್ಥೆಗಳು, ಜನಸಾಮಾನ್ಯರು ಸಹಕರಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಿಕಾ ಮನವಿ ಮಾಡಿದರು.       ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ನಗರ ಪಾಲಿಕೆಯ ಬಳಿ ಇಂದು ಬೆಳಿಗ್ಗೆ ಏರ್ಪಡಿಸಿದ್ದ ಜಾಗೃತಿ ಜಾಥಾ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿ ವರ್ಷದಂತೆ ಈ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ವರ್ಷ “ತಮ್ಮ ಹೆಚ್.ಐ.ವಿ. ಸ್ಥಿತಿಯನ್ನು ತಿಳಿದುಕೊಳ್ಳಿ” ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.       ಜಾಥಾ ಕಾರ್ಯಕ್ರಮದಲ್ಲಿ ಎರಡನೇ ಅಧಿಕ ಜಿಲ್ಲಾ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ್, ಆರನೇ ಅಧಿಕ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ್ ಸ್ವಾಮಿ ಹೆಚ್.ಎಸ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಾಬಾ ಸಾಹೇಬ ಜಿನರಾಳ್ಕರ್, ತುಮಕೂರು ವಿಶ್ವ ವಿದ್ಯಾನಿಲಯದ ಉಪಕುಲಪತಿ ಸಿದ್ದೆಗೌಡ,…

Read More

ಮಧುಗಿರಿ :       ಶೈಕ್ಷಣಿಕ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರಿಗೆ ನೋಟೀಸ್ ನೀಡುವ ಬೆದರಿಕೆಯೊಡ್ಡಿ ಅವರ ಹೋರಾಟ ಮನೋಭಾವವನ್ನು ಹತ್ತಿಕ್ಕಲು ಯತ್ನಿಸುತ್ತಿರುವುದು ಖಂಡನೀಯ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಎನ್. ಮಹಲಿಂಗೇಶ್ ತಿಳಿಸಿದರು.       ಪಟ್ಟಣದ ಡಿಡಿಪಿಐ ಕಚೇರಿಯ ಮುಂದೆ ಗುರುಭವನ ಸಮಿತಿಯ ಅವ್ಯವಹಾರಗಳನ್ನು ಖಂಡಿಸಿ 9 ಶಿಕ್ಷಕರ ಸಂಘಗಳು ಹಮ್ಮಿಕೊಂಡಿದ್ದ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಯಾವುದೇ ಕಮಿಟಿಯ ಹಣಕಾಸಿನ ವ್ಯವಹಾರಗಳು ಪಾರದರ್ಶಕತೆಯಿಂದ ಕೂಡಿರಬೇಕು. ಎಲ್ಲಾ ವ್ಯವಹಾರಗಳನ್ನು ಚೆಕ್ ಮೂಲಕವೇ ನಡೆಸಬೇಕು ಎಂಬ ನಿಯಮವಿದ್ದರೂ ಈ ಎಲ್ಲಾ ನಿಯಮಗಳನ್ನು ಈಗ ಇರುವ ಗುರುಭವನ ಕಮಿಟಿ ಗಾಳಿಗೆ ತೂರಿದೆ. ಸಮಾಜದಲ್ಲಿ ಶಿಕ್ಷಕರಿಗೆ ಗೌರವಯುವ ಸ್ಥಾನವಿದ್ದು, ನಮ್ಮ ಹೋರಾಟ ಯಾವುದೇ ವ್ಯಕ್ತಿ ಅಥವಾ ಸಂಘದ ವಿರುದ್ದ ಅಲ್ಲ. ಗುರುಭವನ ಕಮಿಟಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಗೆಹರಿಸಲು ನಾವು ಹೋರಾಟ ಮಾಡುತ್ತಿದ್ದು, ಈಗ ಇರುವ ಗುರುಭವನ ಸಮಿತಿಯ ಪದಾಧಿಕಾರಿಗಳನ್ನು ಬದಲಾಯಿಸಿ ಪುನರ್ ರಚಿಸಬೇಕು ಎಂದು ಒತ್ತಾಯಿಸಿದರು.  …

