ಸೋಂಕಿಗೆ ಹೆದರಿ ಕೊರೊನ ದೇವಿಯ ಮೊರೆ

ತುಮಕೂರು:

     ಮಹಾ ಮಾರಿ ಕೊರೋನ ವಿಶ್ವವನ್ನೇ ತಲ್ಲಣಗೊಳಿಸಿ ಮಾನವ ಕುಲವನ್ನೇ ಬೆಚ್ಚಿಬೀಳಿಸಿದೆ. ವೈದ್ಯರು, ನರ್ಸ್ ಗಳು, ಸ್ವಚ್ಚತಾ ಕರ್ಮಿಗಳು, ಪೋಲೀಸರು ಜನರ ಜೀವದ ರಕ್ಷಣೆಗೆ ಪಣತೊಟ್ಟಿದ್ದಾರೆ.

     ಇದರ ನಡುವೆ ಜನರು ಸೋಂಕಿಗೆ ಹೆದರಿ ಕೊರೊನ ದೇವಿಯ ಮೊರೆ ಹೋಗಿರುವ ಘಟನೆ ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿಯ ಕೊಂಡಾಪುರ ಗೋಮಾಳ ಗ್ರಾಮದಲ್ಲಿ ನಡೆದಿದೆ.

      ಹೌದು.. ಭಯವೇ ಭಕ್ತಿಯ ಮೂಲ ಎಂಬ ನಾಣ್ಣುಡಿಯಂತೆ, ಕೊರೊನ ಖಾಯಿಲೆಗೆ ಭಯಭೀತರಾಗಿ ತಾವೇ ಕೊರೊನ ದೇವಿಯನ್ನು ಸೃಷ್ಟಿಸಿ ಪೂಜೆಗೈದಿರುವ ಘಟನೆ ಶುಕ್ರವಾರ ಜರುಗಿದೆ.

      ಬೇವಿನ ಮರದ ಬುಡದಲ್ಲಿ ಚಿಕ್ಕದಾದ ಹಸಿರೆಲೆ ಹೊದಿಕೆಯ ಚಪ್ಪರವನ್ನು ಹಾಕಿ ಹಣ್ಣು, ಹೂ, ಕಾಯಿ, ಮೊಸರನ್ನ ಮತ್ತು ಪೊಂಗಲ್ ಎಡೆ ಇಟ್ಟು ಹರಕೆ ಹೊತ್ತಿದ್ದಾರೆ.

      ನಮ್ಮೂರಿಗೆ ಯಾವುದೇ ಖಾಯಿಲೆ ಕಸಾರೆ ಬರದಿರಲಿ ಹಾಗೂ ಜನರ ಆರೋಗ್ಯ ಸುಧಾರಿಸಲಿ ಎಂಬ ಹಿತದೃಷ್ಟಿಯಿಂದ ಕೊರೊನ ದೇವಿಯ ಪೂಜೆಮಾಡಿದ್ದೇವೆ ಎನ್ನುತ್ತಾರೆ ಗ್ರಾಮಸ್ಥ ಕಂಬೇಗೌಡ.

(Visited 26 times, 1 visits today)

Related posts