ಯಳನಾಡು ಕಾಚನಕಟ್ಟೆ ಬಳಿ ಮತ್ತೊಂದು ಚಿರತೆ ಸೆರೆ

ಹುಳಿಯಾರು :

      ಬುಕ್ಕಾಪಟ್ಟಣ ಅರಣ್ಯ ವಲಯ ವ್ಯಾಪ್ತಿಯ ಹುಳಿಯಾರು ಹೋಬಳಿ ಯಳನಾಡು ಸಮೀಪದ ಕಾಚನಕಟ್ಟೆ ಗಂಗಮ್ಮನ ಕೆರೆ ಬಳಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಭಾನುವಾರ ಚಿರತೆಯೊಂದು ಸೆರೆಯಾಗಿದೆ. ಈ ಚಿರತೆ ಇದೇ ಸ್ಥಳದಲ್ಲಿ ಸೆರೆಯಾದ 3 ನೇ ಚಿರತೆಯಾಗಿದೆ.

      ಕಾಚನಕಟ್ಟೆಯಲ್ಲಿ ಚಿರತೆಯ ಕಾಟ ಹೆಚ್ಚಾಗಿದ್ದು ನಾಯಿ, ಕುರಿ ಸೇರಿದಂತೆ ಸಾಕು ಪ್ರಾಣಿಗಳನ್ನು ಹಿಡಿದು ತಿನ್ನುತ್ತಿದೆ. ಇದರಿಂದ ಇಲ್ಲಿನ ನಿವಾಸಿಗಳು ಹಾಗೂ ದಾರಿಹೋಕರಿಗೆ ಆತಂಕ ಹಾಗೂ ಭಯದ ವಾತಾವರಣವಿದೆ. ಹಾಗಾಗಿ ಈ ವನ್ಯ ಪ್ರಾಣಿಯು ದಿನ ನಿತ್ಯ ಓಡಾಡುವ ಜಾಗದಲ್ಲಿ ಪಂಜರ (ಬೋನು) ವನ್ನಿಟ್ಟು ಸೆರೆ ಹಿಡಿಯಲು ಕ್ರಮವಹಿಸುವಂತೆ ಗ್ರಾಮಸ್ಥರ ಮನವಿ ಮಾಡಿದ್ದರು.

ಗ್ರಾಮಸ್ಥರ ಮನವಿಗೆ ಸ್ಪಂಧಿಸಿದ ಅರಣ್ಯ ಇಲಾಖೆಯವರು ಕಳೆದ 3 ತಿಂಗಳ ಹಿಂದೆ ಪಂಜರವನ್ನಿಟ್ಟು ಒಂದು ಚಿರತೆ ಸೆರೆ ಹಿಡಿದಿದ್ದರು. ನಂತರ ಮತ್ತೊಂದು ಚಿರತೆ ಗ್ರಾಮಸ್ಥರಿಗೆ ಕಾಣಿಸಿಕೊಂಡು ಆತಂಕ ಸೃಷ್ಠಿಸಿತ್ತು. ಆಗಲೂ ಪಂಜರವನ್ನಿಟ್ಟು ಚಿರತೆ ಸೆರೆ ಹಿಡಿಯಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆಯವರು ಮತ್ತೊಂದು ಪಂಜರವನ್ನಿಟ್ಟಿದ್ದರು.

      ಅಲ್ಲದೆ ಚಿರತೆಯ ಚಲನವಲನ ಹಾಗೂ ಓಡಾಟದ ಬಗ್ಗೆ ನಿಗಾವಹಿಸುತ್ತಿದ್ದರು. ಎಂದಿನಂತೆ ಆಹಾರ ಅರಸುತ್ತಾ ಬಂದ ಚಿರತೆ ಇಲಾಖೆಯವರು ಇರಿಸಿದ ಬೋನಿಗೆ ಭಾನುವಾರ ಬೆಳಗ್ಗೆ ಬಿದ್ದಿದೆ. ತಿಪಟೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಜೆ.ಜಿ.ರವಿ ರವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಹೆಚ್.ಮಲ್ಲಿಕಾರ್ಜುನಪ್ಪ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಟಿ.ಕಿರಣ್, ಅವರು ತಮ್ಮ ಸಿಬ್ಬಂದಿ ಹಾಗೂ ಸ್ಥಳೀಯ ಯುವಕರ ಸಹಕಾರದೊಂದಿಗೆ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

(Visited 3 times, 1 visits today)

Related posts

Leave a Comment