Read More

ಮಧುಗಿರಿ :       ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಶೌಚಾಲಯಗಳನ್ನು ಸ್ವಚ್ಚಗೊಳಿಸಲು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದು, ಇದರ ಬಗ್ಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ತಾ.ಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ತಿಳಿಸಿದರು.       ಪಟ್ಟಣದ ದಂಡಿನ ಮಾರಮ್ಮ ದೇವಸ್ಥಾನದ ಸಮೀಪವಿರುವ ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ಶನಿವಾರ ಬೆಳಗ್ಗೆ ದಿಡೀರ್ ಬೇಟಿ ನೀಡಿ ಹಾಸ್ಟೆಲ್ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಳ ಕೈಯಲ್ಲಿ ಶೌಚಾಲಯಗಳನ್ನು ಸ್ವಚ್ಚಗೊಳಿಸುವುದು ಅಪರಾಧ. ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ನಲ್ಲಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದೆ. ಆದರೆ ಇಲ್ಲಿನ ಹಾಸ್ಟೆಲ್‍ನಲ್ಲಿ ಸ್ವಚ್ಚತೆಯನ್ನು ಕಾಯ್ದುಕೊಂಡಿಲ್ಲ. ಮಕ್ಕಳಿಗೆ ವಿತರಿಸಲಾಗಿರುವ ಜಾಮೂನಿನ ಪೊಟ್ಟಣದಲ್ಲಿ ಯಾವುದೇ ದಿನಾಂಕ ನಮೂದಿಸಿಲ್ಲ. ಪೌಸ್ಟಿಕಾಂಶುಳ್ಳ ಆಹಾರವನ್ನು ಮಕ್ಕಳಿಗೆ ನೀಡುತ್ತಿಲ್ಲ ಅಲ್ಲದೇ ಹಾಸ್ಟೆಲ್ ನಲ್ಲಿ 25 ವಿದ್ಯಾರ್ಥಿಗಳಿದ್ದು, ಉಳಿದವರು ಎಲ್ಲಿ ತಂದು ಹಾಸ್ಟೆಲ್ ವಾರ್ಡನ್‍ಗೆ ತರಾಟೆಗೆ ತೆಗೆದುಕೊಂಡು ಇದರ ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

Read More

ಚಿಕ್ಕನಾಯಕನಹಳ್ಳಿ:       ಈ ತಿಂಗಳ ಅಂತ್ಯದೊಳಗೆ ಬಗರ್‍ಹುಕುಂ ಸಾಗುವಳಿಯಲ್ಲಿ ಭೂಮಿ ಮಂಜೂರಾಗಿರುವ ರೈತರಿಗೆ ಸಾಗುವಳಿ ಚೀಟಿ ವಿತರಿಸಲಾಗುವುದು, 2019ರ ಜನವರಿ 15ರೊಳಗೆ ಸಾಗುವಳಿ ಚೀಟಿ ವಿತರಿಸಿರುವ ರೈತರಿಗೆ ಖಾತೆ ಮಾಡಿಕೊಡಲಾಗುವುದು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.       ತಾಲ್ಲೂಕಿನ ಕಾತ್ರಿಕೆಹಾಲ್‍ನಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕಿನ ಜನತೆ ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳಬೇಕು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಈ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ, ಈಗಾಗಲೇ ತಾಲ್ಲೂಕಿನಿಂದ 12ಸಾವಿರಕ್ಕೂ ಹೆಚ್ಚು ಜನರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗಿದ್ದಾರೆ, ಇವರ ಜೀವನವೂ ಸುಖಕರವಾಗಿಲ್ಲ ಹಾಗಾಗಿ ರೈತರಿಗೆ ಜಮೀನು ನೀಡಿ ಸಾಗುವಳಿ ಮಾಡುವಂತೆಯೂ ಈ ಮೂಲಕ ತಮ್ಮ ಜೀವನ ರೂಪಿಸಿಕೊಳ್ಳುವಂತೆ ತಿಳಿಸಿದ ಅವರು, ಕಂದಿಕೆರೆ ಹೋಬಳಿಯಲ್ಲಿ ಪ್ರತಿ ಬಾರಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಲ್ಲಿ ನಮ್ಮ ಅಭ್ಯರ್ಥಿಗಳಗೆ ಹೆಚ್ಚು ಮತ ನೀಡುತ್ತಿದ್ದರು ಆದರೆ ವಿಧಾನಸಭೆಯಲ್ಲಿ ಮತ ಬರುತ್ತಿರಲಿಲ್ಲ, ಈ ಬಾರಿಯ ವಿಧಾನಸಭಾ…

