ತುಮಕೂರು: ನಗರದ ಲೋಕೋಪಯೋಗಿ ಉಪವಿಭಾಗದ ಪ್ರಭಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಂಭುಕುಮಾರ್ ವಿರುದ್ಧ ಬೆಂಗಳೂರಿನ ಮಹಾಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ದಿನಾಂಕ 12.04.2022ರಂದು ಮೊಕದ್ದಮೆ ದಾಖಲಾಗಿದೆ. ಮಹಾಲಕ್ಷ್ಮೀಪುರಂ ಠಾಣೆಯಲ್ಲಿ ಜಾತಿ ನಿಂದನೆ ಮತ್ತು ಕೊಲೆ ಪ್ರಯತ್ನ ಆರೋಪದ ಮೇಲೆ ಒಂದನೇ ಆರೋಪಿಯಾಗಿ ಶಂಭುಕುಮಾರ್, ಎರಡನೇ ಆರೋಪಿಯಾಗಿ ಅಶ್ವಿನಿ ಮತ್ತು ಮೂರನೇ ಆರೋಪಿಯಾಗಿ ಲಕ್ಷ್ಮೀ ಸೇರಿದಂತೆ ಈ ಮೂವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ. ಮೊದಲನೇ ಆರೋಪಿಯಾಗಿರುವ ಶಂಭುಕುಮಾರ್, ಸಹಾಯಕ ಇಂಜಿನಿಯರ್ ಆಗಿ ತುಮಕೂರು ಲೋಕೋಪಯೋಗಿ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಭಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯನ್ನು ಸಹ ಕಳೆದ ಒಂದೂವರೆ ವರ್ಷದಿಂದ ನಿರ್ವಹಿಸುತ್ತಿದ್ದಾರೆ. ತಮ್ಮ ಕಚೇರಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಶ್ವಿನಿ ಅವರನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಅವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಆಕೆಯ ಪತಿ ಲೋಕೋಪಯೋಗಿ ಕಚೇರಿಯ ಮುಂದೆ ಬಂದು ಇಂಜಿನಿಯರ್ ಶಂಭುಕುಮಾರ್ ಅವರಿಗೆ ಬುದ್ದಿ ಹೇಳಿ…
ಮುಂದೆ ಓದಿ...Category: ಬೆಂಗಳೂರು
ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಾನೇ ಮುಖ್ಯಮಂತ್ರಿ: ಶಾಮನೂರು ಶಿವಶಂಕರಪ್ಪ
ದಾವಣಗೆರೆ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನು ಮುಖ್ಯಮಂತ್ರಿಯಾಗುವುದು ಖಚಿತ. ದಾವಣಗೆರೆ ದಕ್ಷಿಣದಿಂದ ಮುಂದೆ ಸ್ಪರ್ಧಿಸೋಕೆ ನನ್ನ ಬಳಿ ಹಣ ಇಲ್ವಾ?, ನನ್ನ ಬಳಿ ಶಕ್ತಿ ಇಲ್ವಾ..? ಮುಂದೆ ಪಕ್ಷ ಅಧಿಕಾರಕ್ಕೆ ಬಂದ್ರೆ ನಾನು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪ ಡಿಕೆ ಶಿವಕುಮಾರ್- ಸಿದ್ದರಾಮಯ್ಯ ಜೊತೆ ನನ್ನದೂ ಸ್ಪರ್ಧೆ ಇದೆ. ದಾವಣಗೆರೆ ಉತ್ತರದಿಂದ ಸ್ಪರ್ಧೆ ಮಾಡೋ ಬಗ್ಗೆ ಸಿಎಂ ಬೊಮ್ಮಾಯಿ ನನ್ನ ಜೊತೆ ಮಾತನಾಡಿಲ್ಲ. ಅವರು ವಿರೋಧ ಪಕ್ಷದವರು ನನ್ನ ಜೊತೆ ಯಾಕೆ ಮಾತಾಡ್ತಾರೆ. ಮುಂದಿನ ತಿಂಗಳು ಏಪ್ರೀಲ್ 16ಕ್ಕೆ ಮೊಮ್ಮಗಳ ಮದುವೆಗೆ ಸಿಎಂ ಬರುತ್ತಾರೆ ಊಹಾಪೋಹಕ್ಕೆ ಎಡೆಮಾಡಿಕೊಡದಿರಿ ಎಂದರು. (Visited 45 times, 1 visits today)
ಮುಂದೆ ಓದಿ...ಚುನಾವಣೆ ನಂತರ ಇಂಧನ ಬೆಲೆ ಏರಿಕೆ ಎಂಬ ಟೀಕೆಗೆ ಟಾಂಗ್ ಕೊಟ್ಟ ಸಿ.ಟಿ.ರವಿ!
