ಚಿ.ನಾ.ಹಳ್ಳಿ : ಘನತ್ಯಾಜ್ಯ ವಸ್ತು ನಿರ್ವಹಣೆ ವಿಧಿ ಪಾಲಿಸದವರಿಗೆ ದಂಡ!!

ಚಿಕ್ಕನಾಯಕನಹಳ್ಳಿ : 

     ಘನತ್ಯಾಜ್ಯ ವಸ್ತು ನಿರ್ವಹಣೆ ವಿಧಿಯನ್ನು ಪಾಲಿಸದವರಿಗೆ ಪುರಸಭಾ ಸಿಬ್ಬಂದಿ ದಂಡಹಾಕುವ ಪ್ರಕ್ರಿಯೆಯನ್ನು ಪಟ್ಟಣದಲ್ಲಿ ನಡೆಸಲಾಯಿತು.
ಪಟ್ಟಣವನ್ನು ಕಸಮುಕ್ತಗೊಳಿಸುವ ದಿಸೆಯಲ್ಲಿ ಪುರಸಭಾ ಸಿಬ್ಬಂದಿಯವರು ಅಂಗಡಿಗಳ ಮುಂಭಾಗದಲ್ಲಿ ಕಸಗಳನ್ನು ತಂದುಹಾಕಿದಕ್ಕಾಗಿ ಅಂಗಡಿ ಮಾಲಿಕರಿಂದ ದಂಡವಸೂಲಿ ಕಾರ್ಯನಡೆಸಲಾಯಿತು.

      ಕರ್ನಾಟಕಪೌರಸಭೆ ಅಧಿನಿಯಮ 1964ರ ಸಂಖ್ಯೆ 22ರ ಪ್ರಕರಣ 325ರ ಪ್ರಕಾರ ಘನತ್ಯಾಜ್ಯವಸ್ತು ನಿರ್ವಹಣೆ 2016ರ ಸೇವೆಯ ಪಾಲನೆ ಮಾಡದಿರುವ ಮನೆ, ಅಂಗಡಿ, ಟೀಶಾಪ್, ಹೋಟೆಲ್ ಮುಂತಾದ ಮುಂಗಟ್ಟುಗಳ ಮಾಲಿಕರಿಗೆ ಪ್ರಥಮವಾಗಿ ರೂ.50ನ್ನು ದಂಡಹಾಕಲಾಗುತ್ತಿದೆ ಎಂದು ಪುರಸಭೆಯ ಸಿಬ್ಬಂದಿ ವಿದ್ಯಾ ಮಾಹಿತಿ ನೀಡಿದರು. ಸಾರ್ವಜನಿಕವಾಗಿ ಈ ಬಗ್ಗೆ ಈಗಾಗಲೇ ಧ್ವನಿವರ್ಧಕಗಳ ಮೂಲಕ ಪ್ರಚಾರ ನಡೆಸಿದ್ದು, ಅಂಗಡಿಮಾಲಿಕರು ತಮ್ಮ ದಿನನಿತ್ಯದ ಕಸಗಳನ್ನು ಸಂಗ್ರಹಿಸಿ ಪುರಸಭೆಯ ವಾಹನದಲ್ಲಿಯೇ ಹಾಕಬೇಕೆಂಬ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು, ಇಂತಹ ಕಸ ಸಂಗ್ರಹಣೆಗಾಗಿ ದಿನನಿತ್ಯಕಸದವಾಹನ ಎಲ್ಲಾ ರಸ್ತೆಗಳಲ್ಲೂ ಸಂಚರಿಸುತ್ತಿದೆ. ಇಷ್ಟೆಲ್ಲಾ ವ್ಯವಸ್ಥೆಯಿದ್ದರೂ ಕಸಗಳನ್ನು ಬೇಕಾಬಿಟ್ಟಿಹಾಕುವ ಮಂದಿಗೆ ದಂಡಹಾಕುವ ಪ್ರಕ್ರಿಯೆ ಮುಂದಿವರೆಯುವುದೆಂದರು.

      ಆದರೆ ಪಟ್ಟಣದ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ರಾಶಿರಾಶಿ ಕಸಗಳನ್ನು ರಾತ್ರೋರಾತ್ರಿ ತಂದುಸುರಿಯುವ ಪರಿಪಾಟವಿದೆ. ಇಂತಹಕಡೆ ಹಂದಿನಾಯಿಗಳು ಕೆದರಿ ಮತ್ತೆ ಕಸಗಳು ಬೀದಿಯಲ್ಲಿ ಚೆಲ್ಲಾಡುತ್ತಿದೆ ಹಾಗು ಮಳೆನೀರು ಇಂತಹ ಕಸದರಾಶಿಗೆ ಸೇರಿ ವಾತಾವರಣವನ್ನು ಇನ್ನಷ್ಟು ಕಲುಷಿಕ್ಕೆ ಕಾರಣವಾಗಿದೆ.

      ಇದರಿಂದ ಸಾಕಷ್ಟು ಅನಾರೋಗ್ಯ ಪ್ರಕರಣಗಳು ಕಂಡುಬರುತ್ತಿವೆ, ಇಂತಹ ಸ್ಥಳಗಳ ಬಗ್ಗೆ ಸಾರ್ವಜನಿಕ ದೂರುಗಳು ಬಂದಿದ್ದರೂ ಈ ಕೃತ್ಯವೆಗಿಸದವರ ಮೇಲೆ ಯಾವುದೇ ಕ್ರಮಕೈಗೊಳ್ಳದೆ ಏಕಾಏಕಿ ಅಂಗಡಿಗಳಿಗೆ ಸಿಬ್ಬಂದಿಯೊಂದಿಗೆ ತೆರಳಿ ಪಟ್ಟಣದಲ್ಲಿ ದಂಡಹಾಕುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಯಿತು.

(Visited 3 times, 1 visits today)

Related posts

Leave a Comment