ಗುಬ್ಬಿ: ವಲಸಿಗರಿಂಗ ಹೆಚ್ಚುತ್ತಿರುವ ಕೊರೋನಾ ಸೋಂಕು

ಗುಬ್ಬಿ:

      ಕರೋನಾ ಮಹಾಮಾರಿಯು ಗುಬ್ಬಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಇರುವುದು ಒಂದೆಡೆಯಾದರೆ ಕಸಬಾ ಹೋಬಳಿಯ ಹೇರೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಮೊದಲು ಗ್ರಾಮದಲ್ಲಿ ಸುಮಾರು 35 ಜನ ಕೋವಿಡ್ ಖಾಯಿಲೆಗೆ ತುತ್ತಾಗಿದ್ದಾರೆ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ತಿಳಿಸಿದ್ದಾರೆ.

      ಹೇರೂರು ಗ್ರಾಮ ಪಂಚಾಯ್ತಿಗೆ ಎಂಟು ಗ್ರಾಮಗಳು ಸೇರಿದ್ದು ಸುಮಾರು 8216 ಜನಸಂಖ್ಯೆಯುಳ್ಳ ಈ ಗ್ರಾಮ ಪಂಚಾಯ್ತಿಗೆ ಮದಲೂರು ಗ್ರಾಮವು ಸೇರಿದ್ದು 1035 ಜನಸಂಖ್ಯೆಯುಳ್ಳ ಗ್ರಾಮವಾಗಿದ್ದು ಪ್ರತಿ ಮನೆಗೆ ಮೂರು ಬಾರಿ ಸ್ಯಾನಿಟೈಸರ್ ಮಾಡಿಸಲಾಗಿತ್ತು. ಬೇರೆ ಬೇರೆ ನಗರಗಳಿಂದ ಈ ಗ್ರಾಮಕ್ಕೆ ಬಂದಂತಹ ವ್ಯಕ್ತಿಗಳಿಂದ ರೋಗವು ಹೆಚ್ಚಾಗುತ್ತಿದ್ದು ಪ್ರತಿಯೊಂದು ಮನೆಯ ಎಲ್ಲಾ ವ್ಯಕ್ತಿಗಳಿಂದ ಗಂಟಲು ದ್ರವವನ್ನು ತೆಗೆಯುತ್ತಿದ್ದೇವೆ. ಅವಶ್ಯಕತೆ ಇರುವ ವ್ಯಕ್ತಿಗಳನ್ನು ಕ್ವಾರಂಟೈನ್‍ನಲ್ಲಿ ಇರಿಸಿ ಹಾಗೂ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು ರೋಗವು ಉಲ್ಬಣಗೊಂಡ ಕಾರಣ ಈ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ ಎಂದರು. ಗ್ರಾಮ ಸುತ್ತಮುತ್ತಲಿನ ಪ್ರದೇಶದ ಜನರು ನಿರ್ಬಂಧಿತ ಹಳ್ಳಿ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಭಯಭೀತರಾಗಿ ಇರುವುದು ಕಂಡು ಬಂದಿದೆ. ಈಗಲಾದರೂ ತಾಲ್ಲೂಕು ಆಡಳಿತ ಎಚ್ಚೆತ್ತಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಿದೆ.

(Visited 1 times, 1 visits today)

Related posts

Leave a Comment