ಅಕ್ರಮ ಗ್ಯಾಸ್ ಅಡ್ಡೆಮೇಲೆ ಡಿಸಿಬಿ‌ ದಾಳಿ

 ಗುಬ್ಬಿ:
      ಅಕ್ರಮವಾಗಿ ಗ್ಯಾಸ್ ರೀಫಿಲಿಂಗ್ ಮಾಡುತ್ತಿದ್ದ  ಅಡ್ಡೆ  ಮೇಲೆ ಜಿಲ್ಲಾ ಅಪರಾಧ ವಿಭಾಗ ದಾಳಿ ನಡೆಸಿದೆ.
     ಗುಬ್ಬಿಯ ಸುಭಾಷ್ ನಗರದಲ್ಲಿ  ಮದ್ಯಾನ ಸುಮಾರು 1:30 ಗಂಟೆಯಲ್ಲಿ  ಆರೋಪಿ ಮನೆ ಪಕ್ಕದ ಶೆಡ್ ಮೇಲೆ ದಾಳಿ ನಡೆದಿದ್ದು, ಆರೋಪಿ ರವಿಕುಮಾರ ಬಿನ್ ರಂಗಸ್ವಾಮಯ್ಯ ಎಂಬುವರಿಂದ  17 ಸಿಲಿಂಡರ್  ಗಳು, ಮೂರು ವೇಯಿಂಗ್ ಮಿಷನ್ ಗಳು, ಎರಡು ರೆಗ್ಯುಲೇಟರ್ ಗಳು ಹಾಗು ರೀಫಿಲ್ಲಿಂಗ್ ಪೈಪುಗಳನ್ನು ವಶಪಡಿಸಿಕೊಳ್ಳಲಾಗಿದೆ .
      ನಗರದಲ್ಲಿ ಸಾರ್ವಜನಿಕವಾಗಿ ವಿರೋಧಗಳ ನಡುವೆಯೂ ರಾಜಾರೋಷವಾಗಿ ಹಾಡು-ಹಗಲಲ್ಲೆ ಯಾವುದೇ ಭಯವಿಲ್ಲದೆ ಗ್ಯಾಸ್ ರೀಪಿಲ್ಲಿಂಗ್ ಮಾಡಲಾಗುತ್ತಿತ್ತು. ಗ್ಯಾಸ್ ರೀಫಿಲ್ಲ್ ಮಾಡುವಾಗ ಅನಾಹುತ ಸಂಭವಿಸಿದರೆ, ಸುತ್ತ-ಮುತ್ತ ವಾಸಿಸುತ್ತಿದ್ದ ಜನರಿಗೆ ಅನಾಹುತ ಸಂಭವಿಸುವ ಸಾದ್ಯತೆಗಳಿದ್ದು,  ಇದರ ಬಗ್ಗೆ ತಲೆಕೆಡಿಸಿಕೊಳ್ಳದ ರವಿಕುಮಾರ ಹಣದ ದುರಾಸೆಗಾಗಿ ಈbರೀತಿಯ ಅಕ್ರಮ ಚಟುವಟಿಕೆಯಲ್ಲಿ‌ ಭಾಗಿಯಾಗುತ್ತಿದ್ದ ಎನ್ನಲಾಗಿದೆ.
      ಇದರ ಮಾಹಿತಿ‌ತಿಳಿದ ಜಿಲ್ಲಾ ಅಪರಾಧ ವಿಭಾಗದ ಇನ್ಸ್ಪೆಕ್ಟರ್  ಕೆ ಆರ್ ರಾಘವೇಂದ್ರ ರವರು ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಡಾ.ಕೋನ ವಂಶಿಕೃಷ್ಣ ರವರ ಗಮನಕ್ಕೆ ತಂದು‌ ಅವರ ಅಣತಿಯಂತೆ ದಾಳಿ ಮಾಡಿದ್ದಾರೆ.  ದಾಳಿ ಸಂದರ್ಭದಲ್ಲಿ ಅಪಾರ‌ ಪ್ರಮಾಣದ ಸಿಲಿಂಡರ್ ಮತ್ತು ಇದಕ್ಕೆ ಬಳಸಲಾಗುತ್ತಿದ್ದ ವಸ್ತುಗಳನ್ನು‌ ವಶಕ್ಕೆ ಪಡೆದು ಗುಬ್ಬಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
         ಡಿಸಿಬಿ ಇನ್ಸ್ಪೆಕ್ಟರ್  ಕೆ.ಆರ್.ರಾಘವೇಂದ್ರ ರವರ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್  ಕಾಂತರಾಜು,  ಸಿಬ್ಬಂದಿಗಳಾದ ಮಲ್ಲೆಶ, ನಾಗರಾಜ, ಮತ್ತು ಶಿವಶಂಕರರವರುಗಳು ಈ ದಾಳಿಯಲ್ಲಿ ಭಾಗವಹಿಸಿದ್ದರು.
(Visited 63 times, 1 visits today)

Related posts