Read More

ತುಮಕೂರು :       ಎತ್ತಿನಹೊಳೆ ಯೋಜನೆಗೆ ಜಿಲ್ಲೆಯಲ್ಲಿ ಮನೆ, ಜಮೀನು ಕಳೆದುಕೊಳ್ಳುವ ರೈತರಿಗೆ ಉತ್ತಮ ಬೆಲೆಯನ್ನು ನೀಡಿ ಪುನರ್ವಸತಿ ಕಲ್ಪಿಸಬೇಕು ಎಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.       ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ, ಮೇಲ್ಗಾಲುವೆ ನಿರ್ಮಾಣದ ಭೂಸ್ವಾಧೀನಕ್ಕೆ ಸಂಬಂಧಿಸಿದ ಪುನರ್ವಸತಿ ಮತ್ತು ಪುನರ್‍ನಿರ್ಮಾಣ ಪ್ರಯೋಜನಗಳ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.       ಎತ್ತಿನ ಹೊಳೆ ಯೋಜನೆಗಾಗಿ ರೈತರು ಜಮೀನು, ಮನೆ ಹಾಗೂ ಮರಗಳನ್ನು ಕಳೆದುಕೊಳ್ಳಲಿದ್ದಾರೆ. ಇಂತಹ ರೈತರು ಉತ್ತಮ ಬೆಲೆಯನ್ನು ನೀಡುವಂತೆ ನನಗೆ ಮನವಿ ಮಾಡುತ್ತಿದ್ದು, ರೈತರಿಗೆ ಅನುಕೂಲಕರವಾಗುವ ರೀತಿಯಲ್ಲಿ ಉತ್ತಮ ಬೆಲೆಯನ್ನು ನಿಗಧಿಪಡಿಸಿ, ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.       ಎತ್ತಿನ ಹೊಳೆ ಕುಡಿಯುವ ನೀರು ಯೋಜನೆಯ 10.47 ಕಿ.ಮೀ. ಉದ್ದದ ಮೇಲ್ಗಾಲುವೆ ಹಾಗೂ 0.542 ಕಿ.ಮೀ. ಉದ್ದದ ಮುಖ್ಯ ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನದಿಂದ…

Read More

 ತುಮಕೂರು:      ಗುಬ್ಬಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿ ರಾಜ ಆಲಿಯಾಸ್ ಯರ್ರೋಡು ಬಿನ್(26)  ಕೂಲಿ ಕೆಲಸ ತುಮಕೂರಿನ ದಿಬ್ಬೂರು ಜನತಾ ಕಾಲೋನಿ ವಾಸಿಯನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಿದಾಗ ತುಮಕೂರು ನಗರ ಪೊಲೀಸ್ ಠಾನಾ ಸರಹದ್ದಿನ ಎರಡು ಮನೆ ಕಳವು ಪ್ರಕರಣಗಳು ಮತ್ತು ಜಯನಗರ ಪೊಲೀಸ್ ಠಾಣಾ ಸರಹದ್ದಿನ ಎರಡು ಮನೆ ಕಳವು ಪ್ರಕರಣಗಳು ಮತ್ತು ಗುಬ್ಬಿ ಟೌನ್‍ನಲ್ಲಿ ಮನೆ ಕಳವು ಸೇರಿದಂತೆ ಒಟ್ಟು 5 ಪ್ರಕರಣಗಳನ್ನು ಪತ್ತೆ ಹಚ್ಚಿ,  ಒಟ್ಟು 2,80,000 ರೂ. ಬೆಲೆಯ 90 ಗ್ರಾಂ ಚಿನ್ನದ ಆಭರಣ ಮತ್ತು 930 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದೆ.       ತುಮಕೂರು ಗ್ರಾಮಾಂತರ ಉಪವಿಭಾಗದ ಉಪಾಧೀಕ್ಷಕರಾದ ಶ್ರೀ ವೆಂಕಟಸ್ವಾಮಿರವರ ನೇತೃತ್ವದಲ್ಲಿ ಶ್ರೀ ದೀಪಕ್, ಪಿಎಸ್‍ಐ ಶ್ರೀ ಟಿ.ಎಂ.ಗಂಗಾಧರ್ ಹಾಗೂ ಸಿಬ್ಬಂಣಧಿಯವರಾದ ನವೀನ್ ಕುಮಾರ್, ನಾಗರಾಜು ಮತ್ತು ವಿಜಯಕುಮಾರ್ ರವರುಗಳ ತಂಡವು ಆರೋಪಿ ಮತ್ತು ಕಳವು ಮಾಲನ್ನು ವಶಪಡಿಸಿಕೊಳ್ಳಲು ಶ್ರಮಿಸಿರುತ್ತಾರೆ.       ಆರೋಪಿಗಳನ್ನು…