ಬೆಂಗಳೂರು: ಪಂಚರಾಜ್ಯ ಚುನಾವಣೆ ಮುಗಿದ ಬೆನ್ನಲ್ಲೆ ಇಂಧನ ಬೆಲೆ ಏರಿಕೆಯಾಗಿದೆ ಎಂದು ಟೀಕಿಸುವವರನ್ನು ಬಾವಿ ಒಳಗಿನ ಕಪ್ಪೆ ಎಂದು ಕರೆಯಬೇಕೋ, ಪೊಟರೆ ಒಳಗಿನ ಕಪ್ಪೆ ಎನ್ನಬೇಕೋ ತಿಳಿಯುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಗಿ ಮಾತನಾಡಿದರು. ಜಗತ್ತಿನಾದ್ಯಂತ ಏರಿಕೆಯಾಗುತ್ತಿದೆ. ಬರೀ ಈ ನಾಲ್ಕು ರಾಜ್ಯದ ಚುನಾವಣೆಯಿಂದ ದರ ಏರಿಕೆಯಾಗುತ್ತಿದೆ ಎನ್ನುವುದು ತಪ್ಪು ವ್ಯಾಖ್ಯಾನ. ಅವರನ್ನು ಶತ ಮೂರ್ಖರು ಎಂದು ಕರೆಯಬೇಕಾಗುತ್ತದೆ ಎಂದು ಕಿಡಿಕಾರಿದರು. ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮದವರು ಯಾರು ಯಾರನ್ನು ಬದಲಾಯಿಸುತ್ತೀರಾ? ನಿಮ್ಮ ಹೇಳಿಕೆಗೆ ಉತ್ತರ ಕೊಡಲು ಆಗುತ್ತಾ? ಎಂದು ಉತ್ತರಿಸಿದರು. ಸಿ.ಟಿ.ರವಿ ಆಕಾಂಕ್ಷಿ ಎಂಬುದಕ್ಕೆ ನಗುತ್ತಾಲೇ ಉತ್ತರಿಸಿದ ಅವರು ನಮ್ಮಲ್ಲಿ ಆಸೆ, ಆಕಾಂಕ್ಷೆ ಏನು ನಡೆಯಲ್ಲ. ನಾನು ಕಾರ್ಯಕರ್ತ, ಕಾರ್ಯಕರ್ತನಾಗಿ ಕೆಲಸ ಮಾಡಬೇಕು. ಜವಾಬ್ದಾರಿ ಬದಲಾಗುತ್ತದೆ, ಕಾರ್ಯಕರ್ತನೆಂಬ ಭಾವನೆ ಬದಲಾಗದು. ಚೆನ್ನಾಗಿರುವ ಸಂಸಾರಕ್ಕೆ ಹುಳಿ ಹಿಂಡಬೇಡಿ ಎಂದು ಚಟಾಕಿ…
ಮುಂದೆ ಓದಿ...ಖಾಸಗಿ ಬಸ್ ಅಪಘಾತಕ್ಕೆ ಎಚ್ಚೆತ್ತ ಸರ್ಕಾರ : ಪಾವಗಡ ಮಾರ್ಗಕ್ಕೆ ಏಳು ಬಸ್ ನಿಯೋಜನೆ
ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕಿನ ಪಳುವಳ್ಳಿ ಬಳಿ ಭೀಕರ ಖಾಸಗಿ ಬಸ್ ಅಪಘಾತಗೊಂಡು ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಈ ದುರಂತದಲ್ಲಿ ಬರೋಬ್ಬರಿ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, ಸುಮಾರು ನಲವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಹಿನ್ನೆಲೆ ಪ್ರತಿಪಕ್ಷಗಳು ಸರ್ಕಾರದ ಆಡಳಿತದ ವಿರುದ್ಧ ಟೀಕಾ ಪ್ರಹಾರ ಮಾಡಿದ್ದರು. ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಸರ್ಕಾರವು ಈ ದುರಂತದ ಬಳಿಕ 7 ಕೆ.ಎಸ್.ಆರ್.ಟಿ.ಸಿ ಬಸ್ ಗಳ ಸಂಚಾರವನ್ನು, ಈ ಮಾರ್ಗದಲ್ಲಿ ಆರಂಭಿಸಿದೆ. ಪಳವಳ್ಳಿ ಕಟ್ಟೆ ಬಳಿಯಲ್ಲಿನ ಖಾಸಗಿ ಬಸ್ ಅಪಘಾತದ ಬಳಿಕ, 24 ಗಂಟೆಯೊಳಗೆ ಕೆ ಎಸ್ ಆರ್ ಟಿ ಸಿ ಚುರುಕುಗೊಂಡಿದ್ದು, ವೈ ಎನ್ ಹೊಸಕೋಟೆ ಟು ಪಾವಗಡ ಮಾರ್ಗಕ್ಕೆ ಸುಮಾರು 7 ಬಸ್ ಗಳನ್ನು ಸಂಚಾರಕ್ಕಾಗಿ ನಿಯೋಜಿಸಲಾಗಿದೆ. (Visited 602 times, 1 visits today)
