ಪೌಷ್ಟಿಕ ಪುನರ್‍ವಸತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

ತುಮಕೂರು : 

      ನಗರದ ಜಿಲ್ಲಾಸ್ಪತ್ರೆಯಲ್ಲಿನ ಪೌಷ್ಟಿಕ ಪುನರ್‍ವಸತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

      ಈ ವೇಳೆ ಪೌಷ್ಟಿಕ ಪುನರ್‍ವಸತಿ ಕೇಂದ್ರದಲ್ಲಿ ದಾಖಲಾಗಿದ್ದ ಮೂರು ಮಕ್ಕಳು ಮಕ್ಕಳ ವಾರ್ಡ್‍ನ ಹೊರಾಂಗಣದಲ್ಲಿ ಮಲಗಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಜಿಲ್ಲಾ ಸರ್ಜನ್ ಡಾ. ಸುರೇಶ್ ಬಾಬು ಪ್ರತಿಕ್ರಿಯಿಸಿ ವಾರ್ಡ್‍ಗಳ ಕೊರತೆಯಿದೆ ಎಂದು ತಿಳಿಸಿದಾಗ, ಮಕ್ಕಳ ಹಿತದೃಷ್ಠಿಯಿಂದ ಸುಸಜ್ಜಿತ ವಾರ್ಡ್ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

      ಬಳಿಕ ಜಿಲ್ಲಾ ಅಂಗವಿಕಲರ ಪುನರ್ ವಸತಿ ಕೇಂದ್ರದ ಹಳೆ ಕಟ್ಟಡ ಪರಿಶೀಲಿಸಿ ಕಟ್ಟಡದ ದುರಸ್ಥಿಗೆ ಅಗತ್ಯವಿರುವ ಅನುದಾನವನ್ನು ಮಹಾನಗರ ಪಾಲಿಕೆಯಿಂದ ಪಡೆಯುವಂತೆ ಕ್ರಮ ಕೈಗೊಳ್ಳಲು ಅಂಗವಿಕಲರ ಕಲ್ಯಾಣಾಧಿಕಾರಿ ರಮೇಶ್ ಅವರಿಗೆ ನಿರ್ದೇಶಿಸಿ, ಜಿಲ್ಲಾಸ್ಪತ್ರೆ ಮೇಲ್ಭಾಗದಲ್ಲಿ ನಿರ್ಮಾಣವಾಗುತ್ತಿರುವ ಸಖಿ(ಒಎಸ್‍ಸಿ) ಕಟ್ಟಡ ಕಾಮಗಾರಿ ಪರಿಶೀಲಿಸಿದರು.

      ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್, ಡಾ. ಮುಕ್ತಾಂಭ ಹಾಗೂ ಇತರರಿದ್ದರು.

(Visited 4 times, 1 visits today)

Related posts

Leave a Comment