ತುಮಕೂರು: ಕೊರೋನಾ ಸೋಂಕಿನೊಂದಿಗೆ ಮರಣ ಪ್ರಮಾದಲ್ಲೂ ಹೆಚ್ಚಳ

ತುಮಕೂರು:

      ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಕೋವಿಡ್-19 ಮಹಾಮಾರಿ ರೋಗ ದಿನೇ ದಿನೇ ಹೆಚ್ಚಾಗುತ್ತಿದ್ದು. ಮರಣ ಸಂಖ್ಯೆಯೂ ಜಾಸ್ತಿಯಾಗುತ್ತಿದೆ.

     ಸೊಗಡು ಶಿವಣ್ಣ ಮಾಜಿ ಸಚಿವರು ಆದ ನಾನು ಸಹ ಇಂತಹ ಸೇವೆ ಮಾಡುತ್ತಿರುವ ತುಮಕೂರು ನಗರ ಜನಸೇವಾ ಸಮಿತಿ (ರಿ) ಸಿ.ಜಿ.ಲೇಔಟ್, ತುಮಕೂರು ನಗರ ದೂರವಾಣಿ ಸಂಖ್ಯೆ 7204618217 ಈ ಸಂಸ್ಥೆಯ ಸದಸ್ಯನಾಗಿ ಸೇರ್ಪಡೆಯಾಗಿದ್ದು. ನನ್ನೊಂದಿಗೆ ಶ್ರೀ ಸುಭಾನ್ ಟಿಂಬರ್ ಮರ್ಚೆಂಟ್ ಇವರು ಸಹ ಇಂದು ಸೇರ್ಪಡೆಗೊಂಡಿರುತ್ತಾರೆ.
ಈ ಸಂಸ್ಥೆಯು ಕಳೆದ ವರ್ಷ ಕೋವಿಡ್ ಬಂದಾಗಿನಿಂದಲೂ ಹೆಚ್ಚು ಸಕ್ರಿಯವಾಗಿದ್ದು ಕೋವಿಡ್ ರೋಗಿಗಳ ಆರೈಕೆಗೆ ರಕ್ತ ಒದಗಿಸುವುದು, ಅಸ್ಪತ್ರೆಗೆ ಸಾಗಿಸಲು ಉಚಿತ ಅಂಬುಲೆನ್ಸ್ ವ್ಯವಸ್ಥೆ, ಶವಗಳನ್ನು ಸಾಗಿಸುವುದು ಅವರವರ ಧರ್ಮಗಳ ಪದ್ಧತಿ ಅನುಸಾರ ಅಂತ್ಯಕ್ರಿಯೆ ನಡೆಸಿಕೊಡುವುದು. ಇಂತಹ ಧರ್ಮ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಇದರೊಂದಿಗೆ ಈಗ ಈ ಸಂಸ್ಥೆಯ ಸಕ್ರಿಯ ಸದಸ್ಯರಾಗಿರುವ ಶ್ರೀ ಸುಭಾನ್‍ರವರು ಟಿಂಬರ್ ವ್ಯಾಪಾರಿಗಳನ್ನು ಸಂಪರ್ಕಿಸಿ ಶವಾಗಾರಕ್ಕೆ ಸೌದೆÉ ಒದಗಿಸಲು ಈಗಾಗಲೇ ಸಂಗ್ರಹಿಸಿ ಇಟ್ಟಿರುತ್ತಾರೆ.

ಈ ಸಂಸ್ಥೆ 2020-21ನೇ ಸಾಲಿನಲ್ಲಿ 150ಕ್ಕೂ ಹೆಚ್ಚು ಕೋವಿಡ್ ರೋಗದಿಂದ ಮರಣ ಹೊಂದಿದವರ ಅಂತ್ಯಕ್ರಿಯೆ (ದಫನ್/ ಸುಡುವುದು) ನಡೆಸಿಕೊಟ್ಟಿದ್ದು. ಈ ವರ್ಷದಲ್ಲಿಯೂ ಈ ಸೇವೆ ಮಾಡಲು ಸನ್ನದ್ಧರಾಗಿರುತ್ತಾರೆ. ಅದುದರಿಂದ ಈ ಸಂಸ್ಥೆಯ ಎಲ್ಲಾ ಸಕ್ರಿಯ ಸದಸ್ಯರು ಮಾನ್ಯ ಜಿಲ್ಲಾಧಿಕಾರಿಗಳು, ಪೆÇಲೀಸ್ ಅಧೀಕ್ಷಕರು, ಇವರುಗಳಿಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದು. ಪ್ರಸ್ತಾವನೆ ಅನುಮೋದನೆ ಅಂತಿಮ ಹಂತದಲ್ಲಿರುವುದರಿಂದ ವಿಷಯವನ್ನು ತಮ್ಮ ಮುಖಾಂತರ ಜನತೆಯ ಗಮನಕ್ಕೆ ತರುತ್ತಾ ಅವಶ್ಯವಿರುವವರು ಇವರನ್ನು ಸಂಪರ್ಕಿಸಬಹುದಾಗಿ ಸಂಸ್ಥೆಯ ಪರವಾಗಿ ಸಂಸ್ಥೆಯ ಸದಸ್ಯನಾಗಿ ಕೋರುತ್ತೇನೆ. ಈ ಕಷ್ಟ ಸಮಯದಲ್ಲಿ ಯಾವುದೇ ಸಂಘ ಸಂಸ್ಥೆಗಳು ಮುಂದೆ ಬಂದಲ್ಲಿ ಅವರಿಗೂ ಜಿಲ್ಲಾಡಳಿತ ಅನುಮತಿ ನೀಡಲು ಕೋರಿದೆ.

(Visited 2 times, 1 visits today)

Related posts

Leave a Comment