ಮಧುಗಿರಿ : 30 ದಿನ ಹರಿಯಲಿದೆ ಹೇಮೆಯ ನೀರು!!

ಮಧುಗಿರಿ:

      ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಸಿದ್ದಾಪುರ ಕೆರೆಗೆ ಹೇಮಾವತಿ ನಾಲೆಯಿಂದ 30 ದಿನಗಳು ನೀರು ಹರಿಯಲಿದ್ದು, ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

      ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಸಿದ್ದಾಪುರ ಕೆರೆಗೆ 50 ಲಕ್ಷ ವೆಚ್ಚದಲ್ಲಿ ಹಮ್ಮಿಕೊಂಡಿರುವ ಕೆರೆ ಹೂಳೆತ್ತುವ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗುವ ಉದ್ದೇಶದಿಂದ ಹೂಳೆತ್ತುವ ಹಾಗೂ ಏರಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಈಗ ಹೇಮಾವತಿ ನೀರು ಹರಿಯುತ್ತಿದ್ದು, ಮಳೆಗಾಲ ಆರಂಭವಾದರೆ ಮಳೆ ನೀರು ಹೆಚ್ಚಾದರೆ ಕೆಲಸ ಮಾಡಲು ಸಾಧ್ಯವಿಲ್ಲ. ಅಷ್ಟರಲ್ಲಿ ಕೆಲಸ ಮುಗಿಸಿದರೆ ಹೆಚ್ಚಿನ ನೀರು ಸಂಗ್ರಹ ಮಾಡಬಹುದು. ಆದಷ್ಟೂ ಬೇಗ ಕಾಮಗಾರಿಯನ್ನು ಗುಣಮಟ್ಟದಲ್ಲಿ ಮುಗಿಸುವಂತೆ ಸೂಚಿಸಿದರು.

      ಸೋಮವಾರ ಸಂಜೆಯಿಂದ ಪಟ್ಟಣದ ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಯುತ್ತಿದ್ದು, ಪಟ್ಟಣದ ನೀರಿನ ಸಮಸ್ಯೆ ಬಗೆಹರಿಯಲಿದೆ. ಮುಂದಿನ ಮಳೆಗಾಲದವರೆಗೂ ನೀರಿನ ಲಭ್ಯತೆ ಇರುವಂತೆ ಪುರಸಭೆ ನಿಗದಿತ ಸಮಯದಲ್ಲೇ ನೀರು ಬಿಡಬೇಕು. ಎಲ್ಲಿಯೂ ಪೋಲಾಗದಂತೆ ಎಚ್ಚರವಹಿಸಬೇಕು. ಪೈಪ್‍ಲೈನ್ ಹಾದು ಹೋಗುವ ಗ್ರಾಮಗಳಲ್ಲಿ ಪಹರೆ ಕಾಯಬೇಕು. ಹಾಗೂ ಪಂಪ್‍ಹೌಸ್ ನಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಯಾಗದಂತೆ ಪುರಸಭೆಯ ಅ„ಕಾರಿಗಳು ಎಚ್ಚರ ವಹಿಸಬೇಕು. ಹಾಗೆಯೇ ಚೋಳೇನಹಳ್ಳಿ ಕೆರೆಯಲ್ಲಿ ಇದ್ದ ಅಲ್ಪಸ್ವಲ್ಪ ನೀರನ್ನು ಮಧ್ಯರಾತ್ರಿಯಲ್ಲಿ ತೋಟಕ್ಕೆ ಹರಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸಿ ರೈತರಿಗೆ ಪರಿಸ್ಥಿತಿಯ ಬಗ್ಗೆ ತಿಳುವಳಿಕೆ ಮೂಡಿಸಿ ಎಂದರು.

      ಈ ಸಂದಭರ್Àದಲ್ಲಿ ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ್, ಇಂಜಿನಿಯರ್ ಶ್ರೀರಂಗ, ಸದಸ್ಯ ಚಂದ್ರಶೇಖರಬಾಬು, ಪಿಡಿಓ ಗೌಡಪ್ಪ, ಮುಖಂಡರಾದ ಟಿ.ಜಿ.ಗೋವಿಂದರಾಜು, ಗೋಪಾಲ್, ಹನುಮಂತೇಗೌಡ, ಸತೀಶ್, ರಘು, ಕಿತ್ತಗಳಿ ಮಂಜಣ್ಣ, ಮಂಜುನಾಥ್, ಗ್ರಾ.ಪಂ.ಉಪಾಧ್ಯಕ್ಷ ಪ್ರಭು, ಸದಸ್ಯ ಬಸವರಾಜು, ಕ್ಯಾತಪ್ಪ, ರಂಗನಾಥ್ ಇತರರಿದ್ದರು.

(Visited 8 times, 1 visits today)

Related posts

Leave a Comment