144 ಸೆಕ್ಷನ್ ಅಗತ್ಯತೆಯಿರಲಿಲ್ಲ : ಹೆಚ್.ಡಿ.ಕುಮಾರಸ್ವಾಮಿ

 ತುರುವೇಕೆರೆ:

      ಅಧಿಕಾರಿಗಳು ಯಾರ ಮುಲಾಜಿಗೂ ಒಳಗಾಗದೆ ಕೆಲಸ ನಿರ್ವಹಿಸಿದ್ದಿದ್ದರೆ ತುರುವೇಕೆರೆಯಲ್ಲಿಂದು 144ಸೆಕ್ಷನ್ ವಾತಾವರಣ ನಿರ್ಮಾಣ ವಾಗುತ್ತಿರಲಿಲ್ಲ ಎಂದು ಮಾಜಿ ಮುಖ್ಯ ಮುಂಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಷಾಧ ವ್ಯಕ್ತಪಡಿಸಿದರು.
    ತಾಲೂಕಿನ ಮಾಯಸಂದ್ರ ಹೋಬಳಿ ಗುಡ್ಡೇನಹಳ್ಳಿ ಗ್ರಾಮದ ಜಮೀನಿನ ವಿಚಾರವಾಗಿ ತಾಲೂಕಿಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
      ರಾಜಕೀಯ ಒತ್ತಡಗಳಿಗೆ ಒಳಗಾಗಿ ಅಧಿಕಾರಿ ವರ್ಗ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಇಂತಹ ಬಿಗುವಿನ ವಾತಾವರಣ ನಿರ್ಮಾಣ ಮಾಡಲು ಸಾಧ್ಯ. ಡಿ.ಜೆ.ಹಳ್ಳಿ ಕೆ.e.Éಹಳ್ಳಿ ಪ್ರಕರಣದಲ್ಲೇ ಇಂತಹ 144ಸೆಕ್ಷನ್ ಜಾರಿಗೆ ತಂದ ಉದಾಹರಣೆಯಿಲ್ಲ, ಆದರೆ ಕ್ಷುಲ್ಲಕ ಕಾರಣಗಳಿಗೆ 144ಸೆಕ್ಷನ್ ಜಾರಿಗೆ ತಂದು ಸಾರ್ವಜನಿಕರಲ್ಲಿ ಭಯ ಭೀತಿ ಉಂಟುಮಾಡುವ ಕಾರಣವೇನಿತ್ತು.
      ಶಾಸಕ ಮಸಾಲಜಯರಾಮ್ ಅವರೇ ಜವಬ್ದಾರಿ ಅರಿತು ಸರಿಯಾದ ಸಮಯದಲ್ಲಿ ಸರಿಯಾದ ಕ್ರಮವನ್ನು ತೆಗೆದುಕೊಂಡಿದಿದ್ದರೆ ಗುಡ್ಡೇನಹಳ್ಳಿ ಜಮೀನು ಪ್ರಕರಣವನ್ನು ಬಗೆಹರಿಸಬಹುದಿತ್ತು. ಇಂದು ಜೆಡಿಎಸ್ ಇಷ್ಟೊಂದು ದೊಡ್ಡ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ, ನಾನು ಕಾನೂನಿಗೆ ಗೌರವಿಸುತ್ತೇನೆ. ಯಾವುದೇ ಪಾದಯಾತ್ರೆ, ಪ್ರತಿಭಟನೆ ಮಾಡುವುದಿಲ್ಲ ರೈತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನಮ್ಮ ಪಕ್ಷ ಸದಾ ಮುಂಚೂಣಿಯಲ್ಲಿರುತ್ತದೆ ಎಂದರು.
ಮುಂದಿನ ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ: 
     ತಾಲೂಕಿನಲ್ಲಿ ಪಕ್ಷದಲ್ಲಿನ ಗೊಂದಲವಿರುವುದನ್ನು ಒಪ್ಪಿಕೊಂಡ ಅವರು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರೇ ಮುಂದಿನ ವಿಧಾನಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಇದರಲ್ಲಿ ಅನುಮಾನವೇ ಬೇಡ ಎಂದರು.
     ಸ್ವ ಪಕ್ಷದವರಿಂದಲೇ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋಲು:
      ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂ.ಟಿ.ಕೃಷ್ಣಪ್ಪ ಸೋಲಲು ನಮ್ಮ ಪಕ್ಷದಲ್ಲಿನ ಬಂಡಾಯ ಅಭ್ಯರ್ಥಿಗಳೇ ಕಾರಣ ಹೊರತು ಜೆಡಿಎಸ್ ಕಾರ್ಯಕರ್ತರಲ್ಲ ಎಂದು ಸ್ಪಷ್ಟಪಡಿಸಸಿದರು.
  ಕ್ರಿಕೆಟ್ ಬೆಟ್ಟಿಂಗ್, ಡ್ರಗ್ ಮಾಫಿಯ ಹಣ ಮೈತ್ರಿ ಸರ್ಕಾರ ಬಳಸಿಕೊಂಡಿತ್ತು:
      ನಮ್ಮ ಮೈತ್ರಿ ಸರ್ಕಾರ ಬೀಳಿಸಲು ಇಂದಿನ ಬಿಜೆಪಿ ಸರ್ಕಾರ ಕ್ರಿಕೆಟ್ ಬೆಟ್ಟಿಂಗ್, ಡ್ರಗ್ ಮಾಫಿಯ ಹಣವನ್ನು ಬಳಸಿಕೊಂಡಿತ್ತು, ನನ್ನ ಅಧಿಕಾರಾವಧಿಯಲ್ಲಿ ಡ್ರಗ್ ಮಾಫಿಯಾಕ್ಕೆ ಕಡಿವಾಣ ಹಾಕಿದ್ದೆ, ಆದರೆ ಇಂದು ಬಿಜೆಪಿ ಸರ್ಕಾರ ಸಂಪೂರ್ಣ ಭೃಷ್ಟಾಚಾರದಲ್ಲಿ ಮುಳುಗಿದೆ, ನೆರೆ ಪರಿಹಾರ ರೈತರಿಗೆ ತಲುಪಿಸುವುದರಲ್ಲಿ ವಿಫಲವಾಗಿದೆ ಹಾಗೂ ಕೋವಿಡ್-19 ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
      ಇದೇ ಸಂದರ್ಭದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲೇ ತಹಶೀಲ್ದಾರ್ ನಯೀಮ್ ಉನ್ನೀಸಾರವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗುಡ್ಡೇನಹಳ್ಳಿ ಜಮೀನು ವಿಚಾರವಾಗಿ ಮನವಿ ಸಲ್ಲಿಸಿದರು.
      ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮನಕ್ಕೂ ಮುಂಚೆ ಜೆಡಿಎಸ್‍ನ ಸಾವಿರಾರು ಕಾರ್ಯಕರ್ತರು ಮಾಯಸಂದ್ರ ರಸ್ತೆಯ ಉದ್ದಕ್ಕೂ ನೆರದಿದ್ದರು ಆದರೆ 144 ಸೆಕ್ಷನ್ ಇದ್ದಿದ್ದರಿಂದ ಕೆಲ ಹೊತ್ತು ಕಾದು ತಮ್ಮ ನೆಚ್ಚಿನ ನಾಯಕರ ಭೇಟಿ ಮಾಡಲು ಸಾಧ್ಯವಾಗದೆ ನಿರಾಸೆಯಿಂದ ಹಿಂತಿರುಗುತ್ತಿದ್ದರು.
      ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‍ಗಳನ್ನು ನಿರ್ಮಿಸಿ ಪೊಲೀಸ್ ನಿಯೋಜನೆ ಮಾಡುವ ಮೂಲಕ ಪೊಲೀಸ್ ಇಲಾಖೆ ಸೂಕ್ತ ಬಂದೋಭಸ್ತ್ ಮಾಡಲಾಗಿತ್ತು.
      ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಎನ್.ನಿಂಗಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಆಂಜಿನಪ್ಪ, ಸ್ಥಳೀಯ ಮುಖಂಡರಾದ ರಾಜೀವ್ ಕೃಷ್ಣಪ್ಪ, ವೆಂಕಟೇಶ್‍ಕೃಷ್ಣಪ್ಪ,  ಕೋಳಾಲ ಗಂಗಾಧರ್,  ಬಾಣಸಂದ್ರ ರಮೇಶ್, ವೆಂಕಟಾಪುರ ಯೋಗೀಶ್ ಇತರರು ಇದ್ದರು,

 

(Visited 3 times, 1 visits today)

Related posts

Leave a Comment