ಚಿಕ್ಕನಾಯಕನಹಳ್ಳಿ: ದನ ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ

ಚಿಕ್ಕನಾಯಕನಹಳ್ಳಿ:

      ಚಿರತೆ ದಾಳಿಗೆ ವ್ಯಕ್ತಿಯೊಬ್ಬನಿಗೆ ತೀವ್ರಗಾಯಗಳಾದ ಘಟನೆ ತಾಲ್ಲೂಕಿನ ಮದನಮಡು ಗ್ರಾಮ ಬಳಿ ವರದಿಯಾಗಿದೆ.

      ತಾಲ್ಲೂಕಿನ ಕಂದಿಕೆರೆ ಹೋಬಳಿ ಮದನಮಡು ಗ್ರಾಮದ ಸೀಡ್ಯಕೆರೆ ಬಳಿ ಬುಧವಾರ ಮಧ್ಯಾಹ್ನ 12ಗಂಟೆ ಸಮಯದಲ್ಲಿ ತನ್ನ ಮೇಕೆ, ಕುರಿ ಹಾಗೂ ದನಗಳನ್ನು ಮೇಯಿಸುತ್ತಿದ್ದ ಮೂಡ್ಲಯ್ಯನ ಮೇಲೆ ಚಿರತೆದಾಳಿ ಮಾಡಿದಾಗ ಆತನು ತನ್ನಲ್ಲಿದ್ದ ಮಚ್ಚಿನಿಂದ ಎದುರಿಸಿದಾಗ ಬೆದರಿ ಓಡಿಹೋಗಿದ್ದ ಚಿರತೆ ತಕ್ಷಣವೇ ಹೊಂಚುಹಾಕಿ ಮತ್ತೆ ಆತನ ಮೇಲೆರಗಿದ ಪರಿಣಾಮ ಆತನ ತಲೆಯ ಹಿಂಭಾಗ ಮತ್ತು ತಲೆಯ ಮೇಲೆ ಹಾಗೂ ಕಿವಿಗಳಿಗೆ ತೀವ್ರ ಗಾಯವಾಗಿದೆ.

      ಈತನ ಕಿರುಚಾಟಕ್ಕೆ ಅಕ್ಕಪಕ್ಕದ ತೋಟದವರು ಬರುವುದನ್ನು ಕಂಡು ಚಿರತೆ ಓಡಿಹೋಗಿದೆ. ತೀವ್ರವಾಗಿ ಗಾಯಗೊಂಡ ಮದನಮಡು ವಾಸಿ ಮೂಡ್ಲಯ್ಯನಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

      ಈ ಭಾಗದಲ್ಲಿ ಚಿರತೆಹಾವಳಿ ಆಗಾಗ್ಗೆ ಕಂಡುಬಂದಿದ್ದು ಕಳೆದ ಒಂದು ತಿಂಗಳಹಿಂದೆ ಈತನ ಮೇಕೆಯೊಂದನ್ನು ಹೊತ್ತೊಯ್ದಿತ್ತು ಮತ್ತು ಸಮೀಪದ ಗಳಿಕೆಕೆರೆ ಬಳಿವ್ಯಕ್ತಿಯೊಬ್ಬನ ಮೇಲೆ ಧಾಳಿ ಮಾಡಿರುವ ಘಟನೆಗಳು ನಡೆದಿರುವುದರಿಂದ ಈ ಭಾಗದ ಜನರು ಭಯಭೀತಿಯಿಂದಿದ್ದಾರೆ.

(Visited 4 times, 1 visits today)

Related posts