ಪಕ್ಷದ ಬಲವರ್ದನೆಗೆ ಗ್ರಾಪಂ ಗೆಲುವು ಅಗತ್ಯ : ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬುಛಿ

ಹುಳಿಯಾರು:

      ಜೆಡಿಎಸ್ ಪಕ್ಷದ ಬಲ ವರ್ಧನೆಗೆ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಕಾರ್ಯಕರ್ತರ ಗೆಲುವು ಅತ್ಯಗತ್ಯ ಎಂದು ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು ಹೇಳಿದರು.
ಹುಳಿಯಾರು ಹೋಬಳಿ ಬೋರನಕಣಿವೆಯ ಸಾಯಿ ಮಂದಿರದ ಬಳಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

      ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕಾದರೆ ಗೊಂದಲವಿಲ್ಲದೆ ಅಭ್ಯರ್ಥಿಗಳ ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆಯಾದ ಅಭ್ಯರ್ಥಿಯ ಗೆಲುವಿಗೆ ಮನಸ್ಥಾಪ ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಮಾಡಬೇಕು. ರಾಜ್ಯಕ್ಕೆ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ನೀಡಿದ ಕೊಡುಗೆಯನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

    ಈ ಸಂದರ್ಬದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಎಂಜಾರಪ್ಪ ಹಾಗೂ ಮಾಜಿ ಸದಸ್ಯ ಅಂಬಾರಪುರ ಶೇಖರ್ ಜೆಡಿಎಸ್‍ಗೆ ಸೇರ್ಪಡೆಯಾದರು.
ಗ್ರಾಪಂ ಮಾಜಿ ಅಧ್ಯಕ್ಷ ರವಿಕುಮಾರ್, ತಾಪಂ ಸದಸ್ಯ ಪ್ರಸನ್ನಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಕಲ್ಲೇನಹಳ್ಳಿ ಮಂಜುನಾಥ್, ಗ್ರಾಪಂ ಮಾಜಿ ಸದಸ್ಯ ಮಧು, ಲಕ್ಕೇನಹಳ್ಳಿ ಗೋಪಾಲಣ್ಣ, ದಸೂಡಿ ರಂಗನಾಥಪ್ಪ, ದಸೂಡಿ ದೇವರಾಜು, ವೆಂಕಟೇಶಯ್ಯ, ಆನಂದ್, ಜಯಲಿಂಗಪ್ಪ, ದಬ್ಬಗುಂಟೆ ಎಂಜಾರಪ್ಪ ಮತ್ತಿತರರು ಇದ್ದರು.

(Visited 8 times, 1 visits today)

Related posts

Leave a Comment