ಗುಬ್ಬಿ : ಮಂಚಲದೊರೆ ಮತ್ತು ಅಂಕಸಂದ್ರ ಹೊರತುಪಡಿಸಿ 32 ಗ್ರಾ.ಪಂ.ಗಳಿಗೆ ಚುನಾವಣೆ

ಗುಬ್ಬಿ  : 

      ತಾಲ್ಲೂಕಿನ ಮಂಚಲದೊರೆ ಮತ್ತು ಅಂಕಸಂದ್ರ ಗ್ರಾಮ ಪಂಚಾಯಿತಿ ಹೊರತುಪಡಿಸಿದಂತೆ ಉಳಿದ 32 ಗ್ರಾಮ ಪಂಚಾಯ್ತಿಗಳಿಗೆ ನಡೆಯಲಿರುವ ಚುನಾವಣೆಗೆ ಸಕಲ ಸಿದ್ದತೆಯನ್ನು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ.

       ಕಾಲೇಜಿನಲ್ಲಿ ಆವರಣದಲ್ಲಿ ನಿಯೋಜಿತ ಸಿಬ್ಬಂದಿಗಳು ಬೆಳಿಗ್ಗೆಯಿಂದಲೇ ಹಾಜರಾಗಿ ತಮ್ಮ ಮತಗಟ್ಟೆ ಸ್ಥಳಕ್ಕೆ ತೆರಳಲು ಸಿದ್ದವಾಗಿದ್ದಾರೆ. ಮತಗಟ್ಟೆಗಳಿಗೆ ಚುನಾವಣಾ ಸಾಮಗ್ರಿಗಳು ಮತ್ತು ಮತಗಟ್ಟೆ ಅಧಿಕಾರಿಗಳನ್ನು ಕರೆದೊಯ್ಯಲು 32 ಬಸ್ ಮತ್ತು 10 ಮಿನಿಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಮತದಾನ ನಂತರ ಸಂಜೆ ಮತಪೆಟ್ಟಿಗಳನ್ನು ಸ್ವೀಕರಿಸಲು ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿ ಅಗತ್ಯವಿರುವ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಒಟ್ಟು 300 ಮತಗಟ್ಟೆಗಳ ಪೈಕಿ 31 ಅತಿ ಸೂಕ್ಷ್ಮ, 62 ಸೂಕ್ಷ್ಮ ಮತ್ತು 207 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದ್ದು ಒಟ್ಟು 1200 ಮಂದಿ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.

      ಪೊಲೀಸ್ ಸಿಬ್ಬಂದಿಗಳನ್ನೂ ಬಂದೋಬಸ್ತ್‍ಗಾಗಿ ನಿಯೋಜಿಸಿ ಸೂಕ್ಷ್ಮ ಮತ್ತು ಅತಿ ಸೋಕ್ಷ್ಮ ಮತಗಟ್ಟೆಗಳಿಗೆ ವಿಶೇಷ ಭದ್ರತೆ ಒದಗಿಸಲು ಹೆಚ್ಚಿನ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಜೊತೆಗೆ ವಿಡಿಯೋ ಚಿತ್ರೀಕರಣ ವ್ಯವಸ್ಥೆಯನ್ನು ಮಾಡಲಾಗಿದೆ. ಜತೆಗೆ ಪ್ರತಿ ಮತಗಟ್ಟೆಗಳನ್ನು ಈಗಾಗಲೆ ಸ್ಯಾನಿಟೈಸರ್ ಮಾಡಲಾಗಿದೆ. ಮತದಾರರಿಗೆ ಥರ್ಮಲ್ ಸ್ಕ್ಯಾನ್ ಮಾಡಲು ಆಶಾ ಕಾರ್ಯಕತೆಯರು ಮತ್ತು ಆರೋಗ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು, ಕೋವಿಡ್ 19 ರ ಮಾರ್ಗಸೂಚಿಯಂತೆ ಎಲ್ಲಾ ಮತಗಟ್ಟೆಗಳಲ್ಲಿ ಅಗತ್ಯವಾದ ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ ತಿಳಿಸಿದ್ದಾರೆ.

(Visited 11 times, 1 visits today)

Related posts

Leave a Comment