ಹೊಲದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಕರಡಿ ದಾಳಿ

 ಮಧುಗಿರಿ:

     ಬೆಳಿಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇಬ್ಬರು ಮಹಿಳೆಯರ ಮೇಲೆ ಮರಿ ಕರಡಿಯೊಂದು ಕರಡಿಗಳು ದಾಳಿ ಮಾಡಿದ ಹಿನ್ನೆಲೆಯಲ್ಲಿ ಮಹಿಳೆಯರಿಬ್ಬರೂ ಗಂಬೀರವಾಗಿ ಗಾಯಗೊಂಡ ಘಟನೆ ನಡೆದಿದೆ.

      ಕಸಬಾ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಲಕ್ಷ್ಮಮ್ಮ ಮತ್ತು ಬಸವನಹಳ್ಳಿ ಗ್ರಾಮದ ಜ್ಯೋತಿ ಗಂಬೀರವಾಗಿ ಗಾಯಗೊಂಡವರು.
ಬೆಳಗ್ಗೆ 11 ಗಂಟೆ ಸಮಯದಲ್ಲಿ ಸಿದ್ದಾಪುರ ಗ್ರಾಮದ ಲಕ್ಮಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕರಡಿ ದಾಳಿ ಮಾಡಿ ಗಂಬೀರವಾಗಿ ಗಾಯಗೊಳಿಸಿದೆ.

       ಮತ್ತೆ ಒಂದು ಗಂಟೆ ಅವಧಿಯಲ್ಲಿ ಅದೇ ಕರಡಿ ಕಸಬಾ ವ್ಯಾಪ್ತಿಯ ಬಸವಹಳ್ಳಿಯ ಕೆ.ಎಸ್.ಆರ್.ಟಿ.ಸಿ ಡಿಪೋ ಹಿಂಬಾಗದಲ್ಲಿರುವ ಹೊಲದಲ್ಲಿ ಜ್ಯೋತಿ ಎಂಬುವವರು ತೊಗರಿಕಾಯಿ ಕೀಳುವಾಗ ಅವರ ಮೇಲೂ ದಾಳಿ ಮಾಡಿ ಗಂಬೀರವಾಗಿ ಗಾಯಗೊಳಿಸಿದೆ. ಗಾಯಾಳುಗಳಿಬ್ಬರನ್ನೂ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ವಲಯ ಅರಣ್ಯಾಧಿಕಾರಿ ವಾಸುದೇವನ್ ಬೇಟಿ ನೀಡಿದ್ದು, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

     ಕರಡಿ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಕರಡಿಗಳನ್ನು ಹಿಡಿದು ಆತಂಕ ನಿವಾರಿಸಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಅಲ್ಲದೇ ಈ ರಸ್ತೆಯಲ್ಲಿ ಪಟ್ಟಣದಿಂದ ಬಹಳಷ್ಟು ನಾಗರೀಕರು ವಾಯುವಿಹಾರಕ್ಕೆ ಆಗಮಿಸಲಿದ್ದು, ಎಚ್ಚರಿಕೆ ವಹಿಸಬೇಕಿದೆ.

(Visited 5 times, 1 visits today)

Related posts

Leave a Comment