ಮಾ.15ರಂದು ಕೈದಾಳ ಶ್ರೀ ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ

ತುಮಕೂರು :

      ತಾಲ್ಲೂಕಿನ ಗೂಳೂರು ಹೋಬಳಿ ಕೈದಾಳ ಶ್ರೀ ಚನ್ನಕೇಶವ ಸ್ವಾಮಿಯ ಬ್ರಹ್ಮ ರಥೋತ್ಸವವು ಮಾರ್ಚ್ 15ರಂದು ನಡೆಯಲಿದೆ.

      ರಥೋತ್ಸವದ ಪ್ರಯುಕ್ತ ಮಾರ್ಚ್ 13 ರಿಂದ 19ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಮಾರ್ಚ್ 13ರಂದು ಅಂಕುರಾರ್ಪಣೆ, ದ್ವಜಾರೋಹಣ; 14ರಂದು ಗಜೇಂದ್ರ ಮೋಕ್ಷ, ಪ್ರಹ್ಲಾದೋತ್ಸವ, ಕಲ್ಯಾಣೋತ್ಸವ; 15ರಂದು ಬ್ರಹ್ಮರಥೋತ್ಸವದ ಅಂಗವಾಗಿ ಯಾತ್ರಾದಾನ ಸೇವೆ, ಹರಿವಾಣದ ಸೇವೆ, ಹೂವಿನ ಅಲಂಕಾರ ತಿರುಪಾವಡೈ ಸೇವೆ, ಬ್ರಾಹ್ಮಣ ಅನ್ನಸಂತರ್ಪಣೆ, ಪಾನಕ ಪೂಜಾದಿಗಳು, ಶೇಷೋತ್ಸವ; 16ರಂದು ಕುದುರೆ ಉತ್ಸವ, ಹೂವಿನ ಪಲ್ಲಕ್ಕಿ ಉತ್ಸವ; 17ರಂದು ಗರುಡೋತ್ಸವ, ತೀರ್ಥಸ್ನಾನ, ಧ್ವಜ ಅವರೋಹಣ, ಪಲ್ಲಕ್ಕಿ ಉತ್ಸವ, ಶಯನೋತ್ಸವ; 18ರಂದು ಉಯ್ಯಾಲೋತ್ಸವ, ಬೃಂದಾವನೋತ್ಸವ; 19ರಂದು ದವನೋತ್ಸವ, ಮಂಟಪೋತ್ಸವ, ಹೆಜ್ಜೆ ಮಂಗಳಾರತಿ, ಮಹಮಜ್ಜನ ಸೇವೆ, ಮತ್ತಿತರ ಪೂಜಾ ಕಾರ್ಯಗಳು ನಡೆಯಲಿವೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆ ತಿಳಿಸಿದೆ.

(Visited 79 times, 1 visits today)

Related posts