ಕೊರೊನಾ ಆತಂಕದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು

ಚಿಕ್ಕನಾಯಕನಹಳ್ಳಿ:

      ತಾಲ್ಲೂಕಿನ ಸುತ್ತಲಿನ ಇತರೆ ತಾಲ್ಲೂಕುಗಳಿಂದ ಸೋಂಕಿತರ ವರದಿ ಪ್ರಕಟವಾಗುತ್ತಿದ್ದಂತಯೇ ಪಟ್ಟಣ ಹಾಗೂ ಗ್ರಾಮಗಳಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ.

   ಭೀತಿ ಹುಟ್ಟಿಸಿದ ಮಹಾರಾಷ್ಟ್ರ ಸಂಪರ್ಕಿತ:

       ಮಾವಿನ ಹಣ್ಣಿನ ಲೋಡಿನೊಂದಿಗೆ ಮಹಾರಾಷ್ಟ್ರದ ಸೊಲಾಪುರಕ್ಕೆ ತೆರಳಿ ಸೋಮವಾರ ಬೆಳಿಗ್ಗೆ ವಾಪಸ್ ಬಂದು ಪಟ್ಟಣದ ಮನೆಯಲ್ಲಿದ್ದ ವ್ಯಕ್ತಿಯ ಬಗ್ಗೆ ಸ್ಥಳೀಯ ಪೊಲೀಸರು, ಆರೋಗ್ಯ ಸಿಬ್ಬಂದಿಯೊಂದಿಗೆ ವಿಚಾರಿಸಲು ಹೋದಾಗ ಆತನು ನಾನು ಅಲ್ಲಿಗೇ ಹೋಗೆಇಲ್ಲ ಸಾಕ್ಷಿಕೊಡಿ ಎಂದು ಬಂದವರನ್ನು ದಬಾಯಿಸಿ ವಾಪಸ್ ಕಳುಹಿಸಿದ ಪ್ರಸಂಗ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಈ ಪ್ರಕರಣದ ಬಗ್ಗೆ ಪತ್ರಿಕೆ ಸತ್ಯಾಸತ್ಯತೆಯ ಮಾಹಿತಿಯ ಬೆನ್ನೆತ್ತಿದಾಗ ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಆರೋಗ್ಯ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಲು ಮುಂದಾದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಬಿ. ತೇಜಸ್ವಿನಿಯಯವರು ಮಾಹಿತಿ ನೀಡಿ ಈ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯಂತೆ ಆತನು ಮಹಾರಾಷ್ಟ್ರಕ್ಕೆ ಹೋಗಬಂದಿರುವುದು ದೃಢಪಟ್ಟಿದೆ ಆ ವ್ಯಕ್ತಿಯನ್ನು ತಪಾಸಣೆಗೊಳಪಡಿಸಲು ಆದೇಶಿಸಿದ್ದಾರೆ.

       ಅಕ್ಕ ಪಕ್ಕದ ತಾಲ್ಲೂಕಿನಲ್ಲಿ ಕೊರೊನಾ: ವಾರದಿಂದೀಚೆಗೆ ತುರುವೆಕೆರೆಯ ಮೂಲದವರಿಗೆ ಕೊರೊನಾ ಪಾಸಿಟೀವ್ ಬಂದಿರುವ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದ ಬೆನ್ನಲ್ಲೆ ತಿಟೂರಿನಿಂದ ಒಂದು ಪ್ರಕರಣ ಧೃಡಪಟ್ಟಿರುವುದು ವರದಿಯಾಗಿದೆ. ಈಗಾಗಲೇ ಕೊರಟಕೆಗೆರೆ, ಶಿರಾ ಗಳಲ್ಲಿ ವರದಿಯಾಗಿದೆ. ಈವರೆಗೂ ಯಾವುದೇ ಸೋಂಕಿನ ಗಾಳಿಯಿಲ್ಲದೆ ನೆಮ್ಮದಿಯಿಂದಿದ್ದ ತಾಲ್ಲೂಕಿನ ಜನತೆ ಭಯ ಹಾಗೂ ಆತಂಕದ ವಾತಾವರಣದಲ್ಲಿದ್ದಾರೆ.

200 ಜನರ ವರದಿ ಬಂದಿಲ್ಲ:

      ತಾಲ್ಲೂಕಿನಾದ್ಯಂತ ಮೇ.17ರವರೆಗಿನ 700 ಜನರ ದ್ರವ ಪರೀಕ್ಷಯೆ ಫಲಿತಾಂಶದಲ್ಲಿ 500 ಜನರ ದ್ರವಪರೀಕ್ಷೆ ಮಾಹಿತಿ ಬಂದಿದ್ದು ಎಲ್ಲವೂ ನೆಗಟೀವ್ ಆಗಿರುವುದು ಸಮಾಧಾನ ಆಂಶವಾದರೆ ಇನ್ನೂ 200 ಜನರ ವರದಿ ಬರಬೇಕಿದೆ ಎಂಬುವುದು ಆತಂಕದ ವಿಚಾರವಾಗಿದೆ. ಇಷ್ಟು ನಿಧಾನವಾಗಿ ಫಲಿತಾಂಶ ಬಂದರೆ ಗತಿಏನು ಎನ್ನುವುದು ಇನ್ನೂ ಆತಂಕ ಹೆಚ್ಚಿಸಿದೆ.

    ಮೃತರ ಅಂತ್ಯಸಂಸ್ಕಾರದಲ್ಲಿ ಹೆಚ್ಚುಜನ:

      ರಂಜಾನ್ ನಂದು ಪಟ್ಟಣದಲ್ಲಿ 88 ವರ್ಷದ ವೃದ್ಧರು ಮೃತಪಟ್ಟಿದ್ದು ಅವರ ಅಂತ್ಯಸಂಸ್ಕಾರದ ಕಾರ್ಯದಲ್ಲಿ ಮಸೀದಿಯೊಂದರಲ್ಲಿ ಹೆಚ್ಚು ಜನ ಸೇರಿದ್ದರೆಂಬ ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ತಮ್ಮ ಸಿಬ್ಬಂದಿಯೊಂದಿಗೆ ತೆರಳಿ, ಸಾಮಾಜಿಕ ಅಂತರ, ಸುರಕ್ಷಣಾ ಕ್ರಮಗಳನ್ನು ಅನುಸರಿಸುವುದು ಹಾಗೂ ಹೆಚ್ಚು ಜನ ಸೇರದಂತೆ ತಿಳುವಳಿಕೆ ಹೇಳಿದರು.

        ಇಂತಹ ಹಲವು ಪ್ರಸಂಗಗಳು ಪಟ್ಟಣದಲ್ಲಿ ನಡೆಯುತ್ತಿದ್ದು ತಾಲ್ಲೂಕಿನ ಸುತ್ತಲೂ ಕೊರೊನಾ ಸೋಂಕು ತನ್ನ ಇರುವಿಕೆಯನ್ನೂ ತೋರಿಸುತ್ತಿರುವುದರ ನಡುವೆಯೇ ಈ ಘಟನೆಗಳು ಜನರ ಆತಂಕಕ್ಕೆ ಕಾರಣವಾಗಿದೆ.

(Visited 4 times, 1 visits today)

Related posts

Leave a Comment