ಚಿಕ್ಕನಾಯಕನಹಳ್ಳಿ : ಎಎಸ್‍ಐಗೆ ಸೋಂಕು!

ಚಿಕ್ಕನಾಯಕನಹಳ್ಳಿ :

       ಚಿಕ್ಕನಾಯಕನಹಳ್ಳಿ ಠಾಣೆಯ 55 ವರ್ಷದ ಎಎಸ್‍ಐಗೆ ಸೋಂಕು ಕಾಣಿಸಿರುವ ಹಿನ್ನೆಲೆಯಲ್ಲಿ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ.

       ಪಟ್ಟಣದ ಬೇಕರಿ ಮಾಲೀಕ, ಬ್ರಾಹ್ಮಣರ ಬೀದಿ ನಿವಾಸಿ 30 ವರ್ಷದ ವ್ಯಕ್ತಿ, ಪಟ್ಟಣದ 28ವರ್ಷದ ಯುವಕ, ಕಾಡೇನಹಳ್ಳಿಯ 38 ವರ್ಷದ ಮಹಿಳೆ, ಅರಸೀಕೆರೆ ಗಾರ್ಮೆಂಟ್ಸ್‍ಗೆ ಕೆಲಸಕ್ಕೆ ಹೋಗುತ್ತಿದ್ದ 22 ವರ್ಷದ ಹಂದನಕೆರೆ ಯುವತಿಗೂ ಸೋಂಕು ತಗುಲಿದೆ.
ಅಂತ್ಯಸಂಸ್ಕಾರಕ್ಕೆ ಜಾಗ ಗುರುತಿಸಿ: ಈಗಾಗಲೇ ರಾಜ್ಯಸರ್ಕಾರ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕೋವಿಡ್-19 ತಡೆಗಟ್ಟುವ ಹಾಗೂ ಇದರಿಂದಾಗುವ ದುಷ್ಪರಿಣಾಮಗಳನ್ನು ನಿಯಂತ್ರಿಸುವ ಹೊಣೆ ನೀಡಿದೆ. ನಗರ ಸೇರಿ ತುಮಕೂರು ತಾಲೂಕಿನಲ್ಲಿ ಮೃತಪಡುತ್ತಿರುವ ಸಂಖ್ಯೆ ಹೆಚ್ಚಳವಾಗುತ್ತಿದ್ದು, ನರದಲ್ಲಿ ಎಲ್ಲ ಧರ್ಮಿಯರು ವಾಸವಿದ್ದು ಹತ್ತಿರವಾದ ಸೂಕ್ತ ಸ್ಥಳ ಗುರುತಿಸಿ ಸೋಂಕಿತ ಮೃತರ ಅಂತಿಮ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಶಾಸಕ ಡಾ.ಕೆ.ರಫೀಕ್ ಅಹ್ಮದ್ ಮನವಿ ಮಾಡಿದ್ದಾರೆ.

(Visited 8 times, 1 visits today)

Related posts

Leave a Comment