ಚಿಕ್ಕನಾಯಕನಹಳ್ಳಿ:

      ಮಹಿಳೆಯ ಹೊಟ್ಟೆ ಯಲ್ಲಿದ್ದ 5.6ಕಿಲೋ ತೂಕದ ಗೆಡ್ಡೆಯನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಮೂಲಕ ಹೊರತೆಗೆಯುವ ಮೂಲಕ ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರು ಸಾಧನೆಗೈದಿದ್ದಾರೆ.

       ಪಟ್ಟಣದ ನಾಯಕರ ಬೀದಿಯ ಸೌಭಾಗ್ಯಮ್ಮ(55) ವರ್ಷದ ಮಹಿಳೆ ಗರ್ಭಕೊಶದ ಚಿಕಿತ್ಸೆಗಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಇದೇ 17 ರಂದು ದಾಖಲಾಗಿದ್ದರು. ಈಕೆಯ ಹೊಟ್ಟೆಯಲ್ಲಿ ಗೆಡ್ಡೆಯಿರುವ ಬಗ್ಗೆ ತಪಾಸಣೆಯಿಂದ ಖಾತ್ರಿಪಡಿಸಿಕೊಂಡ ಆಸ್ಪತ್ರೆಯ ವೈದ್ಯರಾದ ಡಾ. ಕುಮಾರಸ್ವಾಮಿ, ಪ್ರಸೂತಿ ಪರಿಣಿತ ಡಾ. ನಟರಾಜ್, ಅರವಳಿಕೆ ತಜ್ಞರಾದ ಡಾ. ಶಶಾಂಕ್ ಹಾಗೂ ಸಿಬ್ಬಂದಿಯವರು ಗುರುವಾರ ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಯ ಹೊಟ್ಟೆಯಲ್ಲಿದ್ದ 5.6 ಕಿಲೋ ತೂಕದ ಮಾಂಸದ ಗೆಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದರು. ಈ ಶಸ್ತ್ರಚಿಕಿತ್ಸೆಯಿಂದ ಮಹಿಳೆ ಅಪಾಯದಿಂದ ಪಾರಾಗಿ ಆರೋಗ್ಯವಾಗಿದ್ದಾರೆ.

      ಈ ಸಂದರ್ಭದಲ್ಲಿ ಆಡಳಿತ ವೈದ್ಯರಾದ ಡಾ. ಕುಮಾರಸ್ವಾಮಿ ಮಾತನಾಡಿ ಸರ್ಕಾರಿ ಆಸ್ಪತ್ರೆಯಲ್ಲಿಯೂಸಹ ಇಂತಹ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ ಎಂಬ ವಿಚಾರ ಸಾರ್ವಜನಿಕರಿಗೆ ತಿಳಿಯಬೇಕಿದೆ.

      ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯೂ ಸೇರಿದಂತೆ ವಿವಿಧ ಶಸ್ತ್ರಚಿಕಿತ್ಸೆ ಮಾಡುವುದಕ್ಕೆ ಎಲ್ಲ ವೈದ್ಯಕೀಯ ಸೌಲಭ್ಯದವ್ಯವಸ್ಥೆಯಿದ್ದು ನುರಿತ ಶಸ್ತ್ರಚಿಕಿತ್ಸಕ ಸಿಬ್ಬಂದಿಯೂಸಹ ಇದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮಚಿಕಿತ್ಸಾ ಸೇವೆ ಲಭ್ಯವಿರುವುದನ್ನು ಬಳಸಿಕೊಳ್ಳುವ ಮೂಲಕ ವಿನಾಕಾರಣ ದೂರದ ತುಮಕೂರು, ತಿಪಟೂರು ಹಾಗೂ ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕತೆತ್ತು ಚಿಕಿತ್ಸೆಪಡೆಯುವ ಪ್ರವೃತ್ತಿಗೆ ಕಡಿವಾಣ ಬೀಳುವಂತಾಗಲಿ ಎಂದರು.

(Visited 8 times, 1 visits today)