ಮುಂದೆ ಓದಿ...ಪಾವಗಡದ ಬಸ್ ದುರಂತಕ್ಕೆ ಸರ್ಕಾರವೇ ನೇರ ಹೊಣೆ: ಎಚ್ಡಿಕೆ ಕಿಡಿ
ತುಮಕೂರು: ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸಂಚಾರ ಸಮಸ್ಯೆ ಹೆಚ್ಚಾಗಿದೆ. ಸರ್ಕಾರ ಜನಸಾಮಾನ್ಯರ ಕಡೆಗೆ ಗಮನ ಹರಿಸುತ್ತಿಲ್ಲ. ಈ ಪರಿಣಾಮವಾಗಿ ಗ್ರಾಮೀಣ ಭಾಗದಲ್ಲಿ ಅಪಘಾತಗಳು ದುಪ್ಪಟ್ಟಾಗುತ್ತಿವೆ. ಪಾವಗಡದಲ್ಲಿ ಆಗಿರುವ ದುರಂತಕ್ಕೆ ಸರ್ಕಾರವೆ ನೇರ ಹೊಣೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು. ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಕೋವಿಡ್ ನಂತರದಲ್ಲಿ ಬಹಳಷ್ಟು ಕೆ.ಎಸ್.ಆರ್.ಟಿ.ಸಿ. ಬಸ್ಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರ ಹಿಂದೆಯೇ ಕೆ.ಎಸ್.ಆರ್.ಟಿ.ಸಿ. ನೌಕರ ವರ್ಗ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಹಲವರನ್ನು ಅಮಾನತು ಮಾಡಲಾಯಿತು. ಕೋವಿಡ್ ನೆಪ ಮಾಡಿಕೊಂಡು ಸರ್ಕಾರ ಕೆ.ಎಸ್.ಆರ್.ಟಿ.ಸಿ. ಬಸ್ಗಳನ್ನು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಾಗಿ ಹಾಕುತ್ತಿಲ್ಲ. ಇದರಿಂದಾಗಿ ಹೆಚ್ಚು ಅವಘಡಗಳು ಸಂಭವಿಸುತ್ತಿವೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಜನರು ನಿತ್ಯವೂ ತಮ್ಮ ಹೊಟ್ಟೆ ಪಾಡಿಗಾಗಿ ಊರಿಂದ ಊರಿಗೆ ಪ್ರಯಾಣ ಬೆಳೆಸಿ ದುಡಿದು ತಿನ್ನುತ್ತಾರೆ. ದಿನವೂ ದುಡಿದು ತಿನ್ನುವ ಜನರಿಗೆ ಸರ್ಕಾರ ಸವಲತ್ತುಗಳನ್ನು…
ಮುಂದೆ ಓದಿ...ಕಾಂಗ್ರೆಸ್ ಸೋಲಿಗೆ ಮುಖ್ಯಮಂತ್ರಿ ಆಡಳಿತ ಕಾರಣ: ಆರ್ ರಾಜೇಂದ್ರ
ಕಾಂಗ್ರೆಸ್ ಸೋಲಿಗೆ ಮುಖ್ಯಮಂತ್ರಿ ಆಡಳಿತ ಕಾರಣ ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಹರಿಹಾಯ್ದರು. ಬಿಜೆಪಿಗೆ ಮೊದಲನೆಯದಾಗಿ ಅಭಿನಂದನೆಯನ್ನು ಸಲ್ಲಿಸುತ್ತಾ ಮಾತು ಆರಂಬಿಸಿದ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನಕ್ಕಿಳಿದಿದೆ ಹಾಗಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು. ಸರ್ಕಾರದ ಆಡಳಿತದಲ್ಲಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿರವರು