ಜಮೀನಿನ ವಿಚಾರವಾಗಿ ಗಲಾಟೆ : ಸ್ಥಳದಲ್ಲೇ ಒಬ್ಬನ ಸಾವು!!

ಚಿಕ್ಕನಾಯಕನಹಳ್ಳಿ:

      ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆ ಹೋಬಳಿ ಬೆಳಗುಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳೇ ಗೊಲ್ಲರಹಟ್ಟಿಯಲ್ಲಿ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಚನ್ನಪ್ಪನ ಮಕ್ಕಳು 7 ಜನ ಗುಂಪುಕಟ್ಟಿಕೂಂಡು ಮನೆನುಗ್ಗಿ ಹಳೇಹಟ್ಟಿ ನಿವಾಸಿ ಶಾಂತಯ್ಯ ಮತ್ತು ಅವರ ಸಂಬಂಧಿಕ ತಿಪಟೂರು ತಾಲೂಕಿನ ಕಿಬ್ಬನಳ್ಳಿ ಹೋಬಳಿ ಅರೇಹಳ್ಳಿ ಗೊಲ್ಲರಹಟ್ಟಿ ನಿವಾಸಿ ಯಾದ ಬಸವರಾಜು ಎಂಬುವರನ್ನು ಹೊಡೆಯುವ ಸಂದರ್ಭದಲ್ಲಿ ಬಸವರಾಜು 45 ವರ್ಷ, ಸ್ಥಳದಲ್ಲಿಯೇ ಮೃತಪಟ್ಟಿದ್ದು. ಶಾಂತಯ್ಯ ಎಂಬುವರು ಗಂಭೀರವಾಗಿದ್ದು, ತುಮಕೂರಿನ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಇವರೂ ಕೂಡ ಸಾವು-ಬದುಕಿನ ನಡುವೆ ಹೊರಾಡುತ್ತಿದ್ದಾರೆ.

      ಸ್ಥಳೀಯ ಹಂದನಕೆರೆ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಎಸ್. ಶಿವಕುಮಾರ್ ಮತ್ತು ತಿಪಟೂರು SP ಚಂದನ್ ಕುಮಾರ್ ಪ್ರಖರಣ ದಾಖಲಿಸಿ ಚಿ.ನಾ ಹಳ್ಳಿ ಸಿಪಿಐ ಶ್ರೀಮತಿ ವೀಣಾ ರವರು ಸ್ಥಳಕ್ಕೆ ದಾವಿಸಿ ಆರೋಪಿ ಮಾಧವಾ ಮತ್ತು ಇತರೆ 6 ಜನ ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡು ದಸ್ತು ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.

(Visited 22 times, 1 visits today)

Related posts

Leave a Comment