Read More

ತುಮಕೂರು:        ಜನರ ಜೀವನಾಡಿಯಾಗಬೇಕಿದ್ದ ಜಯಮಂಗಲಿ ನದಿ ಮರಳು ಲೂಟಿಕೋರರ ತೋಳ್ತೆಕ್ಕೆಗೆ ಸಿಲುಕಿ ಅವಸಾನದ ಅಂಚನ್ನು ತಲುಪಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಹಾಗೂ ಮಧುಗಿರಿಯ ಮಧ್ಯಭಾಗದಲ್ಲಿ ಹರಿಯುವ ಜಯಮಂಗಲಿ ನದಿಯ ನೀರಿನಿಂದ ಬರಗಾಕಲದ ನಡುವೆ ರೈತರು ಹಸನ್ಮುಖಿಯಾಗುತ್ತಿದ್ದರು. ನದಿಯ ಆಸು-ಪಾಸಿನ ರೈತರು ಆ ಭಾಗದ ರೈತಾಪಿವರ್ಗ ಜಯಮಂಗಲಿಯನ್ನೇ ಅವಲಂಬಿಸಿ ಕೃಷಿಯಲ್ಲಿ ತೊಡಗುತ್ತಿತ್ತು.       ಆದರೆ, ಭ್ರಷ್ಟ ರಾಜಕಾರಣಿಗಳ ಚೇಲಾಗಳು ನದಿಯ ಭಾಗದಲ್ಲಿ ನಿರಂತರವಾಗಿ ಮರಳನ್ನು ಬಗೆಯುತ್ತಿರುವುದರಿಂದ ಮರಳು ಲೂಟಿಕೋರರ ಹಣದ ದಾಹಕ್ಕೆ ರೈತರ ಜೀವಸೆಲೆಯಾಗಬೇಕಿದ್ದ ಜಯಮಂಗಲಿ ನದಿ ಅವಸಾನದ ಅಂಚು ತಲುಪಿದ್ದು, ಜಯಮಂಗಲಿ ನದಿಯ ಆಸು-ಪಾಸಿನ ಜಮೀನುಗಳಲ್ಲಿ ಸಾವಿರಾರು ಅಡಿ ಕೊಳವೆ ಬಾವಿ ಕೊರೆದರೂ ನೀರು ಬಾರದೆ,ರೈತಾಪಿ ವರ್ಗ ಪರಿತಪಿಸುವಂತಾಗಿದೆ. ಇದಕ್ಕೆ ಕಾರಣ ಮರಳು ಮಾಫಿಯಾ ಅತಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕದ ಅಧಿಕಾರಿ ವರ್ಗ ಲಂಚದ ದಾಹಕ್ಕೆ ಸಿಲುಕಿ ಜಯಮಂಗಲಿಯ ಒಡಲಾಳವನ್ನು ಬಗೆಯಲು ಸಹಕರಿಸುತ್ತಿದ್ದಾರೆ. ಅಕ್ರಮ ಮರಳು ಮಾಫಿಯಾದೊಂದಿಗೆ ಕೈಜೋಡಿಸಿರುವ ಭ್ರಷ್ಟ ಅಧಿಕಾರಿ…

Read More

ತುಮಕೂರು:        ಜನರಲ್ಲಿ ಹೆಚ್.ಐ.ವಿ/ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ವಿಶ್ವದಾದ್ಯಂತ ಪ್ರತಿ ವರ್ಷ ಡಿಸೆಂಬರ್ 1ರಂದು “ವಿಶ್ವ ಏಡ್ಸ್ ದಿನ”ವನ್ನಾಗಿ ಆಚರಿಸಲಾಗುತ್ತಿದ್ದು, ಪ್ರಸಕ್ತ ವರ್ಷ “ತಮ್ಮ ಹೆಚ್.ಐ.ವಿ ಸ್ಥಿತಿಯನ್ನು ತಿಳಿದುಕೊಳ್ಳಿ” ( “Know your HIV status”) ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುವುದು.       ಹೆಚ್.ಐ.ವಿ. ಸೋಂಕು ಮನುಕುಲಕ್ಕೆ ಬಂದೊದಗಿದ ವಿಪತ್ತು. ಹೆಚ್.ಐ.ವಿ ಸೋಂಕನ್ನು ಬರದಂತೆ ತಡೆಯಲು ಯಾವ ಲಸಿಕೆಯೂ ಇಲ್ಲ. ಪೂರ್ಣ ಮಟ್ಟದಲ್ಲಿ ಗುಣಪಡಿಸುವ ಔಷಧಿಗಳೂ ಇಲ್ಲ. ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೊಂದೇ ಈ ಸೋಂಕಿನ ತಡೆಗಿರುವ ಏಕೈಕ ಮಾರ್ಗ ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಏಡ್ಸ್ ಸೋಂಕಿನ ಬಗ್ಗೆ ಜನಜಾಗೃತಿ ಮೂಡಿಸಲು ಡಿಸೆಂಬರ್ 1ರಂದು “ವಿಶ್ವ ಏಡ್ಸ್ ದಿನಾಚರಣೆ”ಯನ್ನು ಹಮ್ಮಿಕೊಳ್ಳಲಾಗಿದೆ.       ಬನ್ನಿ, ಏಡ್ಸ್ ರೋಗದ ಲಕ್ಷಣಗಳು, ಹರಡುವಿಕೆ, ನಿಯಂತ್ರಣ, ಚಿಕಿತ್ಸಾ ವಿಧಾನ ಹಾಗೂ ಜಿಲ್ಲೆಯಲ್ಲಿರುವ ಏಡ್ಸ್ ಸೋಂಕಿತರ ಅಂಕಿ-ಅಂಶಗಳ ಮಾಹಿತಿ ತಿಳಿಯೋಣ.       ಹೆಚ್.ಐ.ವಿ ವೈರಸ್ ಮನುಷ್ಯನಲ್ಲಿರುವ ರೋಗ…

