ಕೊರಟಗೆರೆ : ಮದುವೆಯಾದ 21 ದಿನಕ್ಕೆ ಯುವತಿ ಆತ್ಮಹತ್ಯೆ!!

ಕೊರಟಗೆರೆ:

      ಮದುವೆಯಾಗಿ ಕೇವಲ 21ದಿನಕ್ಕೆ ಆಷಾಡ ಮಾಸದ ಪ್ರಯುಕ್ತ ತವರು ಮನೆಗೆ ಆಗಮಿಸಿದ್ದ ಪೂಜಾ ಎಂಬಾಕೆ ತಂದೆ ಮನೆಯಲ್ಲಿನ ತೀರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ರಾತ್ರಿ ನಡೆದಿದೆ.

      ತಾಲೂಕಿನ ಹೊಳವನಹಳ್ಳಿ ಹೋಬಳಿ ದುಗ್ಗೇನಹಳ್ಳಿ ಗ್ರಾಮದ ವೀರೆಗೌಡನ ಮಗಳಾದ ಪೂಜಾ(19) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮದುವೆಯಾದ ನಂತರ ಮೊದಲ ಸಲ ತವರು ಮನೆಗೆ ಆಗಮಿಸಿದ್ದ ಪೂಜಾ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

      ಕೋಳಾಲ ಹೋಬಳಿ ವ್ಯಾಪ್ತಿಯ ಲಕ್ಕಮುತ್ತನಹಳ್ಳಿ ಗ್ರಾಮದ ಹನುಮಂತರಾಯಪ್ಪನ ಮಗ ಪ್ರದೀಪ್ ಎಂಬಾತನ ಜೊತೆ ಕಳೆದ 21ದಿನದ ಹಿಂದಷ್ಟೆ ಮದುವೆಯಾಗಿದ್ದಾಳೆ. ಆಷಾಡ ಮಾಸದ ಪ್ರಯುಕ್ತ ತವರು ಮನೆಗೆ ಆಗಮಿಸಿದ ವೇಳೆ ದುರ್ಘಟನೆ ನಡೆದಿದೆ.

        ಮರಣೋತ್ತರ ಪರೀಕ್ಷೆಗಾಗಿ ಮೃತ ಪೂಜಾಳನ್ನು ಕೊರಟಗೆರೆ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಗೋವಿಂದರಾಜು, ಸಿಪಿಐ ನದಾಫ್, ಪಿಎಸೈ ಮುತ್ತುರಾಜು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

(Visited 9 times, 1 visits today)

Related posts