ಕೋವಿಡ್ ಸೋಂಕಿತೆಗೆ ಹೆರಿಗೆ : ಆರೋಗ್ಯವಾಗಿರುವ ತಾಯಿ-ಮಗು

 ತುಮಕೂರು:

      ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ 20 ವರ್ಷದ ಕೋವಿಡ್-19 ಸೋಂಕಿತೆಗೆ ಜಿಲ್ಲಾಸ್ಪತ್ರೆಯಲ್ಲಿಂದು ಹೆರಿಗೆ(ಮೊದಲ ಗರ್ಭಧಾರಣೆ)ಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ವೀರಭದ್ರಯ್ಯ ತಿಳಿಸಿದ್ದಾರೆ.

      ತಾಯಿಗೆ Premature Rupture of Membranes ಆಗಿದ್ದರಿಂದ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಯಿತು. ಹೆಣ್ಣು ಮಗು ಜನನವಾಗಿದ್ದು, ಆರೋಗ್ಯವಾಗಿದೆ.

      ಸ್ತ್ರೀರೋಗ ತಜ್ಞೆ ಡಾ|| ಮಹಾಲಕ್ಷ್ಮಮ್ಮ, ಅರಿವಳಿಕೆ ತಜ್ಞ ಡಾ|| ಸುರೇಶಬಾಬು ಮತ್ತು ತಂಡದವರು ಈ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಇದು ಮೊದಲ ಕೋವಿಡ್-19 ಸೋಂಕಿತ ಗರ್ಭಿಣಿಗೆ ಮಾಡಿದ ಸಿಸೇರಿಯನ್ ಶಸ್ತ್ರಚಿಕಿತ್ಸೆ ಹೆರಿಗೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

(Visited 9 times, 1 visits today)

Related posts