ಕೊರಟಗೆರೆ : ಬಿರುಗಾಳಿಗೆ 25 ವಿದ್ಯುತ್ ಕಂಬಗಳು ಮುರಿದು 2 ಲಕ್ಷ ನಷ್ಟ!!

ಕೊರಟಗೆರೆ:

k

      ಅತಿವೇಗವಾಗಿ ಬಿಸಿದ ಬಿರುಗಾಳಿಗೆ ಚನ್ನರಾಯನದುರ್ಗ ಮತ್ತು ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ 25ಕ್ಕೂ ಹೆಚ್ಚು ವಿದ್ಯುತ್‍ಕಂಬಗಳು ಮುರಿದು ಬಿದ್ದಿರುವ ಪರಿಣಾಮ ಬೆಸ್ಕಾಂ ಇಲಾಖೆಗೆ 2ಲಕ್ಷಕ್ಕೂ ಅಧಿಕ ನಷ್ಟವಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

       ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಬಸವನಹಳ್ಳಿ, ಕ್ಯಾಶವಾರ, ಆರ್.ವೆಂಕಟಾಪುರ, ಅಕ್ಕಿರಾಂಪುರ, ತೊಗರಿಘಟ್ಟ, ರೆಡ್ಡಿಹಳ್ಳಿ ಮತ್ತು ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ ಬುಕ್ಕಾಪಟ್ಟಣ, ಜಂಪೇನಹಳ್ಳಿ, ಜೆಟ್ಟಿಅಗ್ರಹಾರ ಗ್ರಾಮದ ಬಳಿಯ ವಿದ್ಯುತ್‍ಕಂಬ ಬಿರುಗಾಳಿಗೆ ನೆಲಕ್ಕುರುಳಿವೆ.

      ಅತಿವೇಗದ ಬಿರುಗಾಳಿಗೆ ಮಳೆಯು ಮಾಯವಾಗಿ ರೈತರ ಅಡಿಕೆ, ತೆಂಗು ಮತ್ತು ಬಾಳೆ ಮರಗಳು ನೆಲಕ್ಕೆ ಬಿದ್ದು ಸಾವಿರಾರು ರೂ ನಷ್ಟವಾಗಿದೆ. ಗ್ರಾಮೀಣ ಪ್ರದೇಶದ ತೋಟದ ಮನೆಗಳ ಸೀಟ್ ಮತ್ತು ಹೆಂಚಿನ ಮನೆಗಳ ಛಾವಣಿ ಬಿಗುರಾಳಿ ಕೀಮೀ ದೂರಕ್ಕೆ ಹಾರಿಹೋಗಿವೆ. ಜಯಮಂಗಳಿ ನದಿಪಾತ್ರದ ರೈತರು ಬಿರುಗಾಳಿಗೆ ಭಯಬೀತರಾಗಿದ್ದಾರೆ.

     ಕೊರಟಗೆರೆ ಬೆಸ್ಕಾಂ ಎಇಇ ವಿ.ಮಲ್ಲಣ್ಣ ಮಾತನಾಡಿ ಅತಿವೇಗದ ಬಿರುಗಾಳಿಯಿಂದ ವಿದ್ಯುತ್‍ಕಂಬ ಮುರಿದುಬಿದ್ದು ಸೋಮವಾರ ರಾತ್ರಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಬೆಸ್ಕಾಂ ಇಲಾಖೆಯ ಪವರ್‍ಮ್ಯಾನ್‍ಗಳ ಹಗಲುರಾತ್ರಿ ಕೆಲಸದಿಂದ 24ಗಂಟೆಯೊಳಗೆ 25ವಿದ್ಯುತ್‍ಕಂಬದ ಮರುಜೋಡಣೆ ಮಾಡಿ ವಿದ್ಯುತ್ ಪೂರೈಕೆ ಮಾಡಲಾಗಿದೆ. ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ ಎಂದು ಮಾಹಿತಿ ನೀಡಿದರು.

(Visited 8 times, 1 visits today)

Related posts