ಆಕಸ್ಮಿಕ ಬೆಂಕಿ ಅವಘಡ : 3 ಪೆಟ್ಟಿಗೆ ಅಂಗಡಿಗಳು ಭಸ್ಮ!!

ಚಿಕ್ಕನಾಯಕನಹಳ್ಳಿ :

     ಆಕಸ್ಮಿಕ ಬೆಂಕಿ ಅವಘಡದಲ್ಲಿ ಮೂರು ಪೆಟ್ಟಿಗೆ ಅಂಗಡಿಗಳು ಸುಟ್ಟು ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಗೀಡಾದ ಪ್ರಕರಣ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ.

      ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಅವಘಡದಲ್ಲಿ ಎರಡು ಎಗ್ ರೈಸ್ ಅಂಗಡಿ ಒಂದು ಕೋಳಿಮೊಟ್ಟೆ ಅಂಗಡಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ತಕ್ಷಣ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ ಹೆಚ್ಚುದುರಂತವನ್ನು ತಪ್ಪಿಸಿದರು.

      ಈ ಅಗ್ನಿ ಅವಘಡದಲ್ಲಿ ಪಟ್ಟಿಗೆ ಅಂಗಡಿಯೂ ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳು ನಷ್ಠ ಅನುಭವಿಸಿದೆ. ಈ ಸಂದರ್ಭದಲ್ಲಿ ಅಗ್ನಿ ಶಾಮಕ ಸಿಬ್ಬಂದಿಯ ಮುಖ್ಯಸ್ಥರಾದ ಮಲ್ಲಿಕಾರ್ಜುನಯ್ಯ ಮತ್ತು ತಂಡಕ್ಕೆ ಅಂಗಡಿ ಮಾಲಿಕರಾದ ಅಶೋಕ್, ಮಲ್ಲಿಕ್ ಹಾಗೂ ಜಲೀಲ್‍ಸಾಬ್ ರವರು ಅಗ್ನಿ ನಂದಿಸುವಲ್ಲಿ ನೆರವಾದರು.

(Visited 3 times, 1 visits today)

Related posts

Leave a Comment