ಸರಿಯಾಗಿ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ ಹಾಗಾಗಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಮುಖ್ಯಮಂತ್ರಿಗಳು ಎಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರೆಂದರೆ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಕಾಲಕಳೆಯುತ್ತಿದ್ದಾರೆ. ದೇವೇಗೌಡರು ಸೋಲು ಅನುಭವಿಸಲು ಮೂಲ ಕಾರಣ ಒಬ್ಬ ವ್ಯಕ್ತಿ. ಕೆಎನ್ ರಾಜಣ್ಣ ಮತ್ತು ಮುದ್ದಹನುಮೇಗೌಡರ ವಿರುದ್ಧ ಹಣದ ವಿಚಾರವಾಗಿ ಆಪಾದಿಸಿದ ಹಿನ್ನೆಲೆಯಲ್ಲಿ ಸೋಲನ್ನು…
ಮುಂದೆ ಓದಿ...‘ನನಗೆ ಸಿದ್ದರಾಮಯ್ಯ ಸಿಎಂ’ : ಪುಟ್ಟರಂಗಶೆಟ್ಟಿ
ಚಾಮರಾಜನಗರ : ನನಗೆ ಈಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ, ನನಗೆ ಮಾಡಿದ ಉಪಕಾರಕ್ಕೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ನೋಡುತ್ತೀನಿ ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಇಂದು ಸುದ್ದಿಗೋಷ್ಟಿಯಲಲ್ಲಿ ಮಾತನಾಡಿದ ಅವರು ನನಗೆ ಈಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ, ಕರ್ನಾಟಕಕ್ಕೆ ಕುಮಾರಸ್ವಾಮಿ ಸಿಎಂ ಆದ್ರೆ, ನನಗೆ ಮಾತ್ರ ಸಿದ್ದರಾಮಯ್ಯ ಅವರೇ ಲೀಡರ್ ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಎಲ್ಲರೂ ಕೂಟ ಒಗ್ಗಟ್ಟಾಗಿದ್ದೇವೆ, ಯಾರೇ ನಿಂತರೂ ಕೂಡ ಈ ಬಾರಿ ನಮ್ಮ ಅಭ್ಯರ್ಥಿಯೇ ಗೆಲುವು ದಾಖಲಿಸಿದ್ದಾರೆ. ನಮ್ಮ ಅಭ್ಯರ್ಥಿ ಧ್ರುವ ನಾರಾಯಣ್ ಗೆಲುವು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ. (Visited 285 times, 1 visits today)
ಮುಂದೆ ಓದಿ...ಒಂದೇ ಠಾಣೆಯ 71 ಸಿಬ್ಬಂದಿಯ ವರ್ಗಾವಣೆ
ಬೆಂಗಳೂರು: ಬೆಂಗಳೂರು ಮಹಾನಗರದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಠಾಣೆಯ 71 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಕುಮಾರಸ್ವಾಮಿ ಲೇಔಟ್ ಠಾಣೆಯ 71 ಸಿಬ್ಬಂದಿಯನ್ನು ಏಕ ಕಾಲಕ್ಕೆ ವರ್ಗಾವಣೆ ಮಾಡಿ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಆದೇಶ ಹೊರಡಿಸಿದ್ದಾರೆ. ಠಾಣೆಯಲ್ಲಿ 78 ಸಿಬ್ಬಂದಿ ಇದ್ದಾರೆ. ಅವರಲ್ಲಿ 71 