ಗುಬ್ಬಿ: ಲಾರಿಗೆ ಸಿಲುಕಿ ಗಾಯಗೊಂಡು ಎಎಸ್‍ಐ ಸಾವು!!

ಗುಬ್ಬಿ:

     ಬೈಕ್‍ನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಎಎಸ್‍ಐ ಲಾರಿಗೆ ಸಿಲುಕಿ ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಸೋಮವಾರ ತಾಲ್ಲೂಕಿನ ಉದ್ದೇಹೊಸಕೆರೆ ಗ್ರಾಮದ ಬಳಿ ಶಿರಾ ನೆಲ್ಲಿಗೆರೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ನಡೆದಿದೆ.

      ತುರುವೇಕೆರೆ ತಾಲ್ಲೂಕು ಅಂಗರೇಖನಹಳ್ಳಿ ಗ್ರಾಮ ಮೂಲದ ಭುವನೇಶ್ವರ್‍ಕುಮಾರ್ (58) ಮೃತಪಟ್ಟ ಚೇಳೂರು ಠಾಣಾ ಎಎಸ್‍ಐ ಅಧಿಕಾರಿಯಾಗಿದ್ದರು. ತಮ್ಮ ಸ್ವಗ್ರಾಮದಿಂದ ಚೇಳೂರು ಠಾಣೆಗೆ ಬೈಕ್‍ನಲ್ಲಿ ತೆರಳುವ ಮಾರ್ಗ ಮಧ್ಯೆ ಹರಿಯಾಣ ರಾಜ್ಯದ ಲಾರಿ ಮುಖಾಮುಖಿ ಡಿಕ್ಕಿಯಾಗಿದೆ. ಹೊಟ್ಟೆಭಾಗಕ್ಕೆ ತೀವ್ರ ಪೆಟ್ಟು ಬಿದ್ದ ನರಳುತ್ತಿದ್ದ ಮೃತರನ್ನು ತುಮಕೂರು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಎಎಸ್‍ಐ ಭುವನೇಶ್ವರ್‍ಕುಮಾರ್ ಸಾವನ್ನಪ್ಪಿದರು.

      ಅಪಘಾತ ಮಾಡಿ ಸ್ಥಳದಿಂದ ಪಲಾಯಾನವಾಗಿದ್ದ ಲಾರಿಯನ್ನು ಚಾಲಕ ಸಹಿತ ಕೆ.ಬಿ.ಕ್ರಾಸ್ ಬಳಿ ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ಸಿಪಿಐ ಸಿ.ರಾಮಕೃಷ್ಣಯ್ಯ ಭೇಟಿ ನೀಡಿ ಪರಿಶೀಲಿಸಿದರು. ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋವಿಡ್ 19 ವೈರಸ್ ತಡೆಗೆ ನಡೆದಿದ್ದ ಪೊಲೀಸ್ ಬಂದೋಬಸ್ತ್ ಕರ್ತವ್ಯ ನಿರತರಾಗಿದ್ದ ಭುವನೇಶ್ವರ್‍ಕುಮಾರ್ ಅವರ ಅಕಾಲಿಕ ಸಾವು ತಾಲ್ಲೂಕಿನ ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ನೋವುಂಟು ಮಾಡಿದೆ. ನಿವೃತ್ತಿ ಸಮೀಪದಲ್ಲಿದ್ದ ಎಎಸ್‍ಐ ಅಧಿಕಾರಿ ಎಲ್ಲಾ ಸಿಬ್ಬಂದಿಗಳಿಗೂ ಚೇಳೂರು ಹೋಬಳಿ ಗ್ರಾಮಸ್ಥರಿಗೂ ಪ್ರೀತಿಪಾತ್ರರಾಗಿದ್ದರು. ಹಲವು ಮುಖಂಡರು ಶ್ರದ್ದಾಂಜಲಿ ಸಮರ್ಪಿಸಿದರು.

(Visited 12 times, 1 visits today)

Related posts