Read More

ಚಿಕ್ಕನಾಯಕನಹಳ್ಳಿ :      ಅಧಿಕಾರಿಗಳ ನಿರ್ಲಕ್ಷತನವೋ, ಜನಪ್ರತಿನಿಧಿಗಳ ಅಸೆಡ್ಡೆಯೋ ಗೊತ್ತಿಲ್ಲ, ಪಟ್ಟಣದ ಪುರಸಭೆಯಲ್ಲಿ ಮಾತ್ರ ಬೇಜವಬ್ದಾರಿಯಿಂದ ಪಟ್ಟಣದ 10ನೇ ವಾರ್ಡ್‍ನಲ್ಲಿ ಕೊಳವೆ ಮಾರ್ಗದಲ್ಲಿ ಕೊಳಚೆ ನೀರು ಹಾಗೂ ಹುಳವಿರುವ ನೀರು ಸರಬರಾಜಾಗಿದೆ ಎಂದು ಆ ಭಾಗದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.       ಪಟ್ಟಣದಲ್ಲಿ ಪ್ರಸಕ್ತ ಎಲ್ಲಾ ವಾರ್ಡ್‍ಗಳಿಗೂ ವಾರಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ, ಎಲ್ಲಾ ಮನೆಗಳಿಗೂ ಕೊಳಾಯಿ ಮೂಲಕ ಹಾಗೂ ಬೀದಿ ನಲ್ಲಿ ಮೂಲಕ ಪಟ್ಟಣದ ಜನತೆಗೆ ನೀರು ಸರಬರಾಜಾಗುತ್ತಿದೆ, ಸರಬರಾಜಾಗುತ್ತಿರುವ ನೀರನ್ನು ಜನತೆ ಕುಡಿಯಲು ಹಾಗೂ ಮನೆಯ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದಾರೆ, ಶುಕ್ರವಾರ ಬ್ರಾಹ್ಮಣರ ಬೀದಿಯಲ್ಲಿ ಮುಂಜಾನೆ 6ಗಂಟೆಗೆ ನೀರು ಹಾಯಿಸಲಾಗಿದೆ ಆದರೆ ಬಂದಿರುವ ನೀರಿನಲ್ಲಿ ಪೂರ್ಣ ಕೊಳಚೆಯುಕ್ತ ನೀರು ಸರಬರಾಜಾಗಿದೆ, ನೀರಿನ ಜೊತೆಯಲ್ಲಿ ಹುಳುಗಳು ಸಹ ಬಂದಿವೆ, ಕೊಳಚೆ ನೀರನ್ನು ನೋಡದೆ ಜನರು ತೊಟ್ಟಿಯೊಳಗೆ ನೀರನ್ನು ಹಾಯಿಸಿದ್ದರಿಂದ ಈ ಮೊದಲು ಮನೆಯ ತೊಟ್ಟಿಯೊಳಗಿದ್ದ ನೀರೂ ಸಹ ಪೂರ್ಣ ಕೊಳಚೆಯಾಗಿ ನೀರನ್ನೆಲ್ಲಾ ಹೊರಗೆ ಚೆಲ್ಲಲಾಗಿದೆ, ಪುರಸಭೆಯಿಂದ ಸರಬರಾಜಾಗಿರುವ ಈ…

Read More