ಹೊರರಾಜ್ಯ , ಜಿಲ್ಲೆಯಿಂದ ಬರುವವರಿಗೆ ಕಡ್ಡಾಯವಾಗಿ ಕ್ವಾರಂಟೈನ್

ಚಿಕ್ಕನಾಯಕನಹಳ್ಳಿ:

      ಹೊರರಾಜ್ಯ ಹಾಗೂ ಜಿಲ್ಲೆಯಿಂದ ಬರುವವರನ್ನು ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಪಡಿಸಲಾಗುವುದೆಂದು ತಹಸೀಲ್ದಾರ್ ಬಿ.ತೇಜಸ್ವಿನಿ ತಿಳಿಸಿದರು.

      ಈಚೆಗೆ ಲಾಕ್ಡೌನ್ ಸಡಿಲಿಕೆಯ ಸಂದರ್ಭದಲ್ಲಿ ಹಸಿರುವಲಯದಲ್ಲಿರುವ ನಮ್ಮ ತಾಲ್ಲೂಕಿನಲ್ಲಿ ಯಾವುದೇ ಸೋಂಕಿನ ಪ್ರಕರಣ ಆಗದ ರೀತಿ ಪಟ್ಟಣ ಹಾಗೂ ಗ್ರಾಮಗಳಲ್ಲಿಯೂ ಸಹ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಲಾಗುತ್ತದೆ.

      ಪಿಡಿಓಗಳಿಗೆ ಸೂಚನೆ: ಕೊರೊನಾ ಸೋಂಕು ತಾಲ್ಲೂಕಿನನೊಳಗೆ ಬರದಂತೆ ತಡೆಯುವ ಉದ್ದೇಶದಿಂದ ಹೊರಗಿನಿಂದ ಯಾವುದೇ ವ್ಯಕ್ತಿಗಳ ಆರೋಗ್ಯ ತಪಾಸಣೆ ಕಡ್ಡಾಯ ಹಾಗೂ ಕೆಂಪು ಮತ್ತು ಕಿತ್ತಳೆವಲಯದಿಂದ ಬಂದವರನ್ನು ಕಡ್ಡಾಯವಾಗಿ ಹೋಂ ಕ್ವರಂಟೈನ್‍ಗೆ ಒಳಪಡಿಸಲು ಗ್ರಾಮ ಪಂಚಾಯಿತಿ ಪಿಡಿಓಗಳಿಗೆ ನಿರ್ದೇಶನ ನೀಡಲಾಗಿದೆ. ಆರೋಗ್ಯತಪಾಸಣೆಯ ಸಂದರ್ಭದಲ್ಲಿ ಸಂಶಯ ಬಂದರೆ ಅಂತಹವರನ್ನು ಆಸ್ಪತ್ರೆಯಲ್ಲಿ ಐಸೋಲೇಷನ್‍ಗೆ ಒಳಪಡಸಲಾಗುವುದೆಂದರು.

       ಹೊರರಾಜ್ಯದ ಎಂಟುಮಂದಿ: ತಮಿಳುನಾಡು ಮತ್ತು ಹೈದರಬಾದ್‍ನಿಂದ ಬಂದಿರುವ ಎಂಟು ಮಂದಿಯನ್ನು ಆಸ್ಪತ್ರೆಯಲ್ಲಿ ಕ್ವರಂಟೈನ್‍ಗೆ ಒಳಪಡಿಸಲಾಗಿದೆ. ಇವರು ಸ್ಥಳಿಯರಾಗಿದ್ದು ಕೆಲಸದ ನಿಮಿತ್ತ ಹೊರರಾಜ್ಯಗಳಿಗೆ ತೆರಳಿದ್ದವರಾಗಿದ್ದಾರೆಂದರು. ಇದಲ್ಲದೆ ಇತರೆ ಕಾಂಗಾರಿಗಳಾದ ಹೆದ್ದಾರಿ, ನೀರಿ ಟ್ಯಾಂಕ್ ಹಾಗೂ ಇನ್ನಿತರ ಕೆಲಸಗಳಿಗೆ ಬಂದಿರುವ ಬೇರೆ ಜಿಲ್ಲೆಗಳ ಹಾಗೂ ರಾಜ್ಯಗಳ ಕಾರ್ಮಿಕರನ್ನು ಆರೋಗ್ಯ ತಪಾಸಣೆಗೊಳಪಿಡಿಸಿ ಅವರಿಗೆ ಸುರಕ್ಷಾನಿಯಮಗಳನ್ನು ಪಾಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

       ವ್ಯಾಪಾರ ವ್ಯವಹಾರಗಳಿಗೆ ಸ್ವಯಂ ಸಮಯ ನಿಗದಿ: ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ವ್ಯಾಪಾರ ವಹಿವಾಟು ಮಾಡಿಕೊಳ್ಳಲು ಸಮಯ ನೀಡಿದ್ದರೂ ದಿನಸಿ ಹಾಗೂ ಜವಳಿ ವ್ಯಾಪಾರಸ್ತರು ಮಧ್ಯಾಹ್ನ 2ಗಂಟೆಯವರಗೆ ಮಾತ್ರ ವ್ಯವಹಾರ ಮಾಡುತ್ತೇವೆ ಎಂದು ಸ್ವಯಂನಿರ್ಧಾರ ತೆಳೆದು ಅದರಂತೆ ವ್ಯವಹರಿಸುತ್ತಿದ್ದಾರೆ. ಉಳಿದ ವರ್ಗದ ವ್ಯಾಪಾರಸ್ಥರೂಸಹ ಮಧ್ಯಾಹ್ನ 3ಕ್ಕೆ ವಹಿವಾಟು ನಿಲ್ಲಿಸಿ ಬಂದ್ ಮಾಡುತ್ತಿರುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯ ನಿರ್ಧಾರವೆನಿಸಿದೆ ಎಂದರು.

      ಸುರಕ್ಷತಾ ಕ್ರಮ ಅನುಸರಿಸದಿದ್ದರೆ ದಂಡ: ಈಗಾಗಲೇ ಲಾಕ್‍ಡೌನ್ ಬಿಗಿಯನ್ನು ಸಡಿಸಲಿದ್ದರೂ, ಆರೋಗ್ಯದ ಹಿತದೃಷ್ಠಿಯಿಂದ ಸರ್ಕಾರದ ಆದೇಶದಂತೆ ಮಾಸ್ಕ್ ಧರಿಸದಿರುವುದು, ಗುಂಪಾಗಿರುವುದು, ಎಲ್ಲೆಂದರಲ್ಲಿ ಉಗುಳುವುದು, ದ್ವಿಚಕ್ರ ಹಾಗೂ ಇನ್ನಿತರ ವಾಹನಗಳಲ್ಲಿ ಹೆಚ್ಚುಜನರನ್ನು ಸಾಗಿಸುವ ಪ್ರಯತ್ನಗಳು ನಡೆದರೆ ದಂಡ ಹಾಕುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ ಎಂದರು.

(Visited 4 times, 1 visits today)

Related posts

Leave a Comment