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ. ಇತಿಹಾಸದಲ್ಲಿಯೇ ಒಂದೇ ಠಾಣೆಯ 71 ಸಿಬ್ಬಂದಿಯನ್ನು ಏಕ ಕಾಲಕ್ಕೆ ವರ್ಗಾವಣೆ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ. ಠಾಣೆಯ ಸಿಬ್ಬಂದಿ ನಡುವಿನ ಒಳ ಜಗಳ ತಪ್ಪಿಸುವ ಉದ್ದೇಶದಿಂದ ಈ ವರ್ಗಾವಣೆ ಮಾಡಲಾಗಿದೆ. ಇತ್ತೀಚೆಗೆ ಠಾಣೆಯ ಎ.ಎಸ್.ಐ. ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಸುದ್ದಿಯಾಗಿತ್ತು. ಈ ವಿಡಿಯೋವನ್ನು ಮತ್ತೊಂದು ಗುಂಪಿನವರು ತೆಗೆದು ಬಹಿರಂಗಪಡಿಸಿದ್ದರು. ಅಲ್ಲದೇ, ಠಾಣೆಯಲ್ಲಿನ ಠಾಣಾಧಿಕಾರಿಯನ್ನು ಸಸ್ಪೆಂಡ್ ಮಾಡಿಸುವ ಉದ್ದೇಶದಿಂದ…
ಮುಂದೆ ಓದಿ...ಬೆಂಗಳೂರಿನ ಈ ರಸ್ತೆಗೆ ರೆಬಲ್ ಸ್ಟಾರ್ ಅಂಬರೀಶ್ ಹೆಸರು
ಬೆಂಗಳೂರು: ಬೆಂಗಳೂರಿನ ಬಿಡಿಎ ಬಡಾವಣೆಯೊಂದಕ್ಕೆ ರೆಬಲ್ ಸ್ಟಾರ್ ಅಂಬರೀಶ್ ಹೆಸರಿಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರನಟ, ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರೀಶ್ ಅವರ ಸ್ಮರಣಾರ್ಥವಾಗಿ ಬಡಾವಣೆಗೆ ಅಂಬರೀಶ್ ಹೆಸರಿಡಲು ನಿರ್ಧರಿಸಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿರುವ ಬಿಡಿಎ ಬಡಾವಣೆಗೆ ಅಂಬರೀಶ್ ಹೆಸರಿಡಲಾಗುತ್ತಿದೆ, ಚಾಲುಕ್ಯ ವೃತ್ತದಿಂದ ಮೌರ್ಯ ಸರ್ಕಲ್ ವರೆಗಿನ ವಾರ್ಡ್ 197ರ ವಸಂತಪುರ ಬಡಾವಣೆಯ ಪಿಕಾಸಿಪುರ ಬಿಡಿಎ ಬಡಾವಣೆಗೆ ಅಂಬರೀಶ್ ಹೆಸರಲ್ಲಿ ನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ, ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. (Visited 128 times, 1 visits today)
ಮುಂದೆ ಓದಿ...ಉಪ ಸಭಾಪತಿಯಾಗಿ ಜೆಡಿಎಸ್ನ ಎಸ್.ಎಲ್.ಧರ್ಮೇಗೌಡ ಆಯ್ಕೆ
ಬೆಳಗಾವಿ : ವಿಧಾನ ಪರಿಷತ್ನ ನೂತನ ಉಪ ಸಭಾಪತಿಯಾಗಿ ಜೆಡಿಎಸ್ನ ಹಿರಿಯ ಮುಖಂಡ ಎಸ್.ಎಲ್.ಧರ್ಮೇಗೌಡ ಅವರು ಅವಿರೋಧವಾಗಿ ಆಯ್ಕೆಯಾದರು. ಇಂದು ಬೆಳಗ್ಗೆ ಪರಿಷತ್ನ ಕಲಾಪ ಆರಂಭವಾಗುತ್ತಿ ದ್ದಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಎಸ್.ಎಲ್.ಧರ್ಮೇಗೌಡ ಅವರು ಪರಿಷತ್ನ ಉಪಸಭಾಪತಿಯಾಗಿ ಅವಿರೋಧ ಆಯ್ಕೆಯಾಗಿರುವುದನ್ನು ಅಧಿಕೃತವಾಗಿ ಪ್ರಕಟಿಸಿದರು. (Visited 34 times, 1 visits today)
ಮುಂದೆ ಓದಿ...