ಚಿಕಿತ್ಸೆ ಮುಗಿಸಿ ಭಾರತಕ್ಕೆ ಮರಳಿದ ಕೇಂದ್ರ ಸಚಿವ ಅರುಣ್​ ಜೇಟ್ಲಿ

ದೆಹಲಿ:

      ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ತೆರಳಿದ್ದ  ವಿತ್ತ ಸಚಿವ ಅರುಣ್‌ ಜೇಟ್ಲಿ ಭಾರತಕ್ಕೆ ಮರಳಿದ್ದಾರೆ.

      ಭಾರತಕ್ಕೆ ಮರಳುತ್ತಲೇ ಟ್ವಿಟ್‌ ಮಾಡಿದ ಜೇಟ್ಲಿ, “ಮನೆಗೆ ಮರಳಿರುವುದಯ ಸಂತಸ ನೀಡಿದೆ” ಎಂದು ತಿಳಿಸಿದ್ದಾರೆ.

      ಜೇಟ್ಲಿ (66) ಅವರು ಅನಾರೋಗ್ಯ ಕಾರಣದಿಂದ ನಾರ್ಥ್​ ಬ್ಲಾಕ್​ನಲ್ಲಿರುವ ತಮ್ಮ ಆಫೀಸ್​ಗೆ ಬರುವುದನ್ನು ಕಳೆದ ವರ್ಷದ ಏಪ್ರಿಲ್​ನಲ್ಲೇ ಕೊನೆಗೊಳಿಸಿದ್ದರು. ಅದರ ಮರುತಿಂಗಳೇ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಾದರು. ಆನಂತರ ಆಗಸ್ಟ್​ನಲ್ಲಿ ತಮ್ಮ ಕಚೇರಿ ಬಂದರಾದರೂ ಜನವರಿಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದರು.

       

      ರಾಷ್ಟ್ರಪತಿ ಸೂಚನೆ ಮೇರೆಗೆ ವಿತ್ತ ಸಚಿವಾಲಯದ ಪೋರ್ಟ್‌‌ಫೋಲಿಯೋವನ್ನು ತಾತ್ಕಾಲಿಕವಾಗಿ ನಿಭಾಯಿಸಲಿದ್ದಾರೆ. ಸ್ವದೇಶಕ್ಕೆ ಮರಳಿರುವ ಜೇಟ್ಲಿ ಯಾವಾಗ ಖಾತೆಯ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆಸ್ಪತ್ರೆಯಿಂದಲೇ ಸಾಮಾಜಿಕ ಜಾಲತಾಣಗಳಾದ ಟ್ವಿಟರ್‌ ಹಾಗು ಫೇಸ್‌ಬುಕ್‌ ಬಳಕೆ ಮಾಡುತ್ತಿದ್ದ ಜೇಟ್ಲಿ, ವರದಿಗಾರರನ್ನು ವಿಡಿಯೋ ಕಾಲಿಂಗ್‌ ಮೂಲಕ ಸಂಪರ್ಕಿಸುತ್ತಿದ್ದರು.

 

 

 

 

(Visited 24 times, 1 visits today)

Related posts

Leave a Comment