ಕಳಪೆ ವಿದ್ಯುತ್ ಕಂಬ : ದೂರು ನೀಡಿದರು ಕ್ಯಾರೆ ಎನ್ನದ ಅಧಿಕಾರಿಗಳು

ಚಿಕ್ಕನಾಯಕನಹಳ್ಳಿ:

      ರಸ್ತೆ ಮಧ್ಯದಲ್ಲಿರುವ ವಿದ್ಯುತ್‍ಕಂಬ ತೆಗೆಸದೆ ಕಳಪೆ ಮತ್ತು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿರುವ ಘಟನೆ ತಾಲ್ಲೂಕಿನ ನಿರುವಗಲ್ ಗ್ರಾಮದಲ್ಲಿ ನಡೆದಿದೆ.

      ತಾಲ್ಲೂಕಿನ ಹಂದನಕೆರೆ ಹೋಬಳಿ ಬೆಳಗುಲಿ ಪಂಚಾಯಿತಿ ನಿರುವಗಲ್ ಗ್ರಾಮದಲ್ಲಿ ಸರ್ಕಾರದ ಗ್ರಾಮವಿಕಾಸ ಯೋಜನೆಯಡಿ ರಸ್ತೆಕಾಮಗಾರಿ ನಡೆದಿದೆ. ಆದರೆ ಈ ರಸ್ತೆಕಾಮಗಾರಿ ಅತ್ಯಂತ ಕಳಪೆಮಟ್ಟದಲ್ಲಿ ಮಾಡಲಾಗುತ್ತಿದೆ. ಈ ಕಾಂಕ್ರೀಟ್ ರಸ್ತೆಗೆ ಸಿಮೆಂಟ್ ಬಣ್ಣದ ಜಲ್ಲಿಯ ಪುಡಿಯನ್ನು(ಎಂಸ್ಯಾಂಡ್) ಸಿಮೆಂಟ್‍ನೊಂದಿಗೆ ಹೆಚ್ಚು ಪ್ರಮಾಣದಲ್ಲಿ ಸೇರಿಸಿ ಮಾಡಲಾಗುತ್ತಿದೆ. ರಸ್ತೆಯ ನಡುಮಧ್ಯದಲ್ಲಿ ವಿದ್ಯತ್‍ಕಂಬವಿದ್ದರೂ ಅದನ್ನು ಸ್ಥಳಾಂತರಿಸದೆ ಅದನ್ನು ಹಾಗೆಯೇ ಉಳಿಸಿ ರಸ್ತೆ ಮಾಡುತ್ತಿದ್ದಾರೆ.

      ಈ ಬಗ್ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರೂ ಸಂಬಧಿಸಿದ ಇಂಜಿನಿಯರ್ ನಿಲ್ರ್ಯಕ್ಷಧೋರಣೆ ತೋರಿದ್ದಾರೆ. ನಿರುವಗಲ್ ಗ್ರಾಮವು ಬಸ್‍ಸೌಕರ್ಯವಿಲ್ಲದ ಹಿಂದುಳಿದ ಕುಗ್ರಾಮವಾಗಿದ್ದು, ಸುಶಿಕ್ಷಿತ ಮಂದಿ ಇಂತಹ ಕಳಪೆ ಕಾಮಗಾರಿಗಳನ್ನು ನಿರಕ್ಷರಕುಕ್ಷಿಗಳಿರುವ ಕುಗ್ರಾಮದಲ್ಲಿ ನಿರ್ಭಯದಿಂದ ನಡೆಸಿ ಬಿಲ್ಲು ಪಡೆಯುವ ಧಾವಂತದಲ್ಲಿದ್ದಾರೆ.

      ಗ್ರಾಮವಿಕಾಸ ಯೋಜನೆಯಲ್ಲಿ ಬರುವ ಇತರೆ ಕಾಮಗಾರಿಗಳನ್ನು ಈ ಗ್ರಾಮದಲ್ಲಿ ನಡೆಸದೆ ವಿವಾದಗಳ ನೆಪ ಹೇಳಿಕೊಂಡು ಹಣ ದೋಚುವ ಏಕೈಕ ಉದ್ದೇಶದಿಂದ ರಸ್ತೆ ಕಾಮಗಾರಿಗಳನ್ನು ಮಾತ್ರ ನಡೆಸಲಾಗುತ್ತಿದೆ.

      ಈ ಬಗ್ಗೆ ಬೆಳಗುಲಿ ಪಂಚಾಯಿತಿಯ ಪಿಡಿಓ ಹಾಗೂ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಲ್ಲಿ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳದೆ ಕಣ್ಣುಮುಚ್ಚಿ ಕುಳಿತಿದ್ದಾರೆ.

(Visited 25 times, 1 visits today)

Related posts

